ಮಾರಣಾಂತಿಕ ಕ್ಯಾನ್ಸರ್‌.. ನಡೆಯಲು ಆಗದ ಸ್ಥಿತಿ: ಶಾರುಖ್ ಖಾನ್ ಭೇಟಿ ಆಗುವುದೇ ಇವರ ಕೊನೆ ಆಸೆ

ಇವರ ರೂಮ್‌ ಇಡೀ ಶಾರುಖ್‌ ಫೋಟೋಗಳ ಕಲರವ

Team Udayavani, May 20, 2023, 5:17 PM IST

tdy-20

ಮುಂಬಯಿ: ಸಿನಿಮಾಗಳು ನಮ್ಮ ಮೇಲೆ ತುಂಬಾ ಪರಿಣಾಮ ಬೀರುತ್ತವೆ. ಸಿನಿಮಾ ನಟ – ನಟಿಯರನ್ನು ಒಮ್ಮೆಯಾದರೂ ನಾವು ಜೀವನದಲ್ಲಿ ಭೇಟಿ ಆಗಬೇಕೆನ್ನುವ ಅಭಿಮಾನ ಮೂಡುತ್ತದೆ. ಕೆಲವರು ತನ್ನ ಮೆಚ್ಚಿನ ನಟರ ಬಗ್ಗೆ ಅಪಾರವಾದ ಅಭಿಮಾನವನ್ನು ಹೊಂದಿರುತ್ತಾರೆ. ಅಂಥದ್ದೇ ಒಬ್ಬ ಅಪ್ಟಟ ಅಭಿಮಾನಿಯೊಬ್ಬರ ಸ್ಟೋರಿಯಿದು.

ಶಾರುಖ್ ಖಾನ್‌ ಯಾರಿಗೆ ಗೊತ್ತಿಲ್ಲ ಹೇಳಿ. ವಯಸ್ಸು 57 ದಾಟಿದರೂ ಇಂದಿಗೂ 17 ವರ್ಷದ ಯುವಕನಂತೆ ಫೈಟ್‌, ಆ್ಯಕ್ಟ್‌ ಎರಡನ್ನೂ ಸಮಾನವಾಗಿ ಮಾಡಬಲ್ಲ ಬಾಲಿವುಡ್‌ ನ ಕಿಂಗ್‌ ಖಾನ್‌ ಗೆ ಅಭಿಮಾನಿಗಳ ದೊಡ್ಡ ವರ್ಗವೇ ಇದೆ. ಅಂಥ ದೊಡ್ಡ ಅಭಿಮಾನಿಗಳ ಸಾಗರದಲ್ಲಿ ಒಂದು ಪುಟ್ಟ ಅಲೆಗಳಂತೆ ಇರುವವರು ಪಶ್ಚಿಮ ಬಂಗಾಳದ ನಾರ್ತ್ 24 ಪರಗಣ‌ ಜಿಲ್ಲೆಯ 60 ವರ್ಷದ ವೃದ್ಧೆ ಶಿವಾನಿ ಚಕ್ರವರ್ತಿಯೂ ಒಬ್ಬರು.

ಶಾರುಖ್‌ ಖಾನ್‌ ಎಂದರೆ ವಿವರಸಲಾಗದ ಅಭಿಮಾನ.. ನಾವು – ನೀವು ಶಾರುಖ್‌ ಖಾನ್‌ ಅಥವಾ ಇತರ ನಟ – ನಟಿಯರ ಅಭಿಮಾನಿಗಳು ಆಗಿರಬಹುದು. ಆದರೆ ಇವರ ಅಭಿಮಾನ ನಮ್ಮ ನಿಮ್ಮಂತೆ ಖಂಡಿತ ಅಲ್ಲ. ಶಿವಾನಿ ಚಕ್ರವರ್ತಿ ಮಾರಣಾಂತಿಕ ಕ್ಯಾನ್ಸರ್‌ ನಿಂದ ಬಳಲುತ್ತಿದ್ದಾರೆ. ಇನ್ನೇನು ಕೆಲ ತಿಂಗಳೇ ಬದುಕುಬಹುದು ಎನ್ನುವ ಸ್ಥಿತಿಯಲ್ಲಿದ್ದಾರೆ. ಆದರೆ ಅವರ ಕೊನೆಯ ಆಸೆ ಶಾರುಖ್‌ ಖಾನ್‌ ರನ್ನು ಭೇಟಿ ಆಗಬೇಕೆನ್ನುವುದು.!

