![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Dec 11, 2023, 1:03 PM IST
ಹೈದರಾಬಾದ್: ಡಾರ್ಲಿಂಗ್ ಸ್ಟಾರ್ ಪ್ರಭಾಸ್ ಅವರ ಬಹು ನಿರೀಕ್ಷಿತ ʼಸಲಾರ್ʼ ಸಿನಿಮಾದ ರಿಲೀಸ್ ಗೆ ದಿನಗಣನೆ ಆರಂಭವಾಗಿದೆ. ಟ್ರೇಲರ್ ಸಖತ್ ಸದ್ದು ಮಾಡಿದ ಬಳಿಕ ಸಿನಿಮಾ ನೋಡಲು ಪ್ರೇಕ್ಷಕರು ತುದಿಗಾಲಲ್ಲಿ ನಿಂತಿದ್ದಾರೆ.
ಸಿನಿಮಾ ಸಟ್ಟೇರಿದ ದಿನದಿಂದ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇದೆ. ʼಕೆಜಿಎಫ್ʼ ನಿರ್ದೇಶಕ ಪ್ರಶಾಂತ್ ನೀಲ್ ಅವರ ʼಸಲಾರ್ʼ ಮತ್ತೊಂದು ಮಾಸ್ಟರ್ ಪೀಸ್ ಆಗುತ್ತದೆನ್ನುವುದು ಫ್ಯಾನ್ಸ್ ಗಳ ನಿರೀಕ್ಷೆ. ಇತ್ತೀಚೆಗೆ ಮಾಸ್ ಅಂಶಗಳ ʼಸಲಾರ್ʼ ಟ್ರೇಲರ್ ರಿಲೀಸ್ ಆಗಿದೆ. ರಿಲೀಸ್ ಮುಂದೂಡಿಕೆ ಆಗ್ತಾ ಆಗ್ತಾ ಅಂತೂ ಕೊನೆಗೂ ಒಂದು ಅಧಿಕೃತ ಬಿಡುಗಡೆ ದಿನಾಂಕವನ್ನು (ಡಿ.22 ರಂದು) ಚಿತ್ರತಂಡ ನಿಗದಿಗೊಳಿಸಿದೆ.
ʼಕೆಜಿಎಫ್-2ʼ ನಂತರ ಪ್ರಶಾಂತ್ ನಿರ್ದೇಶನದದಲ್ಲಿ ಹಾಗೂ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದಲ್ಲಿ ʼಸಲಾರ್ʼ ರಿಲೀಸ್ ಆಗುತ್ತಿದೆ. ಸಿನಿಮಾದ ಬಗ್ಗೆ ಹೈಪ್ ದೊಡ್ಡಮಟ್ಟದಲ್ಲಿದೆ. ಇತ್ತೀಚೆಗೆ ಯುವ ಗಾಯಕಿಯೊಬ್ಬಳು ʼಸಲಾರ್ʼ ಸಿನಿಮಾದ ಬಗ್ಗೆ ಮಾತನಾಡುತ್ತಾ ಸೀಕ್ರೆಟ್ ವೊಂದನ್ನು ಬಿಟ್ಟುಕೊಟ್ಟಿದ್ದಾರೆ.
ಇದನ್ನೂ ಓದಿ: Samantha: ನಿರ್ಮಾಪಕಿಯಾಗಿ ಸಿನಿರಂಗದಲ್ಲಿ ಹೊಸ ಪಯಣ ಆರಂಭಿಸಿದ ನಟಿ ಸಮಂತಾ
ಯುವ ಗಾಯಕಿ ತೀರ್ಥ ಸುಭಾಷ್ ಇತ್ತೀಚೆಗೆ ಕೇರಳದಲ್ಲಿ ನಡೆದ ಗಾಯನ ಸ್ಪರ್ಧೆಯಲ್ಲಿ ವಿಜೇತರಾದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ್ದರು. ಈ ವೇಳೆ ಅವರ ಬಳಿ ಹಿನ್ನೆಲೆ ಗಾಯನ ವೃತ್ತಿಜೀವನದ ಬಗ್ಗೆ ಕೇಳಿದಾಗ,” ಪ್ರಭಾಸ್ ಅಂಕಲ್, ಯಶ್ ಅಂಕಲ್ ಮತ್ತು ಪೃಥ್ವಿರಾಜ್ ಅಂಕಲ್ ಅಭಿನಯದ ʼʼಸಲಾರ್ʼʼ ಸಿನಿಮಾದ ಮೂರು ಭಾಷೆಯಲ್ಲಿ ಹಾಡುವ ಅವಕಾಶ ನನಗೆ ಸಿಕ್ಕಿತ್ತು” ಎಂದು ತೀರ್ಥ ಸುಭಾಷ್ ಹೇಳಿದ್ದಾರೆ.
ತೀರ್ಥ ಅವರು ಹೇಳಿರುವ ಈ ಮಾತು ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆದಿದೆ. ಯಶ್ ಅವರು ʼಸಲಾರ್ʼ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆಯೇ? ಎನ್ನುವುದರ ಬಗ್ಗೆ ಊಹಾಪೋಹಗಳು ಎಬ್ಬಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯಿಲ್ಲ.
ರಾಕಿಂಗ್ ಯಶ್ ಅವರು ಇತ್ತೀಚೆಗೆ ʼಟಾಕ್ಸಿಕ್ʼ ಸಿನಿಮಾವನ್ನು ಅನೌನ್ಸ್ ಮಾಡಿದ್ದಾರೆ. ಇದನ್ನು ಮಲಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್ ನಿರ್ದೇಶನ ಮಾಡಲಿದ್ದಾರೆ.
Sala aar pic.twitter.com/QDumId9z0Z
— Arjun (@ArjuOnline) December 10, 2023
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.