Vijay Deverakonda: ನಿಮ್ಮ ಸಿನಿಮಾದಿಂದ 8 ಕೋಟಿ ನಷ್ಟ ಆಗಿದೆ; ಪರಿಹಾರಕ್ಕೆ ನಟನ ಬಳಿ ಮನವಿ

Team Udayavani, Sep 6, 2023, 3:50 PM IST

Vijay Deverakonda: ನಿಮ್ಮ ಸಿನಿಮಾದಿಂದ 8 ಕೋಟಿ ನಷ್ಟ ಆಗಿದೆ; ಪರಿಹಾರಕ್ಕೆ ನಟನ ಬಳಿ ಮನವಿ

ಹೈದರಾಬಾದ್: ಟಾಲಿವುಡ್‌ ನಟ ವಿಜಯ್‌ ದೇವರಕೊಂಡ ಸದ್ಯ ʼಖುಷಿʼ ಸಿನಿಮಾದ ಯಶಸ್ಸಿನ ಸಂಭ್ರಮದಲ್ಲಿದ್ದಾರೆ.ʼಖುಷಿʼ ಸಿನಿಮಾ 70 ಕೋಟಿಗೂ ಅಧಿಕ ಕಲೆಕ್ಷನ್‌ ಮಾಡಿದೆ. ವಿಜಯ್‌ ದೇವರಕೊಂಡ ಹೈದರಾಬಾದ್‌ ನಲ್ಲಿ ಸಿನಿಮಾ ಸಕ್ಸಸ್‌ ಸಂಭ್ರಮದಲ್ಲಿದ್ದಾರೆ. ಇತ್ತೀಚೆಗೆ ವಿಜಯ್‌ ದೇವರಕೊಂಡ ಅವರು ಬಡ ಕುಟುಂಬಕ್ಕೆ ದಾನ ನೀಡುವುದಾಗಿ ಹೇಳಿದ್ದರು.

“ನೀವು ಸಂತೋಷವಾಗಿದ್ದೀರಿ ಮತ್ತು ನಾನು ಸಂತೋಷವಾಗಿದ್ದೇನೆ. ನಾನು ಏನನ್ನಾದರೂ ಮಾಡುವ ಯೋಚನೆಯಲ್ಲಿದ್ದೇನೆ. ನನಗೆ ಗೊತ್ತಿಲ್ಲ ಇದು ಸರಿಯೋ, ತಪ್ಪೋ ಎಂದು. ಆದರೆ ಅದನ್ನು ಮಾಡದೆ ಇದ್ದರೆ ನನಗೆ ಸರಿಯಾಗಿ ನಿದ್ರೆ ಬರುವುದಿಲ್ಲ. ನಿಮ್ಮೊಂದಿಗೆ ಸಂತೋಷವನ್ನು ಹಂಚಿಕೊಳ್ಳಲು ನಾನು ಬಯಸುತ್ತೇನೆ. ʼಖುಷಿʼ ಸಿನಿಮಾದ ಸಂಭಾವನೆಯಿಂದ 1 ಕೋಟಿ ರೂಪಾಯಿಯನ್ನು ನಾನು 100 ಬಡ ಕುಟುಂಬಕ್ಕೆ ಹಂಚಲು ನಿರ್ಧರಿಸಿದ್ದೇನೆ. ಈ ಕುರಿತು ನಾನು 100 ಬಡ ಕುಟುಂಬಗಳನ್ನು ಮೊದಲು ಆಯ್ಕೆ ಮಾಡಲಿದ್ದೇನೆ. 100 ಕುಟುಂಬಕ್ಕೆ ತಲಾ 1 ಲಕ್ಷ ರೂಪಾಯಿಯ ಚೆಕ್‌ ನ್ನು ನೀಡುತ್ತೇನೆ. ನನ್ನ ಯಶಸ್ಸು, ನನ್ನ ಸಂತೋಷ ಮತ್ತು ನನ್ನ ಸಂಬಳವನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಬೇಕು.” ಎಂದಿದ್ದರು.

ನಟನ ಈ ಮಾನವೀಯ ಗುಣವನ್ನು ಅನೇಕರು ಮೆಚ್ಚಿಕೊಂಡಿದ್ದರು. ಇದೀಗ ಇದೇ ವಿಚಾರವಾಗಿ ವಿತರಣೆ ಸಂಸ್ಥೆಯೊಂದು ದೇವರಕೊಂಡ ಅವರ ಬಳಿ ಪರಿಹಾರ ಮೊತ್ತವನ್ನು ಕೇಳಿದೆ.

