ಕೋಟಿ ಕೋಟಿ ಗಳಿಸಿದ “ದಿ ಕೇರಳ ಸ್ಟೋರಿ” ಓಟಿಟಿ ಖರೀದಿಗೆ ಯಾರೂ ಇಲ್ಲ: ನಿರ್ದೇಶಕ ಹೇಳಿದ್ದೇನು?

"ನಮ್ಮ ವಿರುದ್ದ ಚಿತ್ರರಂಗದ ಒಂದು ಗುಂಪು..."

Team Udayavani, Jun 26, 2023, 10:12 AM IST

ಕೋಟಿ ಕೋಟಿ ಗಳಿಸಿದ “ದಿ ಕೇರಳ ಸ್ಟೋರಿ” ಓಟಿಟಿ ಖರೀದಿಗೆ ಯಾರೂ ಇಲ್ಲ: ನಿರ್ದೇಶಕ ಹೇಳಿದ್ದೇನು?

ಮುಂಬಯಿ: ಈ ವರ್ಷದ ದೊಡ್ಡ ಹಿಟ್‌ ಸಾಲಿನಲ್ಲಿ ಸೇರಿರುವ ʼದಿ ಕೇರಳ ಸ್ಟೋರಿʼ ಸಿನಿಮಾ ರಿಲೀಸ್‌ ಆಗಿ ತಿಂಗಳಿಗೂ ಅಧಿಕ ದಿನಗಳು ಕಳೆದಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗೆ ಸಿನಿಮಾ ಓಟಿಟಿಯಲ್ಲಿ ರಿಲೀಸ್‌ ಆಗಬೇಕಿತ್ತು. ಆದರೆ ಇದುವರೆಗೆ ಸಿನಿಮಾ ಓಟಿಟಿಯಲ್ಲಿ ರಿಲೀಸ್‌ ಆಗಿಲ್ಲ.

ಸುದೀಪ್ತೋ ಸೇನ್ ನಿರ್ದೇಶನದ ʼದಿ ಕೇರಳ ಸ್ಟೋರಿʼ ಮೇ.5 ರಂದು ಎಲ್ಲೆಡೆ ರಿಲೀಸ್‌ ಆಗಿತ್ತು. ಬ್ಯಾನ್‌, ವಿವಾದದ ಬಿಸಿ ತಟ್ಟಿದ ಸಿನಿಮಾಕ್ಕೆ ಪಾಸಿಟಿವ್‌ – ನೆಗೆಟಿವ್‌ ವಿಮರ್ಶೆಗಳು ಕೇಳಿ ಬಂದಿತ್ತು. ಪಶ್ಚಿಮ ಬಂಗಾಳದಲ್ಲಿ ಆರಂಭದಲ್ಲಿ ಸಿನಿಮಾವನ್ನು ಬ್ಯಾನ್‌ ಮಾಡಲಾಗಿತ್ತು. ತಮಿಳುನಾಡಿನಲ್ಲಿ ಸಿನಿಮಾ ಪ್ರದರ್ಶನಕ್ಕೆ ತಡೆ ನೀಡಲಾಗಿತ್ತು. ಈ ಎಲ್ಲದರ ನಡುವೆ ಮಧ್ಯ ಪ್ರದೇಶ, ಉತ್ತರ ಪ್ರದೇಶದಲ್ಲಿ ಸಿನಿಮಾವನ್ನು ತೆರಿಗೆ ವಿನಾಯಿತಿ ಮಾಡಲಾಗಿತ್ತು. ಸಿನಿಮಾ ಬಾಕ್ಸ್‌ ಆಫೀಸ್‌ ನಲ್ಲಿ 200 ಕೋಟಿಗೂ ಅಧಿಕ ಕಲೆಕ್ಷನ್‌ ಮಾಡಿತ್ತು.

ಚಿತ್ರದಲ್ಲಿ ಕೇರಳದ ಹಿಂದೂ ಹುಡುಗಿಯ ಪಾತ್ರದಲ್ಲಿ ನಟಿ ಅದಾ ಶರ್ಮಾ ನಟಿಸಿದ್ದಾರೆ. ಕಥೆಗೆ ತಕ್ಕ ಹಾಗೆ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿ ಮುಸ್ಲಿಂ ಯುವತಿಯಾಗಿಯೂ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಅವರಿಗೆ ಸೇರಿದಂತೆ ಸಿನಿಮಾದ ಇತರ ಸದಸ್ಯರಿಗೆ ಬೆದರಿಕೆಗಳು ಬಂದಿತ್ತು.

