#Yash19: ಕೋಟಿ ಕೋಟಿ ಬಜೆಟ್ ನಲ್ಲಿ ರಾಕಿಭಾಯ್ ಮುಂದಿನ ಸಿನಿಮಾ ನಿರ್ಮಾಣ ಮಾಡಲಿದೆ ಕೆವಿಎನ್: ನಿರ್ದೇಶಕರು ಯಾರು?
ಹೊಂಬಾಳೆ ಫಿಲ್ಮ್ಸ್ ರೀತಿಯೇ ಕೆವಿಎನ್ ಪ್ರೂಡಕ್ಷನ್ಸ್ ಇದುವರೆಗೆ ಮುಟ್ಟಿದ್ದೆಲ್ಲ ಚಿನ್ನವಾಗಿ ಮಾರ್ಪಟ್ಟಿದೆ.
Team Udayavani, Jan 8, 2023, 11:09 AM IST
ಬೆಂಗಳೂರು: ಇಂದು ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟುಹಬ್ಬ. ಯಶ್ ಈ ಬಾರಿ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಆದರೆ ಪ್ಯಾನ್ ಇಂಡಿಯಾದಲ್ಲಿ ಯಶ್ ಅಭಿಮಾನಿಗಳಿಗೆ ನೆಚ್ಚಿನ ನಟನ ಬರ್ತ್ ಡೇ ದಿನವೇ ದೊಡ್ಡ ಸಂತಸದ ಸುದ್ದಿಯೊಂದು ಹೊರಬಿದ್ದಿದೆ.
ಕೆಜಿಎಫ್-2 ಬಳಿಕ ರಾಕಿಭಾಯ್ ಯಾವ ಸಿನಿಮಾವನ್ನು, ಯಾರೊಂದಿಗೆ ಸಿನಿಮಾ ಮಾಡುತ್ತಾರೆ ಎನ್ನುವುದು ಸಸ್ಪೆನ್ಸ್ ಆಗಿಯೇ ಉಳಿದಿತ್ತು. ಮೊದಲು ನರ್ತನ್ ಅವರೊಂದಿಗೆ 19ನೇ ಸಿನಿಮಾ ಮಾಡೋದು ಪಕ್ಕಾ ಎನ್ನಲಾಗಿತ್ತು. ಈಗ ಯಶ್ ಅವರು ಪ್ರತಿಷ್ಠಿತ ಕೆವಿಎನ್ ಪ್ರೂಡಕ್ಷನ್ಸ್ ಮಾಲಕರನ್ನು ಭೇಟಿಯಾಗಿದ್ದು, ಕುತೂಹಲ ಹೆಚ್ಚಿಸಿದೆ.
ಈಗಾಗಲೇ ಕನ್ನಡದಲ್ಲಿ ʼಆರ್ ಆರ್ ಆರ್ʼ ಸಿನಿಮಾವನ್ನು ವಿತರಣೆ ಮಾಡಿ, ʼವಿಕ್ರಾಂತ್ ರೋಣʼ, ʼಬೈ ಟು ಲವ್ʼ, ʼಸಖತ್ʼ, ʼರೈಡರ್ʼನಂತಹ ಹಿಟ್ ಚಿತ್ರಗಳಿಗೆ ಬಂಡವಾಳ ಹಾಕಿರುವ ಸಿನಿಮಾ ಸಂಸ್ಥೆ ಸದ್ಯ ಜೋಗಿ ಪ್ರೇಮ್ ಅವರ ʼಕೆಡಿʼ ಸಿನಿಮಾದ ನಿರ್ಮಾಣದಲ್ಲಿ ಬ್ಯುಸಿಯಾಗಿದೆ.
ಹೊಂಬಾಳೆ ಫಿಲ್ಮ್ಸ್ ರೀತಿಯೇ ಕೆವಿಎನ್ ಪ್ರೂಡಕ್ಷನ್ಸ್ ಇದುವರೆಗೆ ಮುಟ್ಟಿದ್ದೆಲ್ಲ ಚಿನ್ನವಾಗಿ ಮಾರ್ಪಟ್ಟಿದೆ. ಯಶ್ ಅವರು ಕೆವಿಎನ್ ಪ್ರೂಡಕ್ಷನ್ಸ್ ನ ವೆಂಕಟ್ ಕೊನಂಕಿ ಅವರನ್ನು ಭೇಟಿಯಾಗಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಯಶ್ ಅವರ 19ನೇ ಸಿನಿಮಾವನ್ನು ಕೆವಿಎನ್ ಪ್ರೂಡಕ್ಷನ್ಸ್ ನಿರ್ಮಾಣ ಮಾಡಲಿದ್ದು, ಸುಮಾರು 400 ಕೋಟಿಗೂ ಅಧಿಕ ಬಜೆಟ್ ನಲ್ಲಿ ಈ ಸಿನಿಮಾ ನಿರ್ಮಾಣವಾಗಲಿದೆ ಎನ್ನಲಾಗುತ್ತಿದೆ.
ಕೆಜಿಎಫ್ ಸರಣಿಯಲ್ಲಿ ಯಶ್ ಅವರ ಮಾಸ್ & ಕ್ಲಾಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಯಾವ ರೀತಿ ಇರಲಿದೆ. ಗ್ಯಾಂಗ್ ಸ್ಟರ್ ಕಥೆಯೋ ಅಥವಾ ಲವ್ ಸ್ಟೋರಿಯೋ ಎನ್ನುವುದನ್ನು ಮುಂದಿನ ದಿನಗಳಲ್ಲಿ ಕಾದುನೋಡಬೇಕಿದೆ.
ಯಶ್ ಮುಂದಿನ ಸಿನಿಮಾಕ್ಕೆ ನಿರ್ದೇಶಕ ಯಾರು ಎನ್ನುವುದು ಇದುವರೆಗೆ ರಿವೀಲ್ ಆಗಿಲ್ಲ.
Happy Birthday Rocking Star @TheNameIsYash #HappyBirthdayYash #RockingStar #Yash19 #Sandalwood pic.twitter.com/JyNw5mX1Xa
— Udayavani (@udayavani_web) January 8, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai: ಬ್ರೇಕಪ್ ನಿಜ: ಮೌನ ಮುರಿದ ನಟಿ ಮಲೈಕಾ ಅರೋರಾ!
Pushpa 2film : 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ
Bollywood: ಹೃತಿಕ್ ರೋಷನ್ ʼಕ್ರಿಶ್ -4ʼ ಬಗ್ಗೆ ಹೊರಬಿತ್ತು ಬಿಗ್ ಅಪ್ಡೇಟ್
Sonu Sood: ನನಗೆ ಸಿಎಂ, ಡಿಸಿಎಂ ಹುದ್ದೆಗೆ ಆಫರ್ ಬಂದಿತ್ತು ಆದರೆ, ಸೋನು ಸೂದ್ ಹೇಳಿದ್ದೇನು?
Shyam Benegal; ಸಾಮಾಜಿಕ ಕಳಕಳಿ ಚಿತ್ರಗಳ ಪ್ರವರ್ತಕ ವಿಧಿವಶ: ಉಡುಪಿಯ ಬೆನಗಲ್ ಮೂಲದವರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.