![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Oct 19, 2020, 6:48 PM IST
ಚೆನ್ನೈ: ಶ್ರೀಲಂಕಾ ಮಾಜಿ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಜೀವನಾಧಾರಿತ ಚಿತ್ರ “800” ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಈ ಸಿನಿಮಾದಲ್ಲಿನ ನಟನೆಯಿಂದ ಹಿಂದೆ ಸರಿದಿರುವುದಾಗಿ ವಿಜಯ್ ಸೇತುಪತಿ ಸೋಮವಾರ(ಅಕ್ಟೋಬರ್ 19, 2020) ಘೋಷಿಸಿದ್ದಾರೆ.
“ನಾನು ಈ ಸಿನಿಮಾದಿಂದ ಹೊರಬಂದಿದ್ದೇನೆ” ಎಂದು ವಿಜಯ್ ಸೇತುಪತಿ ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಮುತ್ತಯ್ಯ ಮುರಳೀಧರನ್ ಹೇಳಿಕೆಯನ್ನು ಕೂಡಾ ಟ್ವೀಟ್ ಮಾಡಿದ್ದಾರೆ. “800” ಸಿನಿಮಾದಿಂದ ವಿಜಯ್ ಹೊರಗುಳಿದಿರುವುದಾಗಿ ಮಾಧ್ಯಮ ವಕ್ತಾರ ಯುವ್ ರಾಜ್ ಕೂಡಾ ತಿಳಿಸಿದ್ದಾರೆ.
ಯಾಕೆ ವಿರೋಧ?
நன்றி.. வணக்கம் ?? pic.twitter.com/PMCPBDEgAC
— VijaySethupathi (@VijaySethuOffl) October 19, 2020
ಇದನ್ನೂ ಓದಿ:ಮುರಳೀಧರನ್ ಬಯೋಪಿಕ್ ಗೆ ಯಾಕಿಷ್ಟು ತೊಂದರೆ? ನಿಂತುಹೋಗುತ್ತಾ ವಿಜಯ್ ಸೇತುಪತಿ ಚಿತ್ರ
ಮುತ್ತಯ್ಯ ಮುರಳೀಧರನ್ ಶ್ರೀಲಂಕಾದ ಕ್ರಿಕೆಟಿಗ. ಶ್ರೀಲಂಕಾದಲ್ಲಿರುವ ತಮಿಳು ಜನರ ಮೇಲೆ ಅಲ್ಲಿನ ಸರ್ಕಾರ ದಬ್ಬಾಳಿಕೆ ಮಾಡಿದೆ, ಅನೇಕ ತಮಿಳರನ್ನು ಹತ್ಯೆಗೆ ಕಾರಣವಾಗಿದೆ. ಇಂತಹ ಸಂದರ್ಭದಲ್ಲಿ ತಮಿಳರ ಪರವಾಗಿ ಮುತ್ತಯ್ಯ ಮುರಳೀಧರನ್ ಮಾತನಾಡಿರಲಿಲ್ಲ. ಇಷ್ಟೆಲ್ಲಾ ಆಗಿರುವಾಗ ತಮಿಳು ನಟನೊಬ್ಬ ಶ್ರೀಲಂಕಾ ಧ್ವಜದ ಜೆರ್ಸಿಯನ್ನು ತೊಟ್ಟು ಸಿನಿಮಾ ಮಾಡಲು ಮುಂದಾಗಿರುವುದು ದುರಂತ ಎಂದು ಟೀಕಿಸಲಾಗುತ್ತಿದೆ. ನಟ ವಿಜಯ್ ಸೇತುಪತಿ ತಮ್ಮ ನಿರ್ಧಾರವನ್ನು ಬದಲಿಸಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಆಗ್ರಹಿಸಿದ್ದರರು. ಕೆಲ ದಿನಗಳ ಹಿಂದೆ ಈ ವಿಚಾರ ಟ್ವಿಟ್ಟರ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿತ್ತು.
Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?
ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?
Chhaava: ‘ಚಾವಾ’ಗೆ ಧ್ವನಿಯಾದ ಅಜಯ್ ದೇವಗನ್
ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ
Spiritual journey: ಕಿನ್ನರ್ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.