ಹೌದು ಶಿವಾನಿ ಚಕ್ರವರ್ತಿ ಶಾರುಖ್‌ ಖಾನ್‌ ಅವರ ದೊಡ್ಡ ಅಭಿಮಾನಿ. ಅವರ ಎಲ್ಲಾ ಸಿನಿಮಾವನ್ನು ನೋಡಿದ್ದಾರೆ. ಎದ್ದು ನಡೆಯಲು ಕಷ್ಟವಾದರೂ ಇತ್ತೀಚೆಗೆ ತೆರೆಕಂಡ  ʼಪಠಾಣ್‌ʼ ಸಿನಿಮಾವನ್ನು ಥಿಯೇಟರ್‌ ಗೆ ಹೋಗಿ ನೋಡಿದ್ದಾರೆ. 2000 ಇಸವಿಯಿಂದ ಇದುವರಗೆ ಬಂದ ಅವರ ಎಲ್ಲಾ ಸಿನಿಮಾದ ಪೋಸ್ಟರ್‌ ಗಳನ್ನು ತನ್ನ ಬೆಡ್‌ ರೂಮ್‌ ನ ಗೋಡೆಗಳಲ್ಲಿ ಅಂಟಿಸಿ ಇಟ್ಟಿದ್ದಾರೆ. ಶಾರುಖ್‌ ಖಾನ್‌ ಅವರು ಕೆಕೆಆರ್‌ ತಂಡವನ್ನು ಖರೀದಿಸಿದಾಗಿನಿಂದ ಅವರು ಐಪಿಎಲ್‌ ನಲ್ಲಿ ಕೆಕೆಆರ್‌ ತಂಡವನ್ನು ಸರ್ಪೋಟ್‌ ಮಾಡುವುದು ಮಾತ್ರವಲ್ಲದೆ, ಕೆಕೆಆರ್‌ ನ ಎಲ್ಲಾ ಪಂದ್ಯವನ್ನು ಶಾರುಖ್‌ ಗಾಗಿ ನೋಡುತ್ತಾರೆ.

“ನಾನು ಕೊನೆಯ ದಿನಗಳನ್ನು ಲೆಕ್ಕ ಹಾಕುತ್ತಿದ್ದೇನೆ. ವೈದ್ಯರು ನಾನು ಹೆಚ್ಚು ದಿನ ಬದುಕುವುದಿಲ್ಲ ಎಂದಿದ್ದಾರೆ.ನನ್ನ ಜೀವನದ ಕೊನೆ ಆಸೆ ಎಂದರೆ ಅದು ಶಾರುಖ್‌ ಅವರನ್ನು ಮುಖತಃ ಭೇಟಿ ಆಗಬೇಕು” ಎಂದು ಶಿವಾನಿ ಚಕ್ರವರ್ತಿ ಹೇಳುತ್ತಾರೆ.

ಶಾರುಖ್‌ ಅವರಿಗೆ ಬಂಗಾಳಿ ಆಹಾರ ಇಷ್ಟ. ನಾನು ಅವರಿಗೆ ಮನೆಯಲ್ಲಿ ಬಂಗಾಳಿ ಅಡುಗೆಯನ್ನು ಮಾಡಿ ಬಡಿಸಬೇಕೆಂದು ಹೇಳುತ್ತಾ ಕಣ್ಣಂಚಿನಲ್ಲಿ ನೀರು ತುಂಬಿ ಮಾತನಾಡಿದರು.

ಶಾರುಖ್‌ ಅವರಿಗೆ ಹೇಳಲು ಬಯಸುವ ಒಂದು ವಿಚಾರ ಏನಾದರೂ ಇದ್ದರೆ ಹೇಳಿ ಎಂದಾಗ ಅವರು, “ನನ್ನ ಮಗಳನ್ನು ಆಶೀರ್ವದಿಸುವಂತೆ ನಾನು ಅವರನ್ನು ಕೇಳಲು ಬಯಸುತ್ತೇನೆ. ನಾನು ಅವನನ್ನು ನೋಡಲು ಬಯಸುತ್ತೇನೆ ಮತ್ತು  ಅವರ ಸರಳತೆಯನ್ನು ನೋಡಲು ಬಯಸುತ್ತೇನೆ.” ಎಂದರು.

ಈಗಾಗಲೇ  ಶಿವಾನಿ ತನ್ನ ಚಿಕಿತ್ಸೆಯ ಭಾಗವಾಗಿ ಹತ್ತು ಕೀಮೋ ಸೆಷನ್‌ಗಳಿಗೆ ಒಳಗಾಗಿದ್ದಾರೆ. ಅವರು ಬೆನ್ನುಹುರಿಯ ಸಮಸ್ಯೆಯಿಂದ ಬಳಲುತ್ತಿದ್ದು, ಬೆನ್ನು ಬಗ್ಗಿದ್ದು ನಡೆಯಲು ಕಷ್ಟವಾಗುತ್ತಿದೆ.

ಶಿವಾನಿ ಅವರ ಮಗಳು ಈ ಕುರಿತು ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಂಡು ಸೋಶಿಯಲ್‌ ಮೀಡಿಯಾದಲ್ಲಿ ಶಾರುಖ್‌ ಅವರ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದಾರೆ.

