ಗೋವಾ ಚಿತ್ರೋತ್ಸವಕ್ಕೆ ತೆರೆ: ಇನ್‌ ಟು ದಿ ಡಾರ್ಕ್‌ನೆಸ್‌ ಚಿತ್ರಕ್ಕೆ ಪ್ರಶಸ್ತಿ


Team Udayavani, Jan 24, 2021, 8:29 PM IST

goa

ಪಣಜಿ: ಕೋವಿಡ್ ಹಿನ್ನೆಲೆಯಲ್ಲೂ ಸಂಘಟಿಸಲಾಗಿದ್ದ 51ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ (ಇಫಿ) ರವಿವಾರ ಸಂಭ್ರಮದ ತೆರೆ ಬಿದ್ದಿತು.

ಜನವರಿ 16 ರಿಂದ 24 ರವರೆಗೆ ನಡೆದ ಚಿತ್ರೋತ್ಸವ ವರ್ಚುಯಲ್‌ ಅಥವಾ ಫಿಸಿಕಲ್‌ ಎನ್ನುವ ದ್ವಂದ್ವದಲ್ಲಿ ಸಿಲುಕಿದ್ದು ನಿಜ. ಇದರ ಮಧ್ಯೆಯೂ 60 ಕ್ಕೂ ಹೆಚ್ಚು ದೇಶಗಳ 225ಕ್ಕೂ ಹೆಚ್ಚು ಚಲನಚಿತ್ರಗಳು ವಿವಿಧ ವಿಭಾಗಗಳಲ್ಲಿ ಪ್ರದರ್ಶಿತವಾದವು.

ಇನ್‌ ಟು ದಿ ಡಾರ್ಕ್‌ನೆಸ್‌ ಅತ್ಯುತ್ತಮ ಚಿತ್ರ

ಪ್ರತಿ ವರ್ಷ ಅತ್ಯುತ್ತಮ ಚಿತ್ರಕ್ಕೆ ನೀಡುವ ಗೋಲ್ಡನ್‌ ಪೀಕಾಕ್‌ ಪ್ರಶಸ್ತಿ -ಪಾರಿತೋಷಕ ಈ ಬಾರಿ ಡೆನ್ಮಾರ್ಕ್‌ನ ಆ್ಯಂಡ್ರಸ್‌ ರೆಫ್ನ್ ನಿರ್ದೇಶನದ ಡ್ಯಾನಿಷ್‌ ಭಾಷೆಯ “ಇನ್‌ ಟು ದಿ ಡಾರ್ಕ್‌ನೆಸ್‌” (ಇಂಗ್ಲಿಷ್‌ ಟೈಟಲ್‌) ನ ಪಾಲಾಯಿತು. 40 ಲಕ್ಷ ರೂ. ನಿರ್ದೇಶಕ ಹಾಗೂ ನಿರ್ಮಾಪಕ ಇಬ್ಬರಿಗೂ ಈ ಪ್ರಶಸ್ತಿ ನೀಡಲಾಗುತ್ತದೆ.

