Kashmir Files, ಕೇರಳ ಸ್ಟೋರಿಯಂತಹ ಸಿನಿಮಾಗಳನ್ನು ನಾನು ನೋಡಲ್ಲ: ಖ್ಯಾತ ನಿರ್ದೇಶಕ ವಿಶಾಲ್
Kashmir Files, ಕೇರಳ ಸ್ಟೋರಿಗಳ ಪ್ರಭಾವ ನನ್ನ ಮೇಲೆ ಬೀರುವುದು ಬೇಡ
Team Udayavani, Sep 23, 2023, 4:46 PM IST
ಮುಂಬಯಿ: ಸೂಕ್ಷ್ಮ ವಿಚಾರಗಳನ್ನು ಹೇಳುವ ಸಿನಿಮಾಗಳನ್ನು ನಾನು ನೋಡಲು ಇಷ್ಟಪಡುವುದಿಲ್ಲ ಎಂದು ಬಾಲಿವುಡ್ ನ ಖ್ಯಾತ ನಿರ್ದೇಶಕ ವಿಶಾಲ್ ಭಾರದ್ವಾಜ್ ಹೇಳಿದ್ದಾರೆ.
ಬಾಲಿವುಡ್ ನಲ್ಲಿ ʼಓಂಕಾರʼ ,ʼಹೈದರ್ʼ, ʼ7 ಖೂನ್ ಮಾಫ್ʼ ನಂತಹ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ವಿಶಾಲ್ ಭಾರದ್ವಾಜ್ ʼಕಾಶ್ಮೀರ್ ಫೈಲ್ಸ್ʼ, ಹಾಗೂ ʼಕೇರಳ ಸ್ಟೋರಿʼ ಸಿನಿಮಾಗಳ ಬಗ್ಗೆ ಮಾತನಾಡಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ʼʼನಾನು ಕಾಶ್ಮೀರ್ ಫೈಲ್ಸ್ʼʼ, ದಿ ಕೇರಳ ಸ್ಟೋರಿʼ ಸಿನಿಮಾಗಳನ್ನು ನೋಡಿಲ್ಲ. ಆ ಸಿನಿಮಾಗಳ ಬಗ್ಗೆ ನಾನು ಕೇಳಿರುವ ವಿಚಾರಗಳು ನನ್ನ ಮೇಲೆ ಪ್ರಭಾವ ಬೀರುವುದು ಬೇಡ. ಈ ಸಿನಿಮಾಗಳು ಪ್ರೊಪೊಗಾಂಡ ಸಿನಿಮಾಗಳೆಂದು ನನ್ನ ಸ್ನೇಹಿತರಿಂದ ಕೇಳಿದ್ದೇನೆ. ಆದರಿಂದ ಇಂಥ ಸಿನಿಮಾಗಳಿಂದ ನಾನು ದೂರವಿರಲು ಬಯಸುತ್ತೇನೆ. ಏಕೆಂದರೆ ಇವುಗಳು ಅತ್ಯಂತ ಸೂಕ್ಷ್ಮ ವಿಚಾರಗಳಾಗಿವೆ” ಎಂದಿದ್ದಾರೆ.
“ಯಾವುದಾದರೂ ಸಿನಿಮಾಗಳಲ್ಲಿ ತುಂಬಾ ನೆಗೆಟಿವ್ ಅಂಶಗಳಿದ್ದರೆ ಅದರಿಂದ ನಾನು ಹೊರಗುಳಿಯುತ್ತೇನೆ. ನನಗೆ ಶಾಂತಿ ಸಾರುವ ಸಿನಿಮಾಗಳಿಷ್ಟ. ಆದುದರಿಂದ ನಾನು ಆ ಎರಡು ಸಿನಿಮಾಗಳನ್ನು ನೋಡಿಲ್ಲ” ಎಂದು ನಿರ್ದೇಶಕ ವಿಶಾಲ್ ಹೇಳಿದ್ದಾರೆ.
ಇದನ್ನೂ ಓದಿ: BJP-JDS ಮೈತ್ರಿ ಯಾರ “ಸಂತೋಷ”ಕ್ಕೆ?: ವಾಗ್ದಾಳಿ ವಿಡಿಯೋ ಹಂಚಿ ಕಾಂಗ್ರೆಸ್ ಟಾಂಗ್
“ನನ್ನ ಚಲನಚಿತ್ರ ಸಮುದಾಯವು ಅಂತಹ ಕಥೆಗಳನ್ನು ಸೂಕ್ಷ್ಮವಾಗಿ ಪರಿಗಣಿಸಬೇಕೆಂದು ನಾನು ಬಯಸುತ್ತೇನೆ ಮತ್ತು ಅದನ್ನು ಪ್ರಚಾರವಾಗಿ ಬಳಸಬಾರದು. ಸಿನಿಮಾ ಎಂದರೆ ಅದನ್ನು ಹೇಗೆ ಬೇಕಾದರೂ ಬಳಸಿಕೊಳ್ಳಬಹುದು. ಜನರು ಅದನ್ನು ಸ್ವೀಕರಿಸುತ್ತಾರೆ ಮತ್ತು ನೋಡುತ್ತಿದ್ದರೆ, ಜನರು ಬದಲಾಗುತ್ತಿದ್ದಾರೆ ಎಂದು ನಾವು ಒಪ್ಪಿಕೊಳ್ಳಬೇಕು. ನಾವು ಸಮಾಜವಾಗಿ ಬದಲಾಗುತ್ತಿದ್ದೇವೆ” ಎಂದು ನಿರ್ದೇಶಕ ವಿಶಾಲ್ ಹೇಳಿದ್ದಾರೆ.
ವಿಶಾಲ್ ಅವರ “ಚಾರ್ಲಿ ಚೋಪ್ರಾ & ಸೋಲಾಂಗ್ ಮಿಸ್ಟರಿ ಸೋಲಾಂಗ್ ವ್ಯಾಲಿ” ವೆಬ್ ಸಿರೀಸ್ ಸೆ.27 ರಂದು ಸೋನಿ ಲೈವ್ ನಲ್ಲಿ ಸ್ಟ್ರೀಮ್ ಆಗಲಿದೆ ನಸೀರುದ್ದೀನ್ ಶಾ, ರತ್ನ ಪಾಠಕ್ ಷಾ, ವಿವಾನ್ ಶಾ, ಇಮಾದ್ ಶಾ, ಪ್ರಿಯಾಂಶು ಪೈನ್ಯುಲಿ, ಚಂದನ್ ರಾಯ್ ಸನ್ಯಾಲ್ ಮತ್ತು ಪಾವೊಲಿ ಡ್ಯಾಮ್ ಮುಂತಾದವರು ಇದರಲ್ಲಿ ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kochi: ಲೈಂಗಿಕ ಕಿರುಕುಳ ಕೇಸು ವಾಪಸ್ ಪಡೆಯಲ್ಲ ಎಂದ ಮಲಯಾಳಿ ನಟಿ
55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್ – ಮನರಂಜನೆಗೆ ಹೊಸ ಆಯಾಮ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
IFFI 2024: ತಾಲಿಯಾ..ತಾಲಿಯಾ…ಜೋರ್ ದಾರ್ ತಾಲಿಯಾ..!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.