ನ.20ರಿಂದ 28: ಅಂತಾರಾಷ್ಟ್ರೀಯ ಚಿತ್ರೋತ್ಸವ; ಈ ವಿಭಾಗದ ಸಿನಿಮಾ ತಪ್ಪದೇ ವೀಕ್ಷಿಸಿ…
Team Udayavani, Nov 16, 2022, 7:13 PM IST
ಪಣಜಿ: ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವವಷ್ಟೇ ಅಲ್ಲ. ಎಲ್ಲ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ತಪ್ಪದೇ ನೋಡಬೇಕಾದ ವಿಭಾಗಗಳಲ್ಲಿ ಬಹಳ ಪ್ರಮುಖವಾದುದು ಪ್ರಶಸ್ತಿ ಪಾರಿತೋಷಕಕ್ಕಾಗಿ ಸೆಣಸುವ ಚಿತ್ರಗಳ ವಿಭಾಗ ’ಅಂತಾರಾಷ್ಟ್ರೀಯ ಸಿನಿಮಾ ವಿಭಾಗ’ (ಐಸಿ).
ನವೆಂಬರ್ 20 ರಿಂದ 28 ರವರೆಗೆ ಗೋವಾದಲ್ಲಿ ನಡೆಯುವ ಇಫಿ ಚಿತ್ರೋತ್ಸವದಲ್ಲೂ ಈ ವಿಭಾಗವನ್ನು ತಪ್ಪಿಸಿಕೊಳ್ಳಬಾರದು. ಒಂದುವೇಳೆ ಯಾವುದಾದರೂ ಬೇರೆ ವಿಭಾಗದಲ್ಲಿ ಪ್ರಮುಖ ಸಿನಿಮಾಗಳು ಇದ್ದಾಗ, ಈ ವಿಭಾಗದಲ್ಲಿರುವ ಪ್ರಮುಖ ದೇಶಗಳ ಸಿನಿಮಾಗಳನ್ನು ಹೇಗಾದರೂ ಘಮೊದಲನೇ ಬಾರಿ ಆಗದಿದ್ದರೆ, ಪುನರಾವರ್ತನೆಯಾಗುವ ಸಂದರ್ಭದಲ್ಲಿ ಹೊಂದಿಸಿಕೊಂಡು ನೋಡುವುದು ಮುಖ್ಯ.
ಪ್ರತಿ ಬಾರಿ ಸುಮಾರು 15 ಸಿನಿಮಾಗಳು ಈ ವಿಭಾಗದಲ್ಲಿ ಪ್ರದರ್ಶಿತವಾಗುತ್ತವೆ. ಪ್ರಮುಖ ದೇಶಗಳ ಹಾಗೂ ವಿವಿಧ ಚಿತ್ರೋತ್ಸವಗಳಲ್ಲಿ ಪ್ರಶಸ್ತಿಗೆ ಸೆಣಸಿದ, ಸದ್ದು ಮಾಡಿದ ಚಲನಚಿತ್ರಗಳೂ ಇರುತ್ತವೆ. ಇವೆಲ್ಲವೂ ಇತ್ತೀಚಿನ ಘಒಂದು ವರ್ಷದೊಳಗಿನ ಚಲನಚಿತ್ರಗಳೂ ಆಗಿರುತ್ತವೆ. ಇವುಗಳನ್ನು ವೀಕ್ಷಿಸಿದರೆ ಜಗತ್ತಿನ ಸಿನಿಮಾ ಟ್ರೆಂಡ್ ಬಗ್ಗೆಯೂ ಮಾಹಿತಿ ಲಭ್ಯವಾಗಬಹುದು.
ಅದೇ ರೀತಿ 53 ನೇ ಇಫಿ ಚಿತ್ರೋತ್ಸವದಲ್ಲಿ 15 ಚಿತ್ರಗಳು ಪ್ರಶಸ್ತಿಗೆ ಸೆಣಸುತ್ತಿವೆ. ಇವುಗಳ ಪೈಕಿ ಮೂರು ಭಾರತೀಯ ಚಲನಚಿತ್ರಗಳೂ ಸೇರಿರುವುದು ವಿಶೇಷ.
ವಿವೇಕ್ ಅಗ್ನಿಹೋತ್ರಿಯವರ ‘ದಿ ಕಾಶ್ಮೀರ್ ಫೈಲ್ಸ್’, ಕಮಲ್ ಕಣ್ಣನ್ ಅವರ ತಮಿಳು ಚಿತ್ರ ‘ಕುರಂಗು ಪೆಡಲ್’ಹಾಗೂ ಅನಂತ ಮಹಾದೇವನ್ ಅವರ ‘ದಿ ಸ್ಟೋರಿ ಟೆಲ್ಲರ್’ಪ್ರಶಸ್ತಿಗೆ ಸೆಣಸುತ್ತಿವೆ.
