Rashmika Mandanna: ಫೋನಿನಲ್ಲಿ ದೇವರಕೊಂಡ ಧ್ವನಿ ಕೇಳುತ್ತಲೇ ನಾಚಿ ನೀರಾದ ರಶ್ಮಿಕಾ..
Team Udayavani, Nov 18, 2023, 6:20 PM IST
ಹೈದರಾಬಾದ್: ರಾಕ್ ಸ್ಟಾರ್ ರಣ್ಬೀರ್ ಕಪೂರ್ ಅವರ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ‘ಅನಿಮಲ್ʼ ಸಿನಿಮಾದ ಬಗ್ಗೆ ಕುತೂಹಲ ಹೆಚ್ಚಾಗಿದೆ. ಚಾಕ್ಲೇಟ್ ಬಾಯ್ ರಣ್ಬೀರ್ ಇಂದೆಂದೂ ಕಾಣಿಸಿಕೊಳ್ಳದ ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿರುವ ಈ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ.
ಸಂದೀಪ್ ವಂಗಾ ನಿರ್ದೇಶನದ ʼಅನಿಮಲ್ʼ ಚಿತ್ರತಂಡ ಪ್ರಚಾರದಲ್ಲಿ ಬ್ಯುಸಿಯಾಗಿದೆ. ಸಿನಿಮಾದ ಟ್ರೇಲರ್ ಹಾಗೂ ಹಾಡುಗಳು ಗಮನ ಸೆಳೆದಿದೆ. ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಸಿನಿಮಾದಲ್ಲಿ ʼಗೀತಾಂಜಲಿʼ ಯಾಗಿ ಕಾಣಿಸಿಕೊಳ್ಳಲಿದ್ದಾರೆ. ರಶ್ಮಿಕಾ ಚಿತ್ರದಲ್ಲಿ ಹಲವು ಬಾರಿ ಲಿಪ್ ಲಾಕ್ ಮಾಡಿರುವುದು ಈಗಾಗಲೇ ಸಿನಿ ಪ್ರೇಕ್ಷಕರ ವಲಯದಲ್ಲಿ ವೈರಲ್ ಆಗಿದೆ.
ಸಿನಿಮಾದ ಪ್ರಚಾರದ ಅಂಗವಾಗಿ ಚಿತ್ರತಂಡ ನಂದಮೂರಿ ಬಾಲಕೃಷ್ಣ ನಡೆಸಿಕೊಡುವ ʼಅನ್ ಸ್ಟಾಪಿಬಲ್ ವಿತ್ ಎನ್ ಬಿಕೆ -2ʼ ಕಾರ್ಯಕ್ರಮದಲ್ಲಿ ಭಾಗಿಯಾಗಿದೆ. ಈ ವೇಳೆ ರಶ್ಮಿಕಾ ಅವರೊಂದಿಗೆ ತುಸು ಹೆಚ್ಚಾಗಿಯೇ ನಂದಮೂರಿ ಅವರು ತಮಾಷೆ ಮಾಡಿದ್ದಾರೆ.
ಮೊದಲು ನಿರ್ದೇಶಕ ಸಂದೀಪ್ ವಂಗಾ ಹಾಗೂ ರಣ್ಬೀರ್ ಕಪೂರ್ ಅವರನ್ನು ವೇದಿಕೆಗೆ ಕರೆದಿದ್ದಾರೆ. ಆ ಬಳಿಕ ರಶ್ಮಿಕಾ ಅವರನ್ನು ಕರೆದಿದ್ದಾರೆ. ಕೆಲ ಮಾತುಕತೆಯ ಬಳಿಕ ಸ್ಕ್ರೀನ್ ಮೇಲೆ ʼಅರ್ಜುನ್ ರೆಡ್ಡಿʼ ಯ ವಿಜಯ್ ದೇವರಕೊಂಡ ಹಾಗೂ ʼಅನಿಮಲ್ʼ ನ ರಣ್ಬೀರ್ ಫೋಟೋ ತೋರಿಸಿ ಯಾರು ಒಳ್ಳೆಯ ನಾಯಕ ಎಂದಿದ್ದಾರೆ. ಇದಕ್ಕೆ ರಶ್ಮಿಕಾ ಉತ್ತರಿಸದೆ ಹಾಗೆಯೇ ನಕ್ಕಿದ್ದಾರೆ.
