ಬೊಂಬಾ ರೈಡ್ ಶಿಕ್ಷಣದ ಅವ್ಯವಸ್ಥೆಯನ್ನು ಹೇಳುತ್ತಾ ಶೈಕ್ಷಣಿಕ ಅಗತ್ಯ ಪ್ರತಿಪಾದಿಸುವ ಸಿನಿಮಾ


ಅರವಿಂದ ನಾವಡ, Nov 23, 2021, 6:57 PM IST

Bomba-ride

ಪಣಜಿ: ಶಿಕ್ಷಣ ವ್ಯವಸ್ಥೆ ದೇಶದ ಪ್ರತಿ ಮೂಲೆಗೂ ತಲುಪಿತೇ? ಎಂಬ ಪ್ರಶ್ನೆ ಕೇಳಿದರೆ ಇಲ್ಲ ಎನ್ನುವ ಉತ್ತರ ಸಿಗುತ್ತದೆ. ಎಲ್ಲ ಶಾಲೆಗಳಲ್ಲೂ ಮೂಲ ವ್ಯವಸ್ಥೆಗಳಿವೆಯೇ ಎಂದು ಕೇಳಿದರೂ ಇಲ್ಲ ಎಂಬ ಉತ್ತರ ಸಿಗುತ್ತದೆ.

ಗ್ರಾಮೀಣ ಪ್ರದೇಶಗಳ ಶಾಲೆಗಳಲ್ಲಿ ಸೌಕರ್ಯಗಳು ಸಾಧ್ಯವಾಗಬೇಕು, ಮಕ್ಕಳು ಹೆಚ್ಚು ಸರಕಾರಿ ಶಾಲೆಗಳಿಗೆ ಹೋಗಬೇಕು ಎಂಬುದು ಎಲ್ಲರ ಬಯಕೆ. ಇದು ಸಮಸ್ಯೆಯ ಒಂದು ಬದಿಯಾದರೆ, ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳಿಲ್ಲದೇ ತಮ್ಮ ನೌಕರಿ, ಸಂಬಳ, ಇತರೆ ಭತ್ಯೆಗಳಿಗಾಗಿ ಊರಿನ ಮಕ್ಕಳನ್ನು ಮನವೊಲಿಸಿ ಶಾಲೆಯಲ್ಲಿ ಕುಳ್ಳಿರಿಸಿ ಸರಕಾರಕ್ಕೆ ಲೆಕ್ಕ ಕೊಡುವ ಸಮಸ್ಯೆ ಮತ್ತೊಂದು ಬದಿ. ಹಲವು ರಾಜ್ಯಗಳಲ್ಲಿ ಈ ಸಮಸ್ಯೆ ಇದೆ.

ಇಂಥದೊಂದು ವರದಿಯನ್ನು ಆಧರಿಸಿಯೇ ಅಸ್ಸಾಮಿನ ಚಲನಚಿತ್ರ ನಿರ್ದೇಶಕ ವಿಶ್ವಜಿತ್ ಬೋರಾ ರೂಪಿಸಿದ ಸಿನಿಮಾ ‘ಬೊಂಬಾ ರೈಡ್’. ಗೋವಾದಲ್ಲಿ ನಡೆಯುತ್ತಿರುವ ಭಾರತೀಯ ಅಂತಾರಾಷ್ಟ್ರೀಯ ಉತ್ಸವ (ಇಫಿ) 52 ನೇ ಆವೃತ್ತಿಯಲ್ಲಿ ಭಾರತೀಯ ಪನೋರಮಾ ವಿಭಾಗದಲ್ಲಿ ಪ್ರದರ್ಶನಗೊಂಡ ಚಿತ್ರವಿದು.

