Case of Kondana; ‘ಖುಷಿ’ಗೆ ವಿಭಿನ್ನ ಪಾತ್ರದ ಮೇಲೆ ಭರ್ಜರಿ ನಿರೀಕ್ಷೆ…
Team Udayavani, Jan 11, 2024, 3:11 PM IST
“ದಿಯಾ’ ಖ್ಯಾತಿಯ ಖುಷಿ ರವಿ ನಾಯಕಿಯಾಗಿ ಅಭಿನಯಿಸಿರುವ “ಕೇಸ್ ಆಫ್ ಕೊಂಡಾಣ’ ಸಿನಿಮಾ ಜ. 26ರಂದು ತೆರೆಗೆ ಬರುತ್ತಿದೆ. ಇನ್ನು ಈ ಸಿನಿಮಾದಲ್ಲಿ ಮೊದಲ ಬಾರಿಗೆ ನಾಯಕ ನಟ ವಿಜಯ ರಾಘವೇಂದ್ರ ಅವರಿಗೆ ಜೋಡಿಯಾಗಿ ಅಭಿನಯಿಸಿರುವ ಖುಷಿ ರವಿ, ಸಿನಿಮಾದ ಬಗ್ಗೆ ಮತ್ತು ತಮ್ಮ ಪಾತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಯ ಮಾತುಗಳನ್ನಾಡಿದ್ದಾರೆ.
“ಕೇಸ್ ಆಫ್ ಕೊಂಡಾಣ’ ಸಿನಿಮಾದಲ್ಲಿ ನಿಮ್ಮ ಪಾತ್ರವೇನು?
“ಕೇಸ್ ಆಫ್ ಕೊಂಡಾಣ’ ಸಿನಿಮಾದಲ್ಲಿ ನಾನು ನಾನು ವಿಜಯ ರಾಘವೇಂದ್ರ ಅವರಿಗೆ ಜೋಡಿಯಾಗಿ ಕಾಣಿಸಿ ಕೊಂಡಿದ್ದೇನೆ. ಈ ಸಿನಿಮಾದಲ್ಲಿ ನನ್ನದು ಡಾಕ್ಟರ್ ಸಹನಾ ಎಂಬ ವೈದ್ಯೆಯ ಪಾತ್ರ. ತುಂಬ ವೃತ್ತಿಪರವಾಗಿ ಕೆಲಸ ಮಾಡುವ, ಬಡವರಿಗೆ ತನ್ನಿಂದ ಒಂದಷ್ಟು ಸಹಾಯ ವಾಗಬೇಕು ಎಂದು ಬಯಸುವಂಥ ಹುಡುಗಿಯ ಪಾತ್ರವಿದು. ಸಿನಿಮಾದಲ್ಲಿ ನನ್ನ ಪಾತ್ರಕ್ಕೆ ಅದರದ್ದೇ ಆದ ಮಹತ್ವವಿದೆ.
ಮೊದಲ ಬಾರಿ ವಿಜಯ ರಾಘವೇಂದ್ರ ಜತೆ ಅಭಿನಯಿಸಿದ್ದು ಹೇಗಿತ್ತು?
ವಿಜಯ ರಾಘವೇಂದ್ರ ತುಂಬ ವೃತ್ತಿಪರ ಕಲಾವಿದ. ಒಂದು ಪಾತ್ರಕ್ಕೆ ಹೇಗೆ ಜೀವ ತುಂಬಬೇಕು ಎಂಬುದು ಅವರಿಗೆ ತುಂಬ ಚೆನ್ನಾಗಿ ಗೊತ್ತಿದೆ. ಸಹ ಕಲಾವಿದರಿಗೆ ಒಂದಷ್ಟು ಸ್ಫೂರ್ತಿ ತುಂಬಿ, ಅವರನ್ನು ಚೆನ್ನಾಗಿ ಅಭಿನಯಿಸುವಂತೆ ಮಾಡುವ ಗುಣ ಅವರಲ್ಲಿದೆ. ಸಿನಿಮಾದ ಶೂಟಿಂಗ್ ವೇಳೆ ವಿಜಯ ರಾಘವೇಂದ್ರ ಅವರಿಂದ ಸಾಕಷ್ಟು ಕಲಿತಿದ್ದೇನೆ. ತುಂಬ ಕಂಫರ್ಟ್ ಜೋನ್‌ನಲ್ಲಿ ಅವರೊಂದಿಗೆ ಕೆಲಸ ಮಾಡಿದ್ದೇನೆ.
“ಕೇಸ್ ಆಫ್ ಕೊಂಡಾಣ’ ಚಿತ್ರೀಕರಣದ ಅನುಭವ ಹೇಗಿತ್ತು?
ತುಂಬ ಚೆನ್ನಾಗಿತ್ತು. ಕಳೆದ ವರ್ಷ ಜನವರಿಯಲ್ಲಿ ಇದೇ ವೇಳೆ ಸಿನಿಮಾದ ಶೂಟಿಂಗ್ ನಡೆಯುತ್ತಿತ್ತು. ಈ ವರ್ಷ ಜನವರಿ ವೇಳೆಗೆ ಸಿನಿಮಾದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಸಿನಿಮಾ ಬಿಡುಗಡೆಗೆ ರೆಡಿಯಾಗುತ್ತಿದೆ. ಇಡೀ ಚಿತ್ರತಂಡ ನಿಗಧಿತ ಸಮಯದಲ್ಲಿ, ಅಂದುಕೊಂಡಂತೆ “ಕೇಸ್ ಆಫ್ ಕೊಂಡಾಣ’ ಸಿನಿಮಾವನ್ನು ತೆರೆಗೆ ತರುತ್ತಿದೆ. ತುಂಬ ವೃತ್ತಿಪರವಾಗಿ, ಅಚ್ಚುಕಟ್ಟಾಗಿ ಈ ಸಿನಿಮಾದ ಕೆಲಸವಾಗಿದೆ.
