ಹೀರೋ ಮುಗ್ಧತೆಯಲ್ಲಿ ಅರಳಿದ ಕಥೆ ಇದು… ಲವ್‌ 360 ನಿರ್ದೇಶಕ ಶಶಾಂಕ್‌ ಮಾತು

ಇಂದು ತೆರೆಗೆ

Team Udayavani, Aug 19, 2022, 10:39 AM IST

8

“ಸಾಮಾನ್ಯವಾಗಿ ನಾನು ಮೊದಲಿಗೆ ಕಥೆ ರೆಡಿ ಮಾಡಿಕೊಂಡು, ನಂತರ ಅದಕ್ಕೆ ಸೂಕ್ತವಾಗುವ ನಟರನ್ನು ಹುಡುಕಿ ಸಿನಿಮಾ ಮಾಡುತ್ತೇನೆ. ಆದ್ರೆ, ಇದೇ ಮೊದಲ ಬಾರಿಗೆ “ಲವ್‌ 360′ ಸಿನಿಮಾದಲ್ಲಿ ಒಬ್ಬ ಹುಡುಗ (ನಟ)ನನ್ನು ನೋಡಿದ ಮೇಲೆ ಅವನಿಗೆ ಸೂಕ್ತವಾಗುವಂಥ ಕಥೆ ರೆಡಿ ಮಾಡಿಕೊಂಡು ಸಿನಿಮಾ ಮಾಡಿದ್ದೇನೆ. ಅದಕ್ಕೆ ಕಾರಣ ಆ ಹುಡುಗನ ಮುಗ್ಧತೆ. ಆ ಹುಡುಗನೇ ನಮ್ಮ ಸಿನಿಮಾದ ಹೀರೋ ಪ್ರವೀಣ್‌..!’ ಇದು ಇಂದು ತೆರೆ ಕಾಣುತ್ತಿರುವ “ಲವ್‌ 360′ ಸಿನಿಮಾದ ನಿರ್ದೇಶಕ ಶಶಾಂಕ್‌ ಮಾತು.

“ಪ್ರವೀಣ್‌ ನಟನೆಗೆ ಬೇಕಾದ ಒಂದಷ್ಟು ತಯಾರಿ ಮಾಡಿಕೊಂಡು ಸಿನಿಮಾಕ್ಕೆ ಬರುವ ಯೋಚನೆಯಲ್ಲಿದ್ದರು. ಮೊದಲ ಬಾರಿಗೆ ಪ್ರವೀಣ್‌ನನ್ನು ನೋಡಿದಾಗಲೇ, ಈ ಹುಡುಗನಲ್ಲಿ ಏನೋ ಪ್ರತಿಭೆಯಿದೆ, ಇವನನ್ನು ಹೀರೋ ಆಗಿ ಇಂಡಸ್ಟ್ರಿಗೆ ಲಾಂಚ್‌ ಮಾಡಬಹುದು ಅಂಥ ಅನಿಸಿತು. ಆದ್ರೆ, ಪ್ರವೀಣ್‌ನನ್ನು ಹೀರೋ ಆಗಿ ಲಾಂಚ್‌ ಮಾಡುವಂಥ ಕಥೆ ಆಗ ನನ್ನಲ್ಲಿ ಇರಲಿಲ್ಲ. ಕೊನೆಗೆ ಪ್ರವೀಣ್‌ಗೆ ಒಪ್ಪುವಂಥ ಕಥೆ ಮಾಡಿಕೊಂಡು, “ಲವ್‌ 360′ ಸಿನಿಮಾ ಶುರು ಮಾಡಿದೆವು’ ಎನ್ನುತ್ತಾರೆ ನಿರ್ದೇಶಕ ಶಶಾಂಕ್‌.

