Jason Sanjay: 23ರ ಹರೆಯದಲ್ಲಿ ನಿರ್ದೇಶನಕ್ಕಿಳಿದ ದಳಪತಿ ವಿಜಯ್ ಪುತ್ರ ಜೇಸನ್
ಸಾಥ್ ಕೊಟ್ಟ ದೊಡ್ಡ ಪ್ರೊಡಕ್ಷನ್ ಹೌಸ್
Team Udayavani, Aug 28, 2023, 6:18 PM IST
ಚೆನ್ನೈ: ದಕ್ಷಿಣ ಭಾರತದ ಸಿನಿಮಾರಂಗದಲ್ಲಿ ದಳಪತಿ ವಿಜಯ್ ತನ್ನದೇ ಛಾಪನ್ನು ಮೂಡಿಸಿದ್ದಾರೆ. ಸದ್ಯ ʼಮಾಸ್ಟರ್ʼ ಅಭಿಮಾನಿಗಳು ʼಲಿಯೋʼ ಸಿನಿಮಾಕ್ಕಾಗಿ ಕಾಯುತ್ತಿದ್ದಾರೆ. ಈ ನಡುವೆ ದಳಪತಿ ಫ್ಯಾನ್ಸ್ ಗಳು ಮತ್ತೊಂದು ವಿಚಾರಕ್ಕೆ ಖುಷ್ ಆಗಿದ್ದಾರೆ.
ದಳಪತಿ ವಿಜಯ್ ಕುಟುಂಬದಿಂದ ಮತ್ತೊಬ್ಬರು ಸಿನಿಮಾರಂಗಕ್ಕೆ ಎಂಟ್ರಿ ಕೊಡಲಿದ್ದಾರೆ. ವಿಜಯ್ ಅವರ ಪುತ್ರ ಜೇಸನ್ ಸಂಜಯ್ ನಿರ್ದೇಶನಕ್ಕಿಳಿಯಲಿದ್ದಾರೆ. ಕಾಲಿವುಡ್ ಜನಪ್ರಿಯ ಪ್ರೊಡಕ್ಷನ್ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್ ವಿಜಯ್ ಪುತ್ರ ಜೇಸನ್ ಅವರ ಚೊಚ್ಚಲ ಚಿತ್ರಕ್ಕೆ ಬಂಡವಾಳ ಹಾಕಲಿದೆ. ಲೈಕಾ ಪ್ರೊಡಕ್ಷನ್ಸ್ ಈ ವಿಚಾರವನ್ನು ಬಹಿರಂಗಪಡಿಸಿದೆ.
ಜೇಸನ್ ಸಂಜಯ್ ಅವರನ್ನು ಅವರ ನಿರ್ದೇಶನದ ಚೊಚ್ಚಲ ಚಿತ್ರವನ್ನು ಪರಿಚಯಿಸಲು ನಾವು ಉತ್ಸುಕರಾಗಿದ್ದೇವೆ ಮತ್ತು ಹೆಮ್ಮೆಪಡುತ್ತೇವೆ. ಅವನ ವೃತ್ತಿಜೀವನವು ಯಶಸ್ಸಿನಿಂದ ತುಂಬಲಿ ಮತ್ತು ಪರಂಪರೆಯನ್ನು ಮುಂದಕ್ಕೆ ಸಾಗಲಿ ಎಂದು ನಾವು ಬಯಸುತ್ತೇವೆ ಎಂದು ʼಲೈಕಾ ಪ್ರೊಡಕ್ಷನ್ಸ್ʼ ಫೋಟೋ ಹಂಚಿಕೊಂಡು ಹೇಳಿದೆ.
ತಮ್ಮ ಚೊಚ್ಚಲ ನಿರ್ದೇಶನದ ಬಗ್ಗೆ ಮಾತನಾಡುವ ಜೇಸನ್ “ಲೈಕಾ ಪ್ರೊಡಕ್ಷನ್ಸ್‌ನಂತಹ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗೆ ನನ್ನ ಮೊದಲ ಚಿತ್ರವನ್ನು ನಿರ್ದೇಶಿಸುವ ಅವಕಾಶ ಸಿಕ್ಕಿರುವುದು ಗೌರವದ ಸಂಗತಿ. ಇದು ಪ್ರತಿಭಾವಂತರನ್ನು ಪ್ರೋತ್ಸಾಹಿಸುವ ಕೇಂದ್ರವಾಗಿದೆ. ಅವರು ನನ್ನ ಸ್ಕ್ರಿಪ್ಟ್ ನ್ನು ಇಷ್ಟಪಟ್ಟಿದ್ದಾರೆ ಮತ್ತು ಅದನ್ನು ಕಾರ್ಯರೂಪಕ್ಕೆ ತರಲು ನನಗೆ ಸಂಪೂರ್ಣ ಸೃಜನಶೀಲ ಸ್ವಾತಂತ್ರ್ಯವನ್ನು ನೀಡಿದ್ದಾರೆ” ಎನ್ನುವುದಕ್ಕೆ ಸಂತಸವಾಗುತ್ತದೆ.
