ಯುಎಇ: ಕಾಶ್ಮೀರ್ ಫೈಲ್ಸ್ ಬಿಡುಗಡೆಗೆ ಒಪ್ಪಿಗೆ
Team Udayavani, Apr 1, 2022, 6:55 AM IST
ನವದೆಹಲಿ: ಬಾಲಿವುಡ್ ಚಿತ್ರ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ “ದ ಕಾಶ್ಮೀರ್ ಫೈಲ್ಸ್’ ಚಿತ್ರದಲ್ಲಿನ ಯಾವುದೇ ದೃಶ್ಯಕ್ಕೆ ಕತ್ತರಿ ಹಾಕದೇ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ (ಯುಎಇ) ಪ್ರದರ್ಶನಗೊಳಿಸುವಂತೆ ಅಲ್ಲಿನ ಸರ್ಕಾರ ಅನುಮತಿ ನೀಡಿದೆ.
ಈ ವಿಚಾರವನ್ನು ಟ್ವೀಟರ್‌ನಲ್ಲಿ ಹಂಚಿಕೊಂಡಿರುವ ಅಗ್ನಿಹೋತ್ರಿ, “ನಿಜಕ್ಕೂ ಇದೊಂದು ದೊಡ್ಡ ಜಯ. ಇಸ್ಲಾಮಿಕ್ ರಾಷ್ಟ್ರವು ಸತತ ನಾಲ್ಕು ವಾರಗಳ ಕಾಲ ಚಿತ್ರವನ್ನು ಪರಿಶೀಲಿಸಿದ ನಂತರ ಯಾವುದೇ ಕತ್ತರಿ ಪ್ರಯೋಗವಿಲ್ಲದೆ ಚಿತ್ರದ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿದೆ. ಚಿತ್ರಕ್ಕೆ 15+ ಪ್ರಮಾಣ ಪತ್ರ ನೀಡಲಾಗಿದೆ. ಏ. 7ರಂದು ಈ ಚಿತ್ರ ಯುಎಇಯಾದ್ಯಂತ ಬಿಡುಗಡೆಯಾಗಲಿದೆ” ಎಂದು ಹೇಳಿದ್ದಾರಲ್ಲದೆ, ಸದ್ಯದಲ್ಲೇ ಈ ಚಿತ್ರ ಸಿಂಗಾಪುರದಲ್ಲಿಯೂ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ.
“ಭಾರತದಲ್ಲಿ ಕೆಲವರು, ಈ ಚಿತ್ರವನ್ನು ಇಸ್ಲಾಮೋಫೋಬಿಕ್ ಎಂದು ಬಣ್ಣಿಸಲಾಗಿದೆ. ಆದರೆ, ಇಸ್ಲಾಮಿಕ್ ದೇಶವೇ ಈ ಚಿತ್ರದಲ್ಲಿ ಯಾವುದೇ ಕಟ್‌ಗಳಿಗೆ ಸೂಚಿಸದೆ ಬಿಡುಗಡೆ ಮಾಡಲು ಒಪ್ಪಿದೆ” ಎಂದು ಚುಚ್ಚಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Salman Khan: ಕ್ಷಮೆ ಕೇಳಿ ಇಲ್ಲವೇ 5 ಕೋಟಿ ಕೊಡಿ: ನಟ ಸಲ್ಮಾನ್‌ಗೆ ಮತ್ತೊಂದು ಬೆದರಿಕೆ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
Actor ರೂಪಾಲಿ ಗಂಗೂಲಿಯಿಂದ ಮಲಮಗಳಿಗೆ ಕಿರುಕುಳ?
CELEBRITIES: ಶಾರುಖ್ ಟು ಸಲ್ಮಾನ್; ಧೂಮಪಾನದ ಚಟಕ್ಕೆ ಬಿದ್ದು ಹೊರಬಂದ ಸೆಲೆಬ್ರಿಟಿಗಳು
Bollywood: ವರುಣ್ ಧವನ್ ʼಬೇಬಿ ಜಾನ್ʼ ಟೀಸರ್ ನೋಡಿ ʼಜವಾನ್ʼ ಕಾಪಿ ಎಂದ ನೆಟ್ಟಿಗರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.