ಬ್ಯೂಟಿಫುಲ್ ಮನಸ್ಸಿನ ಶ್ರುತಿ
Team Udayavani, May 3, 2017, 6:22 PM IST
ಕನ್ನಡದ ಬೇಡಿಕೆಯ ನಟಿಯರ ಪಟ್ಟಿ ಮಾಡಲು ಹೊರಟರೆ ಥಟ್ಟಂತ ನೆನಪಾಗವುದು ಶ್ರುತಿ ಹರಿಹರನ್ ಹೆಸರು. ಪ್ರತಿಭಾವಂತ ನಟಿ ಎಂದು ಲೆಕ್ಕ ಹಾಕಿದಾಗಲೂ ಶ್ರುತಿ ಕಣ್ಮುಂದೆ ಸುಳಿಯದೇ ಇರುವುದಿಲ್ಲ. “ಲೂಸಿಯಾ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಗ್ರಾಂಡ್ ಎಂಟ್ರಿ ಪಡೆದ ಈಕೆ ಕನ್ನಡವಲ್ಲದೆ ತಮಿಳು, ಮಲಯಾಳಂ ಚಿತ್ರಗಳಲ್ಲೂ ಪ್ರತಿಭೆ ತೋರಿದ್ದಾರೆ. ಸುಮ್ಮನೆ ಕೂರದ ಜಾಯಮಾನದವರಲ್ಲದ ಇವರು ಕಿರುಚಿತ್ರಗಳನ್ನು ನಿರ್ಮಿಸಿ, ಅವುಗಳಲ್ಲೂ ನಟನೆಯ ಚಮಕ್ ತೋರಿದ್ದಾರೆ. ಕಿರುಚಿತ್ರಗಳೂ ಸೇರಿ 20 ಚಿತ್ರಗಳಲ್ಲಿ ನಟಿಸಿದ ಹೆಗ್ಗಳಿಕೆ ಇವರದು. “ಬ್ಯೂಟಿಫುಲ್ ಮನಸ್ಸುಗಳು’ ಚಿತ್ರದ ಅಭಿನಯಕ್ಕೆ ಅತ್ಯುತ್ತಮ ಪ್ರಶಸ್ತಿ ಸ್ವೀಕರಿಸಿದ ಶ್ರುತಿ “ಅವಳು’ ಜತೆ ಮಾತಿಗೆ ಕುಳಿತಾಗ…
ಯಶಸ್ಸು ತಡವಾದಷ್ಟೂ ಅದು ಸಿಹಿ ಆಗಿರುತ್ತೆ!
ನಾಲ್ಕು ವರ್ಷಗಳಾಗುತ್ತಾ ಬಂತು ನಾನು ಚಿತ್ರರಂಗಕ್ಕೆ ಬಂದು. ಈವರೆಗೆ ಯಾವುದೇ ಪ್ರಶಸ್ತಿಯೂ ಬಂದಿರಲಿಲ್ಲ. μಲಂಫೇರ್, ಸೈಮಾ ಪ್ರಶಸ್ತಿಗಳಿಗೆ ನಾಮಿನೇಷನ್ ಕೂಡ ಆಗಿರಲಿಲ್ಲ. ಈಗ ರಾಜ್ಯ ಪ್ರಶಸ್ತಿಯೇ ಬಂದಿರುವುದರಿಂದ ಬಹಳ ಖುಷಿಯಾಗಿದೆ. ಒಬ್ಬ ನಟಿಗೆ ರಾಜ್ಯ ಪ್ರಶಸ್ತಿ ಯಾವಾಗಲೂ ಅತ್ಯುನ್ನತ ಗರಿ. ಇದಕ್ಕೆ ವಿಶ್ವಾಸಾರ್ಹತೆಯೂ ಹೆಚ್ಚು. ಯಶಸ್ಸು ತಡವಾದಷ್ಟೂ ಸಿಹಿಯಾಗಿರುತ್ತದೆ ಎನ್ನುತ್ತಾರಲ್ಲಾ, ಹಾಗೆಯೇ ಈ ಪ್ರಶಸ್ತಿ ಕೊಟ್ಟ ಸಿಹಿಯನ್ನು ಚಪ್ಪರಿಸುತ್ತಿದ್ದೇನೆ.
