Kollywood: ತ್ರಿಶಾ ಕುರಿತು ಅಸಭ್ಯ ಹೇಳಿಕೆ; ಯಾವುದೇ ಕಾರಣಕ್ಕೂ ಕ್ಷಮೆ ಕೇಳಲ್ಲ ಎಂದ ಮನ್ಸೂರ್
Team Udayavani, Nov 21, 2023, 3:22 PM IST
ಚೆನ್ನೈ: ನಟಿ ತ್ರಿಶಾ ಕುರಿತು ಅಸಭ್ಯವಾಗಿ ಹೇಳಿಕೆ ನೀಡಿರುವ ಕಾಲಿವುಡ್ ನಟ ಮನ್ಸೂರ್ ಅಲಿ ಖಾನ್ ಅವರ ಮೇಲೆ ನಾಡಿಗರ್ ಸಂಗಮ್ (ದಕ್ಷಿಣ ಭಾರತೀಯ ಕಲಾವಿದರ ಸಂಘ ) ತಾತ್ಕಾಲಿಕವಾಗಿ ನಿಷೇಧ ಹೇರಿದೆ.
ಮನ್ಸೂರ್ ಹೇಳಿದ್ದೇನು?: “ಲಿಯೋ ಸಿನಿಮಾದಲ್ಲಿ ನಾನು ತ್ರಿಷಾ ಜೊತೆ ನಟಿಸುತ್ತಿದ್ದೇನೆ ಎಂದು ಕೇಳಿದಾಗ, ಸಿನಿಮಾದಲ್ಲಿ ಅವರೊಂದಿಗೆ ಬೆಡ್ ರೂಮ್ ಸೀನ್ ಇರುತ್ತದೆ ಅನ್ಕೊಂಡಿದ್ದೆ. ಅವಳನ್ನು ಎತ್ತಿಕೊಂಡು ಬೆಡ್ ರೂಮ್ ಗೆ ಹೋಗುವ ದೃಶ್ಯವಿದೆ ಅಂದುಕೊಂಡಿದ್ದೆ. ಈ ರೀತಿ ನಾನು ಈ ಹಿಂದಿನ ಸಿನಿಮಾದಲ್ಲಿ ಅನೇಕ ನಟಿಯರೊಂದಿಗೆ ಮಾಡಿದ್ದೇನೆ. ನಾನು ತುಂಬಾ ರೇಪ್ ಸೀನ್ ಗಳನ್ನು ಮಾಡಿದ್ದೇನೆ. ಇದೇನು ನನಗೆ ಹೊಸತಲ್ಲ. ಆದರೆ ಇವರು(ಚಿತ್ರತಂಡ) ನನಗೆ ಕಾಶ್ಮೀರದಲ್ಲಿ ಚಿತ್ರೀಕರಣವಾಗುವ ವೇಳೆ ಸೆಟ್ ನಲ್ಲಿ ತ್ರಿಶಾಳನ್ನು ತೋರಿಸಲೇ ಇಲ್ಲ” ಎಂದಿದ್ದರು.
ಈ ಹೇಳಿಕೆಗೆ ಹಿರಿಯ – ಕಿರಿಯ ಕಲಾವಿದರು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಅವರ ಹೇಳಿಕೆಯಿಂದಾಗಿ ಅವರನ್ನು ಸಿನಿಮಾದಿಂದ ತಾತ್ಕಾಲಿಕವಾಗಿ ನಾಡಿಗರ್ ಸಂಗಮ್ (ದಕ್ಷಿಣ ಭಾರತೀಯ ಕಲಾವಿದರ ಸಂಘ) ನಿಷೇಧಿಸಿದೆ.
ಇದಾದ ಬಳಿಕ ಪ್ರತಿಕಾಗೋಷ್ಠಿ ಕರೆದ ನಟ ಮನ್ಸೂರ್ ಆಲಿ ಖಾನ್ ತಾನು ಯಾವುದೇ ಕಾರಣಕ್ಕೂ ಕ್ಷಮೆ ಕೇಳುವುದಿಲ್ಲ ಎಂದಿದ್ದಾರೆ.
