ಹಿರಿಯ ನಟ ರಿಷಿ ಕಪೂರ್ ಆರೋಗ್ಯ ಏನಾಗಿದೆ ? ಕ್ಯಾನ್ಸರ್ ವದಂತಿ
Team Udayavani, Jan 4, 2019, 10:41 AM IST
ಹೊಸದಿಲ್ಲಿ : ಹಿರಿಯ ಬಾಲಿವುಡ್ ನಟ ರಿಷಿ ಕಪೂರ್ ಆರೋಗ್ಯಕ್ಕೆ ಏನಾಗಿದೆ ? ಪ್ರಕೃತ ಅಮೆರಿಕದಲ್ಲಿ ರಿಷಿ ಚಿಕಿತ್ಸೆ ಪಡೆಯುತ್ತಿದ್ದು ಅವರು ಕ್ಯಾನ್ಸರ್ ಪೀಡಿರಾಗಿದ್ದಾರೆಯೇ ಎಂಬ ಶಂಕೆ ಈಗ ಅವರ ಅಭಿಮಾನಿಗಳನ್ನು ಕಾಡುತ್ತಿದೆ.
ಈ ಶಂಕೆಗೆ ಕಾರಣ ರಿಷಿ ಕಪೂರ್ ಪತ್ನಿ ನೀತೂ ಕಪೂರ್ (ಮಾಜಿ ಬಾಲಿವುಡ್ ನಟಿ ನೀತೂ ಸಿಂಗ್) ಅವರು ಇನ್‌ಸ್ಟಾಗ್ರಾಂ ನಲ್ಲಿ ಹಾಕಿರುವ ಒಂದು ಪೋಸ್ಟ್. ಅದರಲ್ಲಿ ಆಕೆ “ಕ್ಯಾನ್ಸರ್ ಅನ್ನೋದು ಕೇವಲ zodiac sign (ರಾಶಿ ಚಿಹ್ನೆ) ಮಾತ್ರವೇ ಆಗಿರಲಿ ಅಂತ ನಾನು ಹಾರೈಸುತ್ತೇನೆ’ ಎಂದು ಹೇಳಿದ್ದಾರೆ. ನೀತೂ ಅವರ ಈ ಪೋಸ್ಟ್ ಹಲವಾರು ಊಹಾಪೋಹಗಳಿಗೆ ಕಾರಣವಾಗಿದೆ.
ನೀತೂ ಹಾಕಿರುವ ಈ ಪೋಸ್ಟ್ ಅಮೆರಿಕದಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರುವ
ರಿಷಿ ಕಪೂರ್ ಬಗೆಗೋ ಅಥವಾ ಸ್ವತಃ ತನ್ನ ಬಗೆಗೋ ಎಂಬುದೀಗ ಅಭಿಮಾನಿಗಳಿಗೆ ಯಕ್ಷ ಪ್ರಶ್ನೆಯಾಗಿದೆ. ಅಂತೆಯೇ ಅವರಲ್ಲಿ ಇದು ತೀವ್ರ ಕಳವಳ ಸೃಷ್ಟಿಸಿದೆ.
ಈ ನಡುವೆ ರಿಷಿ ಕಪೂರ್ ಅವರ ಸಹೋದರ, ನಟ ರಣಧೀರ್ ಕಪೂರ್, ಚಿಂತೂ (ರಿಷಿ) ಆರೋಗ್ಯದ ಬಗ್ಗೆ ಕೆಲವೊಂದು ಅಪ್‌ಡೇಟ್ ನೀಡಿದ್ದಾರೆ.