ಪ್ರಶಸ್ತಿಯನ್ನು ನಿರೀಕ್ಷಿಸಿಯೇ ಇರ್ಲಿಲ್ಲ!
ನನ್ನಂಥ ನಟಿಯರಿಗೆ ಪ್ರಶಸ್ತಿ ಸಿಗುವುದು ತುಂಬಾ ಕಷ್ಟ ಅಂತ ಅಂದೊRಂಡಿದ್ದೆ. ಚೂರೇ ಚೂರು ನಿರೀಕ್ಷೆಯೂ ಇರಲಿಲ್ಲ ಪ್ರಶಸ್ತಿ ಬಗ್ಗೆ. ಪ್ರಶಸ್ತಿ ಘೋಷಣೆಯಾದಾಗಲೂ ನಾನು ನಂಬಿರಲಿಲ್ಲ. ನಮ್ಮ ನಿರ್ಮಾಪಕರನ್ನು ಮೂರು ಬಾರಿ ಕೇಳಿದ್ದೆ. “ಇದು ನಿಜಾನಾ?’ ಅಂತ. ನನ್ನ ಮೊದಲ ಚಿತ್ರಗಳಿಗೆ ಪ್ರಶಸ್ತಿ ಬಂದಿಲ್ಲ ಎಂಬ ಬೇಸರವಿಲ್ಲ. ನಾನಿದನ್ನು ನನ್ನ 4 ವರ್ಷದ ವೃತ್ತಿ ಜೀವನಕ್ಕೆ ಸಿಕ್ಕ ಪ್ರಶಸ್ತಿ ಎಂದು ಭಾವಿಸಿರುವೆ
ಅಮ್ಮ ಮೆಚ್ಚಿದ ಸಿನಿಮಾಕ್ಕೆ ಪ್ರಶಸ್ತಿ
ನನ್ನ ಅಮ್ಮನೇ ನನ್ನ ಬೆಸ್ಟ್ ಕ್ರಿಟಿಕ್. ಅವರು ನನ್ನ ಅಭಿನಯವನ್ನು ಹೊಗಳಿದ್ದು ಬಹಳ ಕಡಿಮೆ. ಆದರೆ “ಬ್ಯೂಟಿಫುಲ್ ಮನಸ್ಸುಗಳು’ ಚಿತ್ರ ನೋಡಿ “ಬಹಳ ಚೆನ್ನಾಗಿ ನಟಿಸಿದ್ದೀಯ’ ಎಂದು ಭಾವುಕರಾಗಿದ್ದರು. ಇದೇ ಚಿತ್ರಕ್ಕೆ ಪ್ರಶಸ್ತಿ ಬಂದಿದ್ದು ಇನ್ನೂ ಸಂತೋಷ. ನಮ್ಮದು ಸಂಪ್ರದಾಯಸ್ಥ ಕುಟುಂಬ. ಗೌರವಯುತವಾಗಿ ಯಾವುದಾದರೂ ಕಾರ್ಪೋರೆಟ್ ಕೆಲಸಕ್ಕೆ ಸೇರಿಕೊ ಅಂತಿದ್ರು ಅಮ್ಮ. ಈಗ ಅಮ್ಮನಿಗೂ ನನ್ನ ಮೇಲೆ ವಿಶ್ವಾಸ ಹೆಚ್ಚಿದೆ. ನಾನಿಲ್ಲಿ ಏನು ಸಾಧಿಸಬಯಸುತ್ತಿದ್ದೇನೆ ಎಂದು ಅಮ್ಮ ತಿಳಿದಿದ್ದಾರೆ. ನನಗೆ ಅವರ ಸಂಪೂರ್ಣ ಬೆಂಬಲ ಇದೆ.
