![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Sep 5, 2024, 5:34 PM IST
ಮುಂಬಯಿ: ಇತ್ತೀಚೆಗೆ ಶೋವೊಂದರಲ್ಲಿ ಬೋಲ್ಡ್ ಆಗಿ ಮಾತನಾಡಿದ ವಿಚಾರದಿಂದ ಸುದ್ದಿಯಾಗಿದ್ದ ಮಾಡೆಲ್ ಕಂ ನಟಿ ಉರ್ಫಿ ಜಾವೇದ್(Urfi Javed) ತನಗಾದ ಕೆಟ್ಟ ಅನುಭದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಸದಾ ಫ್ಯಾಷನ್ ಟ್ರೆಂಡ್‌ನಿಂದಲೇ ಪಾಪರಾಜಿಗಳ ಎದುರಿಗೆ ಪೋಸ್ ಕೊಟ್ಟು ಮಿಂಚುವ ಉರ್ಫಿ ಅವರಿಗೆ ಬಾಲಕನೊಬ್ಬ ಕೇಳಿದ ಅಸಭ್ಯ ಪ್ರಶ್ನೆಯೊಂದು ಮುಜುಗರಕ್ಕೀಡಾಗುವಂತೆ ಮಾಡಿದೆ.
“ನಿನ್ನೆ ನನ್ನ ಕುಟುಂಬದವರ ಮುಂದೆಯೇ ಮುಜುಗರ ತರುವಂತಹ ವಿಚಾರವೊಂದು ನಡೆಯಿತು. ಹುಡುಗರ ಒಂದು ಗುಂಪು ನಾನು ಪಾಪರಾಜಿಗಳಿಗೆ ಪೋಸ್ ನೀಡುವಾಗ ಕಾಮೆಂಟ್ ಹೊಡೆದರು. ಅದರಲ್ಲಿ ಒಬ್ಬ ನೀನು ಎಷ್ಟು ಜನರ ಜೊತೆ ಮಲಗಿದ್ದೀಯಾ? ಅಂತ ಕೇಳಿದ್ದಾನೆ. ಆ ಹುಡುಗನಿಗೆ ಅಂದಾಜು 15 ವರ್ಷ ವಯಸ್ಸಿರಬಹುದು. ನನ್ನ ಕುಟುಂಬ ಹಾಗೂ ತಾಯಿ ಎದುರಲ್ಲೇ ಆತ ಹಾಗೆ ಹೇಳಿದ್ದಾನೆ. ಇದರಿಂದ ನನ್ನ ತಾಯಿಗೆ ಬೇಸರವಾಗಿದೆ. ಆ ಹುಡುಗನಿಗೆ ಅಲ್ಲೇ ಬಾರಿಸಬೇಕೆಂದು ಅನ್ನಿಸಿತು. ಮಹಿಳೆಯರು ಹಾಗೂ ಇತರರಿಗೆ ಗೌರವ ಕೊಡುವುದನ್ನು ನಿಮ್ಮ ಹುಡುಗರಿಗೆ ಕಲಿಸಿ” ಎಂದು ಘಟನೆ ಬಗ್ಗೆ ಉರ್ಫಿ ಜಾವೇದ್ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
ಇತ್ತೀಚೆಗೆ ಉರ್ಫಿ ‘ಫಾಲೋ ಕರ್ ಲೋ ಯಾರ್’ ಎಂಬ ಶೋನಲ್ಲಿ “ನಾನು ಮೂರು ವರ್ಷಗಳಿಂದ ಸೆ**ಕ್ಸ್ ಮಾಡಿಲ್ಲ. ಯಾರಿಗೂ ಕಿಸ್ ಮಾಡಿಲ್ಲ. ಯಾರೊಂದಿಗೂ ರೊಮ್ಯಾಂಟಿಕ್ ಆಗಿ ಮಾತನಾಡಿಲ್ಲ” ಎಂದು ಹೇಳಿದ್ದರು. ಈ ಮಾತು ಎಲ್ಲೆಡೆ ವೈರಲ್ ಆಗಿತ್ತು.
Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?
ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?
Chhaava: ‘ಚಾವಾ’ಗೆ ಧ್ವನಿಯಾದ ಅಜಯ್ ದೇವಗನ್
ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ
Spiritual journey: ಕಿನ್ನರ್ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ
You seem to have an Ad Blocker on.
To continue reading, please turn it off or whitelist Udayavani.