“ಕೆಜಿಎಫ್ ಚಾಪ್ಟರ್ 2” ಬಗ್ಗೆ ಕುತೂಹಲಕಾರಿ ವಿಚಾರ ಬಿಚ್ಚಿಟ್ಟ ಅಮೀರ್ ಖಾನ್
Team Udayavani, Jul 26, 2022, 2:01 PM IST
ಹೈದರಾಬಾದ್: ಬಾಲಿವುಡ್ ಸೂಪರ್‌ಸ್ಟಾರ್ ಅಮೀರ್ ಖಾನ್ ಅವರ ಬಹುನಿರೀಕ್ಷಿತ “ಲಾಲ್ ಸಿಂಗ್ ಚಡ್ಡಾ” ಚಿತ್ರ ಆ. 11 ರಂದು ಬಿಡುಗಡೆಯಾಗುತ್ತಿದೆ. ಚಿತ್ರದ ವಿಶೇಷ ಕಾರ್ಯಕ್ರಮದಲ್ಲಿ ರಾಕಿಂಗ್ ಸ್ಟಾರ್ ಅಭಿನಯದ ಬ್ಲಾಕ್‌ಬಾಸ್ಟರ್ ಚಿತ್ರ “ಕೆಜಿಎಫ್ ಚಾಪ್ಟರ್ 2” ಬಗ್ಗೆ ಮಾತನಾಡಿದ್ದಾರೆ.
ಬಹುನಿರೀಕ್ಷಿತ ಚಿತ್ರ ಕೆಜಿಎಫ್ ಚಾಪ್ಟರ್ 2 ಹಾಗೂ ಲಾಲ್ ಸಿಂಗ್ ಚಡ್ಡಾ ಚಿತ್ರ ಒಂದೇ ದಿನ (ಏಪ್ರಿಲ್ 14 ರಂದು ) ರಿಲೀಸ್ ಆಗಲಿತ್ತು. ಆದರೆ ಲಾಲ್ ಸಿಂಗ್ ಚಡ್ಡಾ ಪೋಸ್ಟ್ ಪ್ರೊಡಕ್ಷನ್ ವಿಳಂಬ ನಮಗೆ ವರವಾಗಿ ಪರಿಣಮಿಸಿತು ಎಂದಿದ್ದಾರೆ.
1994 ರ ಟಾಮ್ ಹ್ಯಾಂಕ್ಸ್ ಅಭಿನಯದ “ಫಾರೆಸ್ಟ್ ಗಂಪ್” ನ ಹಿಂದಿ ರಿಮೇಕ್ ಲಾಲ್ ಸಿಂಗ್ ಚಡ್ಡಾ, ಹಾಗೂ ಕನ್ನಡದ ಆಕ್ಷನ್ ಡ್ರಾಮಾ ಕೆಜಿಎಫ್ ಚಾಪ್ಟರ್ – 2 ಬಿಡುಗಡೆ ದಿನಾಂಕ (ಏಪ್ರಿಲ್ 14 ರಂದು ) ಒಂದೇ ಆಗಿತ್ತು. ಇದರ ಬಗ್ಗೆ ಹಿಂದಿ ಪ್ರೇಕ್ಷಕರಲ್ಲಿ, ನನ್ನ ಸ್ನೇಹಿತರಲ್ಲಿ ಸಾಕಷ್ಟು ಕುತೂಹಲವಿತ್ತು. ಲಾಲ್ ಸಿಂಗ್ ಚಡ್ಡಾ ಅದೇ ದಿನ ಬಿಡುಗಡೆಯಾಗಬೇಕಿತ್ತು. ಆದರೆ ಅದೃಷ್ಟವಶಾತ್ ನಮಗೆ ಚಿತ್ರದ ವಿಎಫ್ ಎಕ್ಸ್ ಕೆಲಸದಲ್ಲಿ ಸ್ವಲ್ಪ ವಿಳಂಬವಾಯಿತು. ಆದ್ದರಿಂದ ನಾವು ಉಳಿದಿದ್ದೇವೆ. ಇಲ್ಲದಿದ್ದರೆ, ನಾವು ಕೆಜಿಎಫ್ 2 ನೊಂದಿಗೆ ಬರುತ್ತಿದ್ದೆವು”. ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮದುವೆ ಯೋಚನೆ ಸದ್ಯಕ್ಕಿಲ್ಲ ಆದರೆ.. ʼಮೈನಾʼ ಬೆಡಗಿ ನಿತ್ಯಾ ಅಭಿಮಾನಿಗಳಿಗೆ ಹೇಳಿದ್ದೇನು ?
“ಪುಷ್ಪ: ದಿ ರೈಸ್”, ರಾಜಮೌಳಿ ಅವರ “ಆರ್‌ಆರ್‌ಆರ್”, “ಕೆಜಿಎಫ್ ಚಾಪ್ಟರ್ 2” ಚಿತ್ರಗಳು ದಕ್ಷಿಣ ಭಾರತದಿಂದ ಬಂದಿವೆ ಮತ್ತು ದೇಶಾದ್ಯಂತ ಪ್ರೇಕ್ಷಕರ ಹೃದಯವನ್ನು ಗೆದ್ದಿವೆ. ಭಾರತದ ಒಂದು ರಾಜ್ಯದಿಂದ ಹೊರಬರುವ ಸಿನಿಮಾ ಯಶಸ್ವಿಯಾಗಿ ಇಡೀ ದೇಶಕ್ಕೆ ಸಂತೋಷ ಮತ್ತು ಮನರಂಜನೆಯನ್ನು ನೀಡುತ್ತದೆ. ಇದನ್ನು ನೋಡಲು ಖುಷಿಯಾಗುತ್ತದೆ. ನಿಜವಾಗಿಯೂ ನಾವು ಇದನ್ನು ಸಂಭ್ರಮಿಸಬೇಕು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
IFFI 2024: ತಾಲಿಯಾ..ತಾಲಿಯಾ…ಜೋರ್ ದಾರ್ ತಾಲಿಯಾ..!
A.R.Rahman Divorce: ಎ.ಆರ್.ರೆಹಮಾನ್ ವಿಚ್ಚೇದನಕ್ಕೆ ಆಕೆಯೇ ಕಾರಣ?; ವಕೀಲೆ ಹೇಳಿದ್ದೇನು?
55th IFFI Goa: 55ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ವಿಧ್ಯುಕ್ತ ಚಾಲನೆ
Maharashtra Polls: ಪ್ರಾಣ ಬೆದರಿಕೆ ನಡುವೆ ಮತ ಹಾಕಿ ಫೋಟೋ ತೆಗೆಸಿದ ಸಲ್ಮಾನ್!
MUST WATCH
ಹೊಸ ಸೇರ್ಪಡೆ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ನವೆಂಬರ್ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.