ಹೃದಯ ಶಿಕಾರಿ ಮಾಡುವ ಒಂದು ಕಥೆ


Team Udayavani, Mar 7, 2020, 7:01 AM IST

Ondu-Shikariya-Kathe

ಕೆಲವು ಸಿನಿಮಾಗಳೇ ಹಾಗೆ ತನ್ನೊಳಗೆ ಅದ್ಭುತವಾದ ಕಥಾವಸ್ತುವನ್ನು ಹೊಂದಿರುತ್ತವೆ. ಆದರೆ, ಪ್ರಚಾರದ ಕೊರತೆಯಿಂದಲೋ ಅಥವಾ ಹೊಸಬರೆಂಬ ಕಾರಣಕ್ಕೋ ಅದು ಜನರಿಗೆ ತಲುಪುದಿಲ್ಲ. ಈ ವಾರ ತೆರೆಕಂಡಿರುವ “ಒಂದು ಶಿಕಾರಿಯ ಕಥೆ’ ಕೂಡಾ ಇದೇ ಸಾಲಿಗೆ ಸೇರುವ ಸಿನಿಮಾ ಎಂದರೆ ತಪ್ಪಲ್ಲ. ಯಾವುದೇ ಅಬ್ಬರವಿಲ್ಲದೇ ಬಿಡುಗಡೆಯಾಗಿರುವ ಈ ಚಿತ್ರದೊಳಗೊಂದು ಅದ್ಭುತವಾದ ಕಥಾವಸ್ತುವಿದೆ.

ಮನುಷ್ಯ ಹೀಗೂ ಯೋಚಿಸಬಹುದಾ ಎಂದು ಚಿಂತಿಸುವ ಅಂಶಗಳಿವೆ, ಸಿನಿಮಾ ಮುಗಿದು ಹೊರಗೆ ಬಂದರೂ ನಿಮ್ಮನ್ನು ಕಾಡುವ ಶಕ್ತಿಯೂ ಈ ಸಿನಿಮಾಕ್ಕಿದೆ. ಮನಸ್ಸಿನೊಳಗೆ ನಡೆಯುವ ಶಿಕಾರಿಯ “ದೃಶ್ಯರೂಪ’ವಾಗಿ ಈ ಚಿತ್ರ ಮೂಡಿಬಂದಿದೆ. ಇಲ್ಲಿ ಪರಿಚಿತ ಮುಖ ಎಂದಿರೋದು ಪ್ರಮೋದ್‌ ಶೆಟ್ಟಿ ಹಾಗೂ ಎಂ.ಕೆ.ಮಠ ಇಬ್ಬರೇ. ಉಳಿದಂತೆ ಇದು ಸಂಪೂರ್ಣ ಹೊಸಬರ ಸಿನಿಮಾ. ಆದರೆ, ಸಿನಿಮಾ ಸಾಗುತ್ತಾ ಇದು ಹೊಸಬರ ಸಿನಿಮಾ ಎಂಬ ಭಾವವನ್ನು ಅಳಿಸಿ ಹಾಕಿ, ಒಂದು ಸುಂದರ ಕಥಾನಕವಾಗಿ ರಂಜಿಸುತ್ತಾ ಹೋಗುತ್ತದೆ.