ಕಲ್ಪನಾಲೋಕದಲ್ಲಿ ವಿಹಾರ
ನನ್ನ ಅಮ್ಮ ಯಾವಾಗ್ಲೂ ಹೇಳ್ತಿರ್ತಾರೆ. “ಏಮ್ ಫಾರ್ ದ ಸ್ಕೈ ಯು ವಿಲ್ ರೀಚ್ ದ ಸೀಲಿಂಗ್’ ಅಂತ. ಅದರಂತೆ ನಾನೂ
ಮಹತ್ವಾಕಾಂಕ್ಷಿ. ನಾನು ಆಸ್ಕರ್ ಪ್ರಶಸ್ತಿಗೆ ಗುರಿ ಇಟ್ಟರೆ ರಾಜ್ಯ ಪ್ರಶಸ್ತಿ ಸಿಗುತ್ತದೆಂದು ನಂಬುವವಳು. ದೊಡ್ಡ ಸಾಧನೆ ಮಾಡುವ
ಕನಸು ಕಾಣುತ್ತಾ ಸದಾ ಕಲ್ಪನಾ ಲೋಕದಲ್ಲಿ ವಿಹರಿಸುತ್ತಿರುತ್ತೇನೆ.
ವೀಕ್ಷಕರ ಜತೆಗೆ ಕಾಲವೂ ಬದ್ಲಾಗಿದೆ…
ಕನ್ನಡ ಚಿತ್ರರಂಗ ಹೊಸತೊಂದು ಮಗ್ಗುಲಿಗೆ ಹೊರಳುತ್ತಿರುವ ಸಮಯದಲ್ಲಿ ನಾನು ಚಿತ್ರರಂಗ ಪ್ರವೇಶಿಸಿದೆ. ಅದರಲ್ಲೂ “ಲೂಸಿಯಾ’ದಂಥ ಹೊಸ ಪ್ರಯೋಗದ ಚಿತ್ರ ಸಿಕ್ಕಿದ್ದು ನನ್ನ ಅದೃಷ್ಟ. ನಮ್ಮ ಮನೆಗಳಲ್ಲಿ ತಾಯಂದಿರು, ಅಕ್ಕಂದಿರೇ
ಹೆಚ್ಚು ಜವಾಬ್ದಾರಿಯುತರಾಗಿರುತ್ತಾರೆ. ಮನೆಯ ಎಲ್ಲಾ ನಿರ್ಧಾರಗಳನ್ನೂ ಅವರೇ ತೆಗೆದುಕೊಳ್ತಾರೆ. ಇಂಥ ಮಹಿಳೆಯರ ಪಾತ್ರ ತೆರೆ ಮೇಲೆ ಪ್ರತಿಬಿಂಬಿಸಬೇಕು. ಈಗ ಅಂಥ ಪ್ರಯೋಗಗಳು ನಡೆಯುತ್ತಿವೆ. “ಶುದ್ಧಿ’, “ಊರ್ವಿ’ಯಂಥ ಸಿನಿಮಾಗಳೂ ಹೆಚ್ಚು ಹಣ ಗಳಿಸುವಂತಾಗಬೇಕು. ಆಗ ಇನ್ನಷ್ಟು ಸತ್ವಪೂರ್ಣ ಚಿತ್ರಗಳು ಬರುತ್ತವೆ.
