Ektaa R Kapoor; ಮಹಿಳೆಯರ ಸುರಕ್ಷತೆ ಕೇವಲ ಸಿನಿಮಾ ರಂಗದ ಸಮಸ್ಯೆಯಲ್ಲ
Team Udayavani, Sep 4, 2024, 9:07 AM IST
ಮುಂಬಯಿ: ಮಹಿಳೆಯರ ಸುರಕ್ಷತೆ ಕೇವಲ ಸಿನಿ ರಂಗದ ಸಮಸ್ಯೆಯಲ್ಲ. ನಾವು ಇದನ್ನು ಗಂಭೀರವಾಗಿ ಪರಿಗಣಿಸುತ್ತೇವೆ’ ಎಂದು ಖ್ಯಾತ ಚಿತ್ರ ನಿರ್ಮಾಪಕಿ ಏಕ್ತಾ ಆರ್ ಕಪೂರ್ ಹೇಳಿದ್ದಾರೆ.
ಮುಂಬರುವ ಚಿತ್ರ ‘ದಿ ಬಕಿಂಗ್ಹ್ಯಾಮ್ ಮರ್ಡರ್ಸ್’ನ(The Buckingham Murders) ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಏಕ್ತಾ ಆರ್ ಕಪೂರ್ “ಮಹಿಳೆಯರು ಮತ್ತು ಅವರ ಸುರಕ್ಷತೆ ಕೇವಲ ಉದ್ಯಮದ ಸಮಸ್ಯೆಯಲ್ಲ. ನಾವು ಇದನ್ನು ಗಂಭೀರವಾಗಿ ಪರಿಗಣಿಸುತ್ತೇವೆ’ಎಂದರು.
#WATCH | At the trailer launch event of her upcoming movie ‘The Buckingham Murders, Producer Ektaa R Kapoor says, “Women and their safety is not just an industry issue. We take this very seriously. Like I said, a lot of women have to now lead so that a lot of other women can join… pic.twitter.com/eOVLOADdeD
— ANI (@ANI) September 4, 2024
ಬಹಳಷ್ಟು ಮಹಿಳೆಯರು ಈಗ ರಂಗವನ್ನು ಮುನ್ನಡೆಸಬೇಕಾಗಿದೆ ಇದರಿಂದ ಬಹಳಷ್ಟು ಇತರ ಮಹಿಳೆಯರು ತಂಡವನ್ನು ಸೇರಬಹುದು. ಕಥೆಯನ್ನು ಹೇಳುವ ವಿಚಾರದಲ್ಲೂ ಸಹ ನಾವು ರಂಗವನ್ನು ಬದಲಾಯಿಸಬೇಕಾಗಿದೆ. ಪುರುಷರಿಗೆ ಸರಿಗಟ್ಟಲು ನಮಗೆ ಬಹಳಷ್ಟು ಸ್ಥಳಗಳಲ್ಲಿ ಮಹಿಳೆಯರು ಬೇಕು. ಅದಕ್ಕಾಗಿ ಮಹಿಳೆಯರೂ ಮುಂದಾಗಬೇಕು” ಎಂದರು.
”ಮಹಿಳಾ ಅಧಿಕಾರಿ ಭೇದಿಸಿದ ಅಪರಾಧ ಕಥೆಯನ್ನು ಹೇಳುವುದು ಕೆಲವು ರೀತಿಯ ಸುರಕ್ಷತೆಯನ್ನು ಸೃಷ್ಟಿಸುವ ಒಂದು ಹೆಜ್ಜೆಯಾಗಿದೆ” ಎಂದು ಹೇಳಿದರು.
‘ದಿ ಬಕಿಂಗ್ಹ್ಯಾಮ್ ಮರ್ಡರ್ಸ್’ ಕ್ರೈಮ್ ಥ್ರಿಲ್ಲರ್ ಚಲನಚಿತ್ರವನ್ನು ಹನ್ಸಲ್ ಮೆಹ್ತಾ ನಿರ್ದೇಶಿಸಿದ್ದಾರೆ. ಕರೀನಾ ಕಪೂರ್ ಖಾನ್, ಶೋಭಾ ಕಪೂರ್ ಮತ್ತು ಏಕ್ತಾ ಕಪೂರ್ ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ಕರೀನಾ ಬ್ರಿಟಿಷ್-ಭಾರತೀಯ ಪತ್ತೇದಾರಿಯಾಗಿ ನಟಿಸಿದ್ದಾರೆ. ಬಕಿಂಗ್‌ಹ್ಯಾಮ್‌ಶೈರ್‌ನಲ್ಲಿ ಕೊಲೆಯಾದ ಮಗುವಿನ ಪ್ರಕರಣದ ಕುರಿತಾಗಿನ ಕಥಾ ಹಂದರ ಇದಾಗಿದೆ ಎಂದು ತಿಳಿದುಬಂದಿದೆ.
2023, ಅಕ್ಟೋಬರ್ 14 ರಂದು 67 ನೇ BFI ಲಂಡನ್ ಚಲನಚಿತ್ರೋತ್ಸವದಲ್ಲಿ ಪ್ರಥಮ ಪ್ರದರ್ಶನವನ್ನು ಕಂಡಿತ್ತು. ಇದೆ ಸೆಪ್ಟೆಂಬರ್13 ರಂದು ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
IFFI 2024: ತಾಲಿಯಾ..ತಾಲಿಯಾ…ಜೋರ್ ದಾರ್ ತಾಲಿಯಾ..!
A.R.Rahman Divorce: ಎ.ಆರ್.ರೆಹಮಾನ್ ವಿಚ್ಚೇದನಕ್ಕೆ ಆಕೆಯೇ ಕಾರಣ?; ವಕೀಲೆ ಹೇಳಿದ್ದೇನು?
55th IFFI Goa: 55ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ವಿಧ್ಯುಕ್ತ ಚಾಲನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.