ಇಫಿ-53; ದಾಬಾರಿ ಖುರುವಿ… ಇರುಳಿಗರೇ ನಟಿಸಿದ ಮೊದಲ ಚಿತ್ರ

ಪದ್ಧತಿಯ ಪಂಜರದಿಂದ ಸ್ವಾತಂತ್ರ್ಯ ಬಯಸುತ್ತಿರುವ ಗುಬ್ಬಿ ಮರಿಗಳ ಕಥೆ

Team Udayavani, Nov 26, 2022, 5:50 PM IST

ಇಫಿ-53; ದಾಬಾರಿ ಖುರುವಿ… ಇರುಳಿಗರೇ ನಟಿಸಿದ ಮೊದಲ ಚಿತ್ರ

ಪಣಜಿ: ಬುಡಕಟ್ಟು ಜನಾಂಗವಾದ ಇರುಳಿಗರ ವಿಶಿಷ್ಟವಾದ ಚಲನಚಿತ್ರ ಪ್ರದರ್ಶನಕ್ಕೆ ಇಫಿ ಈ ಬಾರಿ ಸಾಕ್ಷಿಯಾಗಿದೆ. ಪಾತ್ರವರ್ಗದ ಸುಮಾರು 60 ಮಂದಿ ಬುಡಕಟ್ಟು ಜನಾಂಗಕ್ಕೆ ಸೇರಿದವರೇ. ಇರುಳಿಗರ ಭಾಷೆಯಲ್ಲೇ ಇರುವ “ದಾಬಾರಿ ಖುರುವಿʼ ಚಲನಚಿತ್ರವನ್ನು ಮಲಯಾಳ ಚಿತ್ರರಂಗದ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಪ್ರಿಯನಂದನ್‌ ನಿರ್ದೇಶಿಸಿದ್ದಾರೆ. ಈ ಚಿತ್ರವು ಭಾರತೀಯ ಪನೋರಮಾ ವಿಭಾಗದಲ್ಲಿ ಪ್ರದರ್ಶಿತವಾಗಿತ್ತು.

ನಟವರ್ಗದ ಬಹುತೇಕರು ಇಫಿ ಚಿತ್ರೋತ್ಸವದಲ್ಲೂ ಭಾಗವಹಿಸಿದ್ದು ವಿಶೇಷ. ಇನ್ನೂ ವಿಶಿಷ್ಟವೆಂದರೆ, ಈ ಬುಡಕಟ್ಟು ಜನಾಂಗದವರು ತಮ್ಮ ಪ್ರದೇಶ ಅಟ್ಟಪಾಡಿಯನ್ನು ಬಿಟ್ಟು ಇಷ್ಟು ದೂರ ಬಂದದ್ದೇ ಬದುಕಿನಲ್ಲಿ ಇದೇ ಮೊದಲು.

ಇದರ ಕುರಿತ ಪತ್ರಿಕಾಗೋಷ್ಠಿಯಲ್ಲೂ ಅತ್ಯಂತ ಭಾವುಕರಾಗಿ ಮಾತನಾಡಿದ ಪ್ರಧಾನ ಪಾತ್ರ ನಿರ್ವಹಿಸಿದ ಮೀನಾಕ್ಷಿ, ʼನನ್ನ ಭಾವನೆಗಳನ್ನು ಹೇಗೆ ವ್ಯಕ್ತಪಡಿಸುವುದೋ ತಿಳಿಯುತ್ತಿಲ್ಲ. ಈ ಸಿನಿಮಾ ನಮ್ಮ ಎಲ್ಲ ಬುಡಕಟ್ಟು ಸಮುದಾಯದವರಿಗೆ ತೋರಿಸಬೇಕು. ಈ ಮೂಲಕ ತಮಗೆ ತಾವೇ ಹೋರಾಡುವಂತೆ ಮಾಡಬೇಕುʼ ಎಂದರು.

