Bollywood: ನಸೀರುದ್ದೀನ್ ಶಾ ಭಯೋತ್ಪಾದಕರನ್ನು ಇಷ್ಟಪಡುವವರು.. ವಿವೇಕ್ ಅಗ್ನಿಹೋತ್ರಿ
Team Udayavani, Sep 14, 2023, 11:52 AM IST
ಮುಂಬಯಿ: ಹಿರಿಯ ನಟ ನಸೀರುದ್ದೀನ್ ಶಾ ಅವರು ಕಳೆದ ಕೆಲ ದಿನಗಳಿಂದ ಸುದ್ದಿಯಲ್ಲಿದ್ದಾರೆ. ಅದಕ್ಕೆ ಕಾರಣ ಇತ್ತೀಚೆಗೆ ಅವರು ಕೊಟ್ಟ ಹೇಳಿಕೆಗಳು. ʼಗದರ್-2ʼ, ʼಕಾಶ್ಮೀರ್ ಫೈಲ್ಸ್ʼ ಸಿನಿಮಾಗಳನ್ನು ಅವರು ಟೀಕಿಸಿದ್ದು ಕೆಲ ನಿರ್ದೇಶಕರು ಗರಂ ಆಗುವಂತೆ ಮಾಡಿದೆ.
ಇತ್ತೀಚೆಗೆ ಅವರು ಸಂದರ್ಶನವೊಂದರಲ್ಲಿ ʼಗದರ್-2ʼ, ಕಾಶ್ಮೀರ್ ಫೈಲ್ಸ್ʼ ಹಾಗೂ ʼಕೇರಳ ಸ್ಟೋರಿʼ ಸಿನಿಮಾಗಳು ಸಮಾಜಕ್ಕೆ ಹಾನಿಕಾರವೆಂದು ಹೇಳಿದ್ದರು.
ಇದೀಗ ಈ ಹೇಳಿಕೆಗೆ ʼಕಾಶ್ಮೀರ್ ಫೈಲ್ಸ್ʼ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ಖಡಕ್ ಆಗಿಯೇ ಪ್ರತಿಕ್ರಿಯೆ ಕೊಟ್ಟು ಟೀಕಿಸಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, “ಬಹುಶಃ ನಸೀರುದ್ದೀನ್ ಶಾ ಅವರು ʼಕಾಶ್ಮೀರ್ ಫೈಲ್ಸ್ʼ ಸಿನಿಮಾದ ಯಶಸ್ಸಿನಿಂದ ವಿಚಲಿತರಾಗಿದ್ದಾರೆ. ಸಿನಿಮಾ ಸತ್ಯವನ್ನು ಬಹಿರಂಗಪಡಿಸಿದೆ. ಜನರು ಸಾಮಾನ್ಯವಾಗಿ ಬೇರೆಯವರ ಕಲೆಯ ಮೂಲಕ ಜನರ ಮುಂದೆ ಬೆತ್ತಲೆಯಾಗಲು ಇಷ್ಟಪಡುವುದಿಲ್ಲ” ಎಂದು ಅವರು ಕಟುವಾಗಿ ನಸೀರುದ್ದೀನ್ ಶಾ ಅವರು ಹೇಳಿಕೆಗೆ ಪ್ರತಿಕ್ರಯಿಸಿದ್ದಾರೆ.
ನಸೀರುದ್ದೀನ್ ಶಾ ಅವರು “ಹತ್ಯಾಕಾಂಡವನ್ನು ಬೆಂಬಲಿಸುವ” ಚಲನಚಿತ್ರಗಳನ್ನು ಮಾಡಲು ಸಂತೋಷ ಪಡುತ್ತಾರೆ. ಧರ್ಮದ ಕಾರಣದಿಂದ ಅಥವಾ ಹತಾಶಾಗಿ ಅವರು ಹೀಗೆ ಮಾಡಿದ್ದಾರೆ. ಯಾವುದೋ ಕಾರಣಗಳಿಗಾಗಿ ಅವರು ಭಯೋತ್ಪಾದಕರನ್ನು ಬೆಂಬಲಿಸಲು ಇಷ್ಟಪಡುತ್ತಾರೆ. ಭಯೋತ್ಪಾದನೆಯ ಬಗ್ಗೆ ನನಗೆ ಶೂನ್ಯ ಸಹಿಷ್ಣುತೆ ಇರುವುದರಿಂದ ನಸೀರ್ ಏನು ಹೇಳಿದರೂ ನಾನು ಹೆದರುವುದಿಲ್ಲ. ಬಹುಶಃ ಅವರು ಭಯೋತ್ಪಾದಕರನ್ನು ಇಷ್ಟಪಡಬಹುದೆಂದು” ಟೀಕಿಸಿದ್ದಾರೆ.
“ಕೆಲವರು ಜೀವನದಲ್ಲಿ ಹತಾಶರಾಗಿರುತ್ತಾರೆ. ಅವರು ಯಾವಾಗಲೂ ನೆಗೆಟಿವ್ ಸುದ್ದಿ ಮತ್ತು ನೆಗೆಟಿವ್ ವಿಷಯಗಳನ್ನು ನಂಬುತ್ತಾರೆ. ಆದ್ದರಿಂದ ನಸೀರ್ ಭಾಯ್ ಏನು ಇಷ್ಟಪಡುತ್ತಾರೆ ಎಂದು ನನಗೆ ತಿಳಿದಿಲ್ಲ. ನಸೀರುದ್ದೀನ್ ಏನು ಹೇಳಿದರೂ ಅದು ಅವರ “ವೃದ್ಧಾಪ್ಯ”ದಿಂದ ಅಥವಾ ಜೀವನದಲ್ಲಿ “ಹತಾಶೆ” ಯಿಂದ ಹೇಳಿರಬಹದು” ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Emergency: ಹತ್ತಾರು ವಿಳಂಬದ ಬಳಿಕ ಕೊನೆಗೂ ಕಂಗನಾ ʼಎಮರ್ಜೆನ್ಸಿʼ ರಿಲೀಸ್ ಗೆ ಡೇಟ್ ಫಿಕ್ಸ್
Baaghi 4: ಟೈಗರ್ ಶ್ರಾಫ್ ʼಬಾಘಿ – 4ʼ ಗೆ ಕನ್ನಡದ ಎ.ಹರ್ಷ ಆ್ಯಕ್ಷನ್ ಕಟ್; ಪೋಸ್ಟರ್ ಔಟ್
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Aishwarya Rai ಖುಷಿಗಿಂತ ಬೇರೇನು ಬೇಕು?: ಮಾಜಿ ಪ್ರೇಮಿ ಸಲ್ಮಾನ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.