ಈ ಹಿಂದೆ ಶಾರುಖ್‌ ಅವರ ಅರುಣಾ ಪಿಕೆ ಎಂಬ ಅಭಿಮಾನಿ 2017 ರಲ್ಲಿ ನಿಧನರಾಗಿದ್ದರು.  ಶಾರುಖ್‌ ಅವರನ್ನು ಭೇಟಿಯಾಗಲು ಬಯಸಿದ್ದ ಅವರಿಗೆ ಶಾರುಖ್‌ ವಿಡಿಯೋ ಮೆಸೇಜ್‌ ಹಾಗೂ ಕಾಲ್‌ ಮಾಡಿದ್ದರು. ಆ ವೇಳೆ ಅರುಣಾ ಆಸ್ಪತ್ರೆಯಲ್ಲಿದ್ದರು.

ಟಾಪ್ ನ್ಯೂಸ್

Women’s T20: ದಾಖಲೆ ಮೊತ್ತ… ಭಾರತಕ್ಕೆ ಟಿ20 ಸರಣಿ

Women’s T20: ದಾಖಲೆ ಮೊತ್ತ… ಭಾರತಕ್ಕೆ ಟಿ20 ಸರಣಿ

8-belthangady

Belthangady: ಬೈಕಿಗೆ ಕಾರು ಢಿಕ್ಕಿ, ಓಡಿಲ್ನಾಳದ ಯುವಕ ಸಾವು

ಟ್ರಕ್ ಡಿಕ್ಕಿ ಹೊಡೆದು ಗ್ಯಾಸ್ ಟ್ಯಾಂಕರ್ ಸೇರಿ ಹಲವು ವಾಹನ ಬೆಂಕಿಗಾಹುತಿ… ಓರ್ವ ಸಾ*ವು

Tragedy: ಬೆಳ್ಳಂಬೆಳಗ್ಗೆ ಭೀಕರ ಅಪಘಾತ… ಗ್ಯಾಸ್ ಟ್ಯಾಂಕರ್ ಸೇರಿ ಹಲವು ವಾಹನ ಬೆಂಕಿಗಾಹುತಿ

7-icc

ICC Champions Trophy: ಹೈಬ್ರಿಡ್‌ ಮಾದರಿಯೇ ಅಂತಿಮ

6-mandya

Mandya; ಸಕ್ಕರೆ ನಾಡಿನಲ್ಲಿ ಇಂದಿನಿಂದ  87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ

5-dinesh

Dinesh Gundu Rao; ಬಾಣಂತಿಯರ ಸಾ*ವು ಪ್ರಕರಣ ನ್ಯಾಯಾಂಗ ತನಿಖೆಗೆ

4-train

Train; ಮಂಗಳೂರು-ಪುತ್ತೂರು ಪ್ಯಾಸೆಂಜರ್‌ ರೈಲು ಸುಬ್ರಹ್ಮಣ್ಯಕ್ಕೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10

Year Ender: Horror movies-2024 ರ ಟಾಪ್‌ 5 ಹಾರರ್ ಚಲನಚಿತ್ರಗಳು

Atlee to collaborate with Salman Khan

Atlee Kumar; ಸಲ್ಮಾನ್‌ ಖಾನ್‌ ಜತೆಗೆ ಅಟ್ಲಿ ಸಿನಿಮಾ

15

Bollywood: ಬಾಲಿವುಡ್‌ ನಟ ಶಾಹಿದ್‌ ಕಪೂರ್‌ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?  

‌Actress: 31 ವರ್ಷದ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್

‌Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್

Rashmika-Mandanna-2

Life Partner ಹೇಗಿರಬೇಕು: ನಟಿ ರಶ್ಮಿಕಾ ಮಂದಣ್ಣ ಮನದ ಮಾತು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Women’s T20: ದಾಖಲೆ ಮೊತ್ತ… ಭಾರತಕ್ಕೆ ಟಿ20 ಸರಣಿ

Women’s T20: ದಾಖಲೆ ಮೊತ್ತ… ಭಾರತಕ್ಕೆ ಟಿ20 ಸರಣಿ

9-ind-pak

Kho Kho ವಿಶ್ವಕಪ್‌: ಭಾರತ- ಪಾಕಿಸ್ಥಾನ ಉದ್ಘಾಟನ ಪಂದ್ಯ

8-belthangady

Belthangady: ಬೈಕಿಗೆ ಕಾರು ಢಿಕ್ಕಿ, ಓಡಿಲ್ನಾಳದ ಯುವಕ ಸಾವು

ಟ್ರಕ್ ಡಿಕ್ಕಿ ಹೊಡೆದು ಗ್ಯಾಸ್ ಟ್ಯಾಂಕರ್ ಸೇರಿ ಹಲವು ವಾಹನ ಬೆಂಕಿಗಾಹುತಿ… ಓರ್ವ ಸಾ*ವು

Tragedy: ಬೆಳ್ಳಂಬೆಳಗ್ಗೆ ಭೀಕರ ಅಪಘಾತ… ಗ್ಯಾಸ್ ಟ್ಯಾಂಕರ್ ಸೇರಿ ಹಲವು ವಾಹನ ಬೆಂಕಿಗಾಹುತಿ

7-icc

ICC Champions Trophy: ಹೈಬ್ರಿಡ್‌ ಮಾದರಿಯೇ ಅಂತಿಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.