ಅತ್ಯುತ್ತಮ ನಿರ್ದೇಶನ-ನಿರ್ದೇಶಕನಿಗೆ ನೀಡಲಾಗುವ ಸಿಲ್ವರ್‌ ಪೀಕಾಕ್‌ ಪ್ರಶಸ್ತಿ-ಪಾರಿತೋಷಕವು ತೈವಾನಿನ ನಿರ್ದೇಶಕ ಚೆನ್‌ ನಿನ ಕೊ ಅವರಿಗೆ ನೀಡಿ ಗೌರವಿಸಲಾಯಿತು. ಅವರ ದಿ ಸೈಲೆಂಟ್‌ ಫಾರೆಸ್ಟ್‌ ಚಿತ್ರದ ನಿರ್ದೇಶನಕ್ಕೆ ಈ ಗೌರವ ಸಂದಿದೆ. ಅತ್ಯುತ್ತಮ ನಟನೆಗೆ ನೀಡಲಾಗುವ ಸಿಲ್ವರ್‌ ಪೀಕಾಕ್‌ ಪ್ರಶಸ್ತಿ ದಿ ಸೈಲೆಂಟ್‌ ಫಾರೆಸ್ಟ್‌ನಲ್ಲಿ ಅಭಿನಯಿಸಿರುವ ತೈವಾನಿನ ನಟ ತ್ಸು ಚುಯಾನ್‌ ಲಿ ಗೆ ಸಂದಾಯವಾದರೆ, ಅತ್ಯುತ್ತಮ ನಟಿ ಪ್ರಶಸ್ತಿ ಪೋಲಿಷ್‌ ಭಾಷೆಯ ‘ಐ ನೆವರ್‌ ಕ್ರೈ’ ಚಿತ್ರದ ನಟನೆಗಾಗಿ ಝೋಪಿಯಾ ಸ್ಟಫೇಜ್‌ರ ಪಾಲಾಯಿತು. ತೀರ್ಪುಗಾರರ ವಿಶೇಷ ಪ್ರಶಸ್ತಿಗೆ ಬಲ್ಗೇರಿಯನ್‌ ನಿರ್ದೇಶಕ ಕಮಿನ್‌ ಕಲೇ ಅವರ ಫೆಬ್ರವರಿ ಚಲನಚಿತ್ರ ಪಾತ್ರವಾಯಿತು. ಮತ್ತೊಂದು ವಿಶೇಷ ಪ್ರಶಸ್ತಿಗೆ ಅಸ್ಸಾಮಿ ನಿರ್ದೇಶಕರಾದ ಕೃಪಾಲ್‌ ಕಲಿತಾ ರ “ಬ್ರಿಡ್ಜ್” ಸಿನಿಮಾ ಆಯ್ಕೆಯಾಯಿತು. ಚೊಚ್ಚಲ ಸಿನಿಮಾಕ್ಕೆ ನೀಡಲಾಗುವ ಉದಯೋನ್ಮುಖ ನಿರ್ದೇಶಕ ಪ್ರಶಸ್ತಿಯನ್ನು ಬ್ರೆಜಿಲಿಯನ್‌ನ ಕಸಿಯೋ ಪೆರೇರಾ ತಮ್ಮ ಪೋರ್ಚುಗೀಸ್‌ ಭಾಷೆಯ ವೆಲೆಂಟಿನಾ ಚಿತ್ರಕ್ಕೆ ಪಡೆದರು. ಇದರೊಂದಿಗೆ ಐಸಿಎಫ್ ಟಿ ಯುನೆಸ್ಕೊ ಗಾಂಧಿ ಪ್ರಶಸ್ತಿಗೆ ಪ್ಯಾಲೇಸ್ತಿಯನ್‌ನ ಅರೇಬಿಕ್‌ ಭಾಷೆಯ ಚಿತ್ರ 200 ಮೀಟರ್ ನ್ನು ಆಯ್ಕೆ ಮಾಡಲಾಗಿದೆ.

ಬಿಶ್ವಜಿತ್‌ ಚಟರ್ಜಿಗೆ ಸನ್ಮಾನ

ಇದೇ ಸಂದರ್ಭದಲ್ಲಿ ಹಿಂದಿ ಮತ್ತು ಬಂಗಾಳಿಯ ನಿರ್ದೇಶಕ ಮತ್ತು ನಟ ಬಿಶ್ವಜಿತ್‌ ಚಟರ್ಜಿಗೆ  ವ್ಯಕ್ತಿ ಸಾಧನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜತೆಗೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಹಿಂದಿಯ ಹಿರಿಯ ನಟಿ ಜೀನತ್‌ ಅಮಾನ್‌ರನ್ನೂ ಗೌರವಿಸಲಾಯಿತು.

ಸಿನಿಮೋತ್ಸವ-ಒಂದು ಸುತ್ತು

ಈ ವರ್ಷ ಉದ್ಘಾಟನಾ ಚಿತ್ರ ಡ್ಯಾನಿಷ್‌ ಭಾಷೆಯ ಅನದರ್‌ ರೌಂಡ್‌. ಮಿಡ್‌ ಫೆ‌ಸ್ಟ್‌ ಚಿತ್ರ ಸಂದೀಪ್‌ ಕುಮಾರ್‌ರ ಮೆಹರುನ್ನೀಸಾ. ಸಮಾರೋಪ ಚಿತ್ರ ಜಪಾನಿನ ವೈಫ್ ಆಫ್ ಎ ಸ್ಪೈ ಪ್ರದರ್ಶಿತವಾದವು.

