’13’ movie review: ಹಣದ ಹಿಂದೆ ಬಿದ್ದವರ ಹುಡುಕಾಟ
Team Udayavani, Sep 16, 2023, 5:35 PM IST
ಅನ್ಯಧರ್ಮಿಯರಾದರೂ ಒಬ್ಬರನ್ನೊಬ್ಬರು ಪ್ರೀತಿಸಿ ಮದುವೆಯಾದವರು ಮೋಹನ್ ಮತ್ತು ಸಾಹೀರಾ ಬಾನು. ಗುಜರಿ ವ್ಯಾಪಾರ ಮಾಡುವ ಮೋಹನ್, ಟೀ ಅಂಗಡಿ ನಡೆಸುವ ಸಾಹೀರಾ ಬಾನು ತಾವಾಯಿತು, ತಮ್ಮ ಕೆಲಸವಾಯಿತು ಎಂದು ಬದುಕುತ್ತಿರುವ ಆದರ್ಶ ದಂಪತಿಗಳು. ಇಂಥ ದಂಪತಿಗಳ ಜೀವನದಲ್ಲಿ ಅಚಾನಕ್ಕಾಗಿ ಬರುವ “13′ ಎಂಬ ನಂಬರ್, ಇವರ ದಿಕ್ಕನ್ನೇ ಬದಲಾಯಿಸುತ್ತದೆ. ತಮ್ಮಷ್ಟಕ್ಕೆ ತಾವಿದ್ದ ಮೋಹನ್-ಸಾಹೀರಾ ದಂಪತಿ ಪೊಲೀಸ್ ಸ್ಟೇಷನ್ ಮೆಟ್ಟಿಲೇರುವಂತಾಗುತ್ತದೆ. ಹಾಗಾದರೆ, ನಿಜಕ್ಕೂ ಮೋಹನ್-ಸಾಹೀರಾ ಬಾಳಲ್ಲಿ ನಡೆಯುವುದಾದರೂ ಏನು? ಇವರಿಗೂ ಈ ನಂಬರಿಗೂ ಏನು ಸಂಬಂಧ? ಇದೇ ವಿಷಯವನ್ನು ಇಟ್ಟುಕೊಂಡು, ಈ ವಾರ ತೆರೆಗೆ ಬಂದಿರುವ ಸಿನಿಮಾ “13′
ಇದೊಂದು ಸಸ್ಪೆನ್ಸ್ ಕಂ ಥ್ರಿಲ್ಲರ್ ಶೈಲಿಯ ಸಿನಿಮಾ. ಹವಾಲಾ ಹಣದ ಹಿಂದೆ ಬೀಳುವ ಒಂದಷ್ಟು ಜನರು ಅದನ್ನು ಪಡೆಯಲು ಏನೇನು ಸರ್ಕಸ್ ಮಾಡುತ್ತಾರೆ. ಈ ಚಕ್ರವ್ಯೂಹದೊಳಗೆ ಏನೇನು ನಡೆಯುತ್ತದೆ. ಅಂತಿಮವಾಗಿ ಈ ಕಣ್ಣಾಮುಚ್ಚಾಲೆ ಆಟಕ್ಕೆ ಕೊನೆ ಹೇಗೆ ಎಂಬುದೇ “13′ ಸಿನಿಮಾದ ಕ್ಲೈಮ್ಯಾಕ್ಸ್. ಅದು ಹೇಗೆ ಎಂಬ ಕುತೂಹಲವಿದ್ದರೆ, ನೀವು ಒಮ್ಮೆ ಥಿಯೇಟರ್ ನತ್ತ ಮುಖ ಮಾಡಬಹುದು.
ಸಸ್ಪೆನ್ಸ್-ಥ್ರಿಲ್ಲರ್ ಜೊತೆಗೆ ಕಾಮಿಡಿ, ಎಮೋಶನ್ಸ್, ಐಟಂ ಸಾಂಗ್ ಹೀಗೆ ಒಂದಷ್ಟು ಅಂಶಗಳನ್ನು ಸೇರಿಸಿ “13′ ಸಿನಿಮಾವನ್ನು ಕಟ್ಟಿಕೊಡಲು ನಿರ್ದೇಶಕರು ಪ್ರಯತ್ನಿಸಿದ್ದಾರೆ. ಮೊದಲರ್ಧ ಬಹುತೇಕ ಎಲ್ಲಾ ಸಿನಿಮಾಗಳಂತೆ ಸಾಮಾನ್ಯವಾಗಿ ಸಾಗುವ ಕಥೆ, ದ್ವಿತೀಯರ್ಧದ ಬಳಿಕ ಒಂದಷ್ಟು ತಿರುವು ಪಡೆದುಕೊಳ್ಳುತ್ತದೆ. ಈ ಮೂಲಕ ಪ್ರೇಕ್ಷಕರ ಕುತೂಹಲಕ್ಕೆ ಕಾರಣವಾಗುತ್ತದೆ.
ನಟ ರಾಘವೇಂದ್ರ ರಾಜ್‌ಕುಮಾರ್ “13′ ಸಿನಿಮಾದಲ್ಲಿ ಮೋಹನ್ ಕುಮಾರ್ ಎಂಬ ಗುಜರಿ ವ್ಯಾಪಾರಿ ಪಾತ್ರದಲ್ಲಿ, ಸಾಹಿರಾಭಾನು ಎಂಬ ಮುಸ್ಲಿಂ ಮಹಿಳೆಯ ಪಾತ್ರದಲ್ಲಿ ನಟಿ ಶ್ರುತಿ ಕಾಣಿಸಿಕೊಂಡಿದ್ದಾರೆ. ಪ್ರಮೋದ್ ಶೆಟ್ಟಿ ನೆಗೆಟಿವ್ ಶೇಡ್‌ನ ಪೊಲೀಸ್ ಅಧಿಕಾರಿಯಾಗಿ ಮತ್ತು ದಿಲೀಪ್ ಪೈ ಹವಾಲ ಏಜೆಂಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಲ್ವರು ಕೂಡ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Gangolli: ಪಂಚಾಯತ್‌ನೊಳಗೆ ನಮಾಜ್; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
ನಾನು ಶೀಶಮಹಲ್ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.