6 ವರ್ಷದ ಬಳಿಕ ರಿಲೀಸ್ ಗೆ ರೆಡಿಯಾಗಿದ್ದ ವಿಕ್ರಮ್ ಚಿತ್ರ ಕೊನೆ ಕ್ಷಣದಲ್ಲಿ ಮುಂದೂಡಿಕೆ
Team Udayavani, Nov 24, 2023, 1:18 PM IST
ಚೆನ್ನೈ: ನಟ ವಿಕ್ರಮ್ ಅಭಿನಯದ ಬಹು ನಿರೀಕ್ಷಿತ ʼಧ್ರುವ ನಚ್ಚತಿರಂʼ ರಿಲೀಸ್ ಗೆ ಮತ್ತೆ ಸಂಕಷ್ಟ ಎದುರಾಗಿದೆ. ಕೊನೆಕ್ಷಣದಲ್ಲಿ ಸಿನಿಮಾ ರಿಲೀಸ್ ಡೇಟ್ ಮುಂದೂಡಿಕೆಯಾಗಿದೆ.
ನ.24 ರಂದು(ಶುಕ್ರವಾರ) ಸಿನಿಮಾ ಅದ್ಧೂರಿಯಾಗಿ ರಿಲೀಸ್ ಆಗಬೇಕಿತ್ತು. 6 ವರ್ಷದ ಬಳಿಕ (2017 ರಲ್ಲಿ ಸಟ್ಟೇರಿತ್ತು) ಎಲ್ಲಾ ಕಾನೂನು ಹಾಗೂ ಹಣಕಾಸಿನ ತೊಡಕನ್ನು ಎದುರಿಸಿ, ಕೊನೆಗೂ ರಿಲೀಸ್ ಡೇಟ್ ಪ್ರಕಟಿಸಿದ ಬಳಿಕ, ಸಿನಿಮಾ ನೋಡಲು ಪ್ರೇಕ್ಷಕರು ಟಿಕೆಟ್ ಬುಕ್ ಮಾಡುವ ಹಂತದವರೆಗೂ ಹೋಗಿದ್ದರು. ಆದರೆ ನಿರ್ದೇಶಕ ಗೌತಮ್ ವಾಸುದೇವ್ ಮೆನನ್ ಸಿನಿಮಾವನ್ನು ನ.24 ರಂದು ರಿಲೀಸ್ ಮಾಡಲು ಆಗುವುದಿಲ್ಲ ಎಂದಿದ್ದಾರೆ.
ನಿರ್ದೇಶಕರ ಪೋಸ್ಟ್ ನಲ್ಲಿ ಏನಿದೆ?:
“ಕ್ಷಮಿಸಿ. ಧ್ರುವ ನಚ್ಚತಿರಂ ಇಂದು ತೆರೆಗೆ ಬರಲು ಸಾಧ್ಯವಾಗಿಲ್ಲ. ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸಿದೆವು. ಆದರೆ ನಮಗೆ ಇನ್ನೂ ಒಂದು ಅಥವಾ ಎರಡು ದಿನ ಬೇಕು ಎಂದು ತೋರುತ್ತಿದೆ. ನಿಮ್ಮೆಲ್ಲರ ಬೆಂಬಲ ನಮ್ಮನ್ನು ಮುಂದುವರೆಸಿದೆ. ಇನ್ನು ಕೆಲವೇ ದಿನಗಳಲ್ಲಿ ನಾವು ಬರುತ್ತೇವೆ” ಎಂದಿದ್ದಾರೆ.
‘ಧ್ರುವ ನಚ್ಚತಿರಂ’ ಬಿಡುಗಡೆಗೆ ಸಂಬಂಧಿಸಿದಂತೆ ಗೌತಮ್ ಮೆನನ್ ಮತ್ತು ಅವರ ತಂಡದ ವಿರುದ್ಧ ಎರಡು ಪ್ರಕರಣಗಳು ದಾಖಲಾಗಿವೆ. ನವೆಂಬರ್ 24 ರಂದು ಬೆಳಿಗ್ಗೆ 10.30ರ ಮೊದಲು ಅಂದರೆ ಸಿನಿಮಾ ರಿಲೀಸ್ ಆಗುವ ಮುನ್ನ ಆಲ್ ಇನ್ ಪಿಕ್ಚರ್ಸ್‌ಗೆ 2 ಕೋಟಿ ರೂಪಾಯಿಗಳನ್ನು ಮರುಪಾವತಿಸುವಂತೆ ಮದ್ರಾಸ್ ಹೈಕೋರ್ಟ್ ಮೆನನ್ ಅವರಿಗೆ ಸೂಚನೆ ನೀಡಿತ್ತು. ಬಹುಶಃ ಹಣವನ್ನು ಪಾವತಿಸಲು ಚಿತ್ರತಂಡ ವಿಫಲವಾಗಿದ್ದು, ಈ ಕಾರಣದಿಂದ ಸಿನಿಮಾ ಮುಂದೂಡಿಕೆ ಆಗಿದೆ ಎನ್ನಲಾಗಿದೆ.
ಈ ಬಗ್ಗೆ ಇಂದು ಮತ್ತು ನಾಳೆ ಮಾತುಕತೆ ನಡೆಯಲಿದ್ದು, ಆದಾದ ಬಳಿಕ ಸಿನಿಮಾದ ರಿಲೀಸ್ ಡೇಟ್ ರಿವೀಲ್ ಆಗಲಿದೆ ಎಂದು ವರದಿ ತಿಳಿಸಿದೆ.
ಈ ಚಿತ್ರದಲ್ಲಿ ಚಿಯಾನ್ ವಿಕ್ರಮ್ ಪ್ರಮುಖ ಪಾತ್ರದಲ್ಲಿ ರಿತು ವರ್ಮಾ, ಆರ್ ಪಾರ್ತಿಬನ್, ರಾಧಿಕಾ ಶರತ್‌ಕುಮಾರ್, ಸಿಮ್ರಾನ್ ಮತ್ತು ವಿನಾಯಕನ್ ಪ್ರಮುಖ ಪಾತ್ರಗಳಲ್ಲಿದ್ದಾರೆ.
#DhruvaNatchathiram #DhruvaNakshathram pic.twitter.com/dmD4ndEnp9
— Gauthamvasudevmenon (@menongautham) November 23, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.