ಟ್ರೋಲಿಗರ ವಿರುದ್ಧ ಗುಡುಗಿದ ಊರ್ಮಿಳಾ: ಎಲ್ಲದಕ್ಕೂ ಒಂದು ಲಿಮಿಟ್ ಇರುತ್ತದೆ ಎಂದ ನಟಿ !
Team Udayavani, Dec 20, 2020, 7:31 PM IST
ನವದೆಹಲಿ: ರಾಜಕಾರಣಿ ಹಾಗೂ ನಟಿ ಊರ್ಮಿಳಾ ಮಾತೋಂಡ್ಕರ್ , ತಮ್ಮ ಪತಿಯನ್ನು ಪಾಕಿಸ್ಥಾನಿ ಹಾಗೂ ಭಯೋತ್ಪಾದಕ ಎಂದು ಎಗ್ಗಿಲ್ಲದೆ ಟ್ರೋಲ್ ಮಾಡಿದವರ ವಿರುದ್ಧ ಗರಂ ಆಗಿದ್ದಾರೆ. ಈ ರೀತಿ ಮಾತನಾಡುವುದಕ್ಕೂ ಒಂದು ಲಿಮಿಟ್ ಇರುತ್ತದೆ ಎಂದು ಗುಡುಗಿದ್ದಾರೆ.
2016 ಮಾರ್ಚ್ ನಲ್ಲಿ ಊರ್ಮಿಳಾ, ಕಾಶ್ಮೀರ ಮೂಲದ ಮೋಹ್ಸಿನ್ ಖಾನ್ ಎಂಬುವವರನ್ನು ವಿವಾದವಾಗಿದ್ದರು. ಕೆಲವೇ ಕೆಲವು ಜನರ ಸಮ್ಮುಖದಲ್ಲಿ ಇವರ ವಿವಾಹ ಮಹೋತ್ಸವ ನಡೆದಿತ್ತು. ಇದಾದ ಬಳಿಕ ಹಲವಾರು ಟ್ರೋಲಿಗರು ಇವರ ಕುರಿತಾಗಿ ಟ್ರೋಲ್ ಗಳನ್ನು ಮಾಡಿದ್ದರು ಎಂದು ವರದಿಯಾಗಿದೆ.
ನನ್ನ ಪತಿ ಕೇವಲ ಮುಸ್ಲಿಂ ಅಲ್ಲ ಬದಲಾಗಿ ಕಾಶ್ಮೀರಿ ಮುಸ್ಲಿಂ. ನಾವಿಬ್ಬರೂ ನಮ್ಮ ಧರ್ಮವನ್ನು ಪಾಲಿಸುತ್ತೇವೆ. ಹಾಗಾಗಿ ಹಲವರು ನನ್ನ ಕುರಿತಾಗಿ ಟ್ರೋಲ್ ಮಾಡುತ್ತಿದ್ದಾರೆ. ಅಷ್ಟೆ ಅಲ್ಲದೆ ನನ್ನ ಪತಿ ಹಾಗೂ ಕುಟುಂಬವನ್ನೂ ಟಾರ್ಗೆಟ್ ಮಾಡುತ್ತಿದ್ದಾರೆ. ಇದು ನಿಜಕ್ಕೂ ಸಹಿಸಲು ಅಸಾಧ್ಯವಾದದ್ದು ಎಂದು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
ಈ ನಡುವೆ ತಮ್ಮ ವಿಕಿಪೀಡಿಯಾ ಪೇಜ್ ನಲ್ಲಿರುವ ಮಾಹಿತಿಗಳನ್ನು ತಿರುಚಿರುವ ಬಗ್ಗೆ ಮಾತನಾಡಿದ್ದು, ನನ್ನ ತಂದೆ-ತಾಯಿ ಹೆಸರನ್ನು ಬದಲಿಸಿದ್ದಾರೆ. ನನ್ನ ತಂದೆ ತಾಯಿ ನಿಜವಾದ ಹೆಸರು ಶ್ರೀಕಾಂತ್ ಮಾತೋಂಡ್ಕರ್, ಹಾಗೂ ತಾಯಿ ಸುನೀತಾ ಮಾತೋಂಡ್ಕರ್ ಎಂದಿದ್ದಾರೆ.
ಇದನ್ನೂ ಓದಿ:2ಎ ಮೀಸಲಾತಿಗಾಗಿ ಪಂಚಮಸಾಲಿ ಸಮಾಜದಿಂದ ರಕ್ತದಾಸೋಹ ಚಳವಳಿ: ಸಂಗಮೇಶ
ಬಾಲ ನಟಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಊರ್ಮಿಳಾ, ನರಸಿಂಹ ಸಿನಿಮಾದ ಮೂಲಕ ಗುರುತಿಸಿಕೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kochi: ಲೈಂಗಿಕ ಕಿರುಕುಳ ಕೇಸು ವಾಪಸ್ ಪಡೆಯಲ್ಲ ಎಂದ ಮಲಯಾಳಿ ನಟಿ
55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್ – ಮನರಂಜನೆಗೆ ಹೊಸ ಆಯಾಮ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
IFFI 2024: ತಾಲಿಯಾ..ತಾಲಿಯಾ…ಜೋರ್ ದಾರ್ ತಾಲಿಯಾ..!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.