ಮುಂಬೈ: ಬಾಲಿವುಡ್ ಹಿರಿಯ ನಟ ರಿಷಿ ಕಪೂರ್ ಗೆ ವಿದ್ಯುತ್ ಚಿತಾಗಾರದಲ್ಲಿ ಅಂತಿಮ ವಿದಾಯ
ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯಿಂದ ಹೂವಿನಿಂದ ಅಲಂಕೃತವಾದ ಆ್ಯಂಬುಲೆನ್ಸ್ ಮೂಲಕ ವಿದ್ಯುತ್ ಚಿತಾಗಾರದವರೆಗೆ ಅಂತಿಮ ಯಾತ್ರೆ
Team Udayavani, Apr 30, 2020, 6:52 PM IST
ಮುಂಬೈ:ಬಾಲಿವುಡ್ ದಂತಕತೆ, ಹಿರಿಯ ನಟ ರಿಷಿ ಕಪೂರ್ ಅವರ ಅಂತ್ಯಕ್ರಿಯೆ ಗುರುವಾರ ಮಧ್ಯಾಹ್ನ ಚಂದನ್ ವಾಡಿಯ ವಿದ್ಯುತ್ ಚಿತಾಗಾರದಲ್ಲಿ ನಡೆಯಿತು. ಈ ವೇಳೆ ರಿಷಿ ಕಪೂರ್ ಪತ್ನಿ ನೀತು ಕಪೂರ್, ಸಹೋದರಿ ರೀಮಾ ಜೈನ್, ಅಲಿಯಾ ಭಟ್, ರಣಬೀರ್ ಕಪೂರ್ ಹಾಗೂ ಕುಟುಂಬದ ಸದಸ್ಯರು ಅಂತಿಮ ಕಣ್ಣೀರ ವಿದಾಯ ಹೇಳಿದರು.
ಲ್ಯುಕೇಮಿಯಾದಿಂದ ಬಳಲುತ್ತಿದ್ದ ರಿಷಿ ಕಪೂರ್ ಅವರು ಇಂದು ವಿಧಿವಶರಾಗಿದ್ದರು. ಕಪೂರ್ ಕುಟುಂಬದ ಸದಸ್ಯರು, ನಿಕಟ ಸ್ನೇಹಿತರು ಅಂತಿಮ ಗೌರವ ಸಲ್ಲಿಸಿದರು. ಸರ್ ಎಚ್ ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯಿಂದ ಹೂವಿನಿಂದ ಅಲಂಕೃತವಾದ ಆ್ಯಂಬುಲೆನ್ಸ್ ಮೂಲಕ ವಿದ್ಯುತ್ ಚಿತಾಗಾರದವರೆಗೆ ಅಂತಿಮ ಯಾತ್ರೆ ಮೂಲಕ ಸಾಗಿ ತಲುಪಿತ್ತು.
ಕೋವಿಡ್ 19 ವೈರಸ್ ಹಿನ್ನೆಲೆಯಲ್ಲಿ ಅಂತಿಮ ಗೌರವ ಸಲ್ಲಿಸಲು ರಿಷಿ ಕಪೂರ್ ಅವರ ಪಾರ್ಥಿವ ಶರೀರವನ್ನು ಮನೆಗೆ ತೆಗೆದುಕೊಂಡು ಹೋಗದೇ ನೇರವಾಗಿ ಚಿತಾಗಾರಕ್ಕೆ ತೆಗೆದುಕೊಂಡು ಹೋಗು ಅಂತಿಮ ವಿಧಿವಿಧಾನ ನೆರವೇರಿಸುವಂತೆ ಮುಂಬೈ ಪೊಲೀಸರು ಮನವಿ ಮಾಡಿಕೊಂಡಿದ್ದರು.
ರಿಷಿ ಕಪೂರ್ ಅಂತಿಮ ವಿಧಿ ವಿಧಾನದ ವೇಳೆ ರಣಬೀರ್ ಕಪೂರ್, ರಿಷಿ ಪತ್ನಿ ನೀತೂ ಕಪೂರ್, ರೀಮಾ ಜೈನ್, ಮನೋಜ್ ಜೈನ್, ಅರ್ಮಾನ್ ಜೈನ್, ಅದಾರ್ ಜೈನ್, ಅನಿಸ್ಸಾ ಜೈನ್, ರಾಜೀವ್ ಕಪೂರ್, ರಣಧೀರ್ ಕಪೂರ್, ಸೈಫ್ ಅಲಿ ಖಾನ್, ಕರೀನಾ ಕಪೂರ್ ಖಾನ್, ಬಿಮಲ್ ಪರೇಖ್, ನಟಾಶಾ ನಂದನ್, ಅಭಿಷೇಕ್ ಬಚ್ಚನ್, ಡಾ.ತರಂಗ್, ಅಲಿಯಾ ಭಟ್, ಆಯನ್ ಮುಖರ್ಜಿ, ಜೈರಾಮ್, ರಾಹುಲ್ ರಾವೈಲ್ ಮತ್ತು ರೋಹಿತ್ ಧವನ್ ಹಾಜರಿದ್ದರು.
ನವದೆಹಲಿಯಲ್ಲಿದ್ದ ಮಗಳು ರಿದ್ದೀಮಾ ಕಪೂರ್ ಸಾಹ್ನಿಗೆ ಮುಂಬೈಗೆ ತೆರಳಲು ಅವಕಾಶ ನೀಡಲಾಗಿತ್ತು. ತಂದೆಯ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ದಿಲ್ಲಿ ಪೊಲೀಸರು ರಿದ್ದೀಮಾಗೆ ಪಾಸ್ ನೀಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
Actor ರೂಪಾಲಿ ಗಂಗೂಲಿಯಿಂದ ಮಲಮಗಳಿಗೆ ಕಿರುಕುಳ?
CELEBRITIES: ಶಾರುಖ್ ಟು ಸಲ್ಮಾನ್; ಧೂಮಪಾನದ ಚಟಕ್ಕೆ ಬಿದ್ದು ಹೊರಬಂದ ಸೆಲೆಬ್ರಿಟಿಗಳು
Bollywood: ವರುಣ್ ಧವನ್ ʼಬೇಬಿ ಜಾನ್ʼ ಟೀಸರ್ ನೋಡಿ ʼಜವಾನ್ʼ ಕಾಪಿ ಎಂದ ನೆಟ್ಟಿಗರು
Ranveer-Deepika ಮಗಳ ಹೆಸರು ‘ದುವಾ ಪಡುಕೋಣೆ ಸಿಂಗ್’
MUST WATCH
ಹೊಸ ಸೇರ್ಪಡೆ
Director Guruprasad: ಗುರುಪ್ರಸಾದ್‌ಗೆ ಸಾಲ ಕೊಟ್ಟವರ ತನಿಖೆಗೆ ಸಿದ್ಧತೆ
Drunk & Drive Case: ಅತಿ ವೇಗದ ಚಾಲನೆ: 522 ಕೇಸ್, 1.29 ಲಕ್ಷ ದಂಡ
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
Sandalwood: ಕರಾವಳಿ ಸಂಸ್ಕೃತಿ ಸುತ್ತ ದಿಂಸೋಲ್
Puttur: ವಿದ್ಯುತ್ ಕಂಬ ಏರುವ ತರಬೇತಿ!; ಪವರ್‌ಮನ್ ಉದ್ಯೋಗಕ್ಕೆ ಸ್ಥಳೀಯರಿಗೆ ಪ್ರೋತ್ಸಾಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.