‘ದಿ ಸ್ಟೋರಿ ಟೆಲ್ಲರ್’ : ಸತ್ಯಜಿತ್ ರೇ ಅವರಿಗೆ ಸಲ್ಲಿಸಿದ ಕಾಣಿಕೆ
Team Udayavani, Nov 23, 2022, 9:53 AM IST
ಪಣಜಿ: ‘ದಿ ಸ್ಟೋರಿ ಟೆಲ್ಲರ್ ಮೇರು ಚಿತ್ರ ನಿರ್ದೇಶಕ ಸತ್ಯಜಿತ್ ರೇಗೆ ಸಲ್ಲಿಸಿರುವ ಗೌರವವಲ್ಲದೇ ಮತ್ತೇನೂ ಅಲ್ಲ’.
ಇಫಿ ಚಿತ್ರೋತ್ಸವದಲ್ಲಿ ಅಂತಾರಾಷ್ಟ್ರೀಯ ಸಿನಿಮಾ ಸ್ಪರ್ಧೆಯಲ್ಲಿ ಪ್ರಶಸ್ತಿಗೆ ಸೆಣಸುತ್ತಿರುವ ಅನಂತ್ ನಾರಾಯಣ್ ಮಹಾದೇವನ್ ಅವರ ’ದಿ ಸ್ಟೋರಿ ಟೆಲ್ಲರ್’ ಚಿತ್ರದ ಪ್ರಧಾನ ಪಾತ್ರ ನಿರ್ವಹಿಸಿರುವ ಅದಿಲ್ ಹುಸೇನ್ ಹೇಳಿದ ಮಾತಿದು.
ಕಲಾವಿದನಾಗಿ ನಾನು ಹೇಳುವುದಾದರೆ, ಕಲೆ ಎಲ್ಲದರಿಂದಲೂ ಮುಕ್ತ ಹಾಗು ಸ್ವತಂತ್ರವಾಗಿರಬೇಕು. ಆದರೆ ಇಂದಿನ ಸಂದರ್ಭದಲ್ಲಿ ಎಷ್ಟೊಂದು ವಾಣಿಜ್ಯ ಸಂಗತಿಗಳು ಸಿನಿಮಾ ನಿರ್ಮಾಣದಂಥ ಪ್ರಕ್ರಿಯೆಯಲ್ಲಿ ಒಳಗೊಂಡಿಯೆಂದರೆ, ಯಾವುದೂ ಪುಕ್ಕಟೆಗೆ ಸಿಗದು, ಬಾರದು. ಕಲಾವಿದ ಸಮುದಾಯದ ಬಹಳ ಮುಖ್ಯವಾದ ಜವಾಬ್ದಾರಿಯೆಂದರೆ ನಿಜವಾದ ಕರ್ತೃವಿಗೆ ಗೌರವ ನೀಡುವುದು ಹಾಗೂ ಕೃತಿ ಚೌರ್ಯ ಮಾಡದಿರುವುದು. ಕೃತಿಸೌಮ್ಯ ಎಂಬುದು ಎಷ್ಟು ದೊಡ್ಡ ಸವಾಲಿನ ಸಂಗತಿಯಾಗಿದೆ ಎಂದರೆ, ಇದು ಸಿನಿಮಾದಲ್ಲಷ್ಟೇ ಅಲ್ಲ, ಎಲ್ಲ ಕ್ಷೇತ್ರಗಳ ಸಮಸ್ಯೆಯಿದು’ ಎಂದವರು ನಟಿ ತನಿಶ್ತಾ ಚಟರ್ಜಿ.
ಕಾರ್ಮಿಕ ನಿಯಮದ ಪ್ರಕಾರ ಯಾವುದೇ ಪುಕ್ಕಟೆಯಾಗಿ ಪಡೆದರೆ, ಅದರ ಪರಿಣಾಮಗಳನ್ನು ಅನುಭವಿಸಬೇಕೆಂದಿದೆ. ಹಾಗಾಗಿ ಯಾವುದೇ ಉತ್ಪನ್ನ ಅಥವಾ ಸೇವೆ ಪಡೆದರೆ, ಸಂಬಂಧಪಟ್ಟವನಿಗೆ ಅದಕ್ಕೆ ಹಣವನ್ನು ಅಥವಾ ಕೃತಜ್ನತೆಯನ್ನು ಸಲ್ಲಿಸಲೇಬೇಕು. ಅದು ಕಲೆ ಇರಬಹುದು, ಏನೇ ಇರಬಹುದು.
‘ಒಂದು ಪಾತ್ರದೊಳಗೆ ತಲ್ಲೀನವಾಗುವ ಮೂಲಕ ನನ್ನೊಳಗೇ ಆ ಪಾತ್ರ ಬೆಳೆಯುವಂತೆ ಮಾಡಿಕೊಳ್ಳುತ್ತೇನೆ. ಆಗ ಮಾತ್ರ ಆ ಪಾತ್ರಕ್ಕೆ ನ್ಯಾಯ ಸಲ್ಲಿಸಲು ಸಾಧ್ಯವಾಗುತ್ತದೆ. ಒಂದು ಪಾತ್ರಕ್ಕೆ ಸಲ್ಲಬೇಕಾದ ನ್ಯಾಯ ಒದಗಿಸುವುದೇ ಒಬ್ಬ ಉತ್ತಮ ಕಲಾವಿದನ ಕರ್ತವ್ಯ’ ಎಂದರು ಅದಿಲ್ ಹುಸೇನ್.
