ಬಹುಭಾಷಾ, ಅಭಿಜಾತ ನಟ ಓಂ ಪುರಿ ಹೃದಯಾಘಾತದಿಂದ ವಿಧಿವಶ
Team Udayavani, Jan 6, 2017, 10:11 AM IST
ಮುಂಬಯಿ : ಭಾರತೀಯ ಚಲನಚಿತ್ರರಂಗದ ಮೇರು ನಟ ಓಂ ಪುರಿ ಅವರು ಶುಕ್ರವಾರ ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 66 ವರ್ಷ ಪ್ರಾಯವಾಗಿತ್ತು.
ಸ್ವಗೃಹದಲ್ಲಿ ಹೃದಯಾಘಾತದಿಂದ ಓಂ ಪುರಿ ಅವರು ನಿಧನ ಹೊಂದಿದ್ದಾರೆ ಎಂದು ವರದಿಯಾಗಿದೆ. ಹಿರಿಯ ನಟನ ನಿಧನಕ್ಕೆ ಬಾಲಿವುಡ್‌ನ ಗಣ್ಯರು,ರಾಜಕೀಯ ರಂಗದ ಗಣ್ಯರು ಸೇರಿದಂತೆ ಅಪಾರ ಅಭಿಮಾನಿಗಳು ತೀವ್ರ ಕಂಬನಿ ಮಿಡಿದಿದ್ದಾರೆ.
ಹರಿಯಾಣಾದ ಅಂಬಾಲಾದಲ್ಲಿ 18 ಅಕ್ಟೋಬರ್ 1950ರಲ್ಲಿ ಜನಿಸಿದ ಓಂ ಪುರಿ ಬಹಭಾಷಾ ನಟರಾಗಿ ಪ್ರಖ್ಯಾತಿ ಗಳಿಸಿದ್ದರು. ಇವರು ಭಾರತೀಯ ಹಲವು ಭಾಷಾ ಹಾಗೂ ಹಲವು ಕಲಾತ್ಮಕ ಚಲನಚಿತ್ರಗಳಲ್ಲಿಯೂ ನಟಿಸಿ ತಾನೊಬ್ಬ ಅತ್ಯದ್ಭುತ ನಟ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಬ್ರಿಟಿಷ್ ಹಾಗೂ ಅಮೆರಿಕನ್ ಚಲನಚಿತ್ರಗಳಲ್ಲಿಯೂ ಸಹ ಇವರ ಹೆಸರು ಕಾಣಿಸಿಕೊಂಡಿತ್ತು. ಇವರಿಗೆ ಗೌರವಾನ್ವಿತ ಓಬಿಎ (ಆರ್ಡರ್ ಆಫ್ ಬ್ರಿಟಿಶ್ ಎಂಪಾಯರ್ ಪದವಿ) ಲಭಿಸಿದೆ.
ತಮ್ಮ ಜೀವನದ ಆರಂಭಿಕ ವರ್ಷಗಳನ್ನು, ಪಂಜಾಬ್ ರಾಜ್ಯದ ಪಟಿಯಾಲಾ ಜಿಲ್ಲೆಯ ಸನೌರ್‌ನಲ್ಲಿದ್ದ ತಮ್ಮ ಸೋದರಮಾವನವರೊಂದಿಗೆ ಕಳೆದರು. ಭಾರತೀಯ ಚಲನಚಿತ್ರ ಮತ್ತು ಕಿರುತೆರೆ ಶಿಕ್ಷಣ ಸಂಸ್ಥೆಯಿಂದ ಅವರು ಪದವಿ ಪಡೆದರು. ರಾಷ್ಟ್ರೀಯ ನಾಟಕ ಶಾಲೆಯಿಂದ 1973ರಲ್ಲಿ ತೇರ್ಗಡೆಯಾಗಿದ್ದರು. ಅಲ್ಲಿ ಮೇರು ನಟ ನಸೀರುದ್ದೀನ್ ಷಾ ಇವರ ಸಹಪಾಠಿಯಾಗಿದ್ದರು. 1976 ರಲ್ಲಿ ಮರಾಠಿ ಚಿತ್ರ ಘಾಷಿರಾಮ್ ಕೋತ್ವಾಲ್ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು.