“ಪ್ರವೀಣ್‌ ಮೂಲತಃ ಡಾಕ್ಟರ್‌. ಅವರ ತಂದೆ, ತಾಯಿ, ತಮ್ಮ ಎಲ್ಲರೂ ವೃತ್ತಿಯಲ್ಲಿ ಡಾಕ್ಟರ್. ಅನೇಕ ವರ್ಷಗಳಿಂದ ಬಳ್ಳಾರಿಯಲ್ಲಿ ನಿಸ್ವಾರ್ಥವಾಗಿ ವೈದ್ಯಕೀಯ ಸೇವೆಯಲ್ಲಿ ಅವರ ಇಡೀ ಕುಟುಂಬ ತೊಡಗಿಕೊಂಡಿದೆ. ಡಾಕ್ಟರ್‌ ಆಗಿ ಒಳ್ಳೆಯ ಹೆಸರು, ಕೈತುಂಬ ಸಂಪಾದನೆ ಮಾಡಬಹುದಾದ ಎಲ್ಲ ಅವಕಾಶಗಳಿದ್ದರೂ, ಪ್ರವೀಣ್‌ಗೆ ಅಭಿನಯದ ಕಡೆಗಿದ್ದ ಪ್ಯಾಷನ್‌ ಅವರನ್ನು ಸಿನಿಮಾದತ್ತ ಕರೆದುಕೊಂಡು ಬಂದಿತ್ತು. ಈ ಎಲ್ಲ ಅಂಶಗಳು “ಲವ್‌ 360′ ಸಿನಿಮಾ ಮಾಡೋದಕ್ಕೆ ಕಾರಣವಾಯ್ತು. ಇಂಥ ಪ್ಯಾಷನ್‌, ಡೆಡಿಕೇಶನ್‌ ಇರುವಂಥ ಹುಡುಗನನ್ನು ಒಳ್ಳೆಯ ಸಿನಿಮಾ ಮೂಲಕ, ಒಳ್ಳೆ ರೀತಿಯಲ್ಲಿ ಸಿನಿಮಾ ಇಂಡಸ್ಟ್ರಿಗೆ ಪರಿಚಯಿಸುವ ಜವಾಬ್ದಾರಿ ನನಗೂ ಇತ್ತು. ಹಾಗಾಗಿ ಒಂದಷ್ಟು ಸಮಯ ತೆಗೆದುಕೊಂಡು, ಪ್ರವೀಣ್‌ಗೆ ಮತ್ತು ಇಂದಿನ ಆಡಿಯನ್ಸ್‌ಗೆ ಒಪ್ಪುವಂಥ ಸಬ್ಜೆಕ್ಟ್ ಮಾಡಿಕೊಂಡು “ಲವ್‌ 360′ ಸಿನಿಮಾ ಮಾಡಿದ್ದೇವೆ’ ಎಂದು ವಿವರಣೆ ಕೊಡುತ್ತಾರೆ ಶಶಾಂಕ್‌.

“ಕಳೆದ ಎರಡು-ಮೂರು ತಿಂಗಳಿನಿಂದ “ಲವ್‌ 360′ ಸಿನಿಮಾದ ಪ್ರಮೋಶನ್ಸ್‌ ಜೋರಾಗಿ ನಡೆಯುತ್ತಿದೆ. ಸಿನಿಮಾದ ಟೀಸರ್‌, ಟ್ರೇಲರ್‌, ಸಾಂಗ್ಸ್‌ ಎಲ್ಲವೂ ದೊಡ್ಡ ಮಟ್ಟದಲ್ಲಿ ಹಿಟ್‌ ಆಗಿದೆ. ಅದರಲ್ಲೂ ಸಿದ್ಧ್ ಶ್ರೀರಾಮ್‌ ಹಾಡಿರುವ “ಜಗವೇ ನೀನು ಗೆಳತಿಯೇ…’ ಹಾಡಂತೂ “ಲವ್‌ ಆ್ಯಂಥಮ್‌’ನಂತೆ, ಎಲ್ಲರ ಬಾಯಲ್ಲೂ ಗುನುಗುಡುತ್ತಿದೆ. ಸಿನಿಮಾದ ಹೀರೋ ಪ್ರವೀಣ್‌, ನಾಯಕಿ ರಚನಾ ಇಂದರ್‌ ಕೆಮಿಸ್ಟ್ರಿ ತುಂಬ ಚೆನ್ನಾಗಿ ವರ್ಕೌಟ್‌ ಆಗಿದೆ. ನನ್ನ ಹಿಂದಿನ ಸಿನಿಮಾಗಳಲ್ಲಿ ಪರಿಚಯಿಸಿದ ಬಹುತೇಕ ಎಲ್ಲ ಹೊಸ ಕಲಾವಿದರನ್ನು ಆಡಿಯನ್ಸ್‌ ಇಷ್ಟಪಟ್ಟಿದ್ದಾರೆ. ಆ ಸಾಲಿಗೆ ಪ್ರವೀಣ್‌ ಕೂಡ ಸೇರಲಿದ್ದಾರೆ’ ಎಂಬ ವಿಶ್ವಾಸದ ಮಾತುಗಳನ್ನಾಡುತ್ತಾರೆ ನಿರ್ದೇಶಕ ಶಶಾಂಕ್‌.

