Thalapathy Vijay: ʼಲಿಯೋʼ ಟ್ರೇಲರ್ ರಿಲೀಸ್‌ಗೆ ಡೇಟ್ ಫಿಕ್ಸ್; ಫ್ಯಾನ್ಸ್ ಖುಷ್
Team Udayavani, Oct 2, 2023, 5:53 PM IST
ಚೆನ್ನೈ: ದಳಪತಿ ವಿಜಯ್ ಅವರ ʼಲಿಯೋʼ ಸಿನಿಮಾ ರಿಲೀಸ್ ಗೆ ಡೇಟ್ ಸಮೀಪಿಸುತ್ತಿದೆ. ಆಡಿಯೋ ಬಿಡುಗಡೆ ರದ್ದು ಆಗಿದ್ದರಿಂದ ಹತಾಶರಾಗಿದ್ದ ಅಭಿಮಾನಿಗಳಿಗೆ ʼಲಿಯೋʼ ತಂಡ ಒಂದರ ಮೇಲೊಂದು ಅಪ್ಡೇಟ್ ಗಳನ್ನ ನೀಡಿ ಸರ್ಪ್ರೈಸ್ ನೀಡುತ್ತಿದೆ.
ಮೊನ್ನೆಯಷ್ಟೇ ʼಲಿಯೋʼ ಸಿನಿಮಾದ 2ನೇ ಹಾಡು ‘Badass’ (ಬ್ಯಾಡಸ್) ರಿಲೀಸ್ ಆಗಿತ್ತು. ಇದೀಗ ಸಿನಿಮಾದ ಟ್ರೇಲರ್ ರಿಲೀಸ್ ಡೇಟನ್ನು ಸಿನಿಮಾ ತಂಡ ರಿವೀಲ್ ಮಾಡಿದೆ.
“ನಿಮ್ಮ ಆರ್ಡರ್ ನ್ನು ಸಿದ್ದಪಡಿಸಲಾಗುತ್ತಿದೆ..” ಎಂದು 7 ಸ್ಕ್ರೀನ್ ಸ್ಟುಡಿಯೋ ʼಲಿಯೋʼ ಸಿನಿಮಾದ ಟ್ರೇಲರ್ ಇದೇ ಅಕ್ಟೋಬರ್ 5 ರಂದು ರಿಲೀಸ್ ಆಗಲಿದೆ ಎಂದು ಹೇಳಿದೆ.
ಇತ್ತೀಚೆಗೆ ಭಾರೀ ಜನಸಂಖ್ಯೆ ಸೇರುವ ನಿರೀಕ್ಷೆಯಿದ್ದ ʼಲಿಯೋʼ ಆಡಿಯೋ ಬಿಡುಗಡೆ ಕಾರ್ಯಕ್ರಮವನ್ನು ಕೊನೆ ಕ್ಷಣದಲ್ಲಿ ಚಿತ್ರತಂಡ ರದ್ದು ಮಾಡಿತ್ತು. ಇದು ರಾಜಕೀಯ ಒತ್ತಡದ ಪ್ರಭಾವವೆಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದರು.
ಲೋಕೇಶ್ ಕನಕರಾಜ್ ನಿರ್ದೇಶನದ ʼಲಿಯೋʼ ಚಿತ್ರದ ಬಗ್ಗೆ ದೊಡ್ಡ ನಿರೀಕ್ಷೆಯಿದ್ದು, ದಳಪತಿ ವಿಜಯ್ ಯೊಂದಿಗೆ ತ್ರಿಶಾ, ಮತ್ತು ಸಂಜಯ್ ದತ್ ,ಅರ್ಜುನ್ ಸರ್ಜಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದು,ಗೌತಮ್ ವಾಸುದೇವ್ ಮೆನನ್, ಮಿಸ್ಕಿನ್, ಪ್ರಿಯಾ ಆನಂದ್ ಮತ್ತು ಮನ್ಸೂರ್ ಅಲಿ ಖಾನ್ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.
ಇದೇ ತಿಂಗಳು (ಅಕ್ಟೋಬರ್ 19) ಸಿನಿಮಾ ರಿಲೀಸ್ ಆಗಲಿದೆ.
Your order is being prepared 😎#LeoTrailer is on its way! Get ready to enjoy your meal 🔥
Unga delivery partner @7screenstudio will deliver them on October 5th 😉#LeoTrailerFromOct5#Thalapathy @actorvijay sir @Dir_Lokesh @trishtrashers @anirudhofficial @duttsanjay… pic.twitter.com/xgHzueGWpJ
— Seven Screen Studio (@7screenstudio) October 2, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.