ಆ ಊರಿನ ಶಾಲೆಗೆ ಬೊಂಬಾ (ಹಿರಣ್ಯ ಪೆಗು) ಒಬ್ಬನೇ ವಿದ್ಯಾರ್ಥಿ. ಅವನು ನಾಳೆಯಿಂದ ಶಾಲೆಗೆ ಬಾರದಿದ್ದರೆ ಶಾಲೆ ಮುಚ್ಚುತ್ತದೆ. ಶಿಕ್ಷಕರು ಬೇರೆಡೆಗೆ ವರ್ಗವಾಗುತ್ತಾರೆ. ವಿವಿಧ ಭತ್ಯಗಳೂ ಕಡಿಮೆಯಾಗಬಹುದು. ಸಂಬಳಕ್ಕೆ ಕುತ್ತೂ ಬಂದರೂ ಅಚ್ಚರಿಯಿಲ್ಲ. ಹೆಚ್ಚುವರಿ ಶಿಕ್ಷಕರೆಂದು ಪರಿಗಣಿತವಾಗಿ ಉದ್ಯೋಗ ಹೋದರೂ ಅಚ್ಚರಿ ಇಲ್ಲ. ಅಂಥದೊಂದು ಸ್ಥಿತಿಯಲ್ಲಿ ಪ್ರತಿದಿನವೂ ಬೊಂಬಾ ಮನೆಗೆ ಹೋಗಿ ಶಿಕ್ಷಕರು ಶಾಲೆಗೆ ಕರೆ ತರುತ್ತಾರೆ. ಅವನ ಮನವೊಲಿಸಿ, ಪುಸಲಾಯಿಸಿ ಕರೆ ತರುವ ಮೂಲಕ ಶಾಲೆಯನ್ನು ಉಳಿಸಿಕೊಳ್ಳುತ್ತಾರೆ.

ಈ ಹಿನ್ನೆಲೆಯಲ್ಲಿ ತಮ್ಮ ಸಂಬಳದ ಲೆಕ್ಕಾಚಾರಕ್ಕೆ ಹೆಣೆಯುವ ತಂತ್ರಗಳು, ಮಧ್ಯಾಹ್ನದ ಬಿಸಿಯೂಟದ ಲೆಕ್ಕದಲ್ಲಿ ಲಪಟಾಯಿಸುವ ಅನುದಾನ ಇತ್ಯಾದಿ ಎಲ್ಲವೂ ನಡೆಯುತ್ತದೆ. ಅದಾದ ಮೇಲೂ ಸರಕಾರ ಶಾಲೆಯನ್ನು ಮುಚ್ಚಲು ಮುಂದಾದಾಗ ತನ್ನದೇ ಆದ ಚಾಣಾಕ್ಷತನ, ಬುದ್ಧಿವಂತಿಕೆಯ ಮೂಲಕ ಬೊಂಬಾ ಶಾಲೆಯನ್ನು ಉಳಿಸಿಕೊಳ್ಳುತ್ತಾನೆ. ಯಲು ಸಹಕರಿಸುತ್ತಾನೆ. ಆ ಮೂಲಕ ಶಿಕ್ಷಣದ ಮಹತ್ವವನ್ನು ಒತ್ತಿ ಹೇಳುತ್ತದೆ ಸಿನಿಮಾ.

ವಿಶ್ವಜಿತ್ ಅವರು ಸಮಸ್ಯೆಯ ಎರಡು ಮುಖಗಳನ್ನೂ ಹೇಳುತ್ತಾ, ಮೌನವಾಗಿ ಬಿಡುವುದಿಲ್ಲ. ಪ್ರತಿ ಗ್ರಾಮೀಣ ಪ್ರದೇಶದ ಮೂಲೆ ಮೂಲೆಗೂ ಶಿಕ್ಷಣ ತಲುಪಬೇಕಿದೆ ಎಂದು ಪ್ರತಿಪಾದಿಸುತ್ತಾರೆ. ಅದರೊಂದಿಗೇ ಪ್ರಸ್ತುತ ವ್ಯವಸ್ಥೆಯಲ್ಲಿನ ಲೋಪದೋಷಗಳು, ಭ್ರಷ್ಟಾಚಾರ ಎಲ್ಲವನ್ನೂ ವಿವರಿಸುತ್ತಾರೆ. ಒಂದು ಬಗೆಯಲ್ಲಿ ಚಿಕಿತ್ಸಕ ನೆಲೆಯಲ್ಲಿ ನೋಡುತ್ತಾರೆ ಎನ್ನಬಹುದು. ವಿಡಂಬನಾತ್ಮಕವಾಗಿ ಕಥೆಯನ್ನು ಹೇಳುತ್ತಾ ಇದಕ್ಕೆ ಔಷಧ ಬೇಕಿದೆ ಎಂಬ ಆಗ್ರಹವೂ ಸಿನಿಮಾದಲ್ಲಿ ವ್ಯಕ್ತವಾಗುತ್ತದೆ. ಭ್ರಷ್ಟ ವ್ಯವಸ್ಥೆಯನ್ನು ಹೀಗಳೆಯುವಾಗ ಇಂಥ ಇಡೀ ವ್ಯವಸ್ಥೆಯೇ ಬೇಡ ಎನ್ನುವ ದನಿಯಲ್ಲೆಲ್ಲೂ ಹೊರಡಿಸುವುದಿಲ್ಲ. ಅದು ಬೊಂಬಾ ರೈಡ್ ನಲ್ಲಿ ಸ್ಪಷ್ಟವಾಗುತ್ತದೆ. ಸರಕಾರಿ ವ್ಯವಸ್ಥೆಯ ಕುರಿತು ಚಿಕಿತ್ಸಾ ನೆಲೆಯಲ್ಲಿ ನೋಡುವ ಸಿನಿಮಾ.