ಯಾವ ಪಾತ್ರದ ಬಗ್ಗೆಯೂ ಬೇಜಾರಿಲ್ಲ…
“ಪ್ಲಸ್’ ಸಿನಿಮಾದಲ್ಲಿ ಐಟಂ ಹಾಡಿನಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಂಡೆ. ನಿನಗಿದು ಬೇಕಿತ್ತಾ ಎಂದು ಹಲವರು ಪ್ರಶ್ನಿಸಿದರು. ಹೌದು, ನನಗಿದು ಬೇಕಿತ್ತು. ನಾನು ಗ್ಲಾಮರಸ್ ಆಗಿ ಕಾಣಿಸಿಕೊಳ್ಳಲು ತುಂಬಾ ಹಿಂಜರಿಯುತ್ತಿದ್ದೆ. ಹಿಂಜರಿಕೆ ಮೀರಲು ಈ ನೃತ್ಯ ಬಳಸಿಕೊಂಡೆ. “ಬಹುತಾರಾಗಣದ ಚಿತ್ರವನ್ನೇಕೆ ಒಪ್ಕೋತೀಯಾ?’ ಎಂದರು. ನಾನೊಂಥರಾ ಬಿಳಿ ಕ್ಯಾನ್ವಾಸ್‌ನಂತೆ. ಆದಷ್ಟು
ಬಣ್ಣಗಳನ್ನು ಕ್ಯಾನ್ವಾಸ್ ಮೇಲೆ ತುಂಬಿಕೊಳ್ಳಲು ಪ್ರಯತ್ನಿಸುತ್ತೇನೆ. ಅದರಂತೆ, ಅವಕಾಶಗಳು ಹೇಗೆ ಬರುತ್ತವೆಯೋ ಹಾಗೆ ಬಳಸಿಕೊಂಡು ಇಲ್ಲಿಯವರೆಗೆ ತಲುಪಿದ್ದೇನೆ. ತಾರಕ್, ದ ವಿಲನ್‌ನಂಥ ಪಕ್ಕಾ ಸ್ಟಾರ್ ನಟರ ಚಿತ್ರಗಳಲ್ಲೂ ನಟಿಸುತ್ತಿದ್ದೇನೆ. ಒಂದೇ ರೀತಿಯ ಚಿತ್ರಗಳಿಗೆ ಅಂಟಿಕೊಂಡು ಕೂರುವ ಜಾಯಮಾನ ನನ್ನದಲ್ಲ.
ನೃತ್ಯ ಸಾಮರ್ಥ್ಯ ತೋರುವ ಅವಕಾಶ ದೊರೆತಿಲ್ಲ…
ನಾನು ಮೂಲತಃ ನೃತ್ಯಗಾತಿ. ಡಾನ್ಸ್ ಮೂಲಕವೇ ಚಿತ್ರರಂಗಕ್ಕೆ ಬಂದೆ. ಆದರೆ ನನ್ನ ನೃತ್ಯ ಪ್ರತಿಭೆ ತೋರಲು ಸೂಕ್ತ ಅವಕಾಶವೇ ಸಿಕ್ಕಿಲ್ಲ ಎಂಬ ಬೇಸರ ಇದೆ. ರವಿಚಂದ್ರನ್ ಸರ್ ಕೂಡ ಇತ್ತೀಚೆಗೆ ಅದನ್ನೇ ಹೇಳಿದರು.
ನಿರ್ದೇಶಕರ ನಟಿಯಾಗುವಾಸೆ…
ನನಗೆ ಇಂಥದ್ದೇ ನಟನ ಜೊತೆ ನಟಿಸಬೇಕೆಂಬ ಆಸೆಗಿಂತ, ಇಂತಿಂಥ ನಿರ್ದೇಶಕರ ಸಿನಿಮಾದಲ್ಲಿ ಕೆಲಸ ಮಾಡಬೇಕೆಂಬ ಆಸೆ ಇದೆ. ಮಣಿರತ್ನಂ, ಸತ್ಯಪ್ರಕಾಶ್, ನಾಗತಿಹಳ್ಳಿ ಚಂದ್ರಶೇಖರ್, ಮನ್ಸೋರೆ ಸಿನಿಮಾಗಳಲ್ಲಿ ಅಭಿನಯಿಸಬೇಕು. ಸೌಂದರ್ಯವೇ ಆಸ್ತಿ ಅನಿಸಿಲ್ಲ! ಸಿನಿಮಾ ಕ್ಷೇತ್ರ ಆರಿಸಿಕೊಳ್ಳೋವಾಗ ಹಲವು ಸಂದೇಹಗಳು ನನಗಿದ್ದವು. ನಾನು ನೋಡಲು ಚೆಂದ ಇಲ್ಲ ಅನಿಸುತ್ತಿತ್ತು.
