3 ವರ್ಷದ ಪರಿಶ್ರಮಕ್ಕೆ ಫಲ ಸಿಗೋ ಸಮಯವಿದು: ಪೊಗರು ಬಗ್ಗೆ ನಿರ್ದೇಶಕ ನಂದಕಿಶೋರ್ ಮಾತು
Team Udayavani, Feb 18, 2021, 8:01 AM IST
ನಟ ಧ್ರುವ ಸರ್ಜಾ ಅಭಿನಯದ “ಪೊಗರು’ ಚಿತ್ರ ನಾಳೆ ಏಕಕಾಲಕ್ಕೆ ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಇದೇ ವೇಳೆ “ಉದಯವಾಣಿ’ ಜೊತೆ ಮಾತಿಗೆ ಸಿಕ್ಕ ಚಿತ್ರದ ನಿರ್ದೇಶಕ ನಂದಕಿಶೋರ್, “ಪೊಗರು’ ಬಗ್ಗೆ ಒಂದಷ್ಟು ಮಾತನಾಡಿದ್ದಾರೆ.
“ಪೊಗರು’ ರಿಲೀಸ್‌ಗೆ ತಯಾರಿ ಹೇಗಿದೆ?
ಈಗಾಗಲೇ ಸಿನಿಮಾದ ಪ್ರಮೋಶನ್ ಜೋರಾಗಿ ನಡೆಯುತ್ತಿದೆ. ರಿಲೀಸ್ ಆಗಿರುವ ಟೀಸರ್, ಟ್ರೇಲರ್, ಸಾಂಗ್ಸ್ ಎಲ್ಲದಕ್ಕೂ ಬಿಗ್ ರೆಸ್ಪಾನ್ಸ್ ಸಿಕ್ತಿದೆ. ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳಿನಲ್ಲೂ ಆಡಿಯನ್ಸ್ ಸಿನಿಮಾದ ಬಗ್ಗೆ ತುಂಬ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸುಮಾರು ಒಂದು ಸಾವಿರಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ “ಪೊಗರು’ ರಿಲೀಸ್‌ಗೆ ಪ್ಲಾನ್ ಮಾಡಿಕೊಳ್ಳಲಾಗಿದೆ.
ನಿಮ್ಮ ಪ್ರಕಾರ “ಪೊಗರು’ ಯಾವ ಶೈಲಿಯ ಸಿನಿಮಾ?
ಇದು ಔಟ್ ಆ್ಯಂಡ್ ಔಟ್ ಕಮರ್ಷಿಯಲ್ ಸಿನಿಮಾ. ಇಲ್ಲಿ ಆ್ಯಕ್ಷನ್ ಇದೆ, ಮಸ್ತ್ ಡೈಲಾಗ್ಸ್ ಇದೆ. ಕಾಮಿಡಿ ಇದೆ, ಎಮೋಶನ್ಸ್ – ಸೆಂಟಿಮೆಂಟ್ಸ್ ಇದೆ. ಒಳ್ಳೆಯ ಸಾಂಗ್ಸ್ ಇದೆ. ಒಂದು ಎಂಟರ್‌ಟೈನ್ ಮೆಂಟ್ ಸಿನಿಮಾದಲ್ಲಿ ಏನೇನು ಇರಬೇಕೋ ಅದೆಲ್ಲವೂ ಈ ಸಿನಿಮಾದಲ್ಲಿದೆ. ಮನರಂಜನೆ ನಿರೀಕ್ಷೆಯ ಎಲ್ಲ ಥರದ ಆಡಿಯನ್ಸ್‌ಗೂ “ಪೊಗರು’ ಇಷ್ಟವಾಗುತ್ತದೆ.
“ಪೊಗರು’ ತೆರೆಹಿಂದಿನ ಅನುಭವ ಹೇಗಿತ್ತು?
ನಿಜಕ್ಕೂ ತುಂಬ ಚೆನ್ನಾಗಿತ್ತು. ಸುಮಾರು ಮೂರುವರೆ ವರ್ಷದ ಪರಿಶ್ರಮದಿಂದ ಈ ಸಿನಿಮಾ ಆಗಿದೆ. ನಮ್ಮ ಹೀರೋ ಧ್ರುವ ಸರ್ಜಾ, ಪ್ರೊಡ್ನೂಸರ್ ಗಂಗಾಧರ್ ಈ ಸಿನಿಮಾಕ್ಕೆ 2 ದೊಡ್ಡ ಪಿಲ್ಲರ್. ಇವರಿಬ್ಬರು ಇಲ್ಲದಿದ್ದರೆ, ಈ ಥರದ ಸಿನಿಮಾ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಇವರ ಜೊತೆ ಸಿನಿಮಾದ ಪ್ರತಿ ಕಲಾವಿದರು, ತಂತ್ರಜ್ಞರು ಕೂಡ ಸಾಕಷ್ಟು ಪರಿಶ್ರಮ ಹಾಕಿದ್ದಾರೆ. ಒಬ್ಬ ನಿರ್ದೇಶಕ ಅಂದು ಕೊಂಡಂತೆ ಸಿನಿಮಾ ಮಾಡೋದಕ್ಕೆ ಎಲ್ಲರ ಸಪೋರ್ಟ್ ತುಂಬ ಮುಖ್ಯ. ಇಲ್ಲಿಯವರೆಗೆ ನನ್ನ ಯಾವ ಸಿನಿಮಾಗಳು ಕೊಟ್ಟಿರದಂಥ ಅನುಭವವನ್ನ “ಪೊಗರು’ ಕೊಟ್ಟಿದೆ.
