ಎಪ್ಪತ್ತರ ದಶಕ ಹಿಂದಿ ಚಿತ್ರರಂಗದ ಸುವರ್ಣ ಯುಗ: ಗೋವಾ ಚಿತ್ರೋತ್ಸವದಲ್ಲಿ ರಾಹುಲ್‌ ರವೇಲ್

Team Udayavani, Jan 19, 2021, 10:56 AM IST

ಎಪ್ಪತ್ತರ ದಶಕ ಹಿಂದಿ ಚಿತ್ರರಂಗದ ಸುವರ್ಣ ಯುಗ: ಗೋವಾ ಚಿತ್ರೋತ್ಸವದಲ್ಲಿ ರಾಹುಲ್‌ ರವಳಿ

ಪಣಜಿ: ‘ಎಪ್ಪತ್ತರ ದಶಕ ಹಿಂದಿ ಸಿನಿಮಾ ಸುವರ್ಣ ಯುಗ’

ಹೀಗಂದವರು: ಹಿಂದಿ ಚಿತ್ರ ನಿರ್ದೇಶಕ ರಾಹುಲ್‌ ರವೇಲ್

ಸಂದರ್ಭ: ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವದ ಸಂವಾದ.

ವಿಷಯ: 50, 60 ಹಾಗೂ 70 ರ ದಶಕದಲ್ಲಿ ಸಿನಿಮಾ ನಿರ್ಮಾಣ.

‘ನೀವು ಏನೇ ಹೇಳಿ, ಎಪ್ಪತ್ತರ ದಶಕ ಹಿಂದಿ ಸಿನಿಮಾದ ಸುವರ್ಣ ಯುಗ. ಆ ಸಂದರ್ಭದಲ್ಲಿ ಹೊಸ ಆಲೋಚನೆ, ಹೊಸ ಪ್ರಯೋಗಗಳು ಹಾಗೂ ಹೊಸ ಬಗೆಯ ಚಿತ್ರಗಳು ಮೂಡಿ ಬಂದವು. ವಿಶೇಷವಾಗಿ ಸಾಹಸ ಪ್ರಧಾನವಾದ ಧಾರೆ ಆರಂಭವಾಗಿದ್ದೇ ಆ ಹೊತ್ತಿನಲ್ಲಿ.

ಒಂದು ಚಿತ್ರಕ್ಕೆ ಹೊರಗೆಲ್ಲೋ ಹೋಗಿ ಠಿಕಾಣಿ ಹೂಡಿ 30, 40 ದಿನಗಳ ಚಿತ್ರೀಕರಣ ಮಾಡುವುದು ಆ ಸಂದರ್ಭದಲ್ಲಿ ಎಣಿಸಲೂ ಕಷ್ಟ. ಅವೆಲ್ಲವೂ ಸಾಧ್ಯವಾಗಿದ್ದು ಆಗಲೇ. ದೇವ್‌ ಆನಂದ್‌ ರ ಜಾನಿ ತೇರಾ ನಾಮ್‌ ಆ್ಯಕ್ಷನ್‌ ಪ್ರಧಾನವಾದ ಚಿತ್ರಗಳ ಸಾಧ್ಯತೆಯನ್ನು ಬೆಳೆಸಿತು. ಜತೆಗೆ ಹಿಂದಿ ಚಿತ್ರರಂಗವೂ ವ್ಯವಹಾರ ವಹಿವಾಟಿನಲ್ಲೂ ಬೆಳೆಯತೊಡಗಿತು. ಆ ಹೊತ್ತಿಗೆ ಅಸಾಂಪ್ರದಾಯಿಕ ನಾಯಕ (ಆಗಿನವರೆಗಿನ ನಾಯಕ ನಟನ ಬಗ್ಗೆ ಇದ್ದ ಅಭಿಪ್ರಾಯಕ್ಕಿಂತ ಭಿನ್ನವಾಗಿ) ಎನ್ನುವ ಬಗೆಯ ನಾಯಕ ನಟ ಅಮಿತಾಬ್‌ ಬಚ್ಚನ್‌ ಮೂಡಿ ಬಂದರು ಜಂಜೀರ್‌ ಮೂಲಕ. ರಾಜ್‌ ಕಪೂರ್‌ ರ ಬಾಬಿ ಹೀಗೆ ಹತ್ತಾರು ಪ್ರಯೋಗಗಳ ನಡೆದವು. ಈ ಎಲ್ಲ ಚಿತ್ರಗಳು ಚಿತ್ರರಂಗಕ್ಕೆ ಜನಪ್ರಿಯತೆ ತಂದುಕೊಟ್ಟಿತಲ್ಲದೇ, ಮೌಲ್ಯವನ್ನೂ ಹೆಚ್ಚಿಸುತ್ತಾ ಹೋಯಿತು. ಯಶ್‌ ಚೋಪ್ರಾರಂಥವರು ಹೊಸ ಸಿನಿಮಾಗಳತ್ತ ಮುಖ ಮಾಡಿದರು. ಹಾಗಾಗಿಯೇ ಎಪ್ಪತ್ತರ ದಶಕ ಸುವರ್ಣ ಯುಗ ಎಂದು ಪ್ರತಿಪಾದಿಸಿದರು ರಾಹುಲ್‌.