ಈಗಲೂ ಹಾಗೆಯೇ ಅನ್ಸುತ್ತೆ! ಆದರೆ, ಅದು ಮುಖ್ಯವೇ ಅಲ್ಲ. ಆತ್ಮವಿಶ್ವಾಸ ಎಲ್ಲದ್ದಕ್ಕಿಂತ ಮುಖ್ಯ. ನಮ್ಮ ಗುರಿ ಬಗ್ಗೆ ಸ್ಪಷ್ಟತೆ
ಇರಬೇಕು. ನೀವೊಬ್ಬ ಚಂದದ ಗೊಂಬೆಯಾಗಿದ್ದರೆ ಈ ಕ್ಷೇತ್ರದಲ್ಲಿ ಹೆಚ್ಚಿನ ಪ್ರಯೋಜನ ಇದ್ದೇ ಇದೆ. ಆದರೆ ಸುಂದರಿಯರಷ್ಟೇ
ಚಿತ್ರರಂಗದಲ್ಲಿ ಯಶಸ್ಸು ಪಡೆದಿಲ್ಲ ಎಂಬುದನ್ನು ಮರೆಯಬಾರದು. ಸುಹಾಸಿನಿ, ಕಲ್ಪನಾ, ಸರಿತಾರಂಥ ನಟಿಯರನ್ನು ನಾವು ನಟಿಯರು ಎಂದು ಪರಿಗಣಿಸುವುದಕ್ಕಿಂತ ಹೆಚ್ಚಾಗಿ ಕಲಾವಿದೆಯರು ಎಂದು ಪರಿಗಣಿಸುತ್ತೇವೆ. ಅವರೆಲ್ಲ ತಮ್ಮ ಅಭಿನಯ ಸಾಮರ್ಥ್ಯದಿಂದಲೇ ಇಲ್ಲಿ ಬೆಳೆದವರು.
ನಾನು ವರ್ಕೋಹಾಲಿಕ್
ನಾನು ಸುಮ್ಮನೆ ಕೂತು ಕಾಲ ಕಳೆಯುವುದೇ ಇಲ್ಲ. “ತೆಲ್ಸಾ’ ಎಂಬ ಚಿತ್ರದ ನಿರ್ಮಾಣಕ್ಕೆ ಕೈ ಹಾಕಿದ್ದೇನೆ. “ಕಲಾತ್ಮಿಕ’ ಎಂಬ ತಂಡ ಕಟ್ಟಿಕೊಂಡಿದ್ದೇವೆ. ಇಂದಿನ ಸಾಮಾಜಿಕ ಸಮಸ್ಯೆಗಳ ಮೇಲೆ ಕಿರುಚಿತ್ರ ತಯಾರಿಸುತ್ತೇವೆ. ಒಂದು ಭಾಷೆ ಹೇಗೆ ಸತ್ತು ಹೋಗುತ್ತದೆ ಎಂಬ ಕುರಿತು “ಎಬಿಸಿ’ ಕಿರುಚಿತ್ರ ತಯಾರಿಸಿದ್ದೆವು. ಮಹಿಳೆ ವೈವಾಹಿಕ ಜೀವನದಲ್ಲಿ ಎದುರಿಸುವ ಅತ್ಯಾಚಾರದ ಕುರಿತು “ರೀಟಾ’ ಎಂಬ ಚಿತ್ರ ತಯಾರಿಸುತ್ತಿದ್ದೇವೆ.
ಫ್ರಿ ಇದ್ದಾಗ್ಲಷ್ಟೇ ಕನ್ನಡಿ ಮುಂದೆ ನಿಲ್ಲುವೆ!