ವಿಶ್ವಜಿತ್‍ ಬೋರಾ ಅವರ ಮತ್ತೊಂದು ಪ್ರಯತ್ನವೆಂದರೆ, ವೃತ್ತಿಪರರಲ್ಲದ ಹೊಸ ಕಲಾವಿದರನ್ನು ಬಳಸಿಕೊಳ್ಳುವ ಮೂಲಕ ಸಿನಿಮಾಕ್ಕೆ ಸಹಜತೆ ತರುವುದು. ಅವರ ಹಿಂದಿನ ಸಿನಿಮಾ ಗಾಡ್ ಆನ್ ದಿ ಬಾಲ್ಕನಿಯಲ್ಲೂ ಆರೋಗ್ಯ ವ್ಯವಸ್ಥೆಯ ಕುರಿತು ಗಮನ ಸೆಳೆದಿದ್ದರು.

ತಮ್ಮ ಸಿನಿಮಾದ ಬಗ್ಗೆ ಮಾತನಾಡುವಾಗಲೂ ವಿಶ‍್ವಜಿತ್,’ಜಗತ್ತನ್ನು ಬದಲಾಯಿಸುವಲ್ಲಿ ಶಿಕ್ಷಣವೆಂಬುದು ಅತ್ಯಂತ ಪರಿಣಾಮಕಾರಿ ಸಾಧನ. ಆದರೆ ಇದು ಜನರಿಗೆ ಅರ್ಥವಾಗಬೇಕು. ಇಲ್ಲವಾದರೆ ಏನು ಮಾಡುವುದು?’ ಎಂದು ಪ್ರಶ್ನಿಸುತ್ತಾರೆ.

‘ಈ ನೆಲೆಯಲ್ಲೇ ಶಿಕ್ಷಣದ ವ್ಯವಸ್ಥೆಯ ಲಾಭವನ್ನು ಹೇಳಲೆಂದೇ ಈ ಸಿನಿಮಾ ಮಾಡಿರುವೆ. ಇದರೊಂದಿಗೆ ಶಿಕ್ಷಣ ವ್ಯವಸ್ಥೆಯಲ್ಲಿನ ವಿರೋಧಾಭಾಸಗಳನ್ನೂ ಕಟ್ಟಿಕೊಟ್ಟಿರುವೆ. ಈ ಸಿನಿಮಾದ ಮೂಲಕ ಶಿಕ್ಷಣ ಹೇಗೆ ಜಗತ್ತನ್ನು ಬದಲಾಯಿಸಬಲ್ಲದು ಎಂದನ್ನು ಹೇಳಿದ್ದೇನೆ. ಇದರೊಂದಿಗೇ ಗ್ರಾಮೀಣ ಶಾಲೆಗಳ ಅವ್ಯವಸ್ಥೆಯನ್ನು ವಿವರಿಸಿದ್ದೇನೆ. ಇದು ಅಸ್ಸಾಮಿನ ಗ್ರಾಮೀಣ ಶಿಕ್ಷಣ ವ್ಯವಸ್ಥೆಯೂ ಹೌದು. ಸರಕಾರ ಸಹಕಾರ ನೀಡಿದರೂ, ಜನ ಮುಂದೆ ಬಂದರೂ ಶಿಕ್ಷಕ ಸಮುದಾಯ ಅದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು’ ಎಂದರು.

