The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
2002 ರೈಲು ಹ*ತ್ಯಾಕಾಂಡ ಕುರಿತಾಗಿನ ಚಿತ್ರ ... 2002ರಲ್ಲಿ ಗೋಧ್ರಾ ದಲ್ಲಿ ಆಗಿದ್ದೇನು?
Team Udayavani, Nov 17, 2024, 4:38 PM IST
ಹೊಸದಿಲ್ಲಿ: 2002ರ ಗೋಧ್ರಾ ರೈಲು ದುರಂತಕ್ಕೆ ಕಾರಣವಾದ ಘಟನೆಗಳನ್ನು ಬಿಚ್ಚಿಡುವ ‘ದಿ ಸಾಬರಮತಿ ರಿಪೋರ್ಟ್'(The Sabarmati Report) ಚಿತ್ರದ ಕುರಿತಾಗಿ ಪ್ರಧಾನಿ ನರೇಂದ್ರ ಮೋದಿ ರವಿವಾರ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಘಟನೆಯ ಹಿಂದಿನ ಸತ್ಯವನ್ನು ಬಹಿರಂಗಪಡಿಸುತ್ತಿರುವುದಕ್ಕಾಗಿ ಮತ್ತು ಅದರ ಸುತ್ತಲಿನ ವಿವಾದವನ್ನು ತಳ್ಳಿಹಾಕುತ್ತಿರುವುದಕ್ಕೆ ಚಿತ್ರ ತಂಡವನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ. ನಕಲಿ ನಿರೂಪಣೆಯು ಸೀಮಿತ ಅವಧಿಯವರೆಗೆ ಮಾತ್ರ ಇರುತ್ತದೆ ಎಂದು ಪ್ರಧಾನಿ ಮೋದಿ ಎಕ್ಸ್ ನಲ್ಲಿ ಅಲೋಕ್ ಭಟ್ ಅವರು ಮಾಡಿರುವ ಪೋಸ್ಟ್ ಗೆ ಪ್ರತಿಕ್ರಿಯೆಯಾಗಿ ಅಭಿಪ್ರಾಯ ಹೊರ ಹಾಕಿದ್ದಾರೆ.
ವಿಕ್ರಾಂತ್ ಮಾಸ್ಸೆ ನಟಿಸಿರುವ ಚಲನಚಿತ್ರದ ಕುರಿತು “ಸಾಮಾನ್ಯ ಜನರು ನೋಡುವ ರೀತಿಯಲ್ಲಿ ಸತ್ಯ ಹೊರಬರುತ್ತಿರುವುದು ಒಳ್ಳೆಯದು” ಎಂದು ಪ್ರಧಾನಿ ಮೋದಿ ಎಕ್ಸ್ ಪೋಸ್ಟ್ ಮಾಡಿದ್ದಾರೆ.
ಅನೇಕರು ಚಲನಚಿತ್ರವನ್ನು ನೋಡಲೇಬೇಕು ಎಂದು ಕರೆ ನೀಡಿದ್ದು, 2002 ರ ಗೋಧ್ರಾ ದುರಂತದ ಹಿಂದಿನ ಸತ್ಯವನ್ನು ಬಹಿರಂಗಪಡಿಸುವಲ್ಲಿ ಚಿತ್ರ ತಂಡದವರು ಶ್ಲಾಘನೀಯ ಕೆಲಸ ಮಾಡಿದ್ದಾರೆ, ಘೋರ ದುರಂತದಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 59 ಮಂದಿ ಪ್ರಾಣ ಕಳೆದುಕೊಂಡಿದ್ದರು.
ಅಂದು ಆಗಿದ್ದೇನು?
2002 ಫೆಬ್ರವರಿ 27 ರಂದು ಗೋಧ್ರಾದಲ್ಲಿ ಉದ್ರಿಕ್ತ ದುಷ್ಕರ್ಮಿಗಳು ರೈಲಿಗೆ ಬೆಂಕಿ ಹಚ್ಚಿದ ಪರಿಣಾಮ ಅಯೋಧ್ಯೆಯಿಂದ ಹಿಂದಿರುಗುತ್ತಿದ್ದ 59 ಹಿಂದೂ ಯಾತ್ರಿಕರು ಮತ್ತು ಕರಸೇವಕರು ಪ್ರಾಣ ಕಳೆದುಕೊಂಡಿದ್ದರು. ಅದೇ ಘಟನೆ ಭಾರೀ ಕೋಮು ಸಂಘರ್ಷಕ್ಕೆ ಕಾರಣವಾಗಿ ಸಾವಿರಾರು ಮಂದಿ ಪ್ರಾಣ ಕಳೆದುಕೊಳ್ಳಲು ಕಾರಣವಾಗಿತ್ತು.
ಅಲೋಕ್ ಭಟ್ ಮಡಿದ ಪೋಸ್ಟ್ ನಲ್ಲೇನಿದೆ?
#SabarmatiReport ಚಲನಚಿತ್ರವನ್ನು ನೋಡಲೇಬೇಕು ಎಂದು ನಾನು ಏಕೆ ಭಾವಿಸುತ್ತೇನೆ. ನನ್ನ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತೇನೆ
1. ಪ್ರಯತ್ನವು ವಿಶೇಷವಾಗಿ ಶ್ಲಾಘನೀಯವಾಗಿದೆ ಏಕೆಂದರೆ ಇದು ನಮ್ಮ ಇತ್ತೀಚಿನ ಇತಿಹಾಸದಲ್ಲಿ ಅತ್ಯಂತ ನಾಚಿಕೆಗೇಡಿನ ಘಟನೆಗಳ ಪ್ರಮುಖ ಸತ್ಯವನ್ನು ಹೊರತರುತ್ತದೆ.
2. ಚಿತ್ರದ ನಿರ್ಮಾಪಕರು ಈ ಸಮಸ್ಯೆಯನ್ನು ಬಹಳ ಸೂಕ್ಷ್ಮತೆ ಮತ್ತು ಘನತೆಯಿಂದ ನಿಭಾಯಿಸಿದ್ದಾರೆ.
3. ಒಂದು ದೊಡ್ಡ ವಿಚಾರದಲ್ಲಿ, ಸಾಬರಮತಿ ಎಕ್ಸ್‌ಪ್ರೆಸ್‌ನ ಪ್ರಯಾಣಿಕರನ್ನು ಕ್ರೂರವಾಗಿ ಸುಟ್ಟುಹಾಕುವುದನ್ನು ಪಟ್ಟಭದ್ರ ಹಿತಾಸಕ್ತಿ ಗುಂಪು ಹೇಗೆ ರಾಜಕೀಯ ವಿಚಾರವನ್ನಾಗಿ ಪರಿವರ್ತಿಸಿತು ಎಂದು ನಮಗೆಲ್ಲರಿಗೂ ಆತ್ಮಾವಲೋಕನ ಯೋಗ್ಯವಾಗಿದೆ. ಒಬ್ಬ ನಾಯಕ. ಅವರ ಪರಿಸರ ವ್ಯವಸ್ಥೆಯು ತಮ್ಮದೇ ಆದ ಸಣ್ಣ ಕಾರ್ಯಸೂಚಿಯನ್ನು ತೃಪ್ತಿಪಡಿಸಲು ಒಂದರ ನಂತರ ಒಂದರಂತೆ ಸುಳ್ಳು ಹೇಳುತ್ತದೆ.
4. ಅಂತಿಮವಾಗಿ 59 ಅಮಾಯಕ ಬಲಿಪಶುಗಳು ತಮ್ಮ ಪರವಾಗಿ ಮಾತನಾಡಬೇಕಾಯಿತು. ಹೌದು, ಅವರು ಹೇಳಿದಂತೆ, ಸತ್ಯ ಮಾತ್ರ ಗೆಲ್ಲುತ್ತದೆ. ಈ ಚಲನಚಿತ್ರವು ಫೆಬ್ರವರಿಯ ಬೆಳಗ್ಗೆ ನಾವು ಕಳೆದುಕೊಂಡ 59 ಮುಗ್ಧ ಪುರುಷರು, ಮಹಿಳೆಯರು ಮತ್ತು ಮಕ್ಕಳಿಗೆ ಸೂಕ್ತವಾದ ಗೌರವವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
Umar Khalid: ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್‌ಗೆ 7 ದಿನಗಳ ಮಧ್ಯಂತರ ಜಾಮೀನು
Loksabha:ಕಾಂಗ್ರೆಸ್ ಅಂಬೇಡ್ಕರ್ ಗೆ ಹಲವು ಬಾರಿ ಅವಮಾನ ಮಾಡಿದೆ: ಪ್ರಧಾನಿ ಮೋದಿ ತಿರುಗೇಟು
SC;ಪ್ರಕರಣಗಳ ವರ್ಗಾವಣೆ:ಪ್ರತಿಕ್ರಿಯಿಸಲು ಯಾಸಿನ್ ಮಲಿಕ್ ಸೇರಿ ಐವರಿಗೆ 2 ವಾರ ಕಾಲಾವಕಾಶ
ರಿವರ್ಸ್ ತೆಗೆಯುವಾಗ ಸಮುದ್ರಕ್ಕೆ ಬಿದ್ದ ಕಾರು… ನೌಕಾಪಡೆ ಅಧಿಕಾರಿ ಪಾರು, ಚಾಲಕ ನಾಪತ್ತೆ
MUST WATCH
ಹೊಸ ಸೇರ್ಪಡೆ
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ
Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾದ ಜಗದೀಶ್
Ujire: ಕಥನ ಸೃಜನಶೀಲತೆಯಿಂದ ಪ್ರಾದೇಶಿಕ ಸಂವೇದನೆಯ ಅಭಿವ್ಯಕ್ತಿ; ಅನುಪಮಾ ಪ್ರಸಾದ್
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.