ಪಂಜಾಬಿ ಚಲನಚಿತ್ರಗಳಲ್ಲಿಯೂ ಸಕ್ರಿಯರಾಗಿದ್ದ ಪುರಿ 1980ರ ದಶಕದಲ್ಲಿ ಬಹಳಷ್ಟು ಯಶಸ್ವಿಯಾದ ಛನ್ ಪರದೇಸಿ (1980) ಮತ್ತು ಲಾಂಗ್ ದಾ ಲಿಷ್ಕಾರಾ (1986) ಎಂಬ ಎರಡು ಪಂಜಾಬಿ ಚಲನಚಿತ್ರಗಳಲ್ಲಿ ನಟಿಸಿದ್ದರು. ಹತ್ತೊಂಬತ್ತು ವರ್ಷಗಳ ನಂತರ, 2005ರಲ್ಲಿ ಬಾಘಿ ಎಂಬ ಚಲನಚಿತ್ರದಲ್ಲಿ ನಟಿಸುವುದರೊಂದಿಗೆ ಪುರಿ ಪಂಜಾಬಿ ಚಲನಚಿತ್ರರಂಗಕ್ಕೆ ಮರಳಿದ್ದರು. ಗುರುದಾಸ್ ಮಾನ್ ನಿರ್ದೇಶನದ, 2008ರಲ್ಲಿ ತೆರೆಕಂಡ ಯಾರಿಯಾನ್ ಎಂಬ ಇನ್ನೊಂದು ಪಂಜಾಬಿ ಚಲನಚಿತ್ರದಲ್ಲಿ ಓಂ ಪುರಿ ನಟಿಸಿದ್ದಾರೆ.
ಹಲವು ವಿಶಿಷ್ಟ ಪಾತ್ರಗಳಲ್ಲಿ ನಟಿಸಿ ಪ್ರಶಂಸೆ ಗಳಿಸಿರುವ ಓಂ ಪುರಿ ಆಕ್ರೋಶ್ (1980) ಚಲನಚಿತ್ರದಲ್ಲಿ ಅವರದ್ದು ಶೋಷಣೆಗೊಳಗಾದ ಬುಡಕಟ್ಟು ಜನಾಂಗದವರ ಪಾತ್ರ,ಅಲ್ಲಿ ಯಾವ ಸಂಭಾಷಣೆಯೂ ಇರಲಿಲ್ಲ, ಕೇವಲ ಹಿನ್ನಲೆಯಲ್ಲಿ ತೋರಿಸುವ ಗತಿಸಿದ ಕಥಾಸರಣಿಯಲ್ಲಿ ಮಾತ್ರ ಅವರ ಪಾತ್ರವಿತ್ತು. ಡಿಸ್ಕೊ ಡ್ಯಾನ್ಸರ್ (1982) ಚಲನಚಿತ್ರದಲ್ಲಿ ನಾಯಕ ಮಿಥುನ್ ಚಕ್ರವರ್ತಿಯ ಪಾತ್ರವಾಗಿದ್ದ ‘ಜಿಮ್ಮಿ’ಯ ಮ್ಯಾನೇಜರ್ ಪಾತ್ರ ನಿರ್ವಹಿಸಿದ್ದರು. ಅದೇ ವರ್ಷ ಬಿಡುಗಡೆಯಾದ ಅರ್ಧ್ ಸತ್ಯ ದಲ್ಲಿ, ಜೀವನ ಪರ್ಯಂತ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಶೋಷಣೆಯ ವಿರುದ್ಧ ರೊಚ್ಚಿಗೆದ್ದ ಕೋಪಿಷ್ಟ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದಕ್ಕೆ ಓಂ ಪುರಿಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಲಭಿಸಿತ್ತು. ಮಾಚಿಸ್ (1996) ಚಲನಚಿತ್ರದಲ್ಲಿ ಸಿಖ್ ಉಗ್ರವಾದಿಗಳ ನಾಯಕನ ಪಾತ್ರ, 1997ರಲ್ಲಿ ಬಿಡುಗಡೆಯಾದ ವಾಣಿಜ್ಯ ಚಲನಚಿತ್ರ ಗುಪ್ತ್ ನಲ್ಲಿ ಪುನಃ ಪೊಲೀಸ್ ಅಧಿಕಾರಿಯ ಪಾತ್ರ, ಧೂಪ್ (2003)ನಲ್ಲಿ ವೀರಮರಣ ಹೊಂದಿದ ಸೈನಿಕನೊಬ್ಬನ ಧೀಮಂತ ತಂದೆಯ ಪಾತ್ರದಲ್ಲಿ ಓಂ ಪುರಿ ಮಿಂಚಿದ್ದರು.