ಮೊದಲೆಲ್ಲಾ ಡಾನ್ಸ್ ನನ್ನ ಫಿಟೆಸ್‌ನ ಗುಟ್ಟಾಗಿತ್ತು. ಈಗ ಅದೂ ಅಪರೂಪವಾಗಿದೆ. ಪ್ರತಿ ಊಟದ ನಂತರ ಬಿಸಿ ನೀರು
ಕುಡಿದರೆ ಕೊಬ್ಬು ಶೇಖರಣೆಯಾಗುವುದಿಲ್ಲ. ಇಡೀ ದಿನ ಹೆಚ್ಚು ನೀರು ಕುಡಿಯುತ್ತಿರಬೇಕು. ನಾನು ಬಳಸುವ ಮೇಕಪ್ ಎಲ್ಲಾ ಬ್ರಾಂಡೆಡ್. ಆಗಾಗ ಮುಖ ತೊಳೆಯುತ್ತಿರಬೇಕು. ನಾನು ಮೇಕಪ್ ರಿಮೋವರ್‌ನಿಂದ ಮೇಕಪ್ ತೆಗೆಯುತ್ತೇನೆ. ಆರೋಗ್ಯಕರ ತ್ವಚೆಗೆ ಒಂದು ಮಂತ್ರವಿದೆ. “ಕೆನ್ಸಿಂಗ್, ಟೋನಿಂಗ್, ಮಾಯಿಸcರೈಸಿಂಗ್’ ಅಂತ. ಸದಾ ಉತ್ತಮ ಕ್ಲೆನ್ಸರ್ ಮತ್ತು ಮಾಯಿಸರೈಸರ್ ಬಳಸುತ್ತೇನೆ.
ನಾನೇನೂ ಬೆಳ್ಳಿ ಚಮಚವನ್ನು ಬಾಯಲ್ಲಿಟ್ಟುಕೊಂಡು ಬೆಳೆದವಳಲ್ಲ. ನನ್ನದು ಈಗಲೂ ಮಧ್ಯಮ ವರ್ಗದ ಕುಟುಂಬ. ನನ್ನ ಕುಟುಂಬದ ನಿರ್ವಹಣೆಯೂ ನನಗೆ ಮುಖ್ಯ. ಅದಕ್ಕಾಗಿ, ಕೆಲವು ಚಿತ್ರಗಳನ್ನು ಜೀವನಕ್ಕೋಸ್ಕರ ಅಂತಲೇ ಮಾಡುತ್ತೇನೆ. ಇನ್ನೂ ಕೆಲವನ್ನು ಮನಸ್ಸಿನ ಖುಷಿಗೋಸ್ಕರ ಮಾಡುತ್ತೇನೆ. ಹಿಟ್, ಫ್ಲಾಪ್ ಬಗ್ಗೆ ಚಿಂತಿಸುವುದಿಲ್ಲ.
ಇಪ್ಪತ್ತು ವರ್ಷಗಳ ಬಳಿಕ ನನ್ನ ಜೀವನವನ್ನುನಾನು ಹಿಂದಿರುಗಿ ನೋಡಿದಾಗ ಪ್ರಶಸ್ತಿ ಪಡೆದಿದ್ದು ಒಂದು ಅದ್ಭುತ ಕ್ಷಣವಾಗಿ ಕಣ್ಮುಂದೆ
ಬರಬಹುದು. ಈ ಸಮಾರಂಭ ಅಷ್ಟೊಂದು ಹೃದಯಸ್ಪರ್ಶಿಯಾಗಿತ್ತು. ರಾಜ್‌ಕುಮಾರ್ ಅವರಂಥ ದಂತಕಥೆ ಹುಟ್ಟಿದ ದಿನದಂದು
ಪ್ರಶಸ್ತಿ ಸ್ವೀಕರಿಸೋದೂ ಒಂದು ಸಂಭ್ರಮ. ಮುಖ್ಯಮಂತ್ರಿ ಕೈಯಿಂದ ಸ್ವೀಕರಿಸೋದೂ ಇನ್ನೊಂದು ಖುಷಿ…
ಚೇತನ ಜೆ. ಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Mangaluru: ಗಾಂಜಾ ಸೇವನೆ; ಯುವಕನ ಬಂಧನ
Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್ ಬಾಟಲಿ ಸದ್ದು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.