ವಿಜಯ್‌ ದೇವರಕೊಂಡ ಅಭಿನಯಿಸಿದ್ದ “ವರ್ಲ್ಡ್‌ ಫೇಮಸ್‌ ಲವರ್”‌ ಸಿನಿಮಾವನ್ನು ವಿತರಣೆ ಮಾಡಿದ್ದ ಅಭಿಷೇಕ್‌ ಪಿಕ್ಚರ್ಸ್‌ ಟ್ವೀಟ್‌ ಮೂಲಕ ದೇವರಕೊಂಡ ಅವರ ಬಳಿ ಪರಿಹಾರ ಮೊತ್ತವನ್ನು ಕೇಳಿದೆ.

“ವಿಜಯ್‌ ದೇವರಕೊಂಡ ಅವರೇ “ವರ್ಲ್ಡ್‌ ಫೇಮಸ್‌ ಲವರ್” ಸಿನಿಮಾವನ್ನು ವಿತರಣೆ ಮಾಡಿ ನಾವು 8 ಕೋಟಿ ರೂಪಾಯಿ ನಷ್ಟವನ್ನು ಅನುಭವಿಸಿದೆ. ಆದರೆ ಈ ಬಗ್ಗೆ ಯಾರೂ ಕೂಡ ನಮಗೆ ಪ್ರತಿಕ್ರಿಯೆ ನೀಡಿಲ್ಲ. ಈಗ ನೀವು ದೊಡ್ಡ ಮನಸ್ಸಿನಿಂದ ಬಡ ಕುಟುಂಬಕ್ಕೆ 1 ಕೋಟಿ ರೂ.ವನ್ನು ನೀಡಲು ಹೊರಟಿದ್ದೀರಿ. ನಮ್ಮನ್ನು ಹಾಗೂ ವಿತರಕರ ಕುಟುಂಬಕ್ಕೆ ಪರಿಹಾರ ನೀಡಿ ಉಳಿಸಿ ಎಂದು ನಿಮ್ಮಲ್ಲಿ ಮನವಿ ಮಾಡುತ್ತಿದ್ದೇವೆ” ಎಂದು ಟ್ವೀಟ್‌ ಅಭಿಷೇಕ್‌ ಪಿಕ್ಚರ್ಸ್‌ ಟ್ವೀಟ್‌ ಮಾಡಿದೆ.

ಸಿನಿಮಾ ಸೋತರೆ ನಾಯಕನ ಬಳಿ ಪರಿಹಾರ ಕೇಳುತ್ತಾರೆ. ಹಿಟ್‌ ಆದರೆ ಅದರ ಲಾಭವನ್ನು ಹಂಚಿಕೊಳ್ಳುವುದಿಲ್ಲ ಎಂದು ನಟನ ಪರವಾಗಿ ಅಭಿಮಾನಿಗಳು ಕಮೆಂಟ್‌ ಮಾಡಿದ್ದಾರೆ.

2020 ರಲ್ಲಿ ಬಿಡುಗಡೆಯಾದ ವಿಜಯ್ ದೇವರಕೊಂಡ ಅವರ ‘ವರ್ಲ್ಡ್ ಫೇಮಸ್ ಲವರ್’ ಸಿನಮಾವನ್ನು ಕ್ರಾಂತಿ ಮಾಧವ್ ಅವರು ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ರಾಶಿ ಖನ್ನಾ, ಐಶ್ವರ್ಯಾ ರಾಜೇಶ್, ಕ್ಯಾಥರೀನ್ ತ್ರೇಸಾ ಮತ್ತು ಇಸಾಬೆಲ್ಲೆ ಲೈಟ್ ಕಾಣಿಸಿಕೊಂಡಿದ್ದಾರೆ. ಚಿತ್ರವು ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಟೀಕೆಗೆ ಗುರಿಯಾಗಿತ್ತು.