“ನಾವೀಗ ಇಂಡಸ್ಟ್ರಿಯ ಉದಯೋನ್ಮುಖ ತಾರೆಗಳು ಮತ್ತು ಕೆಲವು ತಂತ್ರಜ್ಞರೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ. ಈ ಅವಕಾಶಕ್ಕಾಗಿ ನಾನು ಸುಭಾಸ್ಕರನ್ ಸರ್ ಅವರಿಗೆ ಧನ್ಯವಾದ ಹೇಳುತ್ತೇನೆ. ಇದು ನನಗೆ ಅಪಾರ ಉತ್ಸಾಹ ಮತ್ತು ದೊಡ್ಡ ಜವಾಬ್ದಾರಿಯನ್ನು ಒಟ್ಟಿಗೆ ಕೊಟ್ಟಿದೆ. ನನ್ನ ಕನಸುಗಳನ್ನು ಸಾಕಾರಾಗೊಳಿಸಲು ಬೆಂಬಲವನ್ನೀಡಿದ ತಮಿಳು ಕುಮಾರನ್ ಅವರಿಗೆ ಧನ್ಯವಾದ ಹೇಳುತ್ತೇನೆ” ಎಂದು ಜೇಸನ್ ಹೇಳಿದ್ದಾರೆ.
ಚಿತ್ರದ ಟೈಟಲ್ ಮತ್ತು ತಾರಾಗಣದ ಕುರಿತು ಹೆಚ್ಚಿನ ವಿವರಗಳನ್ನು ಮುಂಬರುವ ವಾರಗಳಲ್ಲಿ ಹೊರಬೀಳಲಿದೆ ಎಂದು ವರದಿಯಾಗಿದೆ.
ಜೇಸನ್ ಸಂಜಯ್ ಅವರು ಟೊರೊಂಟೊ ಫಿಲ್ಮ್ ಸ್ಕೂಲ್‌ನಲ್ಲಿ (2018-2020) ಫಿಲ್ಮ್ ಪ್ರೊಡಕ್ಷನ್ ಡಿಪ್ಲೊಮಾವನ್ನು ಪಡೆದಿದ್ದಾರೆ. ನಂತರ 2020-2022 ರ ನಡುವೆ ಲಂಡನ್‌ನಲ್ಲಿ ಚಿತ್ರಕಥೆಯಲ್ಲಿ ಬಿಎ (ಆನರ್ಸ್) ಪಡೆದಿದ್ದಾರೆ.
We are beyond excited 🤩 & proud 😌 to introduce #JasonSanjay in his Directorial Debut 🎬 We wish him a career filled with success & contentment 🤗 carrying forward the legacy! 🌟#LycaProductionsNext #JasonSanjayDirectorialDebut @SureshChandraa @DoneChannel1 @gkmtamilkumaran… pic.twitter.com/wkqGRMgriN
— Lyca Productions (@LycaProductions) August 28, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
‘I am single’; ಅರ್ಜುನ್ ಕಪೂರ್ ಕಾಮೆಂಟ್‌ಗೆ ಕೊನೆಗೂ ಮಲೈಕಾ ಅರೋರಾ ಪ್ರತಿಕ್ರಿಯೆ
Hollywood: Billy the kid- ಹಾಲಿವುಡ್ ಹಿರಿಯ ನಟ ಜೆಫ್ರಿ ಡ್ಯುಯೆಲ್ ಇನ್ನಿಲ್ಲ
Mumbai: ಬ್ರೇಕಪ್ ನಿಜ: ಮೌನ ಮುರಿದ ನಟಿ ಮಲೈಕಾ ಅರೋರಾ!
Pushpa 2film : 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ
Bollywood: ಹೃತಿಕ್ ರೋಷನ್ ʼಕ್ರಿಶ್ -4ʼ ಬಗ್ಗೆ ಹೊರಬಿತ್ತು ಬಿಗ್ ಅಪ್ಡೇಟ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.