Pankaj Udhas: ಖ್ಯಾತ ಗಜಲ್ ಗಾಯಕ ಪಂಕಜ್ ಉದಾಸ್ ನಿಧನ
Team Udayavani, Feb 26, 2024, 5:29 PM IST
ಮುಂಬಯಿ: ಖ್ಯಾತ ಗಜಲ್ ಹಾಗೂ ಹಿನ್ನೆಲೆ ಗಾಯಕ ಪಂಕಜ್ ಉದಾಸ್(72) ಸೋಮವಾರ(ಫೆ.26 ರಂದು) ನಿಧನ ಹೊಂದಿದರು.
ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಅವರು ಹೊಂದಿದ್ದಾರೆ ಎಂದು ಅವರ ತಂಡ ದೃಢಪಡಿಸಿದೆ. ಕಳೆದ ಕೆಲ ಸಮಯದಿಂದ ಪಂಕಜ್ ಅವರು ಅನಾರೋಗ್ಯದಲ್ಲಿ ಬಳಲುತ್ತಿದ್ದರು. ಅವರ ಆರೋಗ್ಯ ಸ್ಥಿತಿ ದಿನ ಕಳೆದಂತೆ ಹದಗೆಟ್ಟಿತು. ಇಂದು ಮುಂಜಾನ 11 ಗಂಟೆಗೆ ಅವರು ನಿಧನರಾದರು ಎಂದು ʼಇಂಡಿಯಾ ಟುಡೆʼ ಗೆ ಹೇಳಿದೆ.
ಅವರ ಪುತ್ರಿ ನಯಾಬ್ ಉದಾಸ್ ಅವರು ತಮ್ಮ ತಂದೆಯ ನಿಧನದ ಬಗ್ಗೆ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. “ದೀರ್ಘಕಾಲದ ಅನಾರೋಗ್ಯದಿಂದ 26 ಫೆಬ್ರವರಿ 2024 ರಂದು ಪದ್ಮಶ್ರೀ ಪಂಕಜ್ ಉದಾಸ್ ಅವರು ಹೊಂದಿದರು. ಅವರ ನಿಧನದ ವಿಚಾರವನ್ನು ನಿಮಗೆ ತಿಳಿಸಲು ನಾವು ತುಂಬಾ ದುಃಖಿತರಾಗಿದ್ದೇವೆ” ಎಂದು ಅವರು ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ಮೇ 17, 1951 ರಂದು ಗುಜರಾತ್‌ನಲ್ಲಿ ಜನಿಸಿದ ಅವರು, ಚಿಕ್ಕ ವಯಸ್ಸಿನಲ್ಲೇ ಗಜಲ್ ಹಾಡುಗಳಿಗೆ ಪ್ರಭಾವಿತರಾದರು.1980 ಮತ್ತು 1990 ರ ದಶಕದಲ್ಲಿ ಅವರು ಗಜಲ್ ಹಾಡುಗಳಿಂದ ಜನಪ್ರಿಯತೆಯನ್ನು ಪಡೆದುಕೊಂಡರು.
1981ರಲ್ಲಿ ʼಮುಕರಾರ್ʼ, 1982ರಲ್ಲಿ ʼತರನ್ನಮ್ʼ, 1983ರಲ್ಲಿ ಮೆಹಫಿಲ್ ಆಲ್ಬಮ್‌ಗಳು ಅಪಾರ ಕೇಳುಗರನ್ನು ರಂಜಿಸಿತ್ತು.
1989 ರಲ್ಲಿ ಅವರು ‘ನಬೀಲ್’ ಎಂಬ ಆಲ್ಬಂ ಅನ್ನು ಬಿಡುಗಡೆ ದ್ದರು. ಇದು ಇವರ ಅತೀ ಹೆಚ್ಚು ಮಾರಾಟವಾದ ಆಲ್ಬಂಗಳಲ್ಲಿ ಒಂದಾಗಿದೆ. ಇದರ ಮೊದಲ ಕಾಪಿ ಹರಾಜಿನಲ್ಲಿ 1 ಲಕ್ಷಕ್ಕೆ ಮಾರಾಟವಾಗಿತ್ತು. ಇದರಲ್ಲಿ ಬಂದ ಹಣವನ್ನು ಅವರು ಕ್ಯಾನ್ಸರ್ ರೋಗಿಗಳ ಸಹಾಯ ಸಂಘಕ್ಕೆ ನೀಡಿದ್ದರು.
ಪಂಕಜ್ ಉದಾಸ್ ಹಲವಾರು ಆಲ್ಬಮ್‌ಗಳು ಮತ್ತು ಸಿಂಗಲ್‌ಗಳನ್ನು ಬಿಡುಗಡೆ ಮಾಡಿದ್ದರು. ‘ಚಿಟ್ಟಿ ಆಯಿ ಹೈ’, ‘ಔರ್ ಅಹಿಸ್ತಾ’ ,’ಜೀಯೇ ತೋ ಜೀಯೇ ಕೈಸೆ’ ಈ ಹಾಡುಗಳು ಎವರ್ ಗ್ರೀನ್ ಹಿಟ್ ಸಾಲಿಗೆ ಸೇರಿವೆ. ಮಹೇಶ್ ಭಟ್ ಅವರ ʼನಾಮ್ʼ ಸಿನಿಮಾದ ಹಾಡನ್ನು ಹಾಡುವ ಮೂಲಕ ಹಿನ್ನೆಲೆ ಗಾಯಕರಾಗಿಯೂ ಗುರುತಿಸಿಕೊಂಡರು.
ಇನ್ನು ಕನ್ನಡದಲ್ಲೂ ಗಜಲ್ ಮೂಲಕ್ ಪಂಕಜ್ ಉದಾಸ್ ರಂಜಿಸಿದ್ದಾರೆ. ಕಿಚ್ಚ ಸುದೀಪ್ ಅವರ ʼಸ್ಪರ್ಶʼ ಸಿನಿಮಾದ ʼಚಂದಕ್ಕಿಂತ ಚಂದ..ʼ ಗಜಲ್ ಗೆ ಪಂಕಜ್ ದನಿಯಾಗಿದ್ದರು.
ಇವರ ಸಾಧನೆಗೆ ಭಾರತ ಸರ್ಕಾರ 2006 ರಲ್ಲಿ ಇವರಿಗೆ ಪದ್ಮಶ್ರೀ ಗೌರವವನ್ನು ನೀಡಿತು. ಇವರ ಸಹೋದರರಾದ ನಿರ್ಮಲ್ ಉದಾಸ್, ಮನಹಾರ್ ಉದಾಸ್ ಕೂಡ ಗಾಯಕರಾಗಿದ್ದಾರೆ.
ಅವರ ನಿಧನಕ್ಕೆ ಬಿಟೌನ್ ಹಾಗೂ ಇತರೆ ಗಣ್ಯರು ಕಂಬನಿ ಮಿಡಿದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.