ಅಂತಾರಾಷ್ಟ್ರೀಯ ಸಿನಿಮಾ ವಿಭಾಗದ ಸ್ಪರ್ಧೆಗೆ 15 ಚಿತ್ರಗಳು ಬಂದಿದ್ದವು. ಈ ಪೈಕಿ ಮೂರು ಚಿತ್ರಗಳು ಭಾರತೀಯ ನಿರ್ದೇಶಕರದ್ದಾಗಿದ್ದವು. ವಿವಿಧ ಉತ್ಸವಗಳಲ್ಲಿ ಪ್ರಶಸ್ತಿ ಪಡೆದ 12 ಚಲನಚಿತ್ರಗಳು ಫೆಸ್ಟಿವಲ್‌ ಕೆಲೆಡೊಸ್ಕೋಪ್‌ ವಿಭಾಗದಲ್ಲಿ ಪ್ರದರ್ಶಿತವಾದರೆ, ವಿಶ್ವ ಚಿತ್ರಗಳ ವಿಭಾಗದಲ್ಲಿ 48 ಚಲನಚಿತ್ರಗಳು ಪ್ರದರ್ಶಿತವಾದವು. ಇದರಲ್ಲಿ 21 ಏಷ್ಯಾ ಪ್ರೀಮಿಯರ್‌, 16 ಭಾರತೀಯ ಪ್ರೀಮಿಯರ್‌ ಹಾಗೂ 8 ವಿಶ್ವ ಪ್ರೀಮಿಯರ್‌ ಚಿತ್ರಗಳಿದ್ದದ್ದು ವಿಶೇಷ. ಚೊಚ್ಚಲ ಚಿತ್ರಗಳ ವಿಭಾಗದಲ್ಲಿ ಇಬ್ಬರು ಭಾರತೀಯ ನಿರ್ದೇಶಕರ ಸಿನಿಮಾವನ್ನೂ ಸೇರಿದಂತೆ 7 ಸಿನಿಮಾಗಳನ್ನು ಪ್ರದರ್ಶಿಸಲಾಯಿತು ಎಂದಿದೆ ಇಫಿ ಉತ್ಸವ ಸಮಿತಿ. ಐಸಿಎಫ್ ಟಿ -ಯುನೆಸ್ಕೊ ಗಾಂಧಿ ಪಾರಿತೋಷಕ ಸ್ಪರ್ಧೆಗೆ ಈ ಬಾರಿ ಬಂದ ಚಲನಚಿತ್ರಗಳ ಸಂಖ್ಯೆ 10.

ಇಟಲಿಯ ಸಿನೆ ಛಾಯಾಗ್ರಾಹಕ ವಿಟೋರಿಯೊ ಸ್ಟೊರಾರೊ ಗೆ ಜೀವಿತಾವಧಿ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಉಳಿದಂತೆ ಎನ್‌ಎಫ್ ಟಿಸಿ ಯ ಫಿಲ್ಮ್ ಬಜಾರ್‌ ಸಂಪೂರ್ಣವಾಗಿ ಹೈಬ್ರಿಡ್‌ ರೂಪದಲ್ಲಿ ನಡೆದಿದ್ದು ವರ್ಚುಯಲ್‌ ನೆಲೆಯಲ್ಲೂ ನಡೆಸಲಾಯಿತು. ಪುನರಾವಲೋಕನ ವಿಭಾಗದಲ್ಲಿ ನಿರ್ದೇಶಕ ಸತ್ಯಜಿತ್‌ ರೇ ಅವರ ಚಲನಚಿತ್ರಗಳು ಪ್ರದರ್ಶಿತವಾದರೆ, ಕಳೆದ ವರ್ಷ ನಮ್ಮನ್ನು ಅಗಲಿದ ರಿಷಿ ಕಪೂರ್‌, ಸೌಮಿತ್ರ ಚಟರ್ಜಿ, ಡಾ. ಎಸ್‌.ಪಿ. ಬಾಲಸುಬ್ರಹ್ಮಣ್ಯಂ, ಇರ್ಫಾನ್‌ ಖಾನ್‌, ಸುಶಾಂತ್‌ ಸಿಂಗ್‌ ರಜಪೂತ್‌, ಬಸು ಚಟರ್ಜಿಯವರೂ ಸೇರಿದಂತೆ 18 ಮಂದಿ ಸಿನಿ ಸಾಧಕರನ್ನು ಸ್ಮರಿಸಲಾಯಿತು. ಭಾರತೀಯ ಸಿನಿಮಾ ರಂಗದ ದಿಗ್ಗಜ ದಾದಾಸಾಹೇಬ್‌ ಫಾಲ್ಕೆಯ ಅವರ 150 ನೇ ಜಯಂತಿಯ ನೆನಪಿಗೆ ಅವರು ರೂಪಿಸಿದ ನಾಲ್ಕು ಚಿತ್ರಗಳನ್ನು ಪ್ರದರ್ಶಿಸಲಾಯಿತು.

