ಸಿನೆಮಾ ಸಮಾಚಾರ: ಸೋನು ನುಡಿ

Team Udayavani, May 7, 2017, 3:45 AM IST

SAPT-1.jpg

ಸೋನು ಗೌಡಗೆ ಅದೊಂದು ಬಗೆಹರಿಯದ ಪ್ರಶ್ನೆಯಾಗಿ ಬಿಟ್ಟಿದೆ. ಮೊನ್ನೆ ಬಿಡುಗಡೆಯಾದ ಹ್ಯಾಪಿ ನ್ಯೂ ಇಯರ್‌ ಚಿತ್ರದಲ್ಲಿ ಸೋನು ಗೌಡ ಗೃಹಿಣಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಜಯ್‌ ರಾಘವೇಂದ್ರ ಅವರ ಪತ್ನಿಯ ಪಾತ್ರದಲ್ಲಿ ಅವರನ್ನು ನೋಡಿದ್ದೇ ತಡ, ಇತ್ತೀಚಿನ ದಿನಗಳಲ್ಲಿ ಸೋನುಗೆ ಗೃಹಿಣಿಯ ಪಾತ್ರಗಳನ್ನೇ ಹೆಚ್ಚಾಗಿ ತೆಗೆದುಕೊಂಡು ಬರುತ್ತಿದ್ದಾರಂತೆ. ಹಾಗೆ ನೋಡಿದರೆ, ಕಿರಗೂರಿನ ಗಯ್ನಾಳಿಗಳು ಚಿತ್ರದ ನಂತರವೇ ಸೋನುಗೆ ಗೃಹಿಣಿಯ ಪಾತ್ರಕ್ಕೆ ಹೆಚ್ಚು ಆಫ‌ರ್‌ಗಳು ಸಿಕ್ಕಿತ್ತಂತೆ. ಈಗ ಹ್ಯಾಪಿ ನ್ಯೂ ಇಯರ್‌ನಲ್ಲಿ ಅಭಿನಯಿಸದ ಮೇಲಂತೂ ಆ ಆಫ‌ರ್‌ಗಳಲ್ಲಿ ಇನ್ನೂ ಹೆಚ್ಚಳ ಕಂಡಿದೆ.

ಇಷ್ಟಕ್ಕೂ ಚಿತ್ರರಂಗದವರು ಯಾಕೆ ಒಂದೇ ತರಹದ ಪಾತ್ರಗಳಿಗೆ ಬ್ರಾಂಡ್‌ ಮಾಡುತ್ತಾರೆ? ಈ ಪ್ರಶ್ನೆ ಸೋನು ತಲೆ ಕೊರೆಯುತ್ತಿದೆ. ಆದರೆ, ಅವರಿಗೆ ಉತ್ತರ ಸಿಗುತ್ತಿಲ್ಲ. ಹಾಗಂತ ಅವರಿಗೆ ಬೇಸರವೇನೂ ಇಲ್ಲ. ಏಕೆಂದರೆ, ಒಂದೊಳ್ಳೆಯ ಚಿತ್ರದಲ್ಲಿ ನಟಿಸಿರುವ ಖುಷಿ ಅವರಿಗಿದೆ. “ಈ ಚಿತ್ರವನ್ನು ನಾನು ಒಪ್ಪಲು ಕಾರಣ, ಒಳ್ಳೇ ಕಥೆ, ಒಳ್ಳೆಯ ಪಾತ್ರ, ಒಳ್ಳೇ ತಂಡ, ಒಳ್ಳೇ ಬ್ಯಾನರ್‌’ ಹೀಗೆ ಹೇಳುತ್ತಾರೆ ನಟಿ ಸೋನು ಗೌಡ. “ಪನ್ನಗ ಮತ್ತು ನಾನು ಕಾಲೇಜ್‌ ಮೇಟ್ಸ್‌. ಆ ದಿನಗಳಲ್ಲೇ ಕೆಲವು ವೀಡಿಯೋ ಮಾಡಿ, ಎಡಿಟ್‌ ಮಾಡಿ, ನಿರ್ದೇಶನದ ಬಗ್ಗೆ ಆಸಕ್ತಿ ತೋರುತ್ತಿದ್ದ. ಮುಂದೊಂದು ದಿನ ಸಿನೆಮಾ ಮಾಡಿದಾಗ, ಆ ಚಿತ್ರದಲ್ಲಿ ನಾನು ಚಿಕ್ಕ ಪಾತ್ರವಿದ್ದರೂ ಸರಿ ಮಾಡ್ತೀನಿ ಅಂದುಕೊಂಡಿದ್ದೆ. ಅದು ಹ್ಯಾಪಿ ನ್ಯೂ ಇಯರ್‌ ಚಿತ್ರದಲ್ಲಿ ಈಡೇರಿದೆ. ಒಂದು ದಿನ ಮನೆಗೆ ಹೋದೆ. ಐದು ಕಥೆ ಇರುವ ಬಗ್ಗೆ ಹೇಳಿದ. ಇಷ್ಟ ಆಯ್ತು. ಪೊಲೀಸ್‌ ಪೇದೆಯೊಬ್ಬನ ಹೆಂಡತಿ ಪಾತ್ರ ನನಗೆ ಸಿಗುತ್ತೆ ಅಂದುಕೊಂಡಿದ್ದೆ. ಅದೇ ಪಾತ್ರವೇ ಸಿಕ್ಕಿತು. ಸುಮಾ ಎಂಬ ಪಾತ್ರ ಮಾಡಿದ್ದೇನೆ’ ಎನ್ನುತ್ತಾರೆ ಸೋನು.

