ರೇಪ್ ಸೀನ್‌ಗಳು ನನಗೆ ಹೊಸತಲ್ಲ, ತ್ರಿಶಾಳೊಂದಿಗೆ ಬೆಡ್ ರೂಮ್.. ಟೀಕೆಗೆ ಒಳಗಾದ ಮನ್ಸೂರ್
ಇಂತಹ ಜನರು ಮನುಕುಲಕ್ಕೆ ಕೆಟ್ಟ ಹೆಸರು ತರುತ್ತಾರೆ ಎಂದ ತ್ರಿಶಾ
Team Udayavani, Nov 19, 2023, 12:30 PM IST
ಚೆನ್ನೈ: ಕೆಲವೊಮ್ಮೆ ಕಲಾವಿದರು ವಿನಃ ಕಾರಣ ವಿವಾದಾತ್ಮಕ ಹೇಳಿಕೆ ಟೀಕೆಗೆ ಒಳಗಾಗುತ್ತಾರೆ. ಕಾಲಿವುಡ್ ಸಿನಿಮಾರಂಗದ ಹಿರಿಯ ನಟರೊಬ್ಬರು ನಟಿಯ ಕುರಿತು ಅಸಭ್ಯವಾದ ಹೇಳಿಕೆ ನೀಡಿರುವುದು ವೈರಲ್ ಆಗಿದೆ.
ಲೋಕೇಶ್ ಕನಕರಾಜ್ ಅವರ ʼಲಿಯೋʼ ಸಿನಿಮಾ ಬಿಗ್ ಹಿಟ್ ಆಗಿದೆ. ದಳಪತಿ ವಿಜಯ್ ಹಾಗೂ ತ್ರಿಶಾ ಪ್ರಧಾನ ಪಾತ್ರದ ಸಿನಿಮಾದಲ್ಲಿ ಹಿರಿಯ ನಟ ಮನ್ಸೂರ್ ಅಲಿ ಖಾನ್ ಕೂಡ ನಟಿಸಿದ್ದಾರೆ. ಆದರೆ ಅವರ ಪಾತ್ರ ಸಿನಿಮಾದ ನಾಯಕಿ ತ್ರಿಶಾ ಅವರೊಂದಿಗೆ ಇಲ್ಲ. ಈ ಬಗ್ಗೆ ಇತ್ತೀಚೆಗೆ ನಟ ಮನ್ಸೂರ್ ಅಲಿ ಖಾನ್ ಮಾತನಾಡಿರುವ ವೇಳೆ ವಿವಾದಾತ್ಮಕ ಹೇಳಿಕೆಯೊಂದು ನೀಡಿ ಟೀಕೆಗೆ ಒಳಗಾಗಿದ್ದಾರೆ.
ಮನ್ಸೂರ್ ಹೇಳಿದ್ದೇನು?:
“ನಾನು ತ್ರಿಷಾ ಜೊತೆ ನಟಿಸುತ್ತಿದ್ದೇನೆ ಎಂದು ಕೇಳಿದಾಗ, ಸಿನಿಮಾದಲ್ಲಿ ಅವರೊಂದಿಗೆ ಬೆಡ್ ರೂಮ್ ಸೀನ್ ಇರುತ್ತದೆ ಅನ್ಕೊಂಡಿದ್ದೆ. ಅವಳನ್ನು ಎತ್ತಿಕೊಂಡು ಬೆಡ್ ರೂಮ್ ಗೆ ಹೋಗುವ ದೃಶ್ಯವಿದೆ ಅಂದುಕೊಂಡಿದ್ದೆ. ಈ ರೀತಿ ನಾನು ಈ ಹಿಂದಿನ ಸಿನಿಮಾದಲ್ಲಿ ಅನೇಕ ನಟಿಯರೊಂದಿಗೆ ಮಾಡಿದ್ದೇನೆ. ನಾನು ತುಂಬಾ ರೇಪ್ ಸೀನ್ ಗಳನ್ನು ಮಾಡಿದ್ದೇನೆ. ಇದೇನು ನನಗೆ ಹೊಸತಲ್ಲ. ಆದರೆ ಇವರು(ಚಿತ್ರತಂಡ) ನನಗೆ ಕಾಶ್ಮೀರದಲ್ಲಿ ಚಿತ್ರೀಕರಣವಾಗುವ ವೇಳೆ ಸೆಟ್ ನಲ್ಲಿ ತ್ರಿಶಾಳನ್ನು ತೋರಿಸಲೇ ಇಲ್ಲ” ಎಂದಿದ್ದಾರೆ.
