ನಯನ ತಾರಾ, ವಿಘ್ನೇಶ್ ಶಿವನ್ ಜೋಡಿ ಹಕ್ಕಿಗಳು ಸಾಮಾಜಿಕ ಜಾಲತಾಣಗಳಲ್ಲಿ ಟಾಪ್ ಟ್ರೆಂಡಿಂಗ್..!
Team Udayavani, Mar 25, 2021, 1:12 PM IST
ನವ ದೆಹಲಿ : ದಕ್ಷಿಣ ಭಾರತದ ಬಹು ಬೇಡಿಕೆಯ ಮೋಹಕ ನಟಿ ನಯನ ತಾರಾ ಮತ್ತು ಅವರ ಭಾವಿ ಸಂಗಾತಿ ನಿರ್ದೇಶಕ ವಿಘ್ನೇಶ್ ಶಿವನ್ ಅವರು ಇಂದು(ಗುರುವಾರ. ಮಾರ್ಚ್ 25) ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಗುರುವಾರ ಬೆಳಿಗ್ಗೆ ವಿಘ್ನೇಶ್ ಶಿವನ್ ಅವರು ತಮ್ಮ ಭಾವಿ ಸಂಗಾತಿ ನಯನ ತಾರಾ ಅವರೊಂದಿಗಿನ ಫೋಟೋವೊಂದನ್ನು ಪೋಸ್ಟ್ ಮಾಡಿದರು.
ಫೋಟೋದಲ್ಲಿ ಜೋಡಿಯ ಮುಖಗಳನ್ನು ನಮಗೆ ಕಾಣಲು ಸಾಧ್ಯವಿಲ್ಲ, ನಯನ ತಾರಾ ತಮ್ಮ ಭಾವಿ ಸಂಗಾತಿ, ನಿರ್ದೇಶಕ ವಿಘ್ನೇಶ್ ಶಿವನ್ ಅವರ ಎದೆಯ ಮೇಲೆ ಎಡಗೈಯಿಂದ ಮುಟ್ಟುತ್ತಾ ಮುದ್ದಿಸುತ್ತಿರುವಂತೆ ಕಾಣಿಸುತ್ತದೆ.
ಓದಿ : ಬಾರ್ಕೂರು ಏಕನಾಥೇಶ್ವರಿ ದೇವಸ್ಥಾನ: ಮುಂಬಯಿಗರಿಂದ ಸಂಕಷ್ಟ ಚತುರ್ದಶಿ ಪೂಜೆ
ಫೋಟೋದಲ್ಲಿ ನಯನ ತಾರ ತಮ್ಮ ಚೆಂದದ ಎಡಗೈಯ ಉಗುರುಗಳಿಗೆ ವೈಟ್ ಕ್ರೀಮ್ ಕಲರ್ ನ ನೈಲ್ ಪಾಲಿಶ್ ಹಾಕಿರುವುದನ್ನು ಮತ್ತು ಉಂಗುರ ತೊಟ್ಟುಕೊಂಡಿರುವುದನ್ನು ಕಾಣಬಹುದು.
View this post on Instagram
ವಿಘ್ನೇಶ್ ಶಿವನ್ ಅವರ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭರಪೂರ ಕಮೆಂಟ್ ಗಳಿಗೆ ಸಾಕ್ಷಿಯಾಗಿದೆ. ಜೋಡಿಯ ಕುತೂಹಲಕರವಾದ ಈ ಫೋಟೋ ಅಭಿಮಾನಿಗಳಿಗೆ ಸಂತಸ ಉಂಟುಮಾಡಿದೆ ಎನ್ನುವುದನ್ನು ಕಮೆಂಟ್ ಗಳಲ್ಲಿ ಕಾಣಬಹುದು. ಅಷ್ಟೇ ಅಲ್ಲದೇ, ಪ್ರೇಮಿಗಳ ಭಾವ ಕೆರಳಿಸುವಂತಿದೆ ಈ ಫೋಟೋ.
ಇನ್ನು, ನೀವು ವಿಘ್ನೇಶ್ ಶಿವನ್ ಅವರ ಇನ್ಸ್ಟಾಗ್ರಾಮ್ ಖಾತೆಯನ್ನು ಪರಿಶೀಲಿಸಿದರೆ, ನಯನ ತಾರಾ ಅವರು ಅದೇ ಉಂಗುರವನ್ನು ಧರಿಸಿರುವ ಅನೇಕ ಫೋಟೋಗಳು ಕಾಣಸಿಗುತ್ತವೆ.