ಹಿಂದುಸ್ಥಾನ್ ಟೈಮ್ಸ್ ಜತೆಗೆ ಮಾತನಾಡುತ್ತಾ ರಣಧೀರ್ ಕಪೂರ್ ಅವರು, “ಇದರ ಬಗ್ಗೆ (ಕ್ಯಾನ್ಸರ್) ನನಗೆ ಹೆಚ್ಚೇನೂ ಗೊತ್ತಿಲ್ಲ. ಜನರು ತಮಗೆ ಬೇಕಾದ ರೀತಿಯಲ್ಲಿ ಮಾತನಾಡಿಕೊಳ್ಳುವುದು ಸ್ವಾಭಾವಿಕ. ಆದರೆ ರಿಷಿ ಆರೋಗ್ಯದಿಂದಿದ್ದಾರೆ ಎಂದಷ್ಟೇ ಹೇಳಬಲ್ಲೆ; ಇಲ್ಲಿರುವ ಫೋಟೋ ಅದಕ್ಕೆ ಸಾಕ್ಷಿ. ಎಲ್ಲರೊಂದಿಗೂ ಬೆರೆತು ರಿಷಿ ಮಾತನಾಡುತ್ತಿದ್ದಾರೆ. ಒಳ್ಳೆಯ ಊಟ, ಆಹಾರ ಸೇವಿಸುತ್ತಿದ್ದಾರೆ. ಆತ ಬೇಗನೆ ಭಾರತಕ್ಕೆ ಮರಳಲಿದ್ದಾರೆ. ನಾವದನ್ನೀಗ ಎದುರು ನೋಡುತ್ತಿದ್ದೇವೆ’ ಎಂದು ಹೇಳಿದರು.
2018ರ ಸೆಪ್ಟಂಬರ್‌ನಲ್ಲಿ ರಿಷಿ ಕಪೂರ್ ‘ನಾನು ಕೆಲವು ವೈದ್ಯಕೀಯ ಚಿಕಿತ್ಸೆ ಪಡೆಯಲು ಅಮೆರಿಕಕ್ಕೆ ಹೋಗುತ್ತಿದ್ದೇನೆ; ಯಾರೂ ದಯವಿಟ್ಟು ನನ್ನ ಆರೋಗ್ಯದ ಬಗ್ಗೆ ವದಂತ ಹಬ್ಬಿಸಬಾರದು’ ಎಂದು ಸಾಮಾಜಿಕ ಜಾಲ ತಾಣದಲ್ಲಿ ಮನವಿ ಮಾಡಿಕೊಂಡಿದ್ದರು.
ತಾಯಿ ಕೃಷ್ಣ ರಾಜ್ ಕಪೂರ್ ನಿಧನ ಹೊಂದಿದ್ದಾಗ ಅವರ ಅಂತ್ಯಕ್ರಿಯೆಗೂ ರಿಷಿ ಬಂದಿರಲಿಲ್ಲ. ಇದರಿಂದಾಗಿ ಸಾಮಾಜಿಕ ಜಾಲ ತಾಣದಲ್ಲಿ ‘ರಿಷಿ ಕಪೂರ್ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ’ ಎಂಬ ವದಂತಿ ವ್ಯಾಪಕವಾಗಿ ಹರಡಿತ್ತು.
ಈ ವರೆಗೂ ರಿಷಿ ಕಪೂರ್ ಯಾವ ವ್ಯಾದಿಯಿಂದ ಬಳಲುತ್ತಿದ್ದಾರೆ ಎಂಬ ಬಗ್ಗೆ ಅವರಿಂದಾಗಲೀ ಅವರ ಕುಟುಂಬದವರಿಂದಾಗಲೀ ಯಾವುದೇ ಮಾಹಿತಿ, ದೃಢೀಕರಣ ಇಲ್ಲ.
ಇದೇ ವೇಳೆ ರಿಷಿ ಕಪೂರ್ ಅವರ ಮಕ್ಕಳಾದ ರಣಬೀರ್ ಕಪೂರ್ ಮತ್ತು ರಿದ್ಧಿಮಾ ಕಪೂರ್ ಸಾಹಿನಿ ಅವರು ನ್ಯೂಯಾರ್ಕ್ ನಲ್ಲೇ ಇದ್ದಾರೆ. ಅಲ್ಲಿಯೇ ಎಲ್ಲರೂ ಜತೆಗೂಡಿ ಹೊಸ ವರ್ಷ ಆಚರಿಸಿದ್ದಾರೆ.
ರಿದ್ಧಿಮಾ ಜತೆಗೆ ಆಕೆಯ ಪತಿ ಭರತ್ ಮತ್ತು ಪುತ್ರಿ ಸಮರಾ ಇದ್ದಾರೆ. ರಣಬೀರ್ ಜತೆಗೆ ಆತನ ಗರ್ಲ್ ಫ್ರೆಂಡ್ ಎಂದು ವದಂತಿಯಾಗಿರುವ ಅಲಿಯಾ ಭಟ್ ಇದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.