Big B: ʼಕಲ್ಕಿʼಗಾಗಿ ʼಅಶ್ವತ್ಥಾಮʼನ ಅವತಾರ ತಾಳಿದ ಬಿಗ್ ಬಿ; ಗಮನ ಸೆಳೆದ ಪಾತ್ರದ ಝಲಕ್
Team Udayavani, Apr 22, 2024, 8:51 AM IST
ಮುಂಬಯಿ: ಬಿಗ್ ಬಜೆಟ್ ‘ಕಲ್ಕಿ 2898 ಎಡಿʼ ಚಿತ್ರತಂಡ ಪ್ರೇಕ್ಷಕರಿಗೆ ಸಖತ್ ಸರ್ಪ್ರೈಸ್ ನೀಡಿದೆ. ಅಮಿತಾಭ್ ಬಚ್ಚನ್ ಅವರ ಪಾತ್ರ ಟೀಸರ್ ರಿಲೀಸ್ ಮಾಡಿ ಕುತೂಹಲ ಹೆಚ್ಚಿಸಿದೆ.
ನಾಗ್ ಅಶ್ವಿನ್ ನಿರ್ದೇಶನದ ಸೈನ್ಸ್ – ಫಿಕ್ಷನ್ ‘ಕಲ್ಕಿ 2898 ಎಡಿʼ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಒಂದಾಗಿದೆ. ಸಟ್ಟೇರಿದ ದಿನದಿಂದ ಪ್ರೇಕ್ಷಕರ ಗಮನ ಸೆಳೆದಿರುವ ಈ ಸಿನಿಮಾದಲ್ಲಿ ಮಲ್ಟಿಸ್ಟಾರ್ಸ್ ಗಳಿದ್ದಾರೆ. ದಕ್ಷಿಣ ಭಾರತದ ಖ್ಯಾತ ಕಲಾವಿದರು ಬಿಟೌನ್ ನ ಹಿರಿಯ ಕಲಾವಿದರು ಕೂಡ ಸಿನಿಮಾದಲ್ಲಿ ಇದ್ದಾರೆ.
ಭಾನುವಾರ(ಏ.21 ರಂದು) ಸ್ಟಾರ್ ಸ್ಪೋರ್ಟ್ಸ್ ನಲ್ಲಿ Big B: ʼಕಲ್ಕಿʼಗಾಗಿ ʼಅಶ್ವತ್ಥಾಮʼನ ಅವತಾರ ತಾಳಿದ ಬಿಗ್ ಬಿ; ಗಮನ ಸೆಳೆದ ಪಾತ್ರದ ಝಲಕ್ ಅವರ ಪಾತ್ರದ ಟೀಸರ್ ರಿಲೀಸ್ ಆಗಿದೆ.
ದೇವಾಲಯದಂತಿರುವ ನಿಗೂಢ ಸ್ಥಳದಲ್ಲಿ ಅಘೋರಿಯಂತೆ ಅಮಿತಾಭ್ ಕಾಣಿಸಿಕೊಂಡಿದ್ದಾರೆ. ಶಿವಲಿಂಗವನ್ನು ಪೂಜೆ ಮಾಡುತ್ತಿರುವ ವ್ಯಕ್ತಿಯ ಬಳಿ ಸಣ್ಣ ಹುಡುಗನೊಬ್ಬ “ನೀವು ಸಾಯಲು ಸಾಧ್ಯವಿಲ್ಲವೇ? ನೀವು ದೇವರೇ? ನೀವು ಯಾರು?” ಎಂದು ಕೇಳುತ್ತಾನೆ.
“ಪುರಾತನ ಕಾಲದಿಂದಲೂ, ನಾನು ಅವತಾರದ ಆಗಮನಕ್ಕಾಗಿ ಕಾಯುತ್ತಿದ್ದೆ. ನಾನು ಗುರು ದ್ರೋಣನ ಮಗ. ಅಶ್ವತ್ಥಾಮ.” ಎಂದು ಹೇಳುವ ದೃಶ್ಯವನ್ನು ಟೀಸರ್‌ನಲ್ಲಿ ತೋರಿಸಲಾಗಿದೆ.
ದೃಶ್ಯದೊಂದಿಗೆ ಹಿನ್ನೆಲೆ ಮ್ಯೂಸಿಕ್ ಗಮನ ಸೆಳೆಯುತ್ತದೆ.
ಈ ಸಿನಿಮಾದಲ್ಲಿ ಪ್ರಭಾಸ್, ಅಮಿತಾಭ್, ಕಮಲ್ ಹಾಸನ್, ಪ್ರಭಾಸ್, ದೀಪಿಕಾ ಪಡುಕೋಣೆ ಮತ್ತು ದಿಶಾ ಪಟಾನಿ ಮುಂತಾದ ಕಲಾವಿದರು ಕಾಣಿಸಿಕೊಳ್ಳಲಿದ್ದಾರೆ. ಇದೇ ಮೇ. 9 ರಂದು ಸಿನಿಮಾ ರಿಲೀಸ್ ಆಗಲಿದೆ.
From the 𝐁𝐈𝐆𝐆𝐄𝐒𝐓 battle of the previous Yuga, to the 𝐅𝐈𝐍𝐀𝐋 battle of the present Yuga.
Introducing the legendary @SrBachchan as immortal ‘ASHWATTHAMA’ from #Kalki2898AD.
– https://t.co/etSSON1g3L@ikamalhaasan #Prabhas @deepikapadukone @nagashwin7@DishPatani…
— Kalki 2898 AD (@Kalki2898AD) April 21, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.