54th IFFI: ಪ್ರಖ್ಯಾತ ನಟಿ ಮಾಧುರಿ ದೀಕ್ಷಿತ್ ಅವರಿಗೆ ವಿಶೇಷ ಮನ್ನಣೆ
Team Udayavani, Nov 20, 2023, 8:39 PM IST
ಪಣಜಿ: ಗೋವಾದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಇಂಟನ್ರ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ 2023 ರಲ್ಲಿ ಪ್ರಖ್ಯಾತ ನಟಿ ಮಾಧುರಿ ದೀಕ್ಷಿತ್ ಅವರಿಗೆ ಭಾರತೀಯ ಸಿನಿಮಾ ರಂಗಕ್ಕೆ ನೀಡಿದ ಕೊಡುಗೆಗಾಗಿ ವಿಶೇಷ ಮನ್ನಣೆಯನ್ನು ನೀಡಲಾಗುವುದು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಸೋಮವಾರ ತಿಳಿಸಿದ್ದಾರೆ.
ಶ್ಯಾಮ ಪ್ರಸಾದ್ ಮುಖರ್ಜಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿರುವ ಸಮಾರಂಭದೊಂದಿಗೆ 2023 ರ ಫಿಲ್ಮ್ ಗಾಲಾ ಆವೃತ್ತಿಯು ಸೋಮವಾರ ಪ್ರಾರಂಭವಾಗಿದೆ. ದೀಕ್ಷಿತ್ ಅವರ ಚಾರ್ಟ್‌ಬಸ್ಟರ್ ಹಾಡುಗಳ ಸಂಯೋಜನೆಯನ್ನು ಸಹ ಪ್ರದರ್ಶಿಸಲಾಗುತ್ತದೆ.
An icon across the ages, @MadhuriDixit has graced our screens with unparalleled talent for four incredible decades.
From the effervescent Nisha to the captivating Chandramukhi, the majestic Begum Para to the indomitable Rajjo, her versatility knows no bounds.
Today, we are… pic.twitter.com/HlYUWHsWRY
— Anurag Thakur (@ianuragthakur) November 20, 2023
“ಯುಗಗಳಾದ್ಯಂತ ಐಕಾನ್,ಮಾಧುರಿ ದೀಕ್ಷಿತ್ ನಾಲ್ಕುದಶಕಗಳಿಂದ ಅದ್ಭುತ ಅಪ್ರತಿಮ ಪ್ರತಿಭೆಯೊಂದಿಗೆ ನಮ್ಮ ಪರದೆಯನ್ನು ಅಲಂಕರಿಸಿದ್ದಾರೆ. ನಿಶಾದಿಂದ ಹಿಡಿದು ಮನಮೋಹಕ ಚಂದ್ರಮುಖಿಯವರೆಗೆ, ಭವ್ಯವಾದ ಬೇಗಂ ಪಾರಾ, ಅದಮ್ಯ ರಜ್ಜೋವರೆಗೆ, ಅವರ ಬಹುಮುಖ ಪ್ರತಿಭೆಗೆ ಯಾವುದೇ ಮಿತಿಯಿಲ್ಲ.ಇಂದು, ನಾವು 54 ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಚಿತ್ರರಂಗದಲ್ಲಿ ಶ್ರೇಷ್ಠತೆಯನ್ನು ಮರುವ್ಯಾಖ್ಯಾನಿಸಿದ ಪ್ರತಿಭಾವಂತ, ವರ್ಚಸ್ವಿ ನಟಿಗೆ ‘ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ ‘ವಿಶೇಷ ಮನ್ನಣೆ’ ಪ್ರಶಸ್ತಿಯನ್ನು ನೀಡುತ್ತಿದ್ದೇವೆ. ಅಸಾಧಾರಣ ಪ್ರಯಾಣದ ಆಚರಣೆ, ಶಾಶ್ವತ ಪರಂಪರೆಗೆ ಗೌರವ”ಎಂದು ಸಚಿವ ಅನುರಾಗ್ ಠಾಕೂರ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.