Instagram ಖಾತೆ ತೆರೆದ ಪವರ್ ಸ್ಟಾರ್: ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಅಧಿಕ ಫಾಲೋವರ್ಸ್
Team Udayavani, Jul 4, 2023, 1:04 PM IST
ಹೈದರಾಬಾದ್: ಪವರ್ ಸ್ಟಾರ್ ಪವನ್ ಕಲ್ಯಾಣ್ ಸದ್ಯ ಆಂಧ್ರ ಪ್ರದೇಶ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದಾರೆ. ಈ ನಡುವೆ ಅವರು ಸಾಯಿಧರಮ್ ತೇಜ್ ಅವರೊಂದಿಗೆ ನಟಿಸಿರುವ ʼಬ್ರೋʼ ಚಿತ್ರ ತೆರೆಗೆ ಬರಲು ಸಿದ್ದವಾಗಿದೆ.
ಆಂಧ್ರ ಪ್ರದೇಶದ ಚುನಾವಣೆಯ ಅಂಗವಾಗಿ ತಮ್ಮ ಜನಸೇನಾ ಪಕ್ಷದ ʼ ವಾರಾಹಿ ವಿಜಯ ಯಾತ್ರೆʼಯನ್ನು ನಡೆಸುತ್ತಿದ್ದಾರೆ. ಆಂಧ್ರದ ವಿವಿಧೆಡೆ ಪವನ್ ಕಲ್ಯಾಣ್ ಯಾತ್ರೆಯನ್ನು ಕೈಗೊಂಡು ಜನರೊಂದಿಗೆ ಸಂಪರ್ಕ ಬೆಸೆಯುತ್ತಿದ್ದಾರೆ. ಇತ್ತೀಚೆಗೆ ಈ ಯಾತ್ರೆಯ ಸಂದರ್ಭದಲ್ಲಿ ತಮ್ಮ ಸಹನಟರಾಗಿರುವ ಮಹೇಶ್ ಬಾಬು, ಪ್ರಭಾಸ್, ಜೂನಿಯರ್ ಎನ್ ಟಿಆರ್, ರಾಮ್ ಚರಣ್, ಚಿರಂಜೀವಿ, ಅಲ್ಲು ಅರ್ಜುನ್ ಮತ್ತು ಬಾಲಕೃಷ್ಣ ಅವರ ಬಗ್ಗೆ ಹೊಗಳಿಕೆಯ ಮಾತಗಳನ್ನಾಡಿ ಜನರ ಮನವನ್ನು ಗೆದ್ದಿದ್ದರು.
ಟ್ವಿಟರ್ ನಲ್ಲಿ ಅಪಾರ ಫಾಲೋವರ್ಸ್ ಗಳನ್ನು ಹೊಂದಿರುವ ಪವನ್ ಕಲ್ಯಾಣ್ ಮಂಗಳವಾರ (ಜು.4 ರಂದು) ಇನ್ಸ್ಟಾಗ್ರಾಮ್ ಖಾತೆಯನ್ನು ತೆರೆದಿದ್ದಾರೆ. ಖಾತೆ ತೆರೆದ ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಗಳು ಬಂದಿದ್ದಾರೆ. ವಿಶೇಷವೆಂದರೆ ಒಂದು ಫೋಸ್ಟ್ ಹಾಕದೆಯೇ ಅವರಿಗೆ ಇಷ್ಟು ದೊಡ್ಡ ಮಟ್ಟದ ಫಾಲೋವರ್ಸ್ ಗಳು ಬಂದಿದ್ದಾರೆ.
ಅಭಿಮಾನಿಗಳು ತನ್ನ ನೆಚ್ಚಿನ ನಟ ಇನ್ಸ್ಟಾಗ್ರಾಮ್ ನಲ್ಲಿ ಬಂದಿರುವುದಕ್ಕೆ ಖುಷಿಯಾಗಿದ್ದು, ಟ್ವಿಟರ್ ನಲ್ಲಿ #PawanKalyanOnInstagram ಎಂದು ಹ್ಯಾಷ್ ಟ್ಯಾಗ್ ಬಳಸಿ ಟ್ರೆಂಡ್ ಕ್ರಿಯೇಟ್ ಮಾಡಿದ್ದಾರೆ.
ʼಬ್ರೋʼ ಚಿತ್ರದ ಬಳಿಕ ಪವನ್ ಕಲ್ಯಾಣ್ “ಹರಿ ಹರ ವೀರ ಮಲ್ಲು”, “ಉಸ್ತಾದ್ ಭಗತ್ ಸಿಂಗ್” ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
590K+ followers for @PawanKalyan on Instagram ✊
Next stop 1 Million 😎💥#PawanKalyanOnInstagram pic.twitter.com/w4cO0p7E5V
— Hyper KinG (@HyperKinGG) July 4, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
Life Partner ಹೇಗಿರಬೇಕು: ನಟಿ ರಶ್ಮಿಕಾ ಮಂದಣ್ಣ ಮನದ ಮಾತು
Oscars 2025; ರೇಸ್‌ನಿಂದ ಹೊರಬಿದ್ದ ಲಾಪತಾ ಲೇಡೀಸ್: 15ರ ಕಿರುಪಟ್ಟಿಯ ಭಾಗವಾಗಿಲ್ಲ
Kidnap ಬಲೆಯಿಂದ ಸ್ವಲ್ಪದರಲ್ಲೇ ಪಾರಾದ ನಟ ಶಕ್ತಿ ಕಪೂರ್!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.