![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
Team Udayavani, Apr 20, 2023, 12:56 PM IST
ಮುಂಬಯಿ: ಬಾಲಿವುಡ್ ನ ಖ್ಯಾತ ನಿರ್ಮಾಪಕ ಯಶ್ ಚೋಪ್ರಾ (74) ಅವರ ಪತ್ನಿ ಪಮೇಲಾ ಚೋಪ್ರಾ ಗುರುವಾರ (ಏ.20 ರಂದು) ಮುಂಜಾನೆ ನಿಧನರಾಗಿದ್ದಾರೆ.
ಹಿನ್ನೆಲೆ ಗಾಯಕಿಯಾಗಿಯೂ, ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿದ್ದ ಅವರು ಕಳೆದ 15 ದಿನಗಳಿಂದ ಅನಾರೋಗ್ಯದಿಂದ ಮುಂಬಯಿಯ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ವೆಂಟಿಲೇಟೆರ್ ನಲ್ಲಿದ್ದ ಅವರು ಗುರುವಾರ ಮುಂಜಾನೆ ಕೊನೆಯುಸಿರೆಳೆದಿದ್ದಾರೆ. ಅವರ ನಿಧನದ ಸುದ್ದಿಯನ್ನು ಯಶ್ ರಾಜ್ ಫಿಲ್ಮ್ಸ್ ಅಧಿಕೃತವಾಗಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.
ಇತ್ತೀಚೆಗೆ ಪಮೇಲಾ ಚೋಪ್ರಾ ಅವರು ಯಶ್ ರಾಜ್ ಫಿಲ್ಮ್ಸ್ ನ ಡಾಕ್ಯುಮೆಂಟರಿ ʼದಿ ರೊಮ್ಯಾಂಟಿಕ್ಸ್ʼ ನಲ್ಲಿ ಕಾಣಿಸಿಕೊಂಡಿದ್ದರು. ಇದರಲ್ಲಿ ಅವರು ತನ್ನ ಪತಿ ಯಶ್ ರಾಜ್ ಅವರ ಸಿನಿಮಾ ಜರ್ನಿ ಬಗ್ಗೆ ಮಾತಾನಡಿದ್ದರು.
ಇದನ್ನೂ ಓದಿ: IPL 2023 ಆರ್ ಸಿಬಿ ಗೆ ಜೋಶ್ ತಂದ ಹೇಜಲ್ ವುಡ್: ಪಂಜಾಬ್ ವಿರುದ್ಧ ಆಡುವ ಸಾಧ್ಯತೆ
1970 ರಲ್ಲಿ ಯಶ್ ಚೋಪ್ರಾರನ್ನು ವಿವಾಹವಾದ ಅವರಿಗೆ ಆದಿತ್ಯ ಮತ್ತು ಉದಯ್ ಚೋಪ್ರಾ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ಆದಿತ್ಯ ಚಲನಚಿತ್ರ ನಿರ್ಮಾಪಕ ಮತ್ತು ನಿರ್ದೇಶಕ.ಆದಿತ್ಯ ರಾಣಿ ಮುಖರ್ಜಿ ಅವರನ್ನು ವಿವಾಹವಾಗಿದ್ದಾರೆ. ಉದಯ್ ಒಬ್ಬ ನಟ ಮತ್ತು ಚಲನಚಿತ್ರ ನಿರ್ಮಾಪಕರಾಗಿದ್ದಾರೆ.
ಹಿನ್ನೆಲೆ ಗಾಯಕಿಯೂ ಆಗಿದ್ದ ಅವರು, ಹಲವಾರು ಚಲನಚಿತ್ರ ಗೀತೆಗಳನ್ನು ಹಾಡಿದ್ದಾರೆ. ತನ್ನ ಗಂಡನ ಸಿನಿಮಾವಾದ ʼಕಭಿ ಕಭಿʼ (1976), ʼಮುಜ್ಸೆ ದೋಸ್ತಿ ಕರೋಗೆʼ (2002) ಸಿನಿಮಾದ ಹಾಡುಗಳನ್ನು ಹಾಡಿದ್ದಾರೆ. ಇದಲ್ಲದೆ ಅವರು 1993 ರಲ್ಲಿ ಬಂದ ʼಐನಾʼ ಸಿನಿಮಾವನ್ನು ನಿರ್ಮಾಣ ಮಾಡಿದ್ದರು.
ಪಮೇಲಾ ಅವರು ತಮ್ಮ ಪತಿ ಯಶ್ ಚೋಪ್ರಾ, ಅವರ ಪುತ್ರ ಆದಿತ್ಯ ಚೋಪ್ರಾ ಮತ್ತು ವೃತ್ತಿಪರ ಲೇಖಕಿ ತನುಜಾ ಚಂದ್ರ ಅವರೊಂದಿಗೆ ಸೇರಿ 1997 ರ ತನ್ನ ಪತಿಯ ಚಲನಚಿತ್ರ ʼದಿಲ್ ತೋ ಪಾಗಲ್ ಹೈʼ ಚಿತ್ರದ ಸ್ಕ್ರಿಪ್ಟ್ ಬರೆದಿದ್ದರು. ʼದಿಲ್ ತೋ ಪಾಗಲ್ ಹೈʼ ಚಿತ್ರದ ʼಏಕ್ ದುಜೆ ಕೆ ವಾಸ್ತೆʼ ಹಾಡಿನಲ್ಲಿ ತನ್ನ ಪತಿಯೊಂದಿಗೆ ಕಾಣಿಸಿಕೊಂಡಿದ್ದರು.
ಅವರ ಪತಿ ಯಶ್ ಚೋಪ್ರಾ 2012 ರಲ್ಲಿ ನಿಧನರಾಗಿದ್ದಾರೆ.
ನಿರ್ಮಾಪಕಿಯ ನಿಧನಕ್ಕೆ ಅನುಷ್ಕಾ ಶರ್ಮಾ, ಅಜಯ್ ದೇವಗನ್ ಸೇರಿದಂತೆ ಬಿಟೌನ್ ಗಣ್ಯರು ಕಂಬನಿ ಮಿಡಿದಿದ್ದಾರೆ.
View this post on Instagram
Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?
ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?
Chhaava: ‘ಚಾವಾ’ಗೆ ಧ್ವನಿಯಾದ ಅಜಯ್ ದೇವಗನ್
ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ
Spiritual journey: ಕಿನ್ನರ್ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ
You seem to have an Ad Blocker on.
To continue reading, please turn it off or whitelist Udayavani.