ಇನ್ನು ಗೃಹಿಣಿ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಹೆಣ್ಣು ಮಗುವಿನ ತಂದೆಯ ಪಾತ್ರದಲ್ಲಿ ಕಾಣಿಸಿಕೊಳ್ಳುವುದಕ್ಕೆ ಅವರು ಒಂದಿಷ್ಟು ತಯಾರಿಗಳನ್ನು ಮಾಡಿಕೊಳ್ಳಬೇಕಾಯಿತಂತೆ. “ಅಮ್ಮನ ಪಾತ್ರವಾಗಿದ್ದರಿಂದ ಒಂದಷ್ಟು ತಯಾರಿಯೂ ಮಾಡಿಕೊಂಡೆ. ಆದರೆ, ಆ ಪಾತ್ರ ಹೊಸದೇನಲ್ಲ. ಹಿಂದೆ ಮಾಡಿದ್ದೇನೆ. ಆದರೆ, ನನ್ನ ವಯಸ್ಸಿಗೆ ಮೀರಿದ ಪಾತ್ರವಾದ್ದರಿಂದ ಅದನ್ನು ನಿಭಾಯಿಸಲು ಎಲ್ಲರ ಸಹಕಾರ ಇತ್ತು. ಚಿತ್ರೀಕರಣ ಮಾಡಿದ್ದೇ ಗೊತ್ತಾಗಲಿಲ್ಲ. ಪನ್ನಗನ ಹೋಮ್‌ವರ್ಕ್‌ನಿಂದಾಗಿ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಇಲ್ಲಿ ನಟಿಸಿರುವ ಪ್ರತಿಯೊಬ್ಬರಿಗೂ ಹೊಸತರಹದ ಸಿನೆಮಾ ಇದಾಗಲಿದೆ ಎಂಬುದು ಸೋನು ನುಡಿ.

ಇದಲ್ಲದೆ ಸೋನು ಅಭಿನಯದ ಇನ್ನೊಂದಿಷ್ಟು ಚಿತ್ರಗಳು ಬಿಡುಗಡೆಗೆ ಸಿದ್ಧವಾಗುತ್ತಿವೆ. ರೋಹಿತ್‌ ಪದಕಿ ನಿರ್ದೇಶನದ ದಯವಿಟ್ಟು ಗಮನಿಸಿ, ಜೇಕಬ್‌ ವರ್ಗೀಸ್‌ ನಿರ್ದೇಶನದ ಚಂಬಲ್‌, ಹೊಸಬರ ಗುಲೂr  ಮುಂತಾದ ಕೆಲವು ಚಿತ್ರಗಳಿವೆ. “ಈ ಎಲ್ಲಾ ಚಿತ್ರಗಳಲ್ಲೂ ಅವರಿಗೆ ವಿಭಿನ್ನ ಪಾತ್ರಗಳು ಸಿಕ್ಕಿರುವುದು ಸಾಕಷ್ಟು ಖುಷಿ ಇದೆ’ ಎನ್ನುತ್ತಾರೆ ಸೋನು.