ಹೊಸ ಪ್ರಯೋಗ ಒಳ್ಳೆಯ ಪ್ರತಿಕ್ರಿಯೆ

ಇಫಿಯ ಹೊಸ ಪ್ರಯೋಗಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ ಗೋವಾದ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌, ಗೋವಾ ಚಿತ್ರರಂಗದ ಚಟುವಟಿಕೆಗಳಿಗೆ ಹೇಳಿ ಮಾಡಿಸಿದ ತಾಣ. ಚಿತ್ರರಂಗಕ್ಕೆ ಬೇಕಾದ ಎಲ್ಲ ಸೌಕರ್ಯಗಳನ್ನು ಒದಗಿಸುವುದಾಗಿ ಭರವಸೆ ನೀಡಿದರು.

ಸಮಾರಂಭದಲ್ಲಿ ಮಹಾರಾಷ್ಟ್ರದ ರಾಜ್ಯಪಾಲರಾದ ಭಗತ್‌ ಸಿಂಗ್‌ ಕೋಶ್ವಾರಿ, ಕೇಂದ್ರ ಪರಿಸರ, ಅರಣ್ಯ ರಾಜ್ಯ ಸಚಿವ ಬಾಬುಲ್‌ ಸುಪ್ರಿಯೊ, ನಟ ಹಾಗೂ ಸಂಸದ ರವಿ ಕಿಷನ್‌, ವಾರ್ತಾ ಮತ್ತು ಪ್ರಚಾರ ಇಲಾಖೆ ಕಾರ್ಯದರ್ಶಿ ಅಮಿತ್‌ ಖಾರೆ, ಉತ್ಸವ ನಿರ್ದೇಶಕ ಚೈತನ್ಯ ಪ್ರಸಾದ್‌ ಉಪಸ್ಥಿತರಿದ್ದರು.

ಈ ಬಾರಿ ಚಿತ್ರೋತ್ಸವ ಹೈಬ್ರಿಡ್‌ ರೂಪದಲ್ಲಿ ನಡೆದಿದ್ದು ವರ್ಚುಯಲ್‌ ಹಾಗೂ ಸಾಂಪ್ರದಾಯಿಕ ವಿಧಾನದಲ್ಲೂ ನಡೆದಿತ್ತು. ವರ್ಚುಯಲ್‌ ವಿಧಾನದಲ್ಲೂ ಹಲವು ಸಿನೆ ರಸಿಕರು ಸಿನಿಮಾಗಳು, ಸಂವಾದ, ಚರ್ಚೆಯನ್ನು ವೀಕ್ಷಿಸಿದರು.