ಟಾಪ್ ನ್ಯೂಸ್

HDK2

By Election: ಯೋಗೇಶ್ವರ್‌ ನಿಂದಿಸಿದ್ದ ಡಿ.ಕೆ.ಸುರೇಶ್‌ ಆಡಿಯೋ ಎಚ್‌ಡಿಕೆ ಬಿಡುಗಡೆ

DVS

By Election: ನಾಗೇಂದ್ರ, ಜಮೀರ್‌, ಡಿಕೆಶಿ ಮೇಲೆ ಚುನಾವಣಾ ಆಯೋಗ ಕಣ್ಣಿಡಲಿ: ಡಿವಿಎಸ್‌

Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ

Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ

Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ

Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ

Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ

Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ

Delhi Pollution: ಕೃಷಿ ತ್ಯಾಜ್ಯ ಸುಟ್ಟರೆ ರೈತರಿಗೆ ಇನ್ನು ದುಪ್ಪಟ್ಟು ದಂಡ!

Delhi Pollution: ಕೃಷಿ ತ್ಯಾಜ್ಯ ಸುಟ್ಟರೆ ರೈತರಿಗೆ ಇನ್ನು ದುಪ್ಪಟ್ಟು ದಂಡ!

Maharashtra: ಕಾಂಗ್ರೆಸ್‌ ಬಂಡಾಯ ಸ್ಪರ್ಧಿಗಳು 6 ವರ್ಷ ಅಮಾನತು

Maharashtra: ಕಾಂಗ್ರೆಸ್‌ ಬಂಡಾಯ ಸ್ಪರ್ಧಿಗಳು 6 ವರ್ಷ ಅಮಾನತು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Suniel Shetty: ಆ್ಯಕ್ಷನ್ ದೃಶ್ಯದ ಚಿತ್ರೀಕರಣದ ವೇಳೆ ಅವಘಡ; ಸುನಿಲ್‌ ಶೆಟ್ಟಿಗೆ ಗಂಭೀರ ಗಾಯ

Suniel Shetty: ಆ್ಯಕ್ಷನ್ ದೃಶ್ಯದ ಚಿತ್ರೀಕರಣದ ವೇಳೆ ಅವಘಡ; ಸುನಿಲ್‌ ಶೆಟ್ಟಿಗೆ ಗಂಭೀರ ಗಾಯ

Threat Call: ಸಲ್ಮಾನ್ ಖಾನ್ ಬಳಿಕ ಬಾಲಿವುಡ್ ನಟ ಶಾರುಖ್ ಖಾನ್ ಗೂ ಜೀವ ಬೆದರಿಕೆ

Threat Call: ಸಲ್ಮಾನ್ ಖಾನ್ ಬಳಿಕ ಬಾಲಿವುಡ್ ನಟ ಶಾರುಖ್ ಖಾನ್ ಗೂ ಜೀವ ಬೆದರಿಕೆ

7

SRK: ಶಾರುಖ್ ಭೇಟಿಗೆ 95 ದಿನ ಮನೆ ಹೊರಗೆ ಕಾದು ಕೂತ ಅಭಿಮಾನಿ; ನಟ ಕೊಟ್ಟ ಉಡುಗೊರೆ ಏನು?

10

BʼTown: ʼಪುಷ್ಪ-2ʼಗೆ ದಾರಿ ಬಿಟ್ಟ ವಿಕ್ಕಿ ಕೌಶಲ್‌ ʼಛಾವಾʼ; ರಿಲೀಸ್‌ ಡೇಟ್‌ ಮುಂದೂಡಿಕೆ?

Ramayana: ಎರಡು ಭಾಗಗಳಾಗಿ ಬರಲಿದೆ‌ ಬಿಗ್‌ ಬಜೆಟ್ ʼರಾಮಾಯಣʼ; ರಿಲೀಸ್‌ ಡೇಟ್‌ ಅನೌನ್ಸ್

Ramayana: ಎರಡು ಭಾಗಗಳಾಗಿ ಬರಲಿದೆ‌ ಬಿಗ್‌ ಬಜೆಟ್ ʼರಾಮಾಯಣʼ; ರಿಲೀಸ್‌ ಡೇಟ್‌ ಅನೌನ್ಸ್

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

HDK2

By Election: ಯೋಗೇಶ್ವರ್‌ ನಿಂದಿಸಿದ್ದ ಡಿ.ಕೆ.ಸುರೇಶ್‌ ಆಡಿಯೋ ಎಚ್‌ಡಿಕೆ ಬಿಡುಗಡೆ

DVS

By Election: ನಾಗೇಂದ್ರ, ಜಮೀರ್‌, ಡಿಕೆಶಿ ಮೇಲೆ ಚುನಾವಣಾ ಆಯೋಗ ಕಣ್ಣಿಡಲಿ: ಡಿವಿಎಸ್‌

Dinesh-gundurao

Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್‌

Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ

Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ

Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ

Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.