“ಕೇಸ್ ಆಫ್ ಕೊಂಡಾಣ’ ಹೇಗೆ ವಿಭಿನ್ನ?
ನಮ್ಮ ನಡುವೆಯೇ ನಡೆಯಬಹುದಾದ ವಿಷಯವನ್ನು ಇಟ್ಟುಕೊಂಡು ತುಂಬ ರಿಯಲಿಸ್ಟಿಕ್ ಆಗಿ “ಕೇಸ್ ಆಫ್ ಕೊಂಡಾಣ’ ಸಿನಿಮಾವನ್ನು ತೋರಿಸಲಾಗಿದೆ. ಸಾಮಾನ್ಯವಾಗಿ ಅನೇಕ ಸಿನಿಮಾದಲ್ಲಿ ಲಾಜಿಕ್ ಇರುವುದಿಲ್ಲ ಎಂಬ ಮಾತಿದೆ. ಆದರೆ ಈ ಸಿನಿಮಾದಲ್ಲಿ ಪ್ರತಿಯೊಂದಕ್ಕೂ ಸಾಕಷ್ಟು ಲಾಜಿಕ್ ಇಟ್ಟುಕೊಂಡು ಚಿತ್ರಕಥೆಯನ್ನು ಹೇಳಲಾಗಿದೆ. ಆಡಿಯನ್ಸ್‌ಗೆ ತುಂಬ ನೈಜವಾಗಿ ಸಿನಿಮಾ ಕನೆಕ್ಟ್ ಆಗುತ್ತದೆ.
“ಕೇಸ್ ಆಫ್ ಕೊಂಡಾಣ’ ಮೇಲೆ ನಿಮ್ಮ ನಿರೀಕ್ಷೆ?
ಇತ್ತೀಚೆಗೆ ಇಂಥ ಸಿನಿಮಾಗಳನ್ನು ನೋಡುವವರ ಸಂಖ್ಯೆ ಹೆಚ್ಚಾಗುತ್ತಿದೆ. “ಕೇಸ್ ಆಫ್ ಕೊಂಡಾಣ’ ಪ್ರತಿ ಕ್ಷಣ ಕೂಡ ನೋಡುಗರ ಕುತೂಹಲ ಕೆರಳಿಸುತ್ತ ಕ್ಲೈಮ್ಯಾಕ್ಸ್‌ವರೆಗೆ ಕರೆದುಕೊಂಡು ಬರುತ್ತದೆ. ಈಗಾಗಲೇ ಸಿನಿಮಾದ ಫಸ್ಟ್‌ಲುಕ್, ಟೀಸರ್ ಎಲ್ಲದಕ್ಕೂ ಅದ್ಭುತ ರೆಸ್ಪಾನ್ಸ್ ಸಿಗುತ್ತಿದೆ. ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆಯ ಮಾತುಗಳು ಕೇಳಿಬರುತ್ತಿದೆ. ಖಂಡಿತವಾಗಿಯೂ ಸಿನಿಮಾ ಥಿಯೇಟರ್‌ನಲ್ಲೂ ಆಡಿಯನ್ಸ್‌ಗೆ ಇಷ್ಟವಾಗಲಿದೆ ಎಂಬ ವಿಶ್ವಾಸವಿದೆ.
ಜಿ. ಎಸ್. ಕಾರ್ತಿಕ ಸುಧನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dhruva Sarja ಮಾರ್ಟಿನ್ ರಿಸಲ್ಟ್ ಚಂದನವನಕ್ಕೆ ಹೆಮ್ಮೆ ತರಲಿದೆ…ನಿರ್ಮಾಪಕ ಉದಯ್ ಮೆಹ್ತಾ
Aradhana; ಕಾಟೇರಾದಲ್ಲಿ ನಾನು ಸ್ಟ್ರಾಂಗ್ ಗರ್ಲ್; ಮಾಲಾಶ್ರೀ ಪುತ್ರಿಯ ಗ್ರ್ಯಾಂಡ್ ಎಂಟ್ರಿ
ಪಂಜುರ್ಲಿ ಕೋಲದಲ್ಲಿ ದೈವ ಬಣ್ಣ ತೆಗೆದು ಪ್ರಸಾದ ನೀಡಿದ್ದು ಮರೆಯಲಾಗದ್ದು; ರಿಷಬ್ ಶೆಟ್ಟಿ
ಸಾರ್ವಜನಿಕರೇ ಆನ್‌ಲೈನ್ ಆಮಿಷಕ್ಕೆ ಮಾರುಹೋಗದಿರಿ
ಉದಯವಾಣಿ ಸಂದರ್ಶನ: ಸಿಎಂ ಆಗಲು ಸಮಾವೇಶ ಮಾಡುತ್ತಿಲ್ಲ; ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.