View this post on Instagram
View this post on Instagram
View this post on Instagram
2019 ರಲ್ಲಿ, ನಯನ ತಾರಾ ಅವರು ವಿಘ್ನೇಶ್ ಶಿವನ್ ಅವರನ್ನು ತಮ್ಮ ‘ನಿಶ್ಚಿತ ವರ / ಫಿಯಾನ್ಸ್ ‘ ಎಂದು ಹೇಳುವ ಮೂಲಕ ಸಂತಸ ಪಟ್ಟಿದ್ದರು. ಇದು ಅವರ ನಿಶ್ಚಿತಾರ್ಥ ಮತ್ತು ವಿವಾಹಗಳ ಬಗ್ಗೆ ಅಭಿಮಾನಿಗಳಲ್ಲಿ, ಸಿನೆಮಾ ಕ್ಷೇತ್ರದಲ್ಲಿ ಅದರಲ್ಲೂ ದಕ್ಷಿಣ ಭಾರತದ ಸಿನೆಮಾ ಕ್ಷೇತ್ರದಲ್ಲಿ ಭಾರಿ ಗುಸು ಗುಸು ಗಾಸಿಪ್ ಹರಿದಾಡುವಂತೆ ಮಾಡಿತ್ತು. 2015 ರಲ್ಲಿ ವಿಘ್ನೇಶ್ ನಿರ್ದೇಶನದ ನಾನಮ್ ರೌಡಿಧಾನ್ ಚಿತ್ರದ ಸೆಟ್ ನಲ್ಲಿ ನಯನ ತಾರಾ ಮತ್ತು ವಿಘ್ನೇಶ್ ಶಿವನ್ ಭೇಟಿಯಾಗಿದ್ದರು. ಈ ಚಿತ್ರದಲ್ಲಿ ನಯನ ತಾರಾ ಮುಖ್ಯ ಪಾತ್ರ ವಹಿಸಿದ್ದರು. ಈ ಸಿನೆಮಾ ಇವರಿಬ್ಬರ ನಡುವೆ ಪ್ರೇಮಾಂಕುರ ಉಂಟಾಗುವುದಕ್ಕೆ ಸಾಕ್ಷಿಯಾಯಿತು.
ಓದಿ : ಮಲೆ ಮಹದೇಶ್ವರ ಬೆಟ್ಟದ ಪಾರ್ವತಿ ಅಮ್ಮನವರ ಚಿನ್ನದ ಕರಡಿಗೆ ನಾಪತ್ತೆ!
ಕಳೆದ ಸೆಪ್ಟೆಂಬರ್ ನಲ್ಲಿ, ರಾಷ್ಟ್ರವ್ಯಾಪಿ ಲಾಕ್ಡೌನ್ ತೆರವಾಗಿದ್ದ ಸಂದರ್ಭದಲ್ಲಿ, ನಯನ ತಾರಾ ಮತ್ತು ವಿಘ್ನೇಶ್ ಶಿವನ್ ಗೋವಾದಲ್ಲಿ ಮೋಜು ಮಸ್ತಿ ಮಾಡಿದ್ದರು. ಇವರೊಂದಿಗೆ ಇಬ್ಬರ ಪೋಷಕರೂ ಕೂಡ ಇದ್ದಿದ್ದರು. ಮತ್ತು ವಿಘ್ನೇಶ್ ತಮ್ಮ 35 ನೇ ಹುಟ್ಟುಹಬ್ಬವನ್ನು ನಯನ ತಾರಾ ಮತ್ತು ಅವರ ಕುಟುಂಬದೊಂದಿಗೆ ಗೋವಾದಲ್ಲಿ ಆಚರಿಸಿಕೊಂಡಿದ್ದರು.
ಓದಿ : ಬಸವಕಲ್ಯಾಣ ಅಭ್ಯರ್ಥಿಯಾಗಲು ಬಿಜೆಪಿಗೆ ಟಿಕೆಟ್ ಆಕಾಂಕ್ಷಿಯಿಂದ ದೊಡ್ಡ ಮಟ್ಟದ ಹಣ ಸಂದಾಯ: HDK
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.