ಇದಾದ ಬಳಿಕ ಕಾರ್ಯಕ್ರಮದಲ್ಲೇ ವಿಜಯ್ ದೇವರಕೊಂಡ ಅವರಿಗೆ ಫೋನ್ ಮಾಡಿದ್ದಾರೆ. “ವಾಟ್ಸಾಪ್ ರೇ” ಎಂದು ದೇವರಕೊಂಡ ಮಾತನಾಡಿದ ವೇಳೆ ಅವರ ಧ್ವನಿಯನ್ನು ಕೇಳಿ ರಶ್ಮಿಕಾ ನಾಚಿಕೊಂಡಿದ್ದಾರೆ. ಇದೇ ವೇಳೆ ನಂದಮೂರಿ ನಿಮ್ಮ ಹೀರೋಗೆ ಹೇಳಿ “ಐ ಲವ್ ರಶ್ಮಿಕಾ” ಎಂದಿದ್ದಾರೆ.
ಸದ್ಯ ಕಾರ್ಯಕ್ರಮದ ಪ್ರೋಮೊ ವೈರಲ್ ಆಗಿದ್ದು, ಪೂರ್ತಿ ಎಪಿಸೋಡ್ ನ.24 ರಂದು ʼಆಹಾʼ ದಲ್ಲಿ ಸ್ಟ್ರೀಮ್ ಆಗಲಿದೆ.
ʼಗೀತಾ ಗೋವಿಂದಂʼ ಬಳಿಕ ರಶ್ಮಿಕಾ – ದೇವರಕೊಂಡ ಕ್ಲೋಸ್ ಆಗಿದ್ದಾರೆ. ಇಬ್ಬರು ಲವ್ ನಲ್ಲಿದ್ದಾರೆ ಎನ್ನುವ ಸುದ್ದಿ ಕಳೆದ ಕೆಲ ಸಮಯದಿಂದ ಹರಿದಾಡುತ್ತಿದೆ. ಇಬ್ಬರು ಆಗಾಗ ಜೊತೆಯಾಗಿಯೇ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ರಶ್ಮಿಕಾ ದೀಪಾವಳಿ ಹಬ್ಬವನ್ನು ದೇವರಕೊಂಡ ಮನೆಯಲ್ಲಿ ಆಚರಿಸಿಕೊಂಡಿದ್ದಾರೆ ಎನ್ನುವ ಸುದ್ದಿಯೊಂದು ಹಬ್ಬಿತ್ತು.
ಅಂದಹಾಗೆ ಡಿ.1 ರಂದು ʼಅನಿಮಲ್ʼ ಸಿನಿಮಾ ರಿಲೀಸ್ ಆಗಲಿದೆ. ಈ ಸಿನಿಮಾದಲ್ಲಿ ಅನಿಲ್ ಕಪೂರ್, ಬಾಬಿ ಡಿಯೋಲ್ ಮುಂತಾದವರು ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shyam Benegal; ಸಾಮಾಜಿಕ ಕಳಕಳಿ ಚಿತ್ರಗಳ ಪ್ರವರ್ತಕ ವಿಧಿವಶ: ಉಡುಪಿಯ ಬೆನಗಲ್ ಮೂಲದವರು
Filmmaker Died: ಖ್ಯಾತ ಸಿನಿಮಾ ನಿರ್ದೇಶಕ ಶ್ಯಾಂ ಬೆನಗಲ್ ವಿಧಿವಶ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.