“ಪೊಗರು’ಇಷ್ಟು ಸಮಯ ಹಿಡಿಯಲು ಕಾರಣ?
ಈ ಸಿನಿಮಾ ಶುರು ಮಾಡುವ ಮೊದಲೇ ಇದಕ್ಕೆ ಅದರದ್ದೇ ಆದ ಒಂದಷ್ಟು ಸಮಯ ಹಿಡಿಯುತ್ತದೆ ಅಂತ ನಮಗೆ ಗೊತ್ತಿತ್ತು. ಯಾಕೆಂದ್ರೆ, ಮೂರು ಭಾಷೆಯಲ್ಲಿ ಸಿನಿಮಾ ಮಾಡೋಕೆ ಪ್ಲಾನ್ ಮಾಡಿಕೊಂಡಿದ್ದೆವು. ಸಿನಿಮಾದ ಕ್ಯಾರೆಕ್ಟರ್ ತಕ್ಕಂತೆ ಧ್ರುವ ತಮ್ಮ ದೇಹವನ್ನು ಬೇರೆ ಬೇರೆ ಥರ ಶೇಪ್ ಮಾಡಿಕೊಳ್ಳಬೇಕಾಗಿತ್ತು. ಅಲ್ಲದೆ ಬಿಗ್ ಕಾಸ್ಟಿಂಗ್ ಇತ್ತು. ಪ್ರೊಡಕ್ಷನ್ ಕೆಲಸಗಳು ತುಂಬ ಇದ್ದವು. ಹೀಗಾಗಿ ಒಂದಷ್ಟು ಸಮಯ ಹಿಡಿಯಿತು. ಇದರ ಮಧ್ಯೆ ಕೋವಿಡ್ ಬಂದಿದ್ದರಿಂದ ಒಂದಷ್ಟು ಸಮಯ ಏನೂ ಮಾಡಲಾಗಲಿದೆ.
ರಿಲೀಸ್‌ಗೂ ಮುನ್ನ ಹೇಗಿದೆ ರೆಸ್ಪಾನ್ಸ್?
ಆಡಿಯನ್ಸ್ ಮತ್ತು ಇಂಡಸ್ಟ್ರಿ ಕಡೆಯಿಂದ ಸಿನಿಮಾದ ಬಗ್ಗೆ ಒಳ್ಳೆಯ ಟಾಕ್ ಇದೆ. ಕೋವಿಡ್ ನಂತರ ರಿಲೀಸ್ ಆಗ್ತಿರುವ ಮೊದಲ ಬಿಗ್ ಬಜೆಟ್, ಬಿಗ್ ಸ್ಟಾರ್ ಸಿನಿಮಾ ಆಗಿರೋದ್ರಿಂದ, ಒಂದಷ್ಟು ಭಯ ಕೂಡ ಇದ್ದೇ ಇದೆ. ಥಿಯೇಟರ್‌ಗೆ ಬಂದು ಸಿನಿಮಾ ನೋಡುವ ಆಡಿಯನ್ಸ್ ಮನಸ್ಥಿತಿ ಈಗ ಹೇಗಿದೆ ಅಂತ ಗೊತ್ತಿಲ್ಲ. ಒಟ್ಟಾರೆ ಒಂದಷ್ಟು ರಿಸ್ಕ್ ತೆಗೆದುಕೊಂಡೇ ಸಿನಿಮಾ ರಿಲೀಸ್ ಮಾಡ್ತೀದ್ದೀವಿ
ಜಿ.ಎಸ್.ಕಾರ್ತಿಕ ಸುಧನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dhruva Sarja ಮಾರ್ಟಿನ್ ರಿಸಲ್ಟ್ ಚಂದನವನಕ್ಕೆ ಹೆಮ್ಮೆ ತರಲಿದೆ…ನಿರ್ಮಾಪಕ ಉದಯ್ ಮೆಹ್ತಾ
Case of Kondana; ‘ಖುಷಿ’ಗೆ ವಿಭಿನ್ನ ಪಾತ್ರದ ಮೇಲೆ ಭರ್ಜರಿ ನಿರೀಕ್ಷೆ…
Aradhana; ಕಾಟೇರಾದಲ್ಲಿ ನಾನು ಸ್ಟ್ರಾಂಗ್ ಗರ್ಲ್; ಮಾಲಾಶ್ರೀ ಪುತ್ರಿಯ ಗ್ರ್ಯಾಂಡ್ ಎಂಟ್ರಿ
ಪಂಜುರ್ಲಿ ಕೋಲದಲ್ಲಿ ದೈವ ಬಣ್ಣ ತೆಗೆದು ಪ್ರಸಾದ ನೀಡಿದ್ದು ಮರೆಯಲಾಗದ್ದು; ರಿಷಬ್ ಶೆಟ್ಟಿ
ಸಾರ್ವಜನಿಕರೇ ಆನ್‌ಲೈನ್ ಆಮಿಷಕ್ಕೆ ಮಾರುಹೋಗದಿರಿ
MUST WATCH
ಹೊಸ ಸೇರ್ಪಡೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.