ಚಿತ್ರ 150 ಕ್ಕೂ ಹೆಚ್ಚು ಕೇಂದ್ರಗಳಲ್ಲಿ ತೆರೆ ಕಾಣುತ್ತಿದ್ದು, ಒಂದು ವಾರಗಳ ಬಳಿಕ “ಲವ್‌ 360′ ಸಿನಿಮಾವನ್ನು ಇತರ ಭಾಷೆಗಳಲ್ಲಿ ಮತ್ತು ಓವರ್‌ಸೀಸ್‌ನಲ್ಲಿ ಬಿಡುಗಡೆ ಮಾಡುವ ಯೋಚನೆಯಲ್ಲಿದೆ ಚಿತ್ರತಂಡ. “ಲವ್‌ 360′ ಸಿನಿಮಾದ ಹಾಡುಗಳಿಗೆ ಅರ್ಜುನ್‌ ಜನ್ಯ ಸಂಗೀತವಿದೆ. ಪ್ರವೀಣ್‌, ರಚನಾ ಇಂದರ್‌ ಜೊತೆಗೆ ಗೋಪಾಲಕೃಷ್ಣ ದೇಶಪಾಂಡೆ, ಡ್ಯಾನಿ ಕುಟ್ಟಪ್ಪ, ಕಾವ್ಯಾ ಶಾಸ್ತ್ರೀ, ಸುಕನ್ಯಾ ಗಿರೀಶ್‌ ಹೀಗೆ ದೊಡ್ಡ ಕಲಾವಿದರ ತಾರಾಗಣ ಚಿತ್ರದಲ್ಲಿದೆ.

-ಜಿ.ಎಸ್‌. ಕಾರ್ತಿಕ ಸುಧನ್‌

ಟಾಪ್ ನ್ಯೂಸ್

Vijay Hazare Trophy; Abhinav Manohar’s brilliant century; Karnataka won easily against Arunchal Pradesh

Vijay Hazare Trophy; ಅಭಿನವ್‌ ಮನೋಹರ್‌ ಭರ್ಜರಿ ಶತಕ; ಸುಲಭ ಜಯ ಸಾಧಿಸಿದ ಕರ್ನಾಟಕ

Video: ಜನವರಿಯಲ್ಲಿ ಮದುವೆ ನಿಶ್ಚಯವಾಗಿದ್ದ ಯುವತಿ 70 ಅಡಿ ಎತ್ತರದ ಸೇತುವೆಯಿಂದ ಜಿಗಿದಳು

Video: 2 ವಾರದಲ್ಲಿ ಮದುವೆಯಾಗಬೇಕಿದ್ದ ಯುವತಿ 70 ಅಡಿ ಎತ್ತರದ ಸೇತುವೆಯಿಂದ ನದಿಗೆ ಜಿಗಿದಳು

New Year 2025: ಹೊಸ ವರುಷ, ಹೊಸ ಹರುಷ 2025: ಆಲೋಚನೆಗಳು ಹೊಸ ಹಾದಿ ಕಾಣಲಿ

New Year 2025: ಹೊಸ ವರುಷ, ಹೊಸ ಹರುಷ 2025: ಆಲೋಚನೆಗಳು ಹೊಸ ಹಾದಿ ಕಾಣಲಿ

Actress kashima is in Nee nange movie

Kashima; ನೀ ನಂಗೆ ಎಂದ ಕಾಶಿಮಾ…; ನಾಯಕಿ ಹೆಸರು ಘೋಷಣೆ

Hubli: ಮನೆ ದರೋಡೆಗೆ ಯತ್ನಿಸಿದ ದರೋಡಕೋರನ ಕಾಲಿಗೆ ಗುಂಡೇಟು

Hubli: ಮನೆ ದರೋಡೆಗೆ ಯತ್ನಿಸಿದ ದರೋಡಕೋರನ ಕಾಲಿಗೆ ಗುಂಡೇಟು

11-2

Belthangady: ಶಾಲೆಯ ಮಕ್ಕಳು ನೆಟ್ಟಿದ್ದ ಹೂ ಗಿಡಗಳ ಕುಂಡಗಳನ್ನು ಪುಡಿಗೈದ ಕಿಡಿಗೇಡಿಗಳು

Team India; ಮುಗಿಯಿತಾ ರೋಹಿತ್‌ ವೃತ್ತಿಜೀವನ? ಮೆಲ್ಬೋರ್ನ್‌ ಗೆ ಬಂದ ಅಗರ್ಕರ್‌ ಹೇಳಿದ್ದೇನು?