ಇದನ್ನೂ ಓದಿ:ಇಫಿ 2021 ಸ್ಪೆಷಲ್: ಹೊಸ ಬಗೆಯ ಚಿತ್ರೋತ್ಸವ: ಚಪ್ಪಾಳೆ‌ ತಟ್ಟಬೇಕೋ, ಬೇಡವೋ?

ಆರೋಗ್ಯಕರ ಸ್ಪರ್ಧೆ

ಆಗ ಚಿತ್ರರಂಗದಲ್ಲಿ ಇದ್ದದ್ದು ಆರೋಗ್ಯಕರ ಸ್ಪರ್ಧೆ. ಅದರಲ್ಲೂ ನಾಯಕ ನಟರ ಮಧ್ಯೆ ಯಾವುದೆ ದ್ವೇಷವಿರಲಿಲ್ಲ. ಪ್ರತಿ ನಟನೂ ಒಬ್ಬರಿಗಿಂತ ಮತ್ತೊಬ್ಬರು ತಮ್ಮ ಶಕ್ತಿ ಸಾಮರ್ಥ್ಯದಿಂದಲೇ ಬೆಳೆಯುತ್ತಿದ್ದರು. ಅದು ಆರೋಗ್ಯಕರ ಸ್ಪರ್ಧೆಗೆ ಕಾರಣವಾಗಿತ್ತು. ರಾಜ್‌ಕಪೂರ್‌, ದೇವ್‌ ಆನಂದ್‌ ಹಾಗೂ ದಿಲೀಪ್‌ ಕುಮಾರ್‌ ಅಂಥವರು ಒಟ್ಟಿಗೇ ಹೋಟೆಲ್‌ನಲ್ಲಿ ಕುಳಿತು ಪರಸ್ಪರ ಮಾತನಾಡುತ್ತಿದ್ದರು ಎನ್ನುವುದೇ ಇಂದಿನ ಹೊತ್ತಿನಲ್ಲಿ ಅಚ್ಚರಿ ಎಂದರು ರಾಹುಲ್‌ ರವೇಲ್.