ಟಾಪ್ ನ್ಯೂಸ್

Sulya-Elephant

Sulya: ಆನೆಗುಂಡಿ: ಹೆದ್ದಾರಿ ಬದಿ ಎರಡು ಕಾಡಾನೆ ಸಂಚಾರ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

JDS protest: ಎಚ್‌ಡಿಕೆ ಕರಿಯ: ಜಮೀರ್‌ ವಿರುದ್ಧ ಆಕ್ರೋಶ; ಸಂಪುಟದಿಂದ ಕೈಬಿಡಲು ಆಗ್ರಹ

JDS protest: ಎಚ್‌ಡಿಕೆ ಕರಿಯ: ಜಮೀರ್‌ ವಿರುದ್ಧ ಆಕ್ರೋಶ; ಸಂಪುಟದಿಂದ ಕೈಬಿಡಲು ಆಗ್ರಹ

ಚುನಾವಣೆ ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪಚುನಾವಣೆ ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ

BY Election; ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ

Uddhav Thackeray’s bag inspection by election commission, controversy

Maha Election; ಚು.ಆಯೋಗದಿಂದ ಉದ್ಧವ್‌ ಠಾಕ್ರೆ ಬ್ಯಾಗ್‌ ಪರಿಶೀಲನೆ, ವಿವಾದ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dhruva Sarja ಮಾರ್ಟಿನ್‌ ರಿಸಲ್ಟ್ ಚಂದನವನಕ್ಕೆ ಹೆಮ್ಮೆ ತರಲಿದೆ…ನಿರ್ಮಾಪಕ ಉದಯ್‌ ಮೆಹ್ತಾ

Dhruva Sarja ಮಾರ್ಟಿನ್‌ ರಿಸಲ್ಟ್ ಚಂದನವನಕ್ಕೆ ಹೆಮ್ಮೆ ತರಲಿದೆ…ನಿರ್ಮಾಪಕ ಉದಯ್‌ ಮೆಹ್ತಾ

kushee ravi spoke about Case of Kondana

Case of Kondana; ‘ಖುಷಿ’ಗೆ ವಿಭಿನ್ನ ಪಾತ್ರದ ಮೇಲೆ ಭರ್ಜರಿ ನಿರೀಕ್ಷೆ…

aradhana

Aradhana; ಕಾಟೇರಾದಲ್ಲಿ ನಾನು ಸ್ಟ್ರಾಂಗ್‌ ಗರ್ಲ್; ಮಾಲಾಶ್ರೀ ಪುತ್ರಿಯ ಗ್ರ್ಯಾಂಡ್ ಎಂಟ್ರಿ

rishab-shetty

ಪಂಜುರ್ಲಿ ಕೋಲದಲ್ಲಿ ದೈವ ಬಣ್ಣ ತೆಗೆದು ಪ್ರಸಾದ ನೀಡಿದ್ದು ಮರೆಯಲಾಗದ್ದು; ರಿಷಬ್ ಶೆಟ್ಟಿ

TDY-39

ಸಾರ್ವಜನಿಕರೇ ಆನ್‌ಲೈನ್‌ ಆಮಿಷಕ್ಕೆ ಮಾರುಹೋಗದಿರಿ

MUST WATCH

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

ಹೊಸ ಸೇರ್ಪಡೆ

Sulya-Elephant

Sulya: ಆನೆಗುಂಡಿ: ಹೆದ್ದಾರಿ ಬದಿ ಎರಡು ಕಾಡಾನೆ ಸಂಚಾರ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Karnataka by-election: 3 ಕ್ಷೇತ್ರದಲ್ಲಿ 33.33 ಕೋ.ರೂ. ಮೌಲ್ಯದ ಅಕ್ರಮ ವಶ

Karnataka by-election: 3 ಕ್ಷೇತ್ರದಲ್ಲಿ 33.33 ಕೋ.ರೂ. ಮೌಲ್ಯದ ಅಕ್ರಮ ವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.