![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
Team Udayavani, May 14, 2023, 11:01 AM IST
ಮುಂಬಯಿ: ವಿವಾದದಿಂದಲೇ ಸುದ್ದಿಯಾಗಿ ಇದೀಗ ಬಾಕ್ಸ್ ಆಫೀಸ್ ನಲ್ಲಿ ಭಾರೀ ಸದ್ದು ಮಾಡುತ್ತಿರುವ ʼದಿ ಕೇರಳ ಸ್ಟೋರಿʼ ಹೊಸ ದಾಖಲೆಯೊಂದನ್ನು ಬರೆದಿದೆ.
ಮೇ. 5 ರಂದು ಗ್ರ್ಯಾಂಡ್ ರಿಲೀಸ್ ಆದ ಸುದೀಪ್ತೋ ಸೇನ್ ಅವರ ʼದಿ ಕೇರಳ ಸ್ಟೋರಿʼ ಒಂದಷ್ಟು ವಿವಾದದಿಂದ ಸುದ್ದಿಯಾಗಿತ್ತು. ಕೇರಳದ ಹಿಂದೂ ಯುವತಿ ಇಸ್ಲಾಂ ಧರ್ಮಕ್ಕೆ ಸೇರಿ ಅಲ್ಲಿಂದ ಐಸಿಸ್ ಸೇರುವ ಕಥೆಯನ್ನು ಚಿತ್ರ ಒಳಗೊಂಡಿದೆ. ಆರಂಭದಲ್ಲಿ 32 ಸಾವಿರ ಭಾರತೀಯ ಮಹಿಳೆಯರು ಈ ರೀತಿ ಐಸಿಸ್ ಸೇರಿದ್ದಾರೆ ಎಂದು ಚಿತ್ರತಂಡ ಟೀಸರ್ ನಲ್ಲಿ ಹೇಳಿತ್ತು. ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿ, ಇದು ಸುಳ್ಳ ಎಂದ ಬಳಿಕ ಸಿನಿಮಾ ತಂಡ 32 ಸಾವಿರ ಮಹಿಳೆಯರು ಎನ್ನುವ ದೃಶ್ಯ ಸೇರಿ ಅನೇಕ ದೃಶ್ಯವನ್ನು ತೆಗೆದು ಹಾಕಿತ್ತು.
ಹೀಗೆ ವಿವಾದದಿಂಸ ಸುದ್ದಿಯಾದ ಸಿನಿಮಾ ನಿಧಾನವಾಗಿ ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡುತ್ತಿದೆ. ಶನಿವಾರ ( ಮೇ.13ರಂದು) ಸಿನಿಮಾ 19.50 ಕೋಟಿ ರೂ.ವನ್ನು ಗಳಿಸಿದ್ದು, ರಿಲೀಸ್ ಆದ 9 ದಿನದಲ್ಲಿ ಸಿನಿಮಾ ಒಟ್ಟು 112.87 ಕೋಟಿ ರೂ. ಗಳಿಸಿದೆ. ಆ ಮೂಲಕ ಈ ವರ್ಷ ಬಾಲಿವುಡ್ ನಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾಗಳಲ್ಲಿ ಎರಡನೇ ಸಿನಿಮಾವಾಗಿ ʼದಿ ಕೇರಳ ಸ್ಟೋರಿʼ ಹೊರಹೊಮ್ಮಿದೆ.
ಅದಾ ಶರ್ಮಾ,ಯೋಗಿತಾ ಬಿಹಾನಿ ,ಸೋನಿಯಾ ಬಲಾನಿ, ಸಿದ್ಧಿ ಇದ್ನಾನಿ ಮುಂತಾದ ಕಲಾವಿದರು ಸಿನಿಮಾದಲ್ಲಿ ನಟಿಸಿದ್ದಾರೆ.
#TheKeralaStory commences Weekend 2 with A BANG… Hits DOUBLE DIGITS on [second] Fri… Will cross ₹ 💯 cr mark TODAY [second Sat]… Will emerge SECOND HIGHEST GROSSING #Hindi film [of 2023] in *Week 2* itself… [Week 2] Fri 12.23 cr. Total: ₹ 93.37 cr. #India biz. #Boxoffice… pic.twitter.com/lta7dfnFOE
— taran adarsh (@taran_adarsh) May 13, 2023
Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?
ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?
Chhaava: ‘ಚಾವಾ’ಗೆ ಧ್ವನಿಯಾದ ಅಜಯ್ ದೇವಗನ್
ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ
Spiritual journey: ಕಿನ್ನರ್ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
You seem to have an Ad Blocker on.
To continue reading, please turn it off or whitelist Udayavani.