ಅದು ಈ ಸಿನಿಮಾದ ಪ್ಲಸ್‌ ಪಾಯಿಂಟ್‌ ಕೂಡಾ. ಒಂದು ಸುಂದರ ಕಾದಂಬರಿಯನ್ನು ಪ್ರಶಾಂತವಾಗಿ ಓದಿದ ಅನುಭವ ನಿಮಗೆ ಸಿಕ್ಕರೆ ಅದು ಈ ಸಿನಿಮಾದ ನಿರ್ದೇಶಕರ ಶ್ರಮಕೆ ಸಿಕ್ಕ ಫ‌ಲ ಎನ್ನಬಹುದು. ಒಬ್ಬ ವಿರಕ್ತ ಸಾಹಿತಿ ಈ ಸಿನಿಮಾದ ಕಥಾ ನಾಯಕ. ಖ್ಯಾತ ಸಾಹಿತಿಯಾಗಿ ಹೆಸರು, ಅಭಿಮಾನಿ ವರ್ಗವನ್ನು ಹೊಂದಿದ ಶಂಭು ಶೆಟ್ರಿಗೆ ಒಂದು ಹಂತದಲ್ಲಿ ವೈರಾಗ್ಯ ಬಂದು ಆಧ್ಯಾತ್ಮದ ಕಡೆಗೆ ಹೋಗಬೇಕೆಂಬ ಮನಸ್ಸಾಗುತ್ತದೆ. ಆದರೆ, ಎಲ್ಲವನ್ನು ಬಿಟ್ಟು ಹೊಸ ಬದುಕಿಗೆ ಹೋಗುವ ಮುನ್ನ ಶಿಕಾರಿ ಮಾಡಿಯೇ ಹೋಗಬೇಕೆಂಬ ಹಠ.

ಅದಕ್ಕೆ ಕಾರಣ ಅವರ ತಂದೆಯ ಆಸೆ. ಮಗನಲ್ಲಿ ಶಿಕಾರಿ ನೋಡುವ ಆಸೆಯನ್ನಿಟ್ಟುಕೊಂಡೇ ಕೊನೆಯುಸಿರೆಳೆದ ತಂದೆಯ ಆಸೆಯನ್ನು ಈಡೇರಿಸಲು ಮುಂದಾಗುತ್ತಾರೆ. ಇಂತ ವಿರಕ್ತ ಸಾಹಿತಿ ಶಿಕಾರಿಗೆ ಹೊರಡುವ ಕಥಾ ಹಂದರದೊಂದಿಗೆ ಹಲವು ಪಾತ್ರಗಳು ತೆರೆದುಕೊಳ್ಳುತ್ತವೆ. ಇಲ್ಲಿ ಶಿಕಾರಿ ಒಂದು ನೇಪವಷ್ಟೇ. ಇದನ್ನು ಭಿನ್ನ ಮನಸ್ಥಿತಿಗಳ ಅನಾವರಣ ಎನ್ನಬಹುದು. ಇಲ್ಲಿ ಹಲವು ಪಾತ್ರಗಳು ಬರುತ್ತವೆ. ಎಲ್ಲವೂ ಒಂದಕ್ಕೊಂದು ಸಂಧಿಸಿಯೇ ಮುಂದೆ ಸಾಗುತ್ತವೆ. ಕರುಣೆ, ಪ್ರೀತಿ, ಸ್ನೇಹ, ದುರಾಸೆ, ಅನುಮಾನ, ಆತಂಕ, ಭಯ, ಶೂನ್ಯ …

ಹೀಗೆ ಹಲವು ಅಂಶಗಳನ್ನು ಪ್ರತಿಯೊಂದು ಪಾತ್ರಗಳು ಪ್ರತಿನಿಧಿಸಿವೆ. ಆದರೆ, ನಿರ್ದೇಶಕರು ಯಾವುದೇ ಗೊಂದಲವಿಲ್ಲದೇ ಎಲ್ಲವನ್ನು ನಿಭಾಹಿಸಿದ್ದಾರೆ. “ಕೋವಿ ಈಡಿನಿಂದ ತಪ್ಪಿಸಿಕೊಳ್ಳೋಕೆ ಓಡೋ ಪ್ರಾಣಿ, ದುಡ್ಡಿನ ಹಿಂದೆ ಓಡೋ ಮನುಷ್ಯ, ನನ್ನ ಪ್ರಕಾರ ಇವೆರಡರದ್ದು ಒಂದೇ ವೇಗ’ ಈ ತರಹದ ಒಂದಷ್ಟು ಅರ್ಥಪೂರ್ಣ ಸಂಭಾಷಣೆಗಳು ಸಿನಿಮಾದುದ್ದಕ್ಕೂ ಸಿಗುತ್ತವೆ. ಹಾಗಂತ ಇಲ್ಲಿ ಅತಿಯಾದ ಮಾತಾಗಲೀ, ಬೇಡದ ದೃಶ್ಯಗಳಾಗಲೀ ಇಲ್ಲ. ಇಲ್ಲಿ ನಿಮಗೆ ಈ ದೃಶ್ಯ ಯಾಕೆ ಬೇಕಿತ್ತು ಎಂಬ ಪ್ರಶ್ನೆ ಮೂಡದಂತೆ ಸಿನಿಮಾ ಕಟ್ಟಿಕೊಡಲಾಗಿದೆ.

