Salman Khan: ಬಿಗ್ ಬಾಸ್ ಕಾರ್ಯಕ್ರಮ ನಿರೂಪಣೆ ವೇಳೆಯೇ ಸಿಗರೇಟ್ ಸೇದಿದ್ರಾ ಸಲ್ಮಾನ್?
Team Udayavani, Jul 9, 2023, 4:32 PM IST
ಮುಂಬಯಿ: ಬಿಗ್ ಬಾಸ್ ಓಟಿಟಿ-2 ಯಶಸ್ವಿಯಾಗಿ ಸ್ಟ್ರೀಮ್ ಆಗುತ್ತಿದೆ. ಕಾರ್ಯಕ್ರಮದಲ್ಲಿ ಸ್ಪರ್ಧಿಗಳು ವಾದ- ವಿವಾದಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ಸಲ್ಮಾನ್ ಖಾನ್ ನಿರೂಪಣೆ ಮಾಡುವ ಕಾರ್ಯಕ್ರಮದಲ್ಲಿ ಅಭಿಷೇಕ್ ಮಲ್ಹಾನ್, ಪೂಜಾ ಭಟ್ ಮತ್ತು ಸೈರಸ್ ಬ್ರೋಚಾನಂತಹ ಸ್ಪರ್ಧಿಗಳು ಇತ್ತೀಚಿನ ದಿನಗಳಲ್ಲಿ ಟ್ರೆಂಡ್ ನಲ್ಲಿದ್ದಾರೆ. ಕಾರ್ಯಕ್ರಮದಲ್ಲಿ ಸ್ಪರ್ಧಿಗಳ ಶಿಸ್ತು, ಸಂಯಮ, ವ್ಯಕ್ತಿತ್ವದ ಬಗ್ಗೆ ಪಾಠ ಮಾಡುವ ಸಲ್ಮಾನ್ ಖಾನ್ ಸ್ವತಃ ತಾವೇ ನಿಯಮವನ್ನು ಮುರಿದ್ರಾ? ಎನ್ನುವ ಪ್ರಶ್ನೆ ನೆಟ್ಟಿಗರಲ್ಲಿ ಚರ್ಚೆ ಆಗುತ್ತಿದೆ.
ಇದಕ್ಕೆ ಕಾರಣ ಸಲ್ಮಾನ್ ಖಾನ್ ಶೂಟಿಂಗ್ ಸೆಟ್ ನಲ್ಲಿ ಅಂದರೆ ಬಿಗ್ ಬಾಸ್ ನಡೆಸಿಕೊಡುವ ಸೆಟ್ ನಲ್ಲೇ ಸಲ್ಮಾನ್ ಸಿಗರೇಟ್ ಎಳೆದಿದ್ದಾರೆ ಎನ್ನಲಾದ ಫೋಟೋವೊಂದು ವೈರಲ್ ಆಗಿರುವುದು. ಟ್ವಿಟರ್ ನಲ್ಲಿ ಸಲ್ಮಾನ್ ಖಾನ್ ಅವರು ಬಿಗ್ ಬಾಸ್ ಕಾರ್ಯಕ್ರಮ ನಡೆಸಿಕೊಡುವಾಗ ಒಂದು ಕೈಯಲ್ಲಿ ಸಿಗರೇಟ್ ಹಿಡಿದಿರುವ ಫೋಟೋ ವೈರಲ್ ಆಗಿದೆ.
“ನಿನ್ನೆ ಸ್ಪರ್ಧಿಗಳೊಂದಿಗೆ ಸಂವಾದ ನಡೆಸುತ್ತಿರುವಾಗ ಸಲ್ಮಾನ್ ಖಾನ್ ಕೈಯಲ್ಲಿ ಸಿಗರೇಟ್ ಹಿಡಿದಿರುವ ಶಾಟ್ ಅನ್ನು ಸಂಪಾದಕರು ತಪ್ಪಾಗಿ ಸೇರಿಸಿದ್ದಾರೆ. ಬೇಚರೆ ಕಾ ಜಾಬ್ ತೋ ಗಯಾ ಅಬ್” ಎಂದು ಬರೆದು ಪೋಸ್ಟ್ ಹಂಚಿಕೊಳ್ಳಲಾಗಿದೆ.
ಆದರೆ ನಿಜಕ್ಕೂ ಸಲ್ಮಾನ್ ಅವರು ಸೆಟ್ ನಲ್ಲೇ ಸಿಗರೇಟ್ ಸೇದಿದ್ದು ಹೌದ?ಇಲ್ವಾ? ಎನ್ನುವುದು ಅಧಿಕೃತವಾಗಿ ಗೊತ್ತಾಗಿಲ್ಲ.
ಬಿಗ್ ಬಾಸ್ ಓಟಿಟಿ-2 ಕಾರ್ಯಕ್ರಮವನ್ನು ಎರಡು ವಾರಗಳ ಅವಧಿಗೆ ವಿಸ್ತರಿಸಲಾಗಿದೆ ಎಂದು ನಿರೂಪಕ್ ಸಲ್ಮಾನ್ ಖಾನ್ ಅವರು ಪ್ರೆಸ್ ಮೀಟ್ ನಲ್ಲಿ ಹೇಳಿದ್ದಾರೆ.
Yesterday the editor mistakenly included a shot of Salman Khan holding a cigarette in his hand while interacting with contestants 🤣. Bechare ka job toh gaya ab. Fired! #BiggBossOTT2 #BiggBoss_Tak pic.twitter.com/50oQGVfKNL
— #BiggBoss_Tak👁 (@BiggBoss_Tak) July 9, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
Life Partner ಹೇಗಿರಬೇಕು: ನಟಿ ರಶ್ಮಿಕಾ ಮಂದಣ್ಣ ಮನದ ಮಾತು
Oscars 2025; ರೇಸ್‌ನಿಂದ ಹೊರಬಿದ್ದ ಲಾಪತಾ ಲೇಡೀಸ್: 15ರ ಕಿರುಪಟ್ಟಿಯ ಭಾಗವಾಗಿಲ್ಲ
Kidnap ಬಲೆಯಿಂದ ಸ್ವಲ್ಪದರಲ್ಲೇ ಪಾರಾದ ನಟ ಶಕ್ತಿ ಕಪೂರ್!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.