“ನನ್ನ ಮೇಲೆ ನಿಷೇಧ ಹೇರಿ ನಾಡಿಗರ್ ಸಂಗಮ್ ತಪ್ಪು ಮಾಡಿದೆ. ಈ ರೀತಿಯ ಸಮಸ್ಯೆ ಸಂಭವಿಸಿದಾಗ, ಅವರು ನನ್ನ ವಿವರಣೆಯನ್ನು ಸಹ ಕೇಳಲಿಲ್ಲ. ಅವರು ನನಗೆ ಕರೆ ಮಾಡಬಹುದಿತ್ತು ಅಥವಾ ವಿವರಣೆ ಕೇಳಲು ನೋಟಿಸ್ ನೀಡಬಹುದಿತ್ತು. ವಿಚಾರಣೆ ಮಾಡಬೇಕಿತ್ತು ಆದರೆ ಹಾಗೆ ಮಾಡದೆ, ಈ ರೀತಿ ನೇರವಾಗಿ ತಾತ್ಕಾಲಿಕವಾಗಿ ನಿಷೇಧ ಹೇರಿದ್ದಾರೆ” ಎಂದಿದ್ದಾರೆ.
“ನನ್ನ ಮೇಲಿರುವ ನಿಷೇಧವನ್ನು ಹಿಂಪಡೆಯಲು ನಾನು ನಾಲ್ಕು ಗಂಟೆಯ ಕಾಲಾವಕಾಶವನ್ನು ನೀಡುತ್ತೇನೆ. ನಾನು ಕ್ಷಮೆ ಕೇಳಿದರೆ ಮಾತ್ರ ನಿಷೇಧ ಹಿಂದಕ್ಕೆ ತೆಗೆದುಕೊಳ್ಳುತ್ತಾರೆ ಎಂದಿದ್ದಾರೆ. ನಾನು ಕ್ಷಮೆ ಕೇಳುವವರಂತೆ ಕಾಣುತ್ತಿದ್ದೇನೆಯೇ?” ಎಂದು ಪ್ರಶ್ನಿಸಿದ್ದಾರೆ.
“ವಧುವರರ ಚಿತ್ರಗಳಂತೆ ಕಾಣುವ ನಮ್ಮಿಬ್ಬರ ಫೋಟೋವನ್ನು ಅಕ್ಕಪಕ್ಕ ಹಾಕಿ ಮಾಧ್ಯಮದವರು ಪ್ರಕಟಿಸಿದ್ದಾರೆ. ನೀವೆಲ್ಲರೂ ನನ್ನ ಉತ್ತಮ ಫೋಟೋವನ್ನು ಬಳಸಬಹುದಲ್ಲವೇ? ಕೆಲವು ಚಿತ್ರಗಳಲ್ಲಿ, ನಾನು ಚೆನ್ನಾಗಿ ಕಾಣುತ್ತೇನೆ” ಎಂದಿದ್ದಾರೆ.
ಹೇಳಿಕೆಯನ್ನು ಸಮರ್ಥಿಸಿಕೊಂಡ ಅವರು, “ಸಿನಿಮಾದಲ್ಲಿ ಅತ್ಯಾಚಾರದ ದೃಶ್ಯ ಎಂದರೆ ಏನು? ನಿಜವಾಗಿಯೂ ಅತ್ಯಾಚಾರ ಮಾಡುವುದೇ?ಸಿನಿಮಾದಲ್ಲಿ ಕೊಲೆ ಎಂದರೆ ಏನು? ನಿಜವಾಗಿಯೂ ಕೊಲೆ ಮಾಡುವುದೇ?ನಿಮಗೆ ಸ್ವಲ್ಪ ಬುದ್ದಿ ಇರಬೇಕಲ್ಲವೇ? ನಾನು ಏನನ್ನೂ ತಪ್ಪಾಗಿ ಹೇಳಿಲ್ಲ. ನಾನು ಕ್ಷಮೆ ಕೇಳುವುದಿಲ್ಲ.” ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.