ಚಿತ್ರದ ತುಂಬಾ ಸಹಜತೆ ತುಂಬಿಕೊಂಡಿರೋದು ಕೂಡಾ ಸಿನಿಮಾದ ಗಾಂಭೀರ್ಯತೆಯನ್ನು ಹೆಚ್ಚಿಸಿದೆ. ಇಡೀ ಸಿನಿಮಾ ಕರಾವಳಿ ಹಿನ್ನೆಲೆಯಲ್ಲಿ ಸಾಗುತ್ತದೆ. ಯಕ್ಷಗಾನದ ಹಿನ್ನೆಲೆಯೂ ಈ ಚಿತ್ರಕ್ಕಿದೆ. ಕೆಲವು ಸಿನಿಮಾಗಳು ಯಕ್ಷಗಾನ ಪಾತ್ರಗಳನ್ನು ಬಳಸಿ ಅಪಹಾಸ್ಯ ಮಾಡಿದಂತೆ ಇಲ್ಲಿ ಮಾಡಿಲ್ಲ. ತುಂಬಾ ಅಚ್ಚುಕಟ್ಟಾಗಿ ಬಳಸಲಾಗಿದೆ. ಜೊತೆಗೆ ಈ ಚಿತ್ರದಲ್ಲಿ ಸುಂದರ ಪರಿಸರವೂ ಇದೆ. ಅದು ಸಿನಿಮಾದಿಂದ ಹೊರತಾಗಿ, ಸಿನಿಮೇಟಿಕ್‌ ಬ್ಯೂಟಿಗಾಗಿ ಸೆರೆಹಿಡಿದಂತೆ ಭಾಸವಾಗದೇ, ಕಥೆಯ ಒಂದು ಭಾಗವಾಗಿದೆ.

ನಿರ್ದೇಶಕರು ತುಂಬಾ ತಾಳ್ಮೆಯಿಂದ ಕಥೆ ಹೇಳಿದ್ದಾರೆ. ಹಾಗಾಗಿ, ಔಟ್‌ ಅಂಡ್‌ ಔಟ್‌ ಕಮರ್ಷಿಯಲ್‌ ಸಿನಿಮಾ ಪ್ರಿಯರಿಗೆ ಇದು ನಿಧಾನ ಎನಿಸಬಹುದು. ಫೈಟ್‌, ಕಾಮಿಡಿ, ಹಾಡಿಗಾಗಿ ಇಲ್ಲಿ ಯಾವುದೇ ಟ್ರ್ಯಾಕ್‌ ಇಲ್ಲ. ಹೊಸ ಬಗೆಯ ನಿರೂಪಣೆಯೊಂದಿಗೆ “ಒಂದು ಶಿಕಾರಿಯ ಕಥೆ’ಯನ್ನು ಕಟ್ಟಿಕೊಟ್ಟಿದ್ದಾರೆ. ಇಲ್ಲಿ ಪಾತ್ರಧಾರಿಗಳು ಅಕ್ಷರಶಃ ಪಾತ್ರವನ್ನು ಜೀವಿಸಿದ್ದಾರೆ. ವಿರಕ್ತ ಸಾಹಿತಿ ಶಂಭು ಶೆಟ್ಟಿಯಾಗಿ ಪ್ರಮೋದ್‌ ಶೆಟ್ಟಿಯವರದ್ದು ಮಾಗಿದ ಅಭಿನಯ.

