Nick Jonas: ಹಾಡುತ್ತಲೇ ವೇದಿಕೆಯಲ್ಲಿ ಎಡವಿ ಬಿದ್ದ ಪ್ರಿಯಾಂಕ ಪತಿ ನಿಕ್; ವಿಡಿಯೋ ವೈರಲ್
Team Udayavani, Aug 16, 2023, 6:39 PM IST
ಮುಂಬಯಿ: ಬಾಲಿವುಡ್ ಬ್ಯೂಟಿ ಪ್ರಿಯಾಂಕ ಚೋಪ್ರಾ ಹಾಗೂ ಅವರ ಪತಿ ನಿಕ್ ಜೋನಸ್ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುತ್ತಾರೆ. ತಮ್ಮ ಹಾಗೂ ಮಗುವಿನ ಫೋಟೋವನ್ನು ಹಂಚಿಕೊಳ್ಳುತ್ತಿರುತ್ತಾರೆ.
ನಿಕ್ ಜೋನಸ್ ಅವರ ಮ್ಯೂಸಿಕ್ ಬ್ಯಾಂಡ್ ಇದೆ. ನಿಕ್ ಬ್ರದರ್ಸ್ ಅವರು ಕಾರ್ಯಕ್ರಮ ನೀಡಲು ಟೂರ್ ಹೋಗುತ್ತಾರೆ. ಅವರ ಕಾರ್ಯಕ್ರಮ ನೋಡಲು ಅಪಾರ ಜನರು ಸೇರುತ್ತಾರೆ. ಇತ್ತೀಚೆಗೆ ನಿಕ್ ಜೋನಾಸ್ ಕಾರ್ಯಕ್ರಮವೊಂದನ್ನು ನೀಡುವಾಗ ಎಡವಿ ಬಿದ್ದ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ತಮ್ಮ ಕಾರ್ಯಕ್ರಮವನ್ನು ನೀಡುವಾಗ ಹಾಡುತ್ತಲ್ಲೇ ನಿಕ್ ವೇದಿಕೆಯ ಬಳಿಗೆ ಬಂದಿದ್ದಾರೆ. ಈ ವೇಳೆ ವೇದಿಕೆಯ ತುದಿಗೆ ಬಂದಿದ್ದಾರೆ. ಹಾಡುತ್ತಿರುವಾಗ ಅವರ ಗಮನಕ್ಕೆ ಬಾರದೆ ಅವರು ಎಡವಿ ಬಿದಿದ್ದಾರೆ. ಆದರೆ ಕೆಲವೇ ಸೆಕೆಂಡ್ ಗಳಲ್ಲಿ ಏನೂ ಆಗಿಲ್ಲ ಎನ್ನುವಂತೆ ಹಾಡಲು ಶುರು ಮಾಡಿದ್ದಾರೆ.
ಜೋನಸ್ ಬ್ರದರ್ಸ್ ಇತ್ತೀಚೆಗೆ ಮ್ಯೂಸಿಕ್ ಟೂರ್ ಕೈಗೊಂಡಿದ್ದಾರೆ. ಈಗಾಗಲೇ ಅವರು ಹಲವು ಮ್ಯೂಸಿಕ್ ಕಾರ್ಯಕ್ರಮವನ್ನು ಈ ಟೂರ್ ನಲ್ಲಿ ನೀಡಿದ್ದಾರೆ.
ಇತ್ತೀಚೆಗೆ ಪತಿಯ ಮ್ಯೂಸಿಕ್ ಟೂರ್ ಬಗ್ಗೆ ಹೇಳಿ “ನೀವು ಮ್ಯಾಗ್ನೆಟ್ ನಿಕ್ ಜೋನಾಸ್ ಎಂಎಂ (ಮಾಲ್ಟಿ ಮೇರಿ) ಮತ್ತು ನಿಮ್ಮನ್ನು ಹೊಂದಲು ನಾನು ತುಂಬಾ ಅದೃಷ್ಟಶಾಲಿ. ಹೊಸ ಮ್ಯೂಸಿಕ್ ಟೂರ್ ಪ್ರಾರಂಭಕ್ಕೆ ಅಭಿನಂದನೆಗಳು” ಎಂದು ಪತ್ನಿ ಪ್ರಿಯಾಂಕ ಬರೆದುಕೊಂಡಿದ್ದರು.
ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ 2018 ರಲ್ಲಿ ವಿವಾಹವಾದರು. ಅವರು ತಮ್ಮ ಮೊದಲ ಮಗು ಮಗಳು ಮಾಲ್ಟಿ ಮೇರಿಯನ್ನು 2022 ರಲ್ಲಿ ಬಾಡಿಗೆ ತಾಯ್ತನದ ಮೂಲಕ ಪಡೆದಿದ್ದಾರೆ.
me falling for Nick Jonas be like pic.twitter.com/i8veSggQdJ
— Jonas Brothers Updates ☀️ (@JonasBrosBros) August 16, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shyam Benegal; ಸಾಮಾಜಿಕ ಕಳಕಳಿ ಚಿತ್ರಗಳ ಪ್ರವರ್ತಕ ವಿಧಿವಶ: ಉಡುಪಿಯ ಬೆನಗಲ್ ಮೂಲದವರು
Filmmaker Died: ಖ್ಯಾತ ಸಿನಿಮಾ ನಿರ್ದೇಶಕ ಶ್ಯಾಂ ಬೆನಗಲ್ ವಿಧಿವಶ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.