ಒಂದು ಕಲೆಯ ಮುಖ್ಯ ಉದ್ದೇಶವೇ ನಮ್ಮನ್ನು ನಮ್ಮ ಅಸ್ತಿತ್ವದ ಕುರಿತೇ ಪ್ರಶ್ನೆಗಳನ್ನು ಕೇಳುವಂತೆ ಸಶಕ್ತಗೊಳಿಸುವುದು. ಸಿನಿಮಾ ಎಂದರೆ ಬರೀ ದುಡ್ಡು ಮಾಡುವುದಲ್ಲ; ಜಾಗೃತಿ ಮೂಡಿಸುವುದೂ ಸಹ ಅದರ ಹೊಣೆಗಾರಿಕೆ ಎಂಬುದು ಅದಿಲ್ ಹುಸೇನ್ ಅಭಿಪ್ರಾಯ.
ಈ ಚಿತ್ರ ಕೃತಿಚೌರ್ಯದ ಕುರಿತು ಪ್ರಬಲವಾದ ಸಂದೇಶವನ್ನು ನೀಡುತ್ತದೆ. ಮೂರು ವರ್ಷಗಳ ಸುದೀರ್ಘ ಹಾಗೂ ಸವಾಲಿನ ಪಯಣದ ಬಳಿಕವೂ ಸಂತೋಷ ಸಿಕ್ಕಿದೆ ಎಂದವರು ಚಿತ್ರದ ನಿರ್ಮಾಪಕ ಸುಚ್ಚಂದಾ ಚಟರ್ಜಿ.
ಅನಂತ್ ನಾರಾಯಣ್ ಮಹಾದೇವನ್ ಚಿತ್ರ ನಿರ್ದೆಶಿಸಿದ್ದರೆ, ಕಿರೀಟ್ ಖುರಾನಾ ಚಿತ್ರಕಥೆ ಬರೆದಿದ್ದಾರೆ. ಅಲ್ಫೋನ್ಸ್ ರಾಯ್ ಸಿನೆ ಛಾಯಾಗ್ರಹಣ, ಗೌರವ್ ಗೋಪಾಲ್ ಝಾರ ಸಂಕಲನವಿದೆ. ಪಾತ್ರವರ್ಗದಲ್ಲಿ ಪರೇಶ್ ರಾವಲ್, ಅದಿಲ್ ಹುಸೇನ್, ರೇವತಿ, ತನಿಶ್ತಾ ಚಟರ್ಜಿ, ಜಯೇಶ್ ಮತ್ತಿತರರು ಇದ್ದಾರೆ.
ತರಿಣಿ ರಂಜನ್ ಬಂಡೋಪಾಧ್ಯಾಯ ಒಬ್ಬ ಕಥೆ ಹೇಳುವವ. ಒಂದು ಉದ್ಯೋಗಕ್ಕೆ ಅಂಟಿಕೊಳ್ಳದೇ 32 ಉದ್ಯೋಗಗಳನ್ನು ಬದಲಾಯಿಸಿರುವವ. ಈಗ 60 ಆಗಿದೆ. ನಿವೃತ್ತಿ ತೆಗೆದುಕೊಂಡಿದ್ದಾನೆ. ಕೋಲ್ಕತ್ತಾವಾಸಿ. ಆದರೆ ಅವನನ್ನು ಬಲವಾಗಿ ಕಾಡುತ್ತಿರುವ ಒಂದೇ ಒಂದು ಸಂಗತಿಯೆಂದರೆ ’ತನ್ನ ಪತ್ನಿಗೆ ಸಾಕಷ್ಟು ಸಮಯ ನೀಡದಿರುವುದು. ಈಗ ಅವನು ಎಲ್ಲದರಿಂದ ಮುಕ್ತಿ, ಸ್ವತಂತ್ರ, ಸಾಕಷ್ಟು ಸಮಯವಿದೆ. ಆದರೆ ಉಳಿದವರಾರೂ ಅವನ ಬಳಿಇಲ್ಲ ಎಂಬುದೇ ವಿರೋಧಾಭಾಸ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Movie: ತುಡರ್ ಸಿನಿಮಾ ತುಳು ಚಿತ್ರರಂಗಕ್ಕೆ ಹೊಸ ಬೆಳಕಾಗಿ ಮೂಡಿಬರಲಿ; ಗಣೇಶ್ ರಾವ್
Chef Chidambara: ಅನಿರುದ್ಧ್ ಅಡುಗೆ ಶುರು
Bollywood: ರಿಮೇಕ್ ಆಗಿ ಮತ್ತೆ ತೆರೆಗೆ ಬರಲಿದೆ 70ರ ದಶಕದ ಮೂರು ಹಿಟ್ ಸಿನಿಮಾಗಳು
ನಮ್ಮೊಳಗೆ ಬೆಳೆಯುವಂಥ ಪಾತ್ರಗಳು ನನಗಿಷ್ಟ : ಗ್ರೀಷ್ಮಾ ಶ್ರೀಧರ್
ಕಾಶ್ಮೀರ್ ಫೈಲ್ಸ್ ಅಸಭ್ಯ ಚಿತ್ರ ಎಂದು ನಡಾವ್ ಗೆ ನಾಚಿಕೆಯಾಗಬೇಕು…ಇಸ್ರೇಲ್ ರಾಯಭಾರಿ ಆಕ್ರೋಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ullala: ಗ್ಯಾಸ್ ಸಿಲಿಂಡರ್ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ
Actress: ರೊಮ್ಯಾನ್ಸ್ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.