ಪಾತ್ರಕ್ಕಿರಬೇಕಾದ ಗಾಂಭೀರ್ಯ, ಮಾಡದ ತಪ್ಪಿನ ಕೊರಗು, ತಂದೆಯ ಆಸೆಯ ಮೆಲುಕು .. ಹೀಗೆ ಪ್ರತಿ ದೃಶ್ಯಗಳಲ್ಲೂ ಪ್ರಮೋದ್‌ ಶೆಟ್ಟಿ ಇಷ್ಟವಾಗುತ್ತಾರೆ. ಇನ್ನು, ನಿಯತ್ತಿನ ಸೇವಕನ ಪಾತ್ರದಲ್ಲಿ ಎಂ.ಕೆ.ಮಠ ಹೊಂದಿಕೊಂಡಿದ್ದಾರೆ. ಉಳಿದಂತೆ ಯಕ್ಷಗಾನ ಕಲಾವಿದನಾಗಿ ಪ್ರಸಾದ್‌ ಅವರ ಪಾತ್ರ, ಉಳಿದಂತೆ ಮೋಹನ, ಉಮಾ, ಪಾತ್ರಗಳು ಸಿನಿಮಾವನ್ನು ಯಶಸ್ವಿಯಾಗಿ ಮುನ್ನಡೆಸಿವೆ. ಚಿತ್ರದ ಹಿನ್ನೆಲೆ ಸಂಗೀತ “ಶಿಕಾರಿ’ಯ ಸದ್ದು ಹೆಚ್ಚಿಸಿವೆ. ಕಾಡುವ ಸಿನಿಮಾವೊಂದರ ಭಾಗವಾಗ ಬೇಕೆಂದು ಬಯಸುವವರು ಈ ಸಿನಿಮಾವನ್ನು ಕಣ್ತುಂಬಿಕೊಳ್ಳಬಹುದು.

ಚಿತ್ರ: ಒಂದು ಶಿಕಾರಿಯ ಕಥೆ
ನಿರ್ಮಾಣ: ಶೆಟ್ಟಿಸ್‌ ಫಿಲಂ ಫ್ಯಾಕ್ಟರಿ
ನಿರ್ದೇಶನ: ಸಚಿನ್‌ ಶೆಟ್ಟಿ
ತಾರಾಗಣ: ಪ್ರಮೋದ್‌ ಶೆಟ್ಟಿ, ಸಿರಿ, ಪ್ರಸಾದ್‌, ಎಂ.ಕೆ.ಮಠ, ಅಭಿಮನ್ಯು ಪ್ರಜ್ವಲ್‌, ಶ್ರೀಪ್ರಿಯಾ ಮತ್ತಿತರರು.

* ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Upendra’s UI Movie Review

UI Movie Review: ಫೋಕಸ್‌ ಸಿಗೋವರೆಗೆ ಸಿನ್ಮಾ ನೋಡ್ತಾನೇ ಇರಿ!

Dheera Bhagat Roy Review

Dheera Bhagat Roy Review: ಹೋರಾಟದ ಕಿಚ್ಚಲ್ಲಿ ಧೀರ ಮಿಂಚು

Gumti Movie Review

Gumti Movie Review: ಸಂಸ್ಕೃತಿ ಸುತ್ತ ʼಗುಂಮ್ಟಿʼ

Megha Movie Review

Megha Movie Review: ʼಮೇಘʼ ತಂದ ಸಂದೇಶ

Jalandhara movie review

Jalandhara Movie Review; ನದಿಯ ಸುಳಿಯಲ್ಲಿ ಸಾವಿನ ಸೆಲೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.