ಮನ್ಸೂರ್ ಅವರು ಈ ರೀತಿಯ ಅಸಭ್ಯ ಹೇಳಿಕೆ ನೀಡಿದ ಕುರಿತು ಗರಂ ಆಗಿಯೇ ನಟಿ ತ್ರಿಶಾ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.
“ಮನ್ಸೂರ್ ಅಲಿ ಖಾನ್ ಅವರು ನನ್ನ ಬಗ್ಗೆ ಅಸಹ್ಯವಾಗಿ ಮಾತನಾಡಿರುವ ವೀಡಿಯೊ ಇತ್ತೀಚೆಗೆ ನನ್ನ ಗಮನಕ್ಕೆ ಬಂದಿದೆ. ನಾನು ಇದನ್ನು ಬಲವಾಗಿ ಖಂಡಿಸುತ್ತೇನೆ. ಈ ರೀತಿ ಲೈಂಗಿಕತೆ ಹಾಗೂ ಅಗೌರವದ ದೃಷ್ಟಿಕೋನದಲ್ಲಿ ಅವರು ಮಾತನಾಡಿದ್ದಾರೆ. ಅವರು ಮನಸ್ಸಿನಲ್ಲಿ ಯೋಚನೆ ಮಾಡುತ್ತಲೇ ಇರಲಿ. ಇಂಥ ವ್ಯಕ್ತಿಯೊಂದಿಗೆ ನಾನು ಜೀವನಮಾನವಿಡೀ ತೆರೆ ಹಂಚಿಕೊಳ್ಳುವುದಿಲ್ಲ.ಇಂತಹ ಜನರು ಮನುಕುಲಕ್ಕೆ ಕೆಟ್ಟ ಹೆಸರು ತರುತ್ತಾರೆ” ಎಂದು ನಟಿ ತ್ರಿಶಾ ಹೇಳಿದ್ದಾರೆ.
“ನಾವೆಲ್ಲರೂ ಒಂದೇ ತಂಡದಲ್ಲಿ ಕೆಲಸ ಮಾಡಿದ್ದೇವೆ. ಮನ್ಸೂರ್ ಅಲಿ ಖಾನ್ ಅವರ ಸ್ತ್ರಿ ನಿಂದನೆಯ ಕಮೆಂಟ್ ಗಳನ್ನು ಕೇಳಿ ಅಸಮಾಧಾನ ಮತ್ತು ಕೋಪಗೊಂಡಿದ್ದೇವೆ. ಯಾವುದೇ ಉದ್ಯಮವಿರಲಿ ಮಹಿಳೆಯರು, ಸಹ ಕಲಾವಿದರಿಗೆ ಗೌರವ ನೀಡಬೇಕು” ಎಂದು ಲೋಕೇಶ್ ಕನಕರಾಜ್ ಟ್ವೀಟ್ ಮಾಡಿದ್ದಾರೆ.
ಸದ್ಯ ತ್ರಿಶಾ ಪರ ಅರ್ಮಾನ್ ಮಲಿಕ್, ಖುಷ್ಬು ಸುಂದರ್, ಚಿನ್ಮಯಿ ಶ್ರೀಪಾದ ಮತ್ತು ಅವರ ಅಭಿಮಾನಿಗಳು ನಿಂತಿದ್ದು, ಮನ್ಸೂರು ಹೇಳಿಕೆಯನ್ನು ಖಂಡಿಸಿದ್ದಾರೆ.
A recent video has come to my notice where Mr.Mansoor Ali Khan has spoken about me in a vile and disgusting manner.I strongly condemn this and find it sexist,disrespectful,misogynistic,repulsive and in bad taste.He can keep wishing but I am grateful never to have shared screen…
— Trish (@trishtrashers) November 18, 2023
The context ….😡😡pic.twitter.com/n0ge3Qkzer
— Aryan (@chinchat09) November 18, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.