ಚಿತ್ರರಸಿಕರ ಬೆಂಬಲ ಹೊಸ ಪ್ರಯೋಗಗಳಿಗೆ ಇದ್ದದ್ದು ಸುಳ್ಳಲ್ಲ. ‘ಏಕ್‌ ದುಜೆ ಕೇ ಲಿಯೆ’ ಎನ್ನುವ ಸಿನಿಮಾದಲ್ಲಿ ನಾಯಕನಿಗೆ ತಮಿಳು ಬಿಟ್ಟರೆ ಹಿಂದಿ ಬರುವುದಿಲ್ಲ, ನಾಯಕಿಗೆ ಹಿಂದಿ ಬಿಟ್ಟರೆ ತಮಿಳು ಬರೋದಿಲ್ಲ. ಆ ಸಂಯೋಜನೆಯೇ ಹೊಸತೆನಿಸಿತು. ಜನರು ಸ್ವೀಕರಿಸಿದರು. ನನ್ನ ಗುರು ರಾಜ್‌ ಕಪೂರ್ ಪ್ರತಿಪಾದಿಸಿದಂತೆ, ಒಂದು ಅತ್ಯಂತ ಒಳ್ಳೆಯ ಚಿತ್ರಕಥೆ ಮಾತ್ರ ಚಿತ್ರವನ್ನು ಯಶಸ್ಸಿಗೆ ತುದಿಗೆ ಕೊಂಡೊಯ್ಯಬಲ್ಲದು ನನ್ನ ನಂಬಿಕೆ. ಅದು ಇಂದಿಗೂ ಪ್ರಸ್ತುತ ಎಂದು ವಿಶ್ಲೇಷಿಸಿದರು ರಾಹುಲ್. ಕೊರೊನಾ ಹಿನ್ನೆಲೆಯಲ್ಲಿ ಸಂವಾದಗಳು ವರ್ಚುಯಲ್‌ ರೂಪದಲ್ಲಿ ನಡೆಯುತ್ತಿವೆ.

ಟಾಪ್ ನ್ಯೂಸ್

10

Mangaluru: ಗುತ್ತಿಗೆದಾರ ಸಚಿನ್‌ ಪ್ರಕರಣ; ಪ್ರಿಯಾಂಕ್‌ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

ಅಪರಿಚಿತ ವಾಹನ ಡಿಕ್ಕಿ : ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8-tudar

Movie: ತುಡರ್ ಸಿನಿಮಾ ತುಳು ಚಿತ್ರರಂಗಕ್ಕೆ ಹೊಸ ಬೆಳಕಾಗಿ ಮೂಡಿಬರಲಿ; ಗಣೇಶ್ ರಾವ್

chef chidambara kannada movie

Chef Chidambara: ಅನಿರುದ್ಧ್ ಅಡುಗೆ ಶುರು

tdy-7

Bollywood: ರಿಮೇಕ್‌ ಆಗಿ ಮತ್ತೆ ತೆರೆಗೆ ಬರಲಿದೆ 70ರ ದಶಕದ ಮೂರು ಹಿಟ್‌ ಸಿನಿಮಾಗಳು

ನಮ್ಮೊಳಗೆ ಬೆಳೆಯುವಂಥ ಪಾತ್ರಗಳು ನನಗಿಷ್ಟ : ಗ್ರೀಷ್ಮಾ ಶ್ರೀಧರ್‌

ನಮ್ಮೊಳಗೆ ಬೆಳೆಯುವಂಥ ಪಾತ್ರಗಳು ನನಗಿಷ್ಟ : ಗ್ರೀಷ್ಮಾ ಶ್ರೀಧರ್‌

ಕಾಶ್ಮೀರ್ ಫೈಲ್ಸ್ ಅಸಭ್ಯ ಚಿತ್ರ ಎಂದು ನಡಾವ್ ಗೆ ನಾಚಿಕೆಯಾಗಬೇಕು…ಇಸ್ರೇಲ್ ರಾಯಭಾರಿ ಆಕ್ರೋಶ

ಕಾಶ್ಮೀರ್ ಫೈಲ್ಸ್ ಅಸಭ್ಯ ಚಿತ್ರ ಎಂದು ನಡಾವ್ ಗೆ ನಾಚಿಕೆಯಾಗಬೇಕು…ಇಸ್ರೇಲ್ ರಾಯಭಾರಿ ಆಕ್ರೋಶ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

accident

Udupi: ಸ್ಕೂಟರಿಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ

10

Mangaluru: ಗುತ್ತಿಗೆದಾರ ಸಚಿನ್‌ ಪ್ರಕರಣ; ಪ್ರಿಯಾಂಕ್‌ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

ಅಪರಿಚಿತ ವಾಹನ ಡಿಕ್ಕಿ : ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.