 

ಟಾಪ್ ನ್ಯೂಸ್

Bhairathi Ranagal Trailer: ʼರೋಣಪುರʼದ ರಣ ಬೇಟೆಗಾರ ಈ ʼಭೈರತಿ ರಣಗಲ್ʼ; ಟ್ರೇಲರ್‌ ಔಟ್

Bhairathi Ranagal Trailer: ʼರೋಣಪುರʼದ ರಣ ಬೇಟೆಗಾರ ಈ ʼಭೈರತಿ ರಣಗಲ್ʼ; ಟ್ರೇಲರ್‌ ಔಟ್

ADGP V/s HDK: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಎಫ್‌ ಐಆರ್‌ ದಾಖಲು-HDK ಎ1

ADGP V/s HDK: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಎಫ್‌ ಐಆರ್‌ ದಾಖಲು-HDK ಎ1

Belagavi: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಮುಗಿದ ಅಧ್ಯಾಯ: ಸಚಿವ ಎಚ್.ಕೆ. ಪಾಟೀಲ್

Belagavi: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಮುಗಿದ ಅಧ್ಯಾಯ: ಸಚಿವ ಎಚ್.ಕೆ. ಪಾಟೀಲ್

MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್

MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್

Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ

MUDA Case: ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ ಸಿದ್ದರಾಮಯ್ಯ

MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ

Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ  ಪ್ರತಿಭಟನೆ

Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8-tudar

Movie: ತುಡರ್ ಸಿನಿಮಾ ತುಳು ಚಿತ್ರರಂಗಕ್ಕೆ ಹೊಸ ಬೆಳಕಾಗಿ ಮೂಡಿಬರಲಿ; ಗಣೇಶ್ ರಾವ್

chef chidambara kannada movie

Chef Chidambara: ಅನಿರುದ್ಧ್ ಅಡುಗೆ ಶುರು

tdy-7

Bollywood: ರಿಮೇಕ್‌ ಆಗಿ ಮತ್ತೆ ತೆರೆಗೆ ಬರಲಿದೆ 70ರ ದಶಕದ ಮೂರು ಹಿಟ್‌ ಸಿನಿಮಾಗಳು

ನಮ್ಮೊಳಗೆ ಬೆಳೆಯುವಂಥ ಪಾತ್ರಗಳು ನನಗಿಷ್ಟ : ಗ್ರೀಷ್ಮಾ ಶ್ರೀಧರ್‌

ನಮ್ಮೊಳಗೆ ಬೆಳೆಯುವಂಥ ಪಾತ್ರಗಳು ನನಗಿಷ್ಟ : ಗ್ರೀಷ್ಮಾ ಶ್ರೀಧರ್‌

ಕಾಶ್ಮೀರ್ ಫೈಲ್ಸ್ ಅಸಭ್ಯ ಚಿತ್ರ ಎಂದು ನಡಾವ್ ಗೆ ನಾಚಿಕೆಯಾಗಬೇಕು…ಇಸ್ರೇಲ್ ರಾಯಭಾರಿ ಆಕ್ರೋಶ

ಕಾಶ್ಮೀರ್ ಫೈಲ್ಸ್ ಅಸಭ್ಯ ಚಿತ್ರ ಎಂದು ನಡಾವ್ ಗೆ ನಾಚಿಕೆಯಾಗಬೇಕು…ಇಸ್ರೇಲ್ ರಾಯಭಾರಿ ಆಕ್ರೋಶ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

6

Director Guruprasad: ಗುರುಪ್ರಸಾದ್‌ಗೆ ಸಾಲ ಕೊಟ್ಟವರ ತನಿಖೆಗೆ ಸಿದ್ಧತೆ

5

Drunk & Drive Case: ಅತಿ ವೇಗದ ಚಾಲನೆ: 522 ಕೇಸ್‌, 1.29 ಲಕ್ಷ ದಂಡ

Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ

Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ

Sandalwood: ಕರಾವಳಿ ಸಂಸ್ಕೃತಿ ಸುತ್ತ ದಿಂಸೋಲ್‌

Sandalwood: ಕರಾವಳಿ ಸಂಸ್ಕೃತಿ ಸುತ್ತ ದಿಂಸೋಲ್‌

2(1)

Puttur: ವಿದ್ಯುತ್‌ ಕಂಬ ಏರುವ ತರಬೇತಿ!; ಪವರ್‌ಮನ್‌ ಉದ್ಯೋಗಕ್ಕೆ ಸ್ಥಳೀಯರಿಗೆ ಪ್ರೋತ್ಸಾಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.