ಕನ್ನಡದಲ್ಲೂ ನಟನೆ
ತಬ್ಬಲಿ ನೀನಾದೆ ಮಗನೇ ಚಿತ್ರದ ಮೂಲಕ ಕನ್ನಡ ಚಲನಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಓಂಪುರಿ ಅವರು
1999ರಲ್ಲಿ ಬಿಡುಗಡೆಯಾಗಿದ್ದ ಶಿವರಾಜಕುಮಾರ್ ಅಭಿನಯದ ಎಕೆ 47 ಚಲನಚಿತ್ರದಲ್ಲಿ ಭೂಗತ ಪಾತಕಿಗಳಿಂದ ನಗರವನ್ನು ಸುರಕ್ಷಿತವಾಗಿರಿಸಲು ಶತಪ್ರಯತ್ನ ಮಾಡುವ ಒಬ್ಬ ಕಟ್ಟುನಿಟ್ಟಾದ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಓಂ ಪುರಿ ನಟಿಸಿ ಕನ್ನಡ ಚಿತ್ರಪ್ರೇಮಿಗಳ ಪ್ರಶಂಸೆ ಗಳಿಸಿದ್ದರು. ದರ್ಶನ್ ಅಭಿನಯದ ಧೃವ, ಸಂತೆಯಲ್ಲಿ ನಿಂತ ಕಬೀರ, ಟೈಗರ್ ಮೊದಲಾದ ಚಿತ್ರಗಳಲ್ಲಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಕನ್ನಡದಲ್ಲಿ ನೀಡಬೇಕಾದ ಸಂಭಾಷಣೆಗಳಿಗೆ ಸ್ವತಃ ಅವರೇ ಕಂಠದಾನ ಮಾಡಿರುವುದು ವಿಶೇಷ.
ಅಮರೀಶ್ ಪುರಿ ಸಹೋದರ ಅಲ್ಲ!
ದಿವಂಗತ ನಟ ಅಮರೀಶ್ ಪುರಿ, ಓಂ ಪುರಿಯವರ ಸಹೋದರ ಎಂಬುದು ವ್ಯಾಪಕ ತಪ್ಪು ತಿಳುವಳಿಕೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಾನೇ ಇಂಡಿಯಾ..ನಾನೇ ಕ್ಯಾಬಿನೆಟ್.. ʼಎಮರ್ಜೆನ್ಸಿʼಯಲ್ಲಿ ಇಂದಿರಾ ಗಾಂಧಿಯಾಗಿ ಮಿಂಚಿದ ಕಂಗನಾ
Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್ʼ ಟ್ರೇಲರ್ ಔಟ್- ಮಿಂಚಿದ ಅಕ್ಷಯ್
Armaan Malik: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಾಯಕ ಅರ್ಮಾನ್ ಮಲಿಕ್; ಇಲ್ಲಿದೆ ಫೋಟೋಸ್
ಹಲವು ಬಾರಿ ಸಾಯುವ ಬಗ್ಗೆ ಯೋಚಿಸಿದ್ದೆ.. #MeToo ಆರೋಪದ ಬಗ್ಗೆ ನಿರ್ದೇಶಕ ಸಾಜಿದ್ ಮಾತು
Transformation; ಕೇವಲ 18 ತಿಂಗಳಲ್ಲಿ 55 ಕೆ.ಜಿ. ತೂಕ ಕಳೆದುಕೊಂಡ ಖ್ಯಾತ ನಟ ರಾಮ್ ಕಪೂರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…
Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್
540 ಅಡಿ ಆಳದ ಬೋರ್ವೆಲ್ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.