ಉಳಿದಂತೆ ಪೊಲೀಷ್ ಸಿನಿಮಾ ನಿರ್ದೇಶಕ ಝಾನುಸಿಯವರ (Krzysztof Zanussi) ‘ಪರ್ಫೆಕ್ಟ್ ನಂಬರ್’, ಮೆಕ್ಸಿಕಾದ ಸಿನಿಮಾ ನಿರ್ದೇಶಕ ಕರ್ಲೋಸ್ ರ [Carlos Eichelmann Kaiser] ‘ರೆಡ್ ಶೂಸ್’, ಇರಾನಿನ ಹೊಸ ಅಲೆ ಸಿನಿಮಾದ ಪ್ರಮುಖ ನಿರ್ದೇಶಕ ದರಿಯುಸ್ ಮೆಹ್ರುಜಿ [Dariush Mehrjui] ಯವರ ‘ಎ ಮೈನರ್’, ಇರಾನಿನ ಮತ್ತೊಂದು ಚಿತ್ರ ನದೀರ್ [Nader Saeivar] ಅವರ ‘ನೋ ಎಂಡ್’, ಪ್ಯಾಲೆಸ್ತೀಯನ್ ಇಸ್ರೇಲಿ ನಿರ್ದೇಶಕ ಹಜ್ ಅವರ [Maha Haj’s] ‘ಮೆಡಿಟೇರಿಯನ್ ಫೀವರ್’, ಫಿಲಿಫೀನ್ಸ್ ನ ನಿರ್ದೇಶಕ ಲಾವ್ ರ [Lav Diaz]] ‘ವೆನ್ ದಿ ವೇವ್ಸ್ ಆರ್ ಗಾನ್’, ಕೋಸ್ಟರಿಕಾದ ನಿರ್ದೇಶಕ ವ್ಯಾಲೆಂಟಿನಾರ [Valentina Maurel] ‘ಹ್ಯಾವ್ ಎಲೆಕ್ಟ್ರಿಕ್ ಡ್ರೀಮ್ಸ್’, ಅಜೇರ್ ಬೈಜನ್ ಸಿನಿಮಾ ನಿರ್ದೇಶಕ ಆಸಿಫ್ ರ [Asif Rustamov] ‘ಕೋಲ್ಡ್ ಆ್ಯಸ್ ಮಾರ್ಬಲ್’, ಬರ್ಲಿನ್ ಸಿನಿಮೋತ್ಸವದಲ್ಲಿ ಪ್ರಶಸ್ತಿಗೆ ಸೆಣಸಿದ ಉರ್ಸುಲ್ ಅವರ [Ursula Meier] ‘ದಿ ಲೈನ್’, ಕೈರೋ ಸಿನಿಮೋತ್ಸವದಲ್ಲಿ ಪ್ರದರ್ಶನ ಕಂಡ ಅರ್ಜೆಂಟೀನಾದ ನಿರ್ದೇಶಕ ರೊಡ್ರಿಗೊ [Rodrigo Guerrero] ಅವರ ‘ಸೆವೆನ್ ಡಾಗ್ಸ್’, ಶ್ರೀಲಂಕಾದ ನಿರ್ದೇಶಕ ಅರುಣ್ ಜಯವರ್ಧನೆಯವರ ‘ಮಾರಿಯಾ: ದಿ ಓಷಿಯನ್ ಏಂಜೆಲ್’ ಹಾಗೂ ಸೌದದ್ ಕಾದನ್ [Soudade Kaadan] ಅವರ ನೇಜೋಘ [Nezouh] ಚಲನಚಿತ್ರಗಳು ಪ್ರಶಸ್ತಿಗೆ ಸೆಣಸುತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Movie: ತುಡರ್ ಸಿನಿಮಾ ತುಳು ಚಿತ್ರರಂಗಕ್ಕೆ ಹೊಸ ಬೆಳಕಾಗಿ ಮೂಡಿಬರಲಿ; ಗಣೇಶ್ ರಾವ್
Chef Chidambara: ಅನಿರುದ್ಧ್ ಅಡುಗೆ ಶುರು
Bollywood: ರಿಮೇಕ್ ಆಗಿ ಮತ್ತೆ ತೆರೆಗೆ ಬರಲಿದೆ 70ರ ದಶಕದ ಮೂರು ಹಿಟ್ ಸಿನಿಮಾಗಳು
ನಮ್ಮೊಳಗೆ ಬೆಳೆಯುವಂಥ ಪಾತ್ರಗಳು ನನಗಿಷ್ಟ : ಗ್ರೀಷ್ಮಾ ಶ್ರೀಧರ್
ಕಾಶ್ಮೀರ್ ಫೈಲ್ಸ್ ಅಸಭ್ಯ ಚಿತ್ರ ಎಂದು ನಡಾವ್ ಗೆ ನಾಚಿಕೆಯಾಗಬೇಕು…ಇಸ್ರೇಲ್ ರಾಯಭಾರಿ ಆಕ್ರೋಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!
Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ
Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ
Kundapura: “ಅವರು ಪ್ರತೀ ದಿನ ಫೋನ್ ಮಾಡುತ್ತಿದ್ದರು… ಅಂದು ನನ್ನ ಕರೆಗೆ ಉತ್ತರಿಸಲಿಲ್ಲ’
Pushpa 2film : 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.