ತುನಿಶಾ, ವೈಶಾಲಿ, ಪಲ್ಲವಿ.. 2022 ರಲ್ಲಿ ಪ್ರೀತಿಯಲ್ಲೇ ಅಂತ್ಯ ಕಂಡ ಕಿರುತೆರೆ ನಟಿಯರು ಇವರು..

Team Udayavani, Dec 27, 2022, 11:10 AM IST

tdy-7

ಮುಂಬಯಿ: ತುನಿಶಾ ಶರ್ಮಾಳ ಘಟನೆ ಹಿಂದಿ ಕಿರುತೆರೆ ಲೋಕಕ್ಕೆ ಆಘಾತ ನೀಡಿದೆ. ನಗುಮುಖದಿಂದ ಎಲ್ಲರೊಂದಿಗೆ ಆತ್ಮೀಯವಾಗಿ ಸೆಟ್‌ ನಲ್ಲಿರುತ್ತಿದ್ದ ತುನಿಶಾ ಅದೇ ಸೆಟ್‌ ನಲ್ಲಿ ನೇಣಿಗೆ ಶರಣಾಗಿ ಎಲ್ಲರನ್ನೂ ದುಃಖದ ಮಡುವಿಗೆ ದೂಡಿದ್ದಾರೆ. ಟಿವಿ ಲೋಕದ ತಾರೆಯರು ಈ ರೀತಿ ಹೆಜ್ಜೆಯಿಟ್ಟು ಜೀವನವನ್ನು ಮುಗಿಸಿರುವುದು ಇದೇ ಮೊದಲಲ್ಲ. 2022 ರಲ್ಲಿ ಬಣ್ಣದ ಲೋಕದಿಂದ ಮರೆಯಾಗಿ, ಇಹಲೋಕ ತ್ಯಜಿಸಿದ ನಟಿಯರ ಪಟ್ಟಿ ಇಲ್ಲಿದೆ…

ವೈಶಾಲಿ ಠಕ್ಕರ್ : ನೀವು ಹಿಂದಿ ಧಾರಾವಾಹಿಗಳನ್ನು ನೋಡುತ್ತಿದ್ದರೆ, ವೈಶಾಲಿ ಅವರನ್ನು ಖಂಡಿತವಾಗಿಯೂ ನೋಡಿರುತ್ತೀರಿ, ಹಿಂದಿಯ ಜನಪ್ರಿಯ ʼಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈʼ ಸೀರಿಯಲ್‌ ನಲ್ಲಿ ನಟಿಸುತ್ತಿದ್ದ ನಟಿ 2022 ರಲ್ಲಿ ಇಂದೋರ್‌ ನಲ್ಲಿನ ತಮ್ಮ ನಿವಾಸದಲ್ಲಿ ನೇಣಿಗೆ ಶರಣಾಗಿದ್ದರು. ಇವರ ಸಾವಿಗೆ  ಮಾಜಿ ಗೆಳೆಯ ರಾಹುಲ್ ನವಲನ್ ಕಾರಣವೆಂದು ಆರೋಪ ಕೇಳಿ ಬಂದಿತ್ತು.

ಪಲ್ಲವಿ ದೇ: 25 ವರ್ಷದ ಪಲ್ಲವಿ ದೇ ಬಂಗಾಳಿ ಬಣ್ಣದ ಲೋಕದಲ್ಲಿ ಜನಪ್ರಿಯ ಹೆಸರು. “ಮೊನು ಮಾನೆ ನಾ” (Mon Mane Na) ಸೀರಿಯಲ್‌ ನಲ್ಲಿ ಪ್ರಧಾನ ಪಾತ್ರ ಮಾಡುತ್ತಿದ್ದರು. ಅಪಾರ ಅಭಿಮಾನಿಗಳ ಪ್ರೀತಿಯನ್ನು ಸಂಪಾದಿಸಿದ ಅವರು, 2022 ರ ಮೇನಲ್ಲಿ ದುರಂತ ಅಂತ್ಯ ಕಂಡಿದ್ದರು. ಈ ಪ್ರಕರಣದಲ್ಲಿ ಪಲ್ಲವಿ ಅವರ ಗೆಳಯ ಸಾಗ್ನಿಕ್ ಚಕ್ರವರ್ತಿ ಅವರನ್ನು ಬಂಧಿಸಲಾಗಿತ್ತು.

ಬಿದಿಶಾ ಡಿ ಮಜುಂದಾರ್: 21 ವರ್ಷದ ಬಿದಿಶಾ ಮಾಡೆಲ್‌ ಹಾಗೂ ನಟಿಯಾಗಿ ಖ್ಯಾತಿಯಾಗಿದ್ದರು. ಇದೇ ವರ್ಷದ ಮೇ 25 ರಂದು ಸಂಜೆ ಕೋಲ್ಕತ್ತಾದ ಅಪಾರ್ಟ್‌ ಮೆಂಟ್‌ ವೊಂದರಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಅವರು ಪತ್ತೆಯಾಗಿದ್ದರು. ಈ ವೇಳೆ ಪೊಲೀಸರಿಗೆ ಸಾವಿಗೆ ಇರುವ ಕಾರಣವನ್ನು ಬರೆದಿರುವ ಪತ್ರ ಲಭ್ಯವಾಗಿತ್ತು. ಗೆಳೆಯ ಅಭಿನವ್ ಬೇರಾ ಅವರೊಂದಿಗೆ ಬ್ರೇಕಪ್‌ ಈ ಘಟನೆಗೆ ಕಾರಣವೆಂದು ತನಿಖೆಯಲ್ಲಿ ಬಯಲಾಗಿತ್ತು.

ಮಂಜುಷಾ ನಿಯೋಗಿ:  ನಟಿ ಹಾಗೂ ಮಾಡೆಲ್‌ ಆಗಿ ಹೆಸರುಗಳಿಸಿದ್ದ ಮಂಜುಷಾ ನಿಯೋಗಿ 2022ರ ಮೇ 27 ರಂದು ಕೋಲ್ಕತ್ತಾದ ನಿವಾಸದಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಈ ಪ್ರಕರಣಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲವಾದರೂ ಮಂಜುಷಾ ಅವರ ತಾಯಿ ನನ್ನ ಮಗಳು ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಹೇಳಿದ್ದರು.

ರಶ್ಮಿರೇಖಾ ಓಜಾ: ಒಡಿಯಾ ಧಾರಾವಾಹಿ ʼಕಮಿತಿ ಕಭಿ ಕಹಾʼನಲ್ಲಿ ನಟಿಸಿ ಖ್ಯಾತಿಯಾಗಿದ್ದ ರಶ್ಮಿರೇಖಾ ಭುವನೇಶ್ವರ್ ನಲ್ಲಿ  ಸಾವಿಗೀಡಾಗಿದ್ದರು. ಈ ಘಟನೆಯ ಹಿಂದೆ ರಶ್ಮಿ ಅವರ ಗೆಳೆಯ ಸಂತೋಷ ಪತ್ರ ಅವರ ಹೆಸರು ಕೇಳಿ ಬಂದಿತ್ತು.

ಟಾಪ್ ನ್ಯೂಸ್

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

1-dm

Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು

1-sssss

Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ

1-ladakk

China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ

3

Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ

arrested

16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Armaan Malik: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಾಯಕ ಅರ್ಮಾನ್‌ ಮಲಿಕ್; ಇಲ್ಲಿದೆ ಫೋಟೋಸ್

Armaan Malik: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಾಯಕ ಅರ್ಮಾನ್‌ ಮಲಿಕ್; ಇಲ್ಲಿದೆ ಫೋಟೋಸ್

ಹಲವು ಬಾರಿ ಸಾಯುವ ಬಗ್ಗೆ ಯೋಚಿಸಿದ್ದೆ.. #MeToo ಆರೋಪದ ಬಗ್ಗೆ ನಿರ್ದೇಶಕ ಸಾಜಿದ್‌ ಮಾತು

ಹಲವು ಬಾರಿ ಸಾಯುವ ಬಗ್ಗೆ ಯೋಚಿಸಿದ್ದೆ.. #MeToo ಆರೋಪದ ಬಗ್ಗೆ ನಿರ್ದೇಶಕ ಸಾಜಿದ್‌ ಮಾತು

1-ram

Transformation; ಕೇವಲ 18 ತಿಂಗಳಲ್ಲಿ 55 ಕೆ.ಜಿ. ತೂಕ ಕಳೆದುಕೊಂಡ ಖ್ಯಾತ ನಟ ರಾಮ್ ಕಪೂರ್

1-maika

‘I am single’; ಅರ್ಜುನ್ ಕಪೂರ್ ಕಾಮೆಂಟ್‌ಗೆ ಕೊನೆಗೂ ಮಲೈಕಾ ಅರೋರಾ ಪ್ರತಿಕ್ರಿಯೆ

Hollywood: Billy the kid- ಹಾಲಿವುಡ್‌ ಹಿರಿಯ ನಟ ಜೆಫ್ರಿ ಡ್ಯುಯೆಲ್‌ ಇನ್ನಿಲ್ಲ

Hollywood: Billy the kid- ಹಾಲಿವುಡ್‌ ಹಿರಿಯ ನಟ ಜೆಫ್ರಿ ಡ್ಯುಯೆಲ್‌ ಇನ್ನಿಲ್ಲ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

1-dm

Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು

ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ

ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ

19

New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.