ಸದ್ಯ ಈ ಎಲ್ಲಾ ವಿವಾದಗಳು ತಣ್ಣನೆ ಆಗಿದ್ದು, ಸಿನಿಮಾ ಓಟಿಟಿ ರಿಲೀಸ್‌ ಬಗ್ಗೆ ಚರ್ಚೆ ಆರಂಭವಾಗಿದೆ. ಆದರೆ ಇದುವರೆಗೂ ಯಾವ ಓಟಿಟಿದವರು ಕೂಡ ಸಿನಿಮಾ ಖರೀದಿಗೆ ಮುಂದೆ ಬಂದಿಲ್ಲ. ಈ ಬಗ್ಗೆ ಸ್ವತಃ ನಿರ್ದೇಶಕ ಸುದೀಪ್ತೋ ಸೇನ್ “ಬಾಲಿವುಡ್ ಹಂಗಾಮಾ” ಜೊತೆ ಮಾತನಾಡಿದ್ದಾರೆ.

“ʼದಿ ಕೇರಳ ಸ್ಟೋರಿʼಗೆ ಇದುವರೆಗೆ ಯಾವುದೇ ಓಟಿಟಿ ಪ್ಲಾಟ್‌ಫಾರ್ಮ್‌ನಿಂದ ಸೂಕ್ತ ಆಫರ್‌ ಗಳು ಬಂದಿಲ್ಲ. ನಾವು ಈಗಲೂ ಸಿನಿಮಾದ ಓಟಿಟಿ ಖರೀದಿಯ ಒಪ್ಪಂದಕ್ಕಾಗಿ ಕಾಯುತ್ತಿದ್ದೇವೆ. ಸಿನಿಮಾರಂಗದ ಎಲ್ಲರೂ ನಮ್ಮ ವಿರುದ್ದ ಗುಂಪುಗೂಡಿದೆ ಎಂದು ನನಗೆ ಅನ್ನಿಸುತ್ತದೆ” ಎಂದಿದ್ದಾರೆ.

“ನಮ್ಮ ಬಾಕ್ಸ್ ಆಫೀಸ್ ಯಶಸ್ಸು ಚಿತ್ರರಂಗದ ಹಲವು ವಿಭಾಗಗಳನ್ನು ಕೆರಳಿಸಿದೆ. ನಮ್ಮ ಯಶಸ್ಸಿಗೆ ನಮ್ಮನ್ನು ಶಿಕ್ಷಿಸಲು ಮನರಂಜನಾ ಉದ್ಯಮದ ಒಂದು ವಿಭಾಗವು ಒಗ್ಗೂಡಿದೆ ಎಂದು ನನಗೆ ಅನ್ನಿಸುತ್ತದೆ” ಎಂದಿದ್ದಾರೆ.

ಟಾಪ್ ನ್ಯೂಸ್

GRUHALAKHMI

Congress Guarantee: 1.25 ಕೋಟಿ ಫ‌ಲಾನುಭವಿಗಳಿಗೆ ಗೃಹಲಕ್ಷ್ಮಿ ಪಾವತಿ

Shariat Council is not a Court: Madras High Court

Madurai Bench: ಷರಿಯತ್‌ ಕೌನ್ಸಿಲ್‌ ಕೋರ್ಟ್‌ ಅಲ್ಲ: ಮದ್ರಾಸ್‌ ಹೈಕೋರ್ಟ್‌

Udupi: ಇಂದ್ರಾಳಿ ಮೇಲ್ಸೇತುವೆ: ಜ. 15 ರೊಳಗೆ ಮುಗಿಸಲು ಗಡುವು

Udupi: ಇಂದ್ರಾಳಿ ಮೇಲ್ಸೇತುವೆ: ಜ. 15 ರೊಳಗೆ ಮುಗಿಸಲು ಗಡುವು

Who wrote the book on terrorism behind the fake bomb call?

Fake Call: ಹುಸಿ ಬಾಂಬ್‌ ಕರೆ ಹಿಂದೆ ಭಯೋತ್ಪಾದನೆ ಕುರಿತ ಪುಸ್ತಕ ಬರೆದವನ ಕೈವಾಡ?

Special Train: ದೀಪಾವಳಿ ಹಬ್ಬ ವಿಶೇಷ ರೈಲು ಸಂಚಾರ

Special Train: ದೀಪಾವಳಿ ಹಬ್ಬ ವಿಶೇಷ ರೈಲು ಸಂಚಾರ

Shivaraj-Thangadagi

Government Encourge: ಜ.1ರಿಂದ ಕಲಾವಿದರ ಮಾಸಾಶನ 3 ಸಾವಿರ ರೂ. ಏರಿಕೆ: ಸಚಿವ

Deepavali 2024: ಇಂದಿನಿಂದ ದೀಪಾವಳಿ ಸಂಭ್ರಮ

Deepavali 2024: ಇಂದಿನಿಂದ ದೀಪಾವಳಿ ಸಂಭ್ರಮ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bollywood: 30 ವರ್ಷದ ಬಳಿಕ ಮತ್ತೆ ಥಿಯೇಟರ್‌ಗೆ ಬರಲಿದ್ದಾರೆ ʼಕರಣ್‌ ಅರ್ಜುನ್‌ʼ

Bollywood: 30 ವರ್ಷದ ಬಳಿಕ ಮತ್ತೆ ಥಿಯೇಟರ್‌ಗೆ ಬರಲಿದ್ದಾರೆ ʼಕರಣ್‌ ಅರ್ಜುನ್‌ʼ

Mirzapur The Film : ಸಿನಿಮಾವಾಗಿ ಬರಲಿದೆ ಸೂಪರ್‌ ಹಿಟ್‌ ʼಮಿರ್ಜಾಪುರ್‌ʼ ಸರಣಿ

Mirzapur The Film : ಸಿನಿಮಾವಾಗಿ ಬರಲಿದೆ ಸೂಪರ್‌ ಹಿಟ್‌ ʼಮಿರ್ಜಾಪುರ್‌ʼ ಸರಣಿ

15

Movie: 45 ಕೋಟಿ ಬಜೆಟ್‌, 60 ಸಾವಿರ ಗಳಿಕೆ; ಇದು ಭಾರತದ ಬಿಗೆಸ್ಟ್ ಫ್ಲಾಪ್ ಸಿನಿಮಾ

ಮದುವೆ,ಪಾರ್ಟಿಗಳ ಡ್ಯಾನ್ಸ್ ಪರ್ಫಾರ್ಮೆನ್ಸ್‌ಗೆ ಬಿಟೌನ್ ಸ್ಟಾರ್ಸ್‌ ಪಡೆಯುವ ಸಂಭಾವನೆ ಎಷ್ಟು?

B’town: ಮದುವೆ, ಪಾರ್ಟಿಗಳ ಪರ್ಫಾರ್ಮೆನ್ಸ್‌ಗೆ ಬಿಟೌನ್ ಸ್ಟಾರ್ಸ್‌ ಪಡೆಯುವ ಸಂಭಾವನೆ ಎಷ್ಟು?

Actor Sushant Singh Case: ನಟಿ ರಿಯಾ ಚಕ್ರವರ್ತಿ ವಿರುದ್ಧ ಸಿಬಿಐ ಸಲ್ಲಿಸಿದ್ದ ಅರ್ಜಿ ವಜಾ

Actor Sushant Singh Case: ನಟಿ ರಿಯಾ ಚಕ್ರವರ್ತಿ ವಿರುದ್ಧ ಸಿಬಿಐ ಸಲ್ಲಿಸಿದ್ದ ಅರ್ಜಿ ವಜಾ

MUST WATCH

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

udayavani youtube

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹ*ತ್ಯೆಗೈದ ಆರೋಪಿತೆ ಸಹೋದರನೊಂದಿಗೆ ಮಾತಾಡಿದ ಆಡಿಯೋ

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

ಹೊಸ ಸೇರ್ಪಡೆ

A cut from the center for the number of Target olympic podium athletes?

“ಟಾಪ್‌’ ಕ್ರೀಡಾಪಟುಗಳ ಸಂಖ್ಯೆಗೆ ಕೇಂದ್ರದಿಂದ ಕತ್ತರಿ?

GRUHALAKHMI

Congress Guarantee: 1.25 ಕೋಟಿ ಫ‌ಲಾನುಭವಿಗಳಿಗೆ ಗೃಹಲಕ್ಷ್ಮಿ ಪಾವತಿ

Shariat Council is not a Court: Madras High Court

Madurai Bench: ಷರಿಯತ್‌ ಕೌನ್ಸಿಲ್‌ ಕೋರ್ಟ್‌ ಅಲ್ಲ: ಮದ್ರಾಸ್‌ ಹೈಕೋರ್ಟ್‌

Udupi: ಇಂದ್ರಾಳಿ ಮೇಲ್ಸೇತುವೆ: ಜ. 15 ರೊಳಗೆ ಮುಗಿಸಲು ಗಡುವು

Udupi: ಇಂದ್ರಾಳಿ ಮೇಲ್ಸೇತುವೆ: ಜ. 15 ರೊಳಗೆ ಮುಗಿಸಲು ಗಡುವು

Who wrote the book on terrorism behind the fake bomb call?

Fake Call: ಹುಸಿ ಬಾಂಬ್‌ ಕರೆ ಹಿಂದೆ ಭಯೋತ್ಪಾದನೆ ಕುರಿತ ಪುಸ್ತಕ ಬರೆದವನ ಕೈವಾಡ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.