TeamIndia; ಮುಗಿಯಿತಾ ರೋಹಿತ್‌ ವೃತ್ತಿಜೀವನ? ಮೆಲ್ಬೋರ್ನ್‌ ಗೆ ಬಂದ ಅಗರ್ಕರ್‌ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Actress kashima is in Nee nange movie

Kashima; ನೀ ನಂಗೆ ಎಂದ ಕಾಶಿಮಾ…; ನಾಯಕಿ ಹೆಸರು ಘೋಷಣೆ

Yash; ಸಂಭಾವನೆ ವಿಚಾರದಲ್ಲಿ ಹೊಸ ದಾಖಲೆ ಬರೆದ ರಾಕಿಂಗ್‌ ಸ್ಟಾರ್

Yash; ಸಂಭಾವನೆ ವಿಚಾರದಲ್ಲಿ ಹೊಸ ದಾಖಲೆ ಬರೆದ ರಾಕಿಂಗ್‌ ಸ್ಟಾರ್

Sandalwood Rewind 2024; ಹಳಬರಿಗೆ ಜೈಕಾರ ಹೊಸಬರಿಗೆ ಉರಿ ಖಾರ; ಚಂದನವನದ ಚೆಂದದ ಲೆಕ್ಕ

Sandalwood Rewind 2024; ಹಳಬರಿಗೆ ಜೈಕಾರ ಹೊಸಬರಿಗೆ ಉರಿ ಖಾರ; ಚಂದನವನದ ಚೆಂದದ ಲೆಕ್ಕ

Max Movie: ಸಖತ್‌ ರೆಸ್ಪಾನ್ಸ್‌ ಪಡೆದ ಕಿಚ್ಚನ ʼಮ್ಯಾಕ್ಸ್‌ʼ ಮೊದಲ ದಿನ ಗಳಿಸಿದ್ದೆಷ್ಟು?

Max Movie: ಸಖತ್‌ ರೆಸ್ಪಾನ್ಸ್‌ ಪಡೆದ ಕಿಚ್ಚನ ʼಮ್ಯಾಕ್ಸ್‌ʼ ಮೊದಲ ದಿನ ಗಳಿಸಿದ್ದೆಷ್ಟು?

Darshan12

Actor Health: ಸ್ವಲ್ಪ ಜರುಗಿದ ದರ್ಶನ್‌ ಬೆನ್ನುಮೂಳೆ; ತುರ್ತಾಗಿ ಆಪರೇಷನ್‌ ಇಲ್ಲ: ವೈದ್ಯರು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Vijay Hazare Trophy; Abhinav Manohar’s brilliant century; Karnataka won easily against Arunchal Pradesh

Vijay Hazare Trophy; ಅಭಿನವ್‌ ಮನೋಹರ್‌ ಭರ್ಜರಿ ಶತಕ; ಸುಲಭ ಜಯ ಸಾಧಿಸಿದ ಕರ್ನಾಟಕ

12-udupi

Udupi: ದೊಡ್ಡಣ್ಣ ಗುಡ್ಡೆ ದೇವಸ್ಥಾನ; ಕಲ್ಕುಡ-ಕಲ್ಲುರ್ಟಿ ದೈವಗಳ ನೂತನ ಗುಡಿಗೆ ಶಿಲಾನ್ಯಾಸ

Video: ಜನವರಿಯಲ್ಲಿ ಮದುವೆ ನಿಶ್ಚಯವಾಗಿದ್ದ ಯುವತಿ 70 ಅಡಿ ಎತ್ತರದ ಸೇತುವೆಯಿಂದ ಜಿಗಿದಳು

Video: 2 ವಾರದಲ್ಲಿ ಮದುವೆಯಾಗಬೇಕಿದ್ದ ಯುವತಿ 70 ಅಡಿ ಎತ್ತರದ ಸೇತುವೆಯಿಂದ ನದಿಗೆ ಜಿಗಿದಳು

8

Mangaluru: ‘ಹೆಲಿಟೂರಿಸಂ’ಗೆ ಮುನ್ನುಡಿ ಬರೆದ ‘ಕುಡ್ಲ ಹೈ’ದರ್ಶನ

7

Mulki: ಉಗುಳಿದರೆ ದಂಡ; ಹಾಕುವವರು ಯಾರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.