![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Aug 3, 2021, 7:14 PM IST
ಚೆನ್ನೈ : ಜುಲೈ 25 ರಂದು ಮಹಾಬಲಿಪುರಂ ಬಳಿ ನಡೆದ ಡೆಡ್ಲಿ ಕಾರು ಅಪಘಾತದಲ್ಲಿ ಅದೃಷ್ಟವಶಾತ್ ಬದುಕುಳಿದ ನಟಿ ಯಶಿಕಾ ಆನಂದ್ ಅವರು ಕೊಂಚ ಗುಣಮುಖರಾಗಿದ್ದಾರೆ. ಇದುವರೆಗೂ ಐಸಿಯುನಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದ ಅವರು ಇದೀಗ ಚೇತರಿಸಿಕೊಂಡಿದ್ದು, ಅಪಘಾತ ನಡೆದ ದುರಂತದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದಾರೆ.
ಬದುಕಿರೋದಕ್ಕೆ ಜೀವನಪರ್ಯಂತ ಪಶ್ಚಾತ್ತಾಪದಲ್ಲಿ ಇರುವಂತಾಯ್ತು ಎಂದು ಬೇಸರ ವ್ಯಕ್ತಪಡಿಸಿರುವ ಯಶಿಕಾ, “ನನಗೆ ಈಗ ಏನಾಗುತ್ತಿದೆ ಎಂದು ಈಗ ಹೇಳಲಾಗುತ್ತಿಲ್ಲ. ನಾನು ಬದುಕಿರುವುದಕ್ಕೆ ಜೀವನಪರ್ಯಂತ ಪಶ್ಚಾತ್ತಾಪ ಪಡುವೆ. ನನ್ನನ್ನು ಅಪಘಾತದಿಂದ ಬದುಕಿಸಿದೆ ಎಂದು ದೇವರಿಗೆ ಧನ್ಯವಾದ ಹೇಳಲಾ ಅಥವಾ ನನ್ನ ಗೆಳತಿಯನ್ನು ಕರೆದುಕೊಂಡು ಹೋದೆ ಅಂತ ದ್ವೇಷಿಸಲಾ? ಒಂದೂ ಅರ್ಥವಾಗುತ್ತಿಲ್ಲ. ಅಪಘಾತದಲ್ಲಿ ಸಾವನ್ನಪ್ಪಿದ ನನ್ನ ಗೆಳತಿ ಪಾವನಿಯನ್ನು ತುಂಬ ಮಿಸ್ ಮಾಡಿಕೊಳ್ತೀನಿ. ದಯವಿಟ್ಟು ನನ್ನನ್ನು ಕ್ಷಮಿಸು. ನಿನ್ನ ಕುಟುಂಬವನ್ನು ನಾನು ತುಂಬ ಸಂಕಷ್ಟಕ್ಕೆ ನೂಕಿದೆ.”
‘’ಪ್ರತಿಕ್ಷಣ ನಾನು ನಿನ್ನನ್ನು ಮಿಸ್ ಮಾಡಿಕೊಳ್ಳುವೆ. ಬದುಕಿರುವುದಕ್ಕೆ ಕೊನೆಯ ತನಕ ಪಶ್ಚಾತ್ತಾಪದಲ್ಲಿ ಇರುವೆ. ನಿನ್ನ ಆತ್ನಕ್ಕೆ ಶಾಂತಿ ಸಿಗಲಿ, ಆದಷ್ಟು ಬೇಗ ನನ್ನ ಹತ್ತಿರ ಬಾ ಎಂದು ಪ್ರಾರ್ಥಿಸುವೆ. ನಿನ್ನ ಕುಟುಂಬ ಕೂಡ ನನ್ನನ್ನು ಕ್ಷಮಿಸಿವೆ. ನಿನ್ನ ನೆನಪುಗಳನ್ನು ಸದಾ ಸಂಭ್ರಮಿಸುವೆ”.
“ಅದೃಷ್ಟವಶಾತ್ ನನ್ನ ಮುಖಕ್ಕೆ ಏನೂ ಆಗಿಲ್ಲ. ಇದು ನನ್ನ ಮರುಜನ್ಮ. ಮಾನಸಿಕವಾಗಿ, ದೈಹಿಕವಾಗಿ ನನಗೆ ಗಾಯಗಳಾಗಿವೆ. ದೇವರು ನನಗೆ ಶಿಕ್ಷೆ ನೀಡಿದ್ದಾನೆ. ನಾನು ಏನು ಕಳೆದುಕೊಂಡಿದ್ದೀನೋ ಅದರ ಮುಂದೆ ಇದು ಏನೂ ಅಲ್ಲ.”
‘’ಕಾನೂನು ಎಲ್ಲರಿಗೂ ಒಂದೇ. ನಾವು ಕುಡಿದು ಗಾಡಿ ಓಡಿಸುತ್ತಿರಲಿಲ್ಲ ಎಂದು ಪೊಲೀಸರು ಅಧಿಕೃತವಾಗಿ ಹೇಳಿದ್ದಾರೆ. ಹೀಗಿದ್ದಾಗ್ಯೂ ಕೆಲವರು ನಮ್ಮ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಅನೇಕರು ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಇದು ತುಂಬ ಸೂಕ್ಷ್ಮವಾದ ವಿಷಯ. ನನ್ನ ಬಲಗಾಲು ಫ್ರ್ಯಾಕ್ಚರ್ ಆಗಿದೆ. ಸರ್ಜರಿ ನಂತರ ನಾನು ರೆಸ್ಟ್ ಮಾಡುತ್ತಿದ್ದೇನೆ. ಇನ್ನು 5 ತಿಂಗಳುಗಳ ಕಾಲ ನನಗೆ ನಡೆಯಲು, ನಿಂತುಕೊಳ್ಳಲು ಆಗಲ್ಲ. ಪೂರ್ತಿ ದಿನ ನಾನು ಹಾಸಿಗೆ ಮೇಲೆ ಇರುವೆ. ಅದೇ ಹಾಸಿಗೆ ಮೇಲೆ ಮೂತ್ರ-ಮಲ ವಿಸರ್ಜನೆ ಮಾಡಿಕೊಳ್ಳಬೇಕು. ನನಗೆ ಬಲ ಹಾಗೂ ಎಡಕ್ಕೂ ತಿರುಗಲು ಆಗಲ್ಲ” ಎಂದು ಯಶಿಕಾ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ.
Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?
ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?
Chhaava: ‘ಚಾವಾ’ಗೆ ಧ್ವನಿಯಾದ ಅಜಯ್ ದೇವಗನ್
ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ
Spiritual journey: ಕಿನ್ನರ್ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.