ಅಭಿಷೇಕ್ ನೇಣು ಹಾಕಿಕೊಂಡಿದ್ದರೆ ಹೀಗೆ ಹೇಳ್ತೀರಾ? ಜಯಾ ಬಚ್ಚನ್ ಗೆ ಕಂಗನಾ ತಿರುಗೇಟು
ಜಯಾ ಅವರು ಈ ಹೇಳಿಕೆ ನೀಡಿದ್ದ ಬೆನ್ನಲ್ಲೇ ಕಂಗನಾ ಟ್ವೀಟ್ ಮೂಲಕ ಕಟುವಾಗಿ ತಿರುಗೇಟು ನೀಡಿರುವುದಾಗಿ ವರದಿ ತಿಳಿಸಿದೆ.
Team Udayavani, Sep 15, 2020, 2:54 PM IST
ನವದೆಹಲಿ:ಬಾಲಿವುಡ್ ಡ್ರಗ್ಸ್ ಜಾಲದ ನಂಟಿನ ಕುರಿತು ಆಡಳಿತಾರೂಢ ಶಿವಸೇನಾ ಸರ್ಕಾರ ಹಾಗೂ ಬಾಲಿವುಡ್ ನಟರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ನಟಿ ಕಂಗನಾ ರನೌತ್ ಇದೀಗ ಹಿರಿಯ ನಟಿ, ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್ ವಿರುದ್ಧ ಚಾಟಿ ಬೀಸಿದ್ದಾರೆ.
ಮಂಗಳವಾರ (ಸೆಪ್ಟೆಂಬರ್ 15, 2020) ರಾಜ್ಯಸಭೆಯಲ್ಲಿ ಮಾತನಾಡಿದ್ದ ಜಯಾ ಬಚ್ಚನ್, ಕೆಲವು ವ್ಯಕ್ತಿಗಳು ಸಿನಿಮಾ ಇಂಡಸ್ಟ್ರಿಯ ಹೆಸರನ್ನು ಹಾಳುಗೆಡವಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಜಯಾ ಅವರು ಈ ಹೇಳಿಕೆ ನೀಡಿದ್ದ ಬೆನ್ನಲ್ಲೇ ಕಂಗನಾ ಟ್ವೀಟ್ ಮೂಲಕ ಕಟುವಾಗಿ ತಿರುಗೇಟು ನೀಡಿರುವುದಾಗಿ ವರದಿ ತಿಳಿಸಿದೆ.
“ಜಯಾ ಜೀ ಒಂದು ವೇಳೆ ನಿಮ್ಮ ಮಗಳು ಶ್ವೇತಾ ಮಾದಕ ವ್ಯಸನಿಯಾಗಿ ಕಿರುಕುಳಕ್ಕೊಳಗಾಗಿದ್ದರೆ . ಒಂದು ವೇಳೆ ಅಭಿಷೇಕ್ ನಿರಂತರವಾಗಿ ಬೆದರಿಕೆ ಹಾಕಿ, ಕಿರುಕುಳ ನೀಡಿ, ಒಂದು ದಿನ ನೇಣು ಬಿಗಿದುಕೊಂಡಿದ್ದರೆ ನೀವು ಆಗಲೂ ಇದೇ ಮಾತನ್ನು ಹೇಳುತ್ತಿದ್ದೀರಾ? ಇತರರಿಗೂ ಸಹಾನುಭೂತಿ ತೋರಿಸಿ ಎಂದು ಕಂಗನಾ ಟ್ವೀಟ್ ಮಾಡಿದ್ದಾರೆ.
Jaya ji would you say the same thing if in my place it was your daughter Shweta beaten, drugged and molested as a teenage, would you say the same thing if Abhieshek complained about bullying and harassment constantly and found hanging one day? Show compassion for us also ? https://t.co/gazngMu2bA
— Kangana Ranaut (@KanganaTeam) September 15, 2020
ಜಯಾ ಬಚ್ಚನ್ ಅವರು ಯಾರ ಹೆಸರನ್ನೂ ಉಲ್ಲೇಖಿಸದೇ ಬಿಜೆಪಿ ಸಂಸದ, ನಟ ರವಿ ಕಿಶನ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ರವಿ ಕಿಶನ್ ಅವರು ಸೋಮವಾರ ಲೋಕಸಭೆಯಲ್ಲಿ ಬಾಲಿವುಡ್ ನ ಡ್ರಗ್ಸ್ ಜಾಲದ ಬಗ್ಗೆ ಹೇಳಿಕೆ ನೀಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
IFFI 2024: ತಾಲಿಯಾ..ತಾಲಿಯಾ…ಜೋರ್ ದಾರ್ ತಾಲಿಯಾ..!
A.R.Rahman Divorce: ಎ.ಆರ್.ರೆಹಮಾನ್ ವಿಚ್ಚೇದನಕ್ಕೆ ಆಕೆಯೇ ಕಾರಣ?; ವಕೀಲೆ ಹೇಳಿದ್ದೇನು?
55th IFFI Goa: 55ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ವಿಧ್ಯುಕ್ತ ಚಾಲನೆ
Maharashtra Polls: ಪ್ರಾಣ ಬೆದರಿಕೆ ನಡುವೆ ಮತ ಹಾಕಿ ಫೋಟೋ ತೆಗೆಸಿದ ಸಲ್ಮಾನ್!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.