ಈ ಸಿನಿಮಾ ನಿರ್ಮಾಣವಾಗಿದ್ದರ ಹಿಂದೆ 2003 ರಲ್ಲಿ ಪ್ರಕಟವಾದ ಟಿವಿ ಯ ಸುದ್ದಿಯ ತುಣುಕಿದೆ. ಇಂಥದೊಂದು ಸುದ್ದಿಯ ಎಳೆ ಸಿಕ್ಕ ಕೂಡಲೇ ನನ್ನ ಗುರು ಜಾನು ಬರುವಾರೊಂದಿಗೆ ಚರ್ಚಿಸಿದೆ. ಅವರು ಒಪ್ಪಿದರು. ಆನಂತರ ಸಿನಿಮಾ ನಿರ್ಮಾಣಕ್ಕೆ ಇಳಿದೆ. ನನ್ನ ಗೆಳೆಯರು ಕೋವಿಡ್ ಸಂದರ್ಭದಲ್ಲಿ ನೆರವಿಗೆ ಬಂದರು. ಎಲ್ಲರ ಪ್ರಯತ್ನವಾಗಿ ಸಿನಿಮಾ ಸಿದ್ಧವಾಗಿದೆ’ ಎಂದು ಹೇಳಿದರು.

ವಿಶ‍್ವಜಿತ್ ಬಸು ಹಿಂದಿ ಮತ್ತು ಅಸ್ಸಾಮಿಯಲ್ಲಿ ಸಿನಿಮಾಗಳನ್ನು ನಿರ್ದೇಶಿಸುತ್ತಿರುವವರು. ಐಸಾ ಎ ಜಹಾನ್, ಬಹ್ನಿಮಾನ್, ರಕ್ತಬೀಜ್, ಪೆಹುಜಲಿ, ಗಾಡ್ ಆನ್ ದಿ ಬಾಲ್ಕನಿ ಅವರ ಇತರೆ ಚಲನಚಿತ್ರಗಳು.

ಟಾಪ್ ನ್ಯೂಸ್

YouTuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್

You Tuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್

UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ

UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ

Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ

Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ

ಪ್ರಹ್ಲಾದ ಜೋಶಿ

Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ

Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹತ್ಯೆ…

Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…

Belagavi; It hurts a lot, I won’t be afraid even if a hundred CT Ravi comes: Lakshmi Hebbalkar

Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ

champions trophy

Cricket: ಚಾಂಪಿಯನ್ಸ್‌ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8-tudar

Movie: ತುಡರ್ ಸಿನಿಮಾ ತುಳು ಚಿತ್ರರಂಗಕ್ಕೆ ಹೊಸ ಬೆಳಕಾಗಿ ಮೂಡಿಬರಲಿ; ಗಣೇಶ್ ರಾವ್

chef chidambara kannada movie

Chef Chidambara: ಅನಿರುದ್ಧ್ ಅಡುಗೆ ಶುರು

tdy-7

Bollywood: ರಿಮೇಕ್‌ ಆಗಿ ಮತ್ತೆ ತೆರೆಗೆ ಬರಲಿದೆ 70ರ ದಶಕದ ಮೂರು ಹಿಟ್‌ ಸಿನಿಮಾಗಳು

ನಮ್ಮೊಳಗೆ ಬೆಳೆಯುವಂಥ ಪಾತ್ರಗಳು ನನಗಿಷ್ಟ : ಗ್ರೀಷ್ಮಾ ಶ್ರೀಧರ್‌

ನಮ್ಮೊಳಗೆ ಬೆಳೆಯುವಂಥ ಪಾತ್ರಗಳು ನನಗಿಷ್ಟ : ಗ್ರೀಷ್ಮಾ ಶ್ರೀಧರ್‌

ಕಾಶ್ಮೀರ್ ಫೈಲ್ಸ್ ಅಸಭ್ಯ ಚಿತ್ರ ಎಂದು ನಡಾವ್ ಗೆ ನಾಚಿಕೆಯಾಗಬೇಕು…ಇಸ್ರೇಲ್ ರಾಯಭಾರಿ ಆಕ್ರೋಶ

ಕಾಶ್ಮೀರ್ ಫೈಲ್ಸ್ ಅಸಭ್ಯ ಚಿತ್ರ ಎಂದು ನಡಾವ್ ಗೆ ನಾಚಿಕೆಯಾಗಬೇಕು…ಇಸ್ರೇಲ್ ರಾಯಭಾರಿ ಆಕ್ರೋಶ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

YouTuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್

You Tuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್

UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ

UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ

Alnavar: ಟಿಟಿ- ಕ್ಯಾಂಟರ್‌ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು

Alnavar: ಟಿಟಿ- ಕ್ಯಾಂಟರ್‌ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು

Shivanna cinema in Vallarasu director’s film

N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ

Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ

Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.