Samantha: ಚಿಕಿತ್ಸಾ ಖರ್ಚಿಗೆ 25 ಕೋಟಿ ರೂ. ಸಹಾಯ ಪಡೆದ ಸಮಂತಾ?; ಕೊನೆಗೂ ಮೌನ ಮುರಿದ ನಟಿ
Team Udayavani, Aug 5, 2023, 12:41 PM IST
ಹೈದರಾಬಾದ್: ಟಾಲಿವುಡ್ ಬೆಡಗಿ ನಟಿ ಸಮಂತಾ ಮಯೋಸಿಟೀಸ್ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವುದು ಗೊತ್ತೇ ಇದೆ. ಸ್ವತಃ ನಟಿಯೇ ಈ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದರು.
ತನಗೆ ಕಾಯಿಲೆಯಿದ್ದರೂ ಬಣ್ಣದ ಲೋಕದಲ್ಲಿ ಸಮಂತಾ ನಿರಂತರವಾಗಿ ಕಾಣಿಸಿಕೊಂಡಿದ್ದಾರೆ. ಚಿಕಿತ್ಸೆಯ ಜೊತೆ ಜೊತೆಗೆ ತಮ್ಮ ಸಿನಿಮಾಗಳ ಕೆಲಸದಲ್ಲೂ ಅವರು ಸಕ್ರಿಯವಾಗಿ ತೂಡಗಿಸಿಕೊಂಡಿದ್ದಾರೆ.
8 ತಿಂಗಳಿನಲ್ಲಿ ನನ್ನ ಜೀವನ ಬದಲಾಗಿದೆ ಎಂದು ಸಿನಿಮಾವೊಂದರ ಪ್ರಚಾರದ ವೇಳೆ ನಟಿ ಸಮಂತಾ ಹೇಳಿಕೊಂಡಿದ್ದರು. ಆ ಮೂಲಕ ಅನಾರೋಗ್ಯದೊಂದಿಗಿನ ತನ್ನ ಹೋರಾಟದ ಬಗ್ಗೆ ಹೇಳಿಕೊಂಡಿದ್ದರು.
ಅನಾರೋಗ್ಯದ ವಿಚಾರಕ್ಕೆ ಹೋರಾಟ ನಡೆಸುತ್ತಲೇ ಅವರ ʼಯಶೋಧಾʼ ಹಾಗೂ ʼ ಶಾಕುಂತಲಂʼ ಚಿತ್ರ ತೆರೆ ಕಂಡಿದೆ.
ಈ ನಡುವೆ ಅವರು ಚೇತರಿಕೆಯ ಹಾದಿಯಲ್ಲಿರುವಾಗಲೇ ಅವರ ಬಗ್ಗೆ ಕೆಲ ವದಂತಿಗಳು ಹಬ್ಬಿವೆ. ಇತ್ತೀಚೆಗೆ ನಟಿ ಸಮಂತಾ ತನ್ನ ಚಿಕಿತ್ಸಾ ಖರ್ಚಿಗೆ ಆರ್ಥಿಕ ಸಹಾಯವಾಗಿ 25 ಕೋಟಿ ರೂಪಾಯಿಯ ಸಹಾಯವನ್ನು ಇತರರಿಂದ ಪಡೆದುಕೊಂಡಿದ್ದಾರೆ ಎನ್ನುವ ಸುದ್ದಿಯೊಂದು ವೈರಲ್ ಆಗಿತ್ತು. ಇಂಟರ್ ನೆಟ್ ಸೇರಿದಂತೆ ಕೆಲ ಸುದ್ದಿ ಮಾಧ್ಯಮಗಳಲ್ಲಿ ಈ ಬಗ್ಗೆ ವರದಿಯಾಗಿತ್ತು.
ಇದೀಗ ನಟಿ ಸಮಂತಾ ಈ ಬಗ್ಗೆ ಮೌನ ಮುರಿದಿದ್ದಾರೆ. ಸುಳ್ಳು ವದಂತಿಗಳನ್ನು ಹಬ್ಬಿಸುವವರ ವಿರುದ್ಧ ಗರಂ ಆಗಿದ್ದಾರೆ.
“ಮಯೋಸಿಟಿಸ್ ಚಿಕಿತ್ಸೆಗೆ 25 ಕೋಟಿ ರೂ. ಖರ್ಚು? ಯಾರೋ ಕೆಟ್ಟದಾಗಿ ಡೀಲ್ ಮಾಡಿಕೊಂಡಿದ್ದಾರೆ. ಇದರ ಚಿಕ್ಕ ಖರ್ಚನ್ನು ನಾನೇ ಮಾಡುತ್ತಿದ್ದೇನೆ ಎನ್ನುವುದು ನನಗೆ ಖುಷಿಯಿದೆ. ನಾನು ವೃತ್ತಿ ಜೀವನದಲ್ಲಿ ಮಾಡಿದ ಎಲ್ಲಾ ಕೆಲಸಗಳಿಗೆ ನಾನು ಮಾರ್ಬಲ್ಸ್ ಗಳಿಂದ ಪಾವತಿಸಿಲ್ಲ. ನನ್ನನು ನಾನು ಆರಾಮವಾಗಿ ನೋಡಿಕೊಳ್ಳುಬಹುದು. ಮಯೋಸಿಟಿಸ್ ನಿಂದ ಸಾವಿರಾರು ಮಂದಿ ಬಳಲುತ್ತಿದ್ದಾರೆ. ಚಿಕಿತ್ಸೆ ಸಂಬಂಧ ನೀಡುವ ಮಾಹಿತಿಯೊಂದಿಗೆ ನಾವು ಜವಬ್ದಾರಿಯುತವಾಗಿ ಇರಬೇಕು” ಎಂದು ನಟಿ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.
ಸದ್ಯ ಸಮಂತಾ ವಿಜಯ್ ದೇವರಕೊಂಡ ಅವರೊಂದಿಗೆ ನಟಿಸಿರುವ ʼಖುಷಿʼ ಸಿನಿಮಾದಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ. ಈ ಸಿನಿಮಾ ಸೆ. 1 ರಂದು ತೆರೆಗೆ ಬರಲಿದೆ. ಇದಾದ ಬಳಿಕ ರಾಜ್ ಮತ್ತು ಡಿಕೆ ಅವರ ‘ಸಿಟಾಡೆಲ್: ಇಂಡಿಯಾ’ದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bollywood: ಹೃತಿಕ್ ರೋಷನ್ ʼಕ್ರಿಶ್ -4ʼ ಬಗ್ಗೆ ಹೊರಬಿತ್ತು ಬಿಗ್ ಅಪ್ಡೇಟ್
Sonu Sood: ನನಗೆ ಸಿಎಂ, ಡಿಸಿಎಂ ಹುದ್ದೆಗೆ ಆಫರ್ ಬಂದಿತ್ತು ಆದರೆ, ಸೋನು ಸೂದ್ ಹೇಳಿದ್ದೇನು?
Shyam Benegal; ಸಾಮಾಜಿಕ ಕಳಕಳಿ ಚಿತ್ರಗಳ ಪ್ರವರ್ತಕ ವಿಧಿವಶ: ಉಡುಪಿಯ ಬೆನಗಲ್ ಮೂಲದವರು
Filmmaker Died: ಖ್ಯಾತ ಸಿನಿಮಾ ನಿರ್ದೇಶಕ ಶ್ಯಾಂ ಬೆನಗಲ್ ವಿಧಿವಶ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.