ಇರುಳಿಗ ಬುಡಕಟ್ಟು ಜನಾಂಗದಲ್ಲಿರುವ ಕೆಲವು ಆಚರಣೆಗಳ ಕುರಿತಾದ ಚಿತ್ರವಿದು. ಪಾಲಕ್ಕಾಡ್‌ ಜಿಲ್ಲೆಯ ಅಟ್ಟಪಾಡಿ ಪ್ರದೇಶದ ಇರುಳಿಗರ ಜಾನಪದ ಕಥೆಯನ್ನು ಆಧರಿಸಿದ ಚಿತ್ರವಾಗಿದೆ. ಸಿನಿಮಾ ಶೀರ್ಷಿಕೆಯ ಅರ್ಥ ಅಪ್ಪನಿಲ್ಲದ ಗುಬ್ಬಿಮರಿ. ಇದು ಈ ಬುಡಕಟ್ಟು ಜನಾಂಗದಲ್ಲಿರುವ ಅವಿವಾಹಿತ ತಾಯಂದಿರ ಸಮಸ್ಯೆಯನ್ನು ಪ್ರತಿನಿಧಿಸುತ್ತದೆ. ಇದೊಂದು ಪದ್ಧತಿ, ತಮ್ಮದೇ ಸಮುದಾಯ, ಸಮಾಜ, ಕಟ್ಟುಕಟ್ಟಳೆಯಂಥ ಪಂಜರದಿಂದ ಹೊರಬಂದು ಹಾರಲು ಪ್ರಯತ್ನಿಸುತ್ತಿರುವ ಬಾಲಕಿಯರ ಕಥೆ.

ʼನಮ್ಮ ಸಮುದಾಯದ ಬಹಳಷ್ಟು ಹೆಣ್ಣುಮಕ್ಕಳು ಈ ಸಂಕಷ್ಟದಿಂದ ಬಸವಳಿದಿದ್ದಾರೆ. ಕೊನೇಪಕ್ಷ ನಮ್ಮ ಮುಂದಿನ ತಲೆಮಾರಿನ ಹೆಣ್ಣುಮಕ್ಕಳಿಗಾದರೂ ಈ ಪದ್ಧತಿಯಿಂದ ಮುಕ್ತಿ ಸಿಗುವಲ್ಲಿ ಸಿನಿಮಾ ಸಹಾಯ ಮಾಡಲಿʼ ಎಂದು ಆಶಿಸಿದವರು ಮೀನಾಕ್ಷಿಯೊಂದಿಗೆ ಗೆಳತಿಯಾಗಿ ನಟಿಸಿದ್ದ ಶ್ಯಾಮ್ಮಿ. ಭಾರತೀಯ ಸಿನಿಮಾದಲ್ಲೇ ಇದೊಂದು ವಿಶಿಷ್ಟ ಪ್ರಯೋಗ. ಎಲ್ಲ ಬುಡಕಟ್ಟು ಜನಾಂಗದವರನ್ನೇ ನಟನೆಗೆ ಒಗ್ಗಿಸಿ ಚಿತ್ರೀಕರಿಸಿರುವುದು.

ʼಸಿನಿಮಾ ಮಾಧ್ಯಮವನ್ನು ಬಳಸಿಕೊಂಡು ಒಂದು ಯಾರಿಗೂ ತಿಳಿಯದ ಸತ್ಯಕಥೆಯನ್ನು ಹೇಳಲಿಚ್ಚಿಸಿದ್ದೇನೆ. ಇದರ ಹಿಂದೆ ಸಾಮಾಜಿಕ ಉದ್ದೇಶವೂ ಇದೆ. ಈ ಸಿನಿಮಾದ ಮೂಲಕ ಈ ಸಮುದಾಯದವರಿಗೆ ಒಳ್ಳೆಯ ಬದುಕು ಸಿಗಲಿ. ನನ್ನ ದೃಷ್ಟಿಯಲ್ಲಿ ಸಿನಿಮಾ ಮಾಧ್ಯಮ ಇರುವುದು ಬರೀ ಮನೋರಂಜನೆಗಲ್ಲ; ಸಮಾಜದ ಪರಿವರ್ತನೆಗೂʼ ಎಂದವರು ನಿರ್ದೇಶಕ ಪ್ರಿಯನಂದನ್. ಅಟ್ಟಪಾಡಿ ಇರುಳಿಗರು, ಮುಡುಕ, ಕುರುಂಬ ಹಾಗೂ ವಡುಕ ಬುಡಕಟ್ಟು ಜನಾಂಗದವರು ಹೆಚ್ಚಾಗಿರುವ ಪ್ರದೇಶ. ಈ ಪ್ರದೇಶ ಜಿಲ್ಲಾ ಕೇಂದ್ರದಿಂದಲೂ ಬಹಳ ದೂರದಲ್ಲಿದೆ.

ನಿರ್ದೇಶಕರ ಪ್ರಕಾರ ಇಡೀ ಚಿತ್ರೀಕರಣವೆಂಬುದು ಬಹಳ ಸರಾಗ ಹಾಗೂ ಸುಲಭವಾಗಿ ಆಯಿತು. ಭಾಷೆಯ ಗಡಿ ಮೀರಿ ಭಾವನೆಗಳು ಮಾತನಾಡಿದವು. ಹಾಗಾಗಿ ಅಷ್ಟೊಂದು ಕಷ್ಟವಾಗಲಿಲ್ಲ. ಚಿತ್ರಕಥೆ ಮೊದಲು ಮಲಯಾಳದಲ್ಲಿ ಬರೆದು ಇರುಳ ಭಾಷೆಗೆ ತರಲಾಯಿತು. ನಟರಿಗೆ ನಟನೆಯ ತರಬೇತಿಯನ್ನೂ ನೀಡಿದ್ದು ಅನುಕೂಲವಾಗಿದೆ.

ನನ್ನ ನಿರೀಕ್ಷೆಗಿಂತ ಹೆಚ್ಚಿನ ರೀತಿಯಲ್ಲಿ ಅದ್ಭುತವೆನ್ನುವಂತೆ ಬುಡಕಟ್ಟು ಜನಾಂಗದ ಕಲಾವಿದರು ನಟಿಸಿದ್ದಾರೆ. ಭಾವನೆಗಳೇ ನಿಜವಾದ ಸಾರ್ವಕಾಲಿಕ ಹಾಗೂ ಜಾಗತಿಕ ಭಾಷೆ. ತರಬೇತಿಯಿಲ್ಲದೇ ನಟಿಸುವ ಸಾಧ್ಯತೆ ಎಲ್ಲರಲ್ಲೂ ಇದ್ದೇ ಇರುತ್ತದೆ. ಹಾಗಾಗಿ ಇರುಳಿಗರೊಂದಿಗೆ ಸಿನಿಮಾ ಮಾಡಲು ಕಷ್ಟವಾಗಲಿಲ್ಲʼ ಎಂದರು ಪ್ರಿಯನಂದನ್.

ಟಾಪ್ ನ್ಯೂಸ್

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

10

Year Ender: Horror movies-2024 ರ ಟಾಪ್‌ 5 ಹಾರರ್ ಚಲನಚಿತ್ರಗಳು

Atlee to collaborate with Salman Khan

Atlee Kumar; ಸಲ್ಮಾನ್‌ ಖಾನ್‌ ಜತೆಗೆ ಅಟ್ಲಿ ಸಿನಿಮಾ

15

Bollywood: ಬಾಲಿವುಡ್‌ ನಟ ಶಾಹಿದ್‌ ಕಪೂರ್‌ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?  

‌Actress: 31 ವರ್ಷದ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್

‌Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

death

Puttur: ಎಲೆಕ್ಟ್ರಿಕ್‌ ಆಟೋ ರಿಕ್ಷಾ ಪಲ್ಟಿ; ಚಾಲಕ ಮೃತ್ಯು

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

4

Karkala: ಅಸ್ವಸ್ಥಗೊಂಡು ವ್ಯಕ್ತಿ ಸಾವು

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

1-vasu

Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.