ಉಪ್ಪಿ ಜೊತೆ ಚಾಂದಿನಿ ಮತ್ತೆ ಡಿಂಗುಡಾಂಗು
Team Udayavani, Jun 4, 2017, 4:01 PM IST
“ಉಪೇಂದ್ರ ಮತ್ತೆ ಬಾ’ ಸಿನಿಮಾದ ಒಂದು ಹಾಡು ಹಾಗೂ ಕೆಲವು ದೃಶ್ಯಗಳಲ್ಲಿ ಚಾಂದಿನಿ ಗೆಸ್ಟ್ ಅಪಿಯರೆನ್ಸ್ ಮಾಡಲಿದ್ದಾರೆಂಬ ಸುದ್ದಿ ನಿಮಗೆ ಗೊತ್ತೇ ಇದೆ. ಈಗ ಆ ಹಾಡು ಹಾಗೂ ದೃಶ್ಯದ ಚಿತ್ರೀಕರಣ ನಡೆದಿದೆ. ಇತ್ತೀಚೆಗೆ ಕಂಠೀರವ ಸ್ಟುಡಿಯೋ ಹಾಗೂ ಮೈಸೂರಿನಲ್ಲಿ ಈ ಹಾಡಿನ ಚಿತ್ರೀಕರಣ ನಡೆದಿದೆ.
ಸಿನಿಮಾದೊಳಗಡೆ ಬರುವ ಡ್ರೀಮ್ ಸಾಂಗ್ ಇದಾಗಿದ್ದು, ಕನಸಲ್ಲಿ ಬಂದು ಕಾಡುವ ಸುಂದರಿಯಾಗಿ ಚಾಂದಿನಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ತುಂಬಾ ವರ್ಷಗಳ ನಂತರ ಉಪೇಂದ್ರ ಹಾಗೂ ಚಾಂದಿನಿ ಜೊತೆಯಾಗಿ ಕಾಣಿಸಿಕೊಂಡಂತಾಗಿದೆ. “ಎ’ ಚಿತ್ರದಲ್ಲಿ ಉಪೇಂದ್ರ ಹಾಗೂ ಚಾಂದಿನಿ ಜೊತೆಯಾಗಿ ನಟಿಸಿದ್ದರು. ಆ ಚಿತ್ರದ “ಚಾಂದಿನಿ ಚಲೀ ಗಯೀ ಚಾಂದಿನಿ’ ಹಾಡು ಕೂಡಾ ಸಖತ್ ಫೇಮಸ್ ಆಗಿತ್ತು. ಈ ಚಿತ್ರ ಚಾಂದಿನಿ ಕೆರಿಯರ್ಗೆ ಒಂದು ಬ್ರೇಕ್ ಕೊಟ್ಟಿದ್ದಂತೂ ಸುಳ್ಳಲ್ಲ. ಆದರೆ, “ಎ’ ನಂತರ ಉಪೇಂದ್ರ ಜೊತೆ ಚಾಂದಿನಿ ನಟಿಸಿರಲಿಲ್ಲ. ಈಗ “ಉಪೇಂದ್ರ ಹುಟ್ಟಿ ಬಾ’ ಸಿನಿಮಾ ಮೂಲಕ ಮತ್ತೆ ಉಪೇಂದ್ರ ಜೊತೆಯಾಗಿದ್ದಾರೆ. ಚಿತ್ರದ ಹಾಡು ಹಾಗೂ ಸಣ್ಣ ದೃಶ್ಯವೊಂದರಲ್ಲಿ ಚಾಂದಿನಿ ಕಾಣಿಸಿಕೊಂಡಿದ್ದು, ಉಪೇಂದ್ರ ಜೊತೆ ನಟಿಸಿದ ಖುಷಿ ಚಾಂದಿನಿಯವರಿಗಿದೆ.
ಅರುಣ್ ಲೋಕನಾಥ್ ಈ ಚಿತ್ರದ ನಿರ್ದೇಶಕರು. ಚಿತ್ರದಲ್ಲಿ ಶ್ರುತಿ ಹರಿಹರನ್ ಹಾಗೂ ಪ್ರೇಮಾ ಕೂಡಾ ನಟಿಸಿದ್ದಾರೆ. ಉಪೇಂದ್ರ ಅವರ “ಉಪೇಂದ್ರ’ ಸಿನಿಮಾದಲ್ಲಿ ಪ್ರೇಮಾ ನಾಯಕಿಯಾಗಿ ನಟಿಸಿದ್ದರು. ಈಗ ಈ ಚಿತ್ರದ ಮೂಲಕ ಮತ್ತೂಮ್ಮೆ ಜೊತೆಯಾಗಿದ್ದಾರೆ.
ಚಿತ್ರದ ಹಾಡೊಂದರಲ್ಲಿ ಹರ್ಷಿಕಾ ಪೂಣತ್ಛ ಕೂಡಾ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಶ್ರೀಧರ್ ಸಂಭ್ರಮ್ ಅವರ ಸಂಗೀತ, ಜೆ.ಸ್ವಾಮಿ ಛಾಯಾಗ್ರಹಣ, ಜೋನಿ ಹರ್ಷ ಸಂಕಲನವಿದೆ. ಚಿತ್ರಕ್ಕೆ ನಾಗೇಂದ್ರ ಪ್ರಸಾದ್, ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿಯವರ ಸಾಹಿತ್ಯವಿದೆ. ಸದ್ಯ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದ್ದು, ಡಬ್ಬಿಂಗ್ ನಡೆಯುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kochi: ಲೈಂಗಿಕ ಕಿರುಕುಳ ಕೇಸು ವಾಪಸ್ ಪಡೆಯಲ್ಲ ಎಂದ ಮಲಯಾಳಿ ನಟಿ
55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್ – ಮನರಂಜನೆಗೆ ಹೊಸ ಆಯಾಮ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
IFFI 2024: ತಾಲಿಯಾ..ತಾಲಿಯಾ…ಜೋರ